Friday, June 28, 2019

ಶಾಯರಿ

ಇಂದಿನ ಹೆರಿಗೆಗಳು
ಸರಾಗವಾಗಿ
ಆಗುವುದಿಲ್ಲ
ಸಾಕಿ...
ಹೊಟ್ಟೆಯನ್ನು ಕೊಯ್ಯಲೆಬೇಕು.
ಇನ್ನವಳ ನೆನಪುಗಳ
ಹೆರಿಗೆಗೆ, ನನ್ನನು
ಗೋರಿಯಲ್ಲಿ ಹುಗಿಯಬೇಕು.

ಶಾಯರಿ

ರಕ್ತ!!!!
ಎಲ್ಲಿದೆ
ಸಾಕಿ....
ತನುವಿನ ಕಣ...
ಕಣದಲ್ಲೂ, ನಿನ್ನ
ಮದ್ಯವೆ
ತುಂಬಿಕೊಂಡಿರುವಾಗ

ಶಾಯರಿ

ಹುಚ್ಚನೆಂದು ಜನರು
ಬೀಸಿದ ಕಲ್ಲುಗಳ
ನೋವು, ಗಾಯ
ವಾಸಿಯಾಗಬಹುದೇನೊ
ಸಾಕಿ....
ಚೇತರಿಸಿಕೊಳ್ಳುವುದೆ?
ಶಸ್ತ್ರಗಳಿಲ್ಲದೆ, ಬರೀ....
ಅವಳ ಕಣ್ಣೊಟಕ್ಕೆ
ಗಾಯಗೊಂಡಿರುವ
ಎದೆಯು

Thursday, June 27, 2019

ಶಾಯರಿ

ಅತಿಯಾದದ್ದು
ಯಾವಾಗಲೂ
ವಿಷವಲ್ಲವೆ!!
ಸಾಕಿ...
ಮದ್ಯ ಮರೆಸುತ್ತದೆ
ನೆನಪುಗಳನ್ನೆಂದು
ಹೆಚ್ಚೆಚ್ಚು ಕುಡಿದರೆ!!
ಅದು ಈ ಲೋಕದಿಂದ
ನಮ್ಮನೆ ಮರೆಯಾಗಿಸುವುದಿಲ್ಲವೇನು?

ಶಾಯರಿ

ಹೆಗಲ ಮೇಲೆ
ಕೈ ಹಾಕಿದವರೆ
ಕೊರಳಿಗೆ
ಉರುಳಾದರಲ್ಲ
ಸಾಕಿ...
ಬೆಳಕೆಂದುಕೊಂಡಿದ್ದೆ
ನಡೆಸುವ ಹಾದಿಗೆ,
ಬೆಂಕಿಯಾಗಿಬಿಟ್ಟರಲ್ಲ!
ಹೆಜ್ಜೆಯಿಡುವ ಮುನ್ನವೆ
ಸುಟ್ಟು ಹಾಕಲಿಕ್ಕೆ...

Tuesday, June 25, 2019

ಸಾಕಿ

ಉಫ್........
ಇಷ್ಟೊಂದು ಮದವೇರಿಸುವ ಮತ್ಗಣ್ ಗಳ
ಗಾಳಕ್ಕೆ ಸಿಗದೆ ಬದುಕುಳಿದವರುಂಟೆ ಸಾಕಿ.....
ಕುಡಿದುಬಿಟ್ಟ ನಿನ್ನ ಮದ್ಯದ ಸವಿಯನ್ನಾದರೂ
ಮರೆಯಬಹುದು, ಮರೆಯಲಾದಿತೆ!!?
ಮರೆಯುವುದಾದರೂ ಹೇಗೆ, ಕಚ್ಚಿ ಹೀರಿಕೊಂಡ
ಕೆಂದುಟಿಯ ಮಧುವಿನ ಸವಿ ನೆನಪುಗಳನ್ನು....

ಹಾಯ್......
ಹಿಡಿತಕ್ಕೆ ಸಿಗುತ್ತಿಲ್ಲ ಮನಸ್ಸು..ತನುವಿನಣುವಣುವು
ಉರಿದುಹೋಗುತಿಹುದು, ಇದೆಂತಹ ವಯಸ್ಸು ಸಾಕಿ....
ಕಾವಿಯ ತೊಟ್ಟು, ಮೂಗು ಹಿಡಿದುಕೊಂಡು ಕೂರಲು,
ಹಳ್ಳ-ಕೊಳ್ಳಗಳಲ್ಲಿ, ನದಿ ಹೊಳೆಗಳಲ್ಲಿ ನೀರಿಲ್ಲ!!!
ಬಟ್ಟ ಬಯಲಿನಲಿ, ಒಂಟಿ ಮರದ ನೆರಳಡಿಯಿರುವ
ಕಲ್ಲು ಬಂಡೆಯ ಮೇಲೆ ಕುಳಿತುಕೊಂಡ ನನ್ನೊಳಗೆ
ಮನಃಶಾಂತಿಯೆಂಬುದು ಬಿಂದೂವಿನಷ್ಟು ಇಲ್ಲ!!

ಅಬ್ಬಬ್ಬಾ....!!!!
ಹತ್ತಿಕ್ಕಿಕೊಳ್ಳಲಿ ಹೇಗೆ? ಭಾವನೆಗಳನ್ನು.... ಹುಚ್ಚು
ಹಿಡಿಸಿಬಿಟ್ಟಿವೆ ಕಾ....ಮನಾಕಾರದ ಹುಬ್ಬುಗಳು ಸಾಕಿ...
ಬದುಕುಳಿದದ್ದೆ ಹೆಚ್ಚು...ಆ ನೋಟಕ್ಕೆ, ಯಾರು ಕಲಿಸಿಕೊಟ್ಟಿರಬಹುದು ಮೋಹದಲೆ ಕಟ್ಟಿಹಾಕುವ ವಿದ್ಯೆ!!!!
ಹೀಗಾದರೆ.....ನಿಂತೆ ಹೋಗುವುದಲ್ಲ ಬ್ರಹ್ಮಚಾರಿಗಳ ನಿದ್ದೆ!!

ಹ್ಞೂಂ....
ಇನ್ನೇನು ಮಾಡುವುದು? ಸೋತವನು ಸಂಸಾರಿಯಾಗಲಿಲ್ಲ,
ನಿಗ್ರಹಿಸಿಕೊಂಡು ವಟುವು ಆಗಲಿಲ್ಲ...ಭಗ್ನಗೊಂಡಿರುವೆನಲ್ಲ
ತುಂಟ ಹುಡುಗಿಯು ಎಸೆದು ಹೋದ ಬೊಂಬೆಯ ಹಾಗೆ ಸಾಕಿ....
ಮುಕ್ಕಣ್ಣನ ಬೆಂಕಿಗೆ ಸಿಕ್ಕು, ಉರಿದು ಹೋದ ಮದನನ
ನೋವು...!!! ಹ್ಹ...!!!, ಈ ಅಮಲು ಕಣ್ಣುಗಳು ಪರಿಚಯಿಸಿದವಲ್ಲ
ಬದುಕೊಳಗೊಳಗೇನುಳಿದಿದೆ, ಎಂಜಲು ಬಟ್ಟಲೊಳಗಿನ
ಕಹಿ ಮದ್ಯವ ಹೊರತುಪಡಿಸಿ...

Sunday, June 23, 2019

ಶಾಯರಿ

ಮನೆ....!!!!?
ಅರಮನೆಯಾದರೇನು?
ಪಾಳಾದರೇನು?
ಸಾಕಿ....
ಹೋದರೆ...?
ತೆರೆಯುವಳೊಬ್ಬಳು
ಬೇಕಲ್ಲ