Tuesday, March 12, 2019

ಶಾಯರಿ ೬೯೭

ನನ್ನೊಲವಿಗೆ
ನೀನೂ.....
ಸಾಕ್ಷಿಯನ್ನು
ಕೇಳುತ್ತಿರುವೆಯಲ್ಲ
ಸಾಕಿ....
ತೆರೆದುನೋಡು...
ನಿನ್ನರಮನೆಯ
ಪುಸ್ತಕವನು,
ಅಲ್ಲಿಲ್ಲವೆ?
ನಾ ಕುಡಿದು ಹಚ್ಚಿಸಿದ
ಹಳೆಯ ಮದ್ಯದ
ಬಾಕಿ

Monday, March 11, 2019

ಶಾಯರಿ ೬೯೪

ಬೀಜ ಬಿತ್ತುವಾಗ
ನೆಲದ
ಹಸಿಯನೊಮ್ಮೆ
ನೀ....
ಪರೀಕ್ಷಿಸಬೇಕಿತ್ತು
ಗೆಳೆಯ....
ಈಗೇಕೆ ಹೊರೆಸುತ್ತಿರುವೆ,
ಸಾಕಿಯ ಮದ್ಯದ
ಮೇಲೆ, ನಿಶೆಯೇರದಂಬ
ಆಕ್ಷೇಪಣೆಯ
ಹೊರೆಯ

ಶಾಯರಿ ೬೬೪

ಚಂದ್ರಿಕೆ...
ನಕ್ಕಳೆಂದು
ಖುಷಿಯಾಗದಿರು
ಗೆಳೆಯ...
ಚಂದಿರನ ತಂಬೆಳಕು
ಬಿದ್ದ ಗೋರಿಯೊಳಗೂ
ಅವಳನ್ನು ನೆನೆದ
ಅಸ್ಥಿಪಂಜರಗಳೆಲ್ಲ
ಥರಗಟ್ಟುತ್ತಿವೆ.

ಶಾಯರಿ

ಚಂದ್ರಿಕೆ...
ನಕ್ಕಳೆಂದು
ಖುಷಿಯಾಗದಿರು
ಗೆಳೆಯ...
ಚಂದಿರನ ತಂಬೆಳಕು
ಬಿದ್ದ ಗೋರಿಯೊಳಗೂ
ಅವಳನ್ನು ನೆನೆದ
ಅಸ್ಥಿಪಂಜರಗಳೆಲ್ಲ
ಥರಗಟ್ಟುತ್ತಿವೆ.

ಶಾಯರಿ ೬೭೪

ನಿನ್ನರಮನೆಯ
ವಾಸ್ತುವು
ಚೆನ್ನಾಗಿಲ್ಲವಲ್ಲ
ಸಾಕಿ....
ಎಲ್ಲ ಮೂಲೆಗಳಲ್ಲೂ...
ವಿರಹಿಗಳೆದೆಯ
ನೋವೆ ಮನೆ
ಮಾಡಿವೆ....
ತೊಳೆದುಬಿಡೊಮ್ಮೆ!!!
ಸೋಪು ನೀರನ್ನೆ
ಹಾಕಿ

ಶಾಯರಿ ೬೯೧

ಬಾಳಿನ ಜೊತೆ
ಆಡಿ ಹೋಗಿದ್ದರೆ
ಹಿಡಿಯುತ್ತಿದ್ದೆನೇನು
ಮಧು ಬಟ್ಟಲನ್ನು
ಸಾಕಿ....
ಕುಂಟೆ ಬಿಲ್ಲೆಯಾಟದಂತೆ
ಆಡಿ ಹೋದಳಲ್ಲ
ಭಾವದೆದೆಯಲ್ಲಿ...
ಹೇಗೆ ಬಿಟ್ಟು ಬಿಡಲೀಗ
ನಿನ್ನ ಮಧು
ಬಟ್ಟಲನ್ನು

ಶಾಯರಿ ೬೯೮

ಉಸ್ಕಿ ಪ್ಯಾರ್
ಮೇ...
ಐಸೆ ಡೂಬ್
ಗಯೇ ಹೈ
ಸಾಕಿ....
ಕ್ಯಾ ಕರೇ...
ಛೊಡ್ ದೀಯಾ ಹೈ ವೊ...
ಜೀನೆ ಕೊ ಮನ್
ನಹೀ ಕರ್ತಾ....
ಮರ್ನೆ ಕೋ ಜಮಾನ
ನಹೀ ಚೊಡ್ತಾ...