Beish
Sunday, November 24, 2019
ಚುಟುಕು
ಮಾಡಿದ್ದನ್ನು ಇಲ್ಲಿಯೆ
ಉಂಡು ಹೋಗಬೇಕು!
ಪಾಪದ್ದು...
ಹಳಸಿ ಹೋಗುತ್ತದೆ!!
ಪುಣ್ಯದ್ದು, ಹೊಟ್ಟೆಯನ್ನಾದರು
ತುಂಬಿಸುತ್ತದೆ!
Wednesday, November 20, 2019
ಸಾಕಿ
ವಿರಹದ ಬೇಗೆಯಲ್ಲಿ
ಬೆಂದು...ಬೆಂದು...
ಬಳಲಿಹೋಗಿರುವೆ,
ಇಂದಿರುಳಿಗಾದರು ಅವಳ
ನೆನಪುಗಳಿಂದ ದೂರವಿರಿಸು
ಸಾಕಿ....
ಈ ರಾತ್ರಿಗಾದರೂ...
ಕೈಗೂಡದ ಕನಸುಗಳನ್ನು
ನನಸಾಗಿಸಿಕೊಳ್ಳುವ
ವ್ಯರ್ಥ ಪ್ರಯತ್ನವನ್ನಾದರೂ
ಮಾಡುವೆ!!
Saturday, November 16, 2019
ಚುಟುಕು
ನಾನೆ ಪಂಜರದ ಹಕ್ಕಿ
ಅವಳೊಲವಲ್ಲಿ!
ಇನ್ನೂ ಸೆರೆಯಾಗುವ
ಮಾತೆಲ್ಲಿ!
ನಾನೆ ಮರೆಯಾಗಬೇಕಿದೆ
ಅವಳ ಸೀರೆ
ಸೆರಗಿನಂಚಿನಲ್ಲಿ!
ಚುಟುಕು
ವಾದ್ಯದ ತರಂಗಗಳಿಗೆ
ಮಿಡಿಯುವ ನೀನು...
ನನ್ನೆದೆಯ ತರಂಗದ ರಾಗವು
ನಿನಗೆ ಕೇಳಿಸದೇನು?
ಪಲ್ಲವಿಗೆ ಸೋತು ಹೋಗುವ
ನೀನು.... ಯುಗಳ ಗೀತೆಗಳನ್ನು
ಹಾಡಿದರೂ...ನಿನಗೆ
ಕೇಳಿಸುತ್ತಿಲ್ಲವೇನು?
ಚುಟುಕು
ಸಾಲು ಕದ್ದವನ
ಮಾತು ಬಿಡು! ಅವನೇನು
ಭಾವವ ಕದಿಯಬಲ್ಲನೇನು?
ಮನಸ್ಸು ಕದ್ದವಳು
ನೀನು... ಬಾ ಇಲ್ಲಿ
ಉತ್ತರಿಸು, ಈ ವಿರಹದ
ಸೆರಮನೆವಾಸಿಯನ್ನು
ಬಿಡಿಸಿಕೊಂಡು ಹೋಗುವುದು
ಯಾವಾಗ?
Sunday, November 10, 2019
ರಂಗೀ..
ವಿಳಾಸವಿಲ್ಲದ
ನಿನ್ನೂರನ್ನು ಬೇಕಿದ್ದರು
ಹುಡುಕಿಕೊಂಡು
ಬರುವೆ ರಂಗೀ....
ಎದುರಾದಾಗ
ನಿನ್ನ ದಿವ್ಯ ನಿರ್ಲಕ್ಷ್ಯದ
ನೋಟವನ್ನು ನಾ
ಹೇಗೆ ಸಹಿಸಿಕೊಳ್ಳಲಿ!
ಶಾಯರಿ
ಅವಳಿಗಿನ್ನೂ...
ನನ್ನಮೇಲದಷ್ಟು
ಕೋಪವಿರಬಹುದು
ಸಾಕಿ....
ಮದುವೆಯ
ಮೊದಲ ರಾತ್ರಿಯಲ್ಲಿ
ಚೂರಾದ ಬಳೆಗಳನ್ನು
ತಂದು.... ನನ್ನ ಗೋರಿಯ
ಮೇಲೆ ಚೆಲ್ಲಿರುವಳಲ್ಲ!!
Newer Posts
Older Posts
Home
Subscribe to:
Posts (Atom)