Sunday, March 31, 2019

ಶಾಯರಿ ೬೦೧

ಕಲ್ಲಾಗಿಬಿಟ್ಟರೆ!!!
ನಿಟ್ಟುಸಿರು...
ನಿಂತು ಬಿಡಬಹುದಲ್ಲ
ಸಾಕಿ...
ಕಲ್ಲು ದೇವರ
ಮೇಲೂ...
ಹೂವೊಂದನಿಡುವರಲ್ಲ!!!
ಇವರದೆಂತಹ
ಮನಸ್ಸು...

ಶಾಯರಿ ೫೯೭

ತಡೆದುಕೊಳ್ಳಲಿ
ಹೇಗೆ?
ರಂಗೀಯ
ನೆನಪುಗಳ
ಅಲೆ
ಸಾಕಿ....
ತೆರುವವರು
ಯಾರೀಗ?
ಕುಡಿದು ಬಿಟ್ಟ
ಮದ್ಯದ
ಬಟ್ಟಲುಗಳಿಗೆ
ಬೆಲೆ

ಶಾಯರಿ ೬೧೨

ಮದುವೆಯಾದ
ವರುಷಕ್ಕೆ
ಕೊಡುತ್ತೇನೆಂದಿದ್ದಳು
ಹೆತ್ತು...
ನನ್ನ ಕೈಗೊಂದು
ಕೂಸು
ಸಾಕಿ...
ಆಡಿದ ಮೂರು
ತಿಂಗಳಿಗೆ...
ಕೊಟ್ಟಿರುವಳು
ಕೈಗೆ ನಿನ್ನ
ಮದ್ಯದ ಗ್ಲಾಸು

ಶಾಯರಿ ೬೧೯

ಎಣ್ಣೆಯಿಲ್ಲದೆ
ಆರಿ ಹೋಗುತಿವುದೀ...
ಒಲವ
ಜ್ಯೋತಿ....
ಸಾಕಿ....
ಹುಗಿದ ಗೋರಿಯ
ಮೇಲೊಂದು ಹೂವನಿಟ್ಟು
ತೋರಿಸದರೇನು
ಬಂತು....
ಪ್ರೀತಿ

ಶಾಯರಿ ೬೩೧

ನಾ ಸತ್ತ
ದಿನಕ್ಕೆ...
ಕಣ್ಣೀರನ್ನು
ಹಾಕಬೇಡ
ಸಾಕಿ......
ನೊಂದು
ಮನೆ
ಬಾಗಿಲಿಗೆ
ಬಂದವನ
ಎದೆಗೆ, ಮಧುವನ್ನು
ಸುರಿಯುವದ ನೀ...‌
ಮರೆಯಬೇಡ.

ಶಾಯರಿ ೬೨೭

ಇದೊಂದು
ಜನ್ಮಕ್ಕೆ
ನನಗೀ...
ಗತಿ
ಸಾಕಿ...
ಇನ್ನೇಷ್ಟು
ಜನ್ಮಗಳ
ನಂಟಿವುದೊ...
ಅರಿತವನೊಬ್ಬನೆ
ತಿರುಪತಿ

ಶಾಯರಿ ೬೨೧

ಲೆಕ್ಕವಿಲ್ಲದಷ್ಟು
ಕನಸುಗಳನು
ಬಸುರಿಟ್ಟಳವಳು
ಸಾಕಿ...
ನೆನಪಿಸಿಕೊಳ್ಳಲು
ಒಂದಕ್ಕೂ..
ಉಸಿರನ್ನೆ
ನೀಡಲಿಲ್ಲ