ಅನುಸರಿಸಿದ
ರೀತಿಗಳೆಲ್ಲ
ತಪ್ಪಿದ್ದವೇನೊ?
ನನಗಂತೂ ದಕ್ಕಲಿಲ್ಲ
ಪ್ರೀತಿ.!!
ಸಾಕಿ.......
ತಪಸ್ಸು ಮಾಡುವಷ್ಟು
ಸಮಯ...ನನ್ನಲಿಲ್ಲ!!!
ಸುರಿದುಬಿಡು ಮದ್ಯವನು...
ಕುಡಿದು ಮರೆತುಬಿಡುವೆ
ಸಮಾಜದ ರೀತಿ...
ನೀತಿ..
Wednesday, May 8, 2019
ಶಾಯರಿ ೮೧೯
ಶಾಯರಿ ೮೧೭
ನನ್ನೀ...ಕಷ್ಟಕ್ಕೆ
ನಾನೇಕಿಡಲಿ
ದೇವರಾಣೆ
ಸಾಕಿ....
ಹಣೆಯಲ್ಲಿ
ಬರೆದುದಕೆಲ್ಲ
ಅವನೇ....ಯಲ್ಲವೆ
ಹೊಣೆ
ಶಾಯರಿ ೮೧೮
ಕಣ್ಣೀನೊಳಗಿರುವ
ಕರುಣೆ...
ಎದೆಯೊಳಗಿಲ್ಲ
ದಾಯಿತಲ್ಲ
ಸಾಕಿ...
ನನ್ನ ಭಿಕ್ಷುಕನನ್ನಾಗಿ
ನೋಡಿದ್ದರು
ಸಾಕಿತ್ತು...
ಇನ್ನೊಂದು ಅರೆ
ಘಳಿಗೆ, ಹೆಚ್ಚಿಗೆ
ಬದುಕಿರುತ್ತಿದ್ದೆ
ಶಾಯರಿ ೮೧೬
ನನ್ನ
ಕಥೆಯನ್ನು
ನೋಡುವರಾರೀಗ
ಸಾಕಿ...
ಅಂತ್ಯವಿನ್ನು ಬಂದಿಲ್ಲ!!
ಚಿಂತಿಸಬೇಡ ಹೆಚ್ಚು
ಅದು ನಿನ್ನನು
ಚಿತೆಯಾಗಿಸಬಲ್ಲದು.
Tuesday, May 7, 2019
ಚುಟುಕು ೮೧೫
ಪೋನು
ಕೈಯಲ್ಲಿದೆ
ಹೇಗೆ ನುಡಿಯಲಿ
ಸತ್ಯವನ್ನು
ಅಣ್ಣ...
ಕಳಬೇಡ, ಕೊಲಬೇಡ
ಹುಸಿಯ ನುಡಿಯಬೇಡ
ಎಂದರೆ... ನಾ ಹ್ಯಾಂಗ
ಬದುಕಲೋ....
ಬಸವಣ್ಣ
ಶಾಯರಿ ೮೧೪
ತೀರಿಸಿಕೊಳ್ಳಲು
ಇನ್ನೇನುಳಿದಿದೆ
ಮುಯ್ಯಿಗೆ
ಮುಯ್ಯಿ
ಸಾಕಿ...
ಅವಳಿಗಾಗಲೆ
ಹಿಡಿದು
ನಡೆದಿರುವಳಲ್ಲ
ಇನ್ನೊಬ್ಬನ
ಕಯ್ಯಿ...
ಶಾಯರಿ ೮೧೩
ತೃಣದಲ್ಲೇ.....
ಬೃಹ್ಮಾಂಡವ
ಗೆಲ್ಲುವ ಅಧಮ್ಯ
ಆಸೆಯಿರುವುದು
ಸಾಕಿ...
ಕಣ್ತೆರೆದು
ನೋಡಲಿಲ್ಲವೇನೊ?
ಯಾರೂ.!!!
ಅಲೆಗ್ಸಾಂಡರ್ ನೂ
ಬರಿಗೈಯಲ್ಲೆ
ಹೋದದ್ದು...
Subscribe to:
Posts (Atom)