Sunday, February 23, 2020

ಸಾಕಿ

ಯಾವ ವಿಷವು
ನನ್ನನು ಕೊಲ್ಲುವುದಿಲ್ಲ!
ರಂಗೀಯ ನೆನಪುಗಳ
ಪಂಜು ನನ್ನೆದೆಯಲ್ಲಿ
ಉರಿಯುತಿರಲು
ಸಾಕಿ....
ಯಾವ ಅಮೃತವು
ಉಳಿಸಿಕೊಳ್ಳಲಾರದು
ನನ್ನನು!. ಒಲವಿನ ಎಣ್ಣೆಯನು,
ಆರಿ ಹೋಗುತಿರುವ
ಹಣತೆಗೆ ಸುರಿಯದ ಹೊರತು.

Tuesday, February 18, 2020

ಹಾಯ್ಕುಗಳು ೨೭೧-೩೦೦

ಹಾಯ್ಕುಗಳು ೨೪೧-೨೭೦

ಹಾಯ್ಕುಗಳು ೨೧೧-೨೪೦

ಹಾಯ್ಕುಗಳು ೧೮೧-೨೧೦

ಹಾಯ್ಕುಗಳು ೧೫೧-೧೮೦

ಹಾಯ್ಕುಗಳು ೧೨೧-೧೫೦

೧೨೧.
ಅವಳೆ
ಕೂಸು.
ಕಂಕುಳಲ್ಲಿ ಅವಳ
ಕೂಸು.

೧೨೨.
ಇಲ್ಲಿ
ಮನಸ್ಸುಗಳಿಗು 
ಮೈಲಿಗೆ ಅಂಟಿಕೊಂಡಿದೆ.

 ೧೨೩.
ಜಯಂತಿಗಳಿಗೆಲ್ಲ
ಬೈಕುಗಳು
ರಾಕ್ಷಸಗಳಾಗುತ್ತವೆ.

೧೨೪.
ಇವನ ಬಾಯಿ ತುಂಬಿದಾಗಲೆಲ್ಲ
ಕಛೇರಿಯ ಮೂಲಿ 
ರಂಗೇರುತ್ತದೆ.

೧೨೫.
ಶವದ ಪೆಟ್ಟಿಗೆಗೆ
ಮೊಳೆ ಜಡಿದರು.
ಮದುಮಗನಾಗಲು ರೆಡಿಯಾದ.

೧೨೬.
ಪಂಜು ಇನ್ನೂ
ಉರಿಯುತ್ತಿದೆ.
ಪಡೆದ ಬಲಿಗಳು ಸಾಕಾಗುತ್ತಿಲ್ಲ.

 ೧೨೭.
ಯಾರು
ಹಾಡುವವರು?
ಸ್ವಜಾತಿ- ಗೆದ್ದರು.

೧೨೮.
ಮಧು ಬಟ್ಟಲು
ತುಂಬಿದೆ.
ಅವಳ ನೆನಪುಗಳಿಗೀಗ ಆಕಳಿಕೆ.

೧೨೯.
ಲಕ್ಷಗಟ್ಟಲೆ ಸುರಿದು
ಮನೆಯನ್ನು ಕಟ್ಟಿಸಿದ್ದ.
ನಿದ್ದೆ ಹತ್ತುತ್ತಿಲ್ಲ, ಅವ್ವನ ಮಡಿಲಿಲ್ಲಿ
ಖಾಲಿ...ಖಾಲಿ.

೧೩೦.
ಕಸವನ್ನೆ
ಬಿತ್ತುತ್ತಾರೆ.
ಫಸಲಿಗಾಗಿ

೧೩೧.
ಕೊರೊನಾ ವೈರಸ್
ಆಗಬಹುದು
ಮತ್ತಷ್ಟು ಜನ ಮೈನಸ್.

 ೧೩೨.
ಸಾಕ್ಷಿಯನ್ನು
ಕೇಳಬೇಡಿ.
ಗುಲಾಬಿಯು ಅಸುನೀಗಿದೆ.

೧೩೩.
ಕಾಯುತಿರಿ.
ಅವಕಾಶವಿದ್ದೆ ಇದೆ.
ಅವಸರಕ್ಕೆ ಮಸಣವಂತು ಕಾದಿದೆ.

೧೩೪.
ಕಪ್ಪು ಮೋಡ
ಕಪ್ಪು ನೆಲ
ಪೈರೆಲ್ಲ ಹಸಿರು.

 ೧೩೫.
ಮಳೆ ಸಾಕಷ್ಟು
ಬರುತ್ತದೆ.
ಬೇಡದಿದ್ದಾಗ

೧೩೬.
ಅಳಿಸಿದರೇನಾಯಿತು?
ಕಾಗದದ ಮೇಲೆ
ಕಲೆ ಉಳಿದೆ ಹೋಯಿತು.

೧೩೭.
ಕಣ್ಣೀರನ್ನು
ಸುರಿಸದೀರಿ.
ನಾಟಕಿಯತೆಗಳು ಸಾಕಾಗಿವೆ.

೧೩೮.
ಸೀತೆ, ತುಂಬು
ಬಸುರಿ.
ಇವರು ಸರಕಾರಿ ಆಸ್ಪತ್ರೆಗೆ
ಹೋಗಲೊಲ್ಲರು.

೧೩೯.
ತುಪ್ಪದ ವಾಸನೆ
ಮೊದಲಿನ ಹಾಗಿಲ್ಲ.
ಅಜ್ಜಿಯ ಕುಡಗೋಲು ಅಟ್ಟದಲ್ಲಿದೆ.

೧೪೦.
ಇಂದಿನ ನಾರಿ
ಕಾಮದ ಬೊಂಬೆ.
ಹೇರುವ ಯಂತ್ರ.

೧೪೧.
ಓಬವ್ವ
ನೆನಪಾಗುವುದಿಲ್ಲ.
ಹೊಸ ಮನೆಗಳಲ್ಲಿ ವಳ್ಳುಗಳೆ ಇಲ್ಲ!

೧೪೨.
ವನಕೆಯನ್ನು
ಕಂಡಾಗಲೆಲ್ಲ
ಇತಿಹಾಸ ನೆನಪಾಗುತ್ತದೆ.

೧೪೩.
ಬದುಕಬೇಕು.
ಹೇಗೆ?
ತಿಂದಾದರೂ ಸರಿ.

೧೪೪.
ಕಣ್ಣು, ಕಿವಿಗಳು
ಬಹಳಷ್ಟು ಚುರುಕು.
ಶರಣರಿಲ್ಲ!.

೧೪೫.
ಹರಿದ ಹಾಳೆ
ಕಸ.
ಉದುರಿದ ಎಲೆ
ರಸ.

೧೪೬.
ಬೆಂಕಿಯನ್ನು ಹಚ್ಚಲು
ಕಿಡಿ ಬೇಕಿಲ್ಲ.
ಮಾತು ಸಾಕು.

೧೪೭.
ಎಡವದೆ ನಡೆಯಬೇಕು.
ಕಣ್ಮುಚ್ಚಿಕೊಳ್ಳಿ.
ಎತ್ತುಕೊಂಡು ಹೋಗುತ್ತಾರೆ.

೧೪೮.
ಬದುಕಬೇಕೆಂದು
ಗಿಡವನ್ನು ನೆಡುತ್ತಾರೆ.
ಬದುಕಿಸಬೇಕೆಂದು ಅದು
ಚಿಗುರುವುದಿಲ್ಲ.

೧೪೯.
ಅಣ್ಣ ಹೊರಟು
ಹೋದಾಗ,
ಭರತನನ್ನು ಕಾಣುವುದೆ
ಅಪರೂಪ.

೧೫೦.
ಮಾತುಗಳು 
ಹಗುರವಾಗಿವೆ.
ತಕ್ಕಡಿಯ ತೂಗುವ ಕಲ್ಲುಗಳು
ಮಾಯವಾಗಿವೆ.

ಹಾಯ್ಕುಗಳು ೯೧-೧೨೦

[2/18 10:27 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೯೧.
ಮಗಳ ಮದುವೆ
ನಿಶ್ಚಯವಾಯಿತು.
ದಲ್ಲಾಳಿ ಕರೆ ಮಾಡಿದ.
[2/18 10:31 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೯೨.
ಮಗಳು ಮಗುವನ್ನು
ಹಡೆದಳು.
ತಾಯಿಯ ಒಂದು ಸೀರೆ
ಕಡಿಮೆಯಾಯಿತು.
[2/18 10:37 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೯೩.
ಮಗಳ ಮದುವೆ
ನಿಶ್ಚಯಗೊಂಡಾಗ
ಅಪ್ಪನ ಎದೆಯಲ್ಲಿ ಸಂಕಟ.
[2/18 10:38 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೯೪.
ಹಣ್ಣು 
ಮಾಗಿದೆ.
ಬೆಲೆ ಸಿಗುತ್ತಿಲ್ಲ.
[2/18 10:47 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೯೫.
ಪಾಪಕ್ಕೆ
ಸಿಕ್ಕಿತು ಜಾಮೀನು.
ಸಾವಿಗೆ?
[2/18 10:48 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೯೬.
ಗುಡಿಯನ್ನು
ಸುತ್ತು ಹಾಕಿದೆ.
ಕಾಲು ನೋವು ಬಂದಿತು.
[2/18 10:50 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೯೭.
ಮಡಿ 
ಎಂದವನ ತಿಥಿಗೆ
ಅಸ್ಪೃಶ್ಯನ ತೋಟದ ಹಣ್ಣು
ನೈವೇದ್ಯವಾಗಿತ್ತು.
[2/18 10:51 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೯೮.
ಮಡಿಯೆಂದು ಹಣ್ಣಿನ
ಮೇಲೆ ನೀರು ಚಿಮುಕಿಸಿದರು.
ರುಚಿ ಬದಲಾಗಲಿಲ್ಲ.
[2/18 10:53 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೯೯.
ಕುರ್ಚಿಯ ಖುಷಿಯಲ್ಲಿ
ಕುಳಿತಿದ್ದ.
ಹೊರಗೆ ಕಾಲು ಮುರಿಯುವವರು
ಕಾಯತ್ತಿದ್ದರು.
[2/18 10:55 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೦೦.
ನೀಚ ಎಡವಿದ.
ನೆತ್ತರು ಹತ್ತಿದ ಕಲ್ಲು
ದೇವರಾಯಿತು.
[2/19 7:06 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೦೧.
ಮುನಿಸು
ಮಲ್ಲಿಗೆ
ಮೈ ಮರೆತರು.
[2/19 8:04 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೦೨.
ಗೋಡೆಯನ್ನು
ಕಟ್ಟಿದರಂತೆ!
ಹೊಸತೆನಲ್ಲ.
[2/19 8:04 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೦೩.
ಸರಕಾರಿ ಆಸ್ಪತ್ರೆಯ
ಕಾಂಡೋಮ್ ಪೆಟ್ಟಿಗೆ
ಯಾವಾಗಲೂ ಖಾಲಿ.
[2/19 8:05 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೦೪.
ಕೆಲಸ ಸಿಗುತ್ತಿಲ್ಲ.
ಮಕ್ಕಳನ್ನಾದರು
ಮಾಡೋಣ.
[2/19 8:06 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೦೫.
ಮೂರು ಬಿಟ್ಟವರಿಗೆ
ಬಟ್ಟೆಯ
ಅವಶ್ಯಕತೆಯಿದೇಯೆ?
[2/19 8:06 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೦೬.
ಅಪ್ಪ
ಮುಗಿಯದ
ಅಧ್ಯಾಯ.
[2/19 8:07 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೦೭.
ಅವ್ವ
ಮುಗಿಯದ
ಕಥನ.
[2/19 8:10 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೦೮
ಅವಳು
ಹಾಡದ
ರಾಗ.
[2/19 8:11 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೦೯
ಆರತಿ ತಟ್ಟಿಯಲ್ಲಿ
ಚಿಲ್ಲರೆ ಹಾಕಿದೆ.
ಪೂಜಾರಿ ಕಣ್ಣಗಲಿಸಿದ.
[2/19 8:12 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೧೦.
ಹೂವು ಚೂರು
ಬಾಡಿತ್ತು.
ಪೂಜಾರಿಯೆ ಮುಟ್ಟಲಿಲ್ಲ.
[2/19 8:12 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೧೧.
ದೇವಸ್ಥಾನದ ಹುಂಡಿ
ತುಂಬಿದನ್ನು
ನೋಡಿಯೆ ಇಲ್ಲ.
[2/19 8:13 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೧೨.
ಯಾತ್ರೆಗೆ ಹೋಗಿ
ಬಂದವರು, ಸತ್ತು
ಸ್ವರ್ಗವನ್ನು ಕಂಡರೊ, ಇಲ್ಲೊ
ಗೊತ್ತಾಗಲಿಲ್ಲ.
[2/19 8:14 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೧೩.
ಕಸ ಹೊಡೆಯುವಳು
ನಡು ಬಾಗಿಸುತ್ತಾಳೆ.
ಎಸೆಯುವವರು ಎದೆಯುಬ್ಬಿಸಿರುತ್ತಾರೆ.
[2/19 8:16 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೧೪.
ಗುಡಿಸಲಿನ
ಒಂದೆ ತಟ್ಟೆಯಲ್ಲಿ
ಎಲ್ಲರ ಊಟ.
[2/19 8:19 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೧೫.
ಸಮಾರಂಭವೆಂದರೆ
ಬೀದಿಗೆ
ಬರುವುದು.
[2/19 8:38 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೧೬.
ದಸ್ತಕಕ್ಕೆ ಸಹಿ
ಬೇಕಾಗಿತ್ತು.
ಅಧಿಕಾರಿಯ ಹೊಟ್ಟೆ ಹಸಿದಿದೆಯಂತೆ.
[2/19 8:40 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೧೭.
ಸಮಸ್ಯೆಯೇನೊ
ಆನೆಯಂತಾಗಿದೆ.
ನಾನೆ ಈರುವೆಯಾಗಬೇಕು.
[2/19 8:51 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೧೮.
ಸ್ವಾತಂತ್ರೋತ್ಸವದ
ದಿನದಂದಷ್ಟೆ ಬಾವುಟ
ಸ್ವಚ್ಛಂದವಾಗಿ ಹಾರಾಡುತ್ತದೆ.
[2/19 8:53 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೧೯.
ಮನೆಯ ಬಾಗಿಲಲ್ಲಿ
ಹೆಂಡತಿ ಎದುರಾದಳು.
ಪೇಟೆಯಲ್ಲಿನ ಉಳ್ಳಾಗಡ್ಡಿ
ಕಿಸಕ್ಕೆಂದು ನಕ್ಕಿತು.
[2/19 3:10 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೧೨೦.
ಅಳಿದುಳಿದ
ಕೂದಲುಗಳಿಗೆ
ಹರಸಾಹಸ.

Monday, February 17, 2020

ಚುಟುಕು

ಈ ಮೌನದ
ಸೆರೆವಾಸಕ್ಕಿಂತ,
ಗಲ್ಲಿಗಾದರು
ಏರಿಸುಬಿಡು!
ಇಲ್ಲವೇ....
ಕ್ಷಮಾದಾನವನ್ನಾದರು
ನೀಡಿ, ಪಾಪಿಗೊಂದೆರಡು
ಕಹಿಯಾದ 
ಮುತ್ತುಗಳನ್ನಾದರು ಕೊಟ್ಟು 
ಕರುಣಿಸಿಬಿಡು!.



ಹಾಯ್ಕುಗಳು ೬೧-೯೦

[2/17 11:42 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೬೧.
ಗುಲಾಬಿ ಹಿಡಿದ ಬೆರಳಿಗೆ
ಮುಳ್ಳು ಚುಚ್ಚಿ ನೆತ್ತರು ಬಂದಿತ್ತು.
ಮಧುಶಾಲೆಯಲ್ಲಿ ಹೊಸದೊಂದು
ಬಟ್ಟಲು ನಗುತ್ತಿತ್ತು.
[2/17 11:46 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೬೨.
ಅವರಿಗೆ ನನ್ನ
ಕವಿತೆ ಅರ್ಥವಾಗಲಿಲ್ಲವಂತೆ.
ಲೆಕ್ಕಾಚಾರದ ಮಂದಿ. ಸಮಯ
 ಹಾಳಾಯಿತಂತೆ.
[2/17 11:51 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೬೩.
ನೆರೆ
ಬಂತಂತೆ.
ನಿರ್ಜೀವ ಖಾತೆಗಳು ಕಣ್ಬಿಟ್ಟವಂತೆ.
[2/17 11:51 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೬೪.
ಗಾಂಧೀ
ನಗುತ್ತಿದ್ದಾನೆ.
ಕಪ್ಪು ಹಣದಲ್ಲಿ ಸಹ.
[2/17 11:53 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೬೫.
ಮೂಗಿಗೆ ತುಪ್ಪ
ಸವರಿದರು‌
ರೋಗಿಗಳು ನಗರಕ್ಕೆ
ಹೋಗಬೇಕಾಯಿತು.
[2/17 11:57 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೬೬.
ಇಂದೂ...ಕ್ಯಾಷೀಯರ್
ನಗಲಿಲ್ಲ.
ಖಾತೆಯಲ್ಲಿ 'ನಗ'ದು ಜಮವಾಗಿರಲಿಲ್ಲ.
[2/18 12:23 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೬೭.
ಅವಳು ತೊರೆದು
ಹೋದದ್ದು, ದೊಡ್ಡ ವಿಷಯವೇನಲ್ಲ!
ಮಧುಶಾಲೆಯ ಬಾಕಿ ತಿರಿಸಬೇಕಿತ್ತು.
[2/18 3:16 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೬೮.
ಅವನ ತಟ್ಟೆ
ಮುಸುರೆಯಾಗದ ಹೊರತು,
ಇವಳ ತಟ್ಟೆಯಲ್ಲಿ ಅನ್ನ
ಬೀಳದು.
[2/18 3:17 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೬೯.
ಕಬ್ಬಿನ ಗದ್ದೆಯನ್ನು ಕಂಡಾಗ
ಕೆಲವರ ಕಚ್ಚೆ
ಜಾರುವುದು.
[2/18 3:18 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೭೦.
ಬೀದಿಯಲ್ಲಿ ಪೆಂಡಾಲನ್ನು
ಹಾಕುವಾಗ
ಗುಡಿಸಲಿನ ಹಸಿವು ಹೆಚ್ಚಾಗಿತ್ತು.
[2/18 3:19 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೭೧.
ಅವಳೆದೆಯ ರವಿಕೆ ಮೇಲಿನ
ಸೆರಗು ಜಾರಿತ್ತು.
ಯಾರೊ ಸ್ವರ್ಗದಲ್ಲಿ ನರಳಿದ
ಸದ್ದಾಯಿತು.
[2/18 6:24 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೭೨.
ಅವರಿಬ್ಬರ ಕಣ್ಣೋಟ
ಬೆರೆತಾಗ,
ಕಾಂಡೋಮ್ ಗೆ ಹರೆಯ ಉಕ್ಕಿತ್ತು.
[2/18 6:25 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೭೩.
ಚೀಟಿಗಳು ಅದಲು
ಬದಲಾದವು.
ಪಾರ್ಕಿನ ಮೂಲೆ ನಕ್ಕಿತು.
[2/18 6:26 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೭೪.
ನಂಬಿ ಮೋಸ ಹೋದೆ
ಎಂದಳು.
ಮತ್ತೊಂದು ಕೈ ಹೆಗಲ 
ಮೇಲೆ ಬಿದ್ದಿತು.
[2/18 6:28 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೭೫.
ಅವರ ಸನ್ಮಾನಿಸುತ್ತೇವೆಂದು
ಆಹ್ವಾನಿಸಿದ್ದರು.
ಹೂವೀಗ ಮಾಲೆಗಳನ್ನು ಕಡಿಮೆ
ತಂದಿದ್ದನು.
[2/18 6:29 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೭೬.
ನೀನು ಜಾಣ ಎಂದು
ಸದಾ ಬೆನ್ನನ್ನು ಸವರುತ್ತಿದ್ದರು.
ಪ್ಲೇಟಿನಲ್ಲಿ ಎರಡೆ ಬಿಸ್ಕಿಟ್ ಇರುತ್ತಿದ್ದವು.
[2/18 6:31 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೭೭.
ಹೇಳುತ್ತಿದ್ದ, ಈ ವರ್ಷ
ನೂರು ಚೀಲ ರಾಶಿಯಾಗಿದೆ.
ಮನೆ ನಾಯಿ ಎರಡು ದಿನದಿಂದ 
ಹಸಿದಿತ್ತು.
[2/18 6:33 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೭೮.
ಮನೆಯೊಳಗಿನ ದಿನಸಿಗಳೆಲ್ಲ
ಖಾಲಿಯಾಗಿದ್ದವು.
ರೊಟ್ಟಿ ಕೊಟ್ಟಾಗ, ಕೆಲಸ ಬೇಕೆಂದ.
[2/18 6:35 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೭೯.
ದೇವಿ ಮುಂದೆ ಕಡೆದ
ತಲೆಗಳನ್ನು ಸಾಲಾಗಿ ಇಟ್ಟಿದ್ದರು.
ನೊಣಗಳೆಲ್ಲ ಹಾರಾಡುತ್ತಿದ್ದವು.
[2/18 6:36 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೮೦.
ಬಾಡೂಟವನ್ನು ತಯಾರಿಸಿದ್ದು
ಅಂಗಳದಲ್ಲೆ.
ಉಂಡದ್ದು ಮಾತ್ರ ಪಡಸಾಲೆಯಲ್ಲಿ.
[2/18 9:01 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೮೧.
ಬಜೆಟ್ ನ್ನು
ಮಂಡಿಸಿತು ಸರಕಾರ.
ಅಟ್ಟದಲ್ಲಿನ ಹಗ್ಗ ಕಾಣುತ್ತಿಲ್ಲ.
[2/18 9:02 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೮೨.
ಗಾಯ 
ಮಾಡಿದ್ದರು.
ಕೈಯಲ್ಲಿ ಉಪ್ಪನ್ನು ಹಿಡಿದುಕೊಂಡು.
[2/18 9:05 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೮೩.
ಕೈಯಲ್ಲಿ
ಮಲ್ಲಿಗೆಯಿತ್ತು.
ಮೌನ ಮನೆ ಬಿಟ್ಟಿತ್ತು.
[2/18 9:06 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೮೪.
ದುಂಬಿ ಹೂವಿಗೆ
ಮುತ್ತಿಕ್ಕುವ ಸದ್ದಿಗೆ,
ಮುಳ್ಳು ಮೆತ್ತಗಾಗಿತ್ತು.
[2/18 9:08 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೮೫.
ಕರೆಂಟ್
ಹೋಯಿತು.
ಕೆಲವರು ಲೊಚಗುಟ್ಟತೊಡಗಿದರು.
[2/18 9:10 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೮೬.
ಧಾರಾವಾಹಿ
ಮುಗಿದಾಗ
ಮಗಳ ಮೈ ನೆರೆವ ಶಾಸ್ತ್ರ.
[2/18 10:20 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೮೭.
ಕೈಯಲ್ಲಿ
ನೋಟಿಟ್ಟೆ.
ಕಣ್ಮುಚ್ಚಿಕೊಂಡು ಹೋದ.
[2/18 10:23 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೮೮.
ಜೇಬು
ತುಂಬಿಸಿದೆ.
ಮತ್ತಿನ್ನೇನು ಹೇಳಬೇಕು?
[2/18 10:24 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೮೯.
ಸಹಿ
ಹಾಕಿದೆ.
ಸಿಹಿಯಾದರು ಸಿಗಲಿಲ್ಲ.
[2/18 10:26 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೯೦.
ಅಳಿಯ
ಕರೆ ಸ್ವೀಕರಿಸಲಿಲ್ಲ.
ಹೊರಗೆ ಗೇಟು ತೆರೆದ ಸದ್ದಾಯಿತು.

ಹಾಯ್ಕುಗಳು ೩೧-೬೦

[2/17 7:00 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೧.
ಕೊಡಲಿಯ ಹರಿತವನ್ನು
ಪರೀಕ್ಷಿಸಿದೆ.
ಗೂಡಿನಲ್ಲಿ ಹಕ್ಕಿಗಳ ಸದ್ದು ಹೆಚ್ಚಾಯಿತು.
[2/17 7:42 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೨.
ತೋಟದಲ್ಲಿ ಅವಳ
ಕೈಯನ್ನು ಹಿಡಿದಾಗ,
ಒತ್ತೆಯಿಟ್ಟ ಅವ್ವನ ಖಾಲಿ ಕೈಗಳು
ಕಣ್ಮುಂದೆ ನಿಂತುಕೊಂಡವು.
[2/17 7:54 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೩.
ದಾರಿಯಲ್ಲಿ ಬೆಕ್ಕು ಅಡ್ಡವಾಯಿತು
ಮುಂದಕ್ಕೆ ನಡೆದೆ.
ಅವನು ಎದುರಾದ, ಮರಳಿ ಬಂದೆ.
[2/17 7:55 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೪.
ಬಲತ್ಕರಿಸುವುದು ಏನು
ಬೇಕಿದ್ದಿಲ್ಲ.
ನೋಡಿದ ನೋಟವೆ ಸಾಕಿತ್ತು.
[2/17 7:58 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೫.
ಮದಿರೆ
ದೂರವಿಡುತ್ತದಂತೆ
ಮಂಥರೆಯ ನೋವಿನಿಂದ ನಿಜವಾ?
[2/17 8:00 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೬.
ಕಾಲಕಾಲಾಂತರದಿಂದಲೂ
ಪೆಟ್ಟನ್ನು ತಿಂದವಳಿಗೆ, ಕೊಟ್ಟ
ಹೆಸರು 'ಸಹನಾಮಯಿ'.
[2/17 11:00 ಪೂರ್ವಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೭.
ನಾನು ಸೋಲನ್ನು
ಒಪ್ಪಿಕೊಂಡೆ.
ನ್ಯಾಯಾಲಯದ ಸಮಯ ಉಳಿಯಿತು.
[2/17 12:59 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೮.
ಅಕ್ಕ
ಭಾವ
ಲೆಕ್ಕ! ಸಿಗುತ್ತಿಲ್ಲ.
[2/17 5:05 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೩೯.
ಆತ್ಮೀಯತೆಗಿಂತ
ಚುಚ್ಚುವವರ ಮಾತಿಗೆ
ಕಿವಿಯಾಗುತ್ತೇವೆ.
[2/17 6:37 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೦.
ಮತ್ತೊಬ್ಬ ಕವಿ
ಹುಟ್ಟಿದ.
ಮತ್ತೊಂದು ಮರದ ಅವಸಾನವಾಯಿತು.
[2/17 6:38 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೧.
ಕವಿ
ಅರಳಿದ.
ಭಾವ- ಬಾಡಿತು.
[2/17 6:42 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೨.
ದೇವರಿಗೆ ಕೈ
ಮುಗಿದೆ.
ಕಾಸು ನೀಡಲಿಲ್ಲ.
[2/17 9:25 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೩.
ನಂಬಿಕೆ ಇಲ್ವಾ?
ಎಂದವರಿಂದಲೆ
ಮೋಸ ಹೋಗುವುದು.
[2/17 10:34 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೪.
ಸೀತೆ
ಎಂದಾಗ,
ರಾವಣ ನೆನಪಾದದ್ದು ಸುಳ್ಳಲ್ಲ!
[2/17 10:35 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೫.
ಗುಡಿ ಗುಂಡಾಂತರಗಳನ್ನು
ಸುತ್ತಿ ಹಾಕಿದರು.
'ಅದು' ಸಿಗಲಿಲ್ಲ.
[2/17 10:37 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೬.
ಅವನು ಚಾಕುವಿನಿಂದ
ಇರಿದಾಗ,
ನೆತ್ತರು ನೆಲದ ಮೇಲೆ ಚೆಲ್ಲಿತ್ತು.
[2/17 10:39 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೭.
ವಿದ್ಯಾಭ್ಯಾಸಕ್ಕೆ ಪೇಟೆಗೆ
ಹೊರಡಲು ನಿಂತಾಗ,
ಅಡುಗೆ ಮನೆಯಲ್ಲಿ ಮುಚ್ಚಳ ತೆಗೆಯುವ
ಶಬ್ದ ಕೇಳಿತ್ತು.
[2/17 10:46 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೮.
ನಾಳೆ ಗಾಂಧೀ
ಜಯಂತಿ.
ಹೌದಾ? ಹಾಗಿದ್ದರೆ ಇವತ್ತೆ ತಯಾರಿ
ಮಾಡಿಟ್ಟಕೊಳ್ಳಬೇಕು.
[2/17 10:51 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೪೯.
ಪೂರ್ಣ ಚಂದಿರ
ಬಾನಿನಲ್ಲಿದ್ದ.
ಬೇಸಿನ್ ನಲ್ಲಿ ತಾಟು ಬೊರಲು
ಮಲಗಿತ್ತು.
[2/17 11:04 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೦.
ಹರೆಯ
ಹರದಾಡಿದಾಗ
'ಕಾಂಡೋಮ್'ನಾಚಿಕೆಯನ್ನು ಬಿಟ್ಟಿತ್ತು.
[2/17 11:14 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೧.
ಅವರಿಬ್ಬರ ಮಿಲನ
ಮಹೋತ್ಸವಕ್ಕೆ,
ಮಲ್ಲಿಗೆಯ ಬಳ್ಳಿ ಬಡವಾಯ್ತು.
[2/17 11:19 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೨.
ಅವಳೆದೆಯ ಮೇಲೆ
ಕೈ ಇಟ್ಟವನಿಗೆ
ಅದರ ಕೆಳಭಾಗದ ಕಾವಿನ
ಅರಿವಾಗಲಿಲ್ಲ.
[2/17 11:21 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೩.
ತುಂಡು ಬೀಡಿಯನ್ನು
ಹಚ್ಚುವಾಗ,
ಪಾಕೇಟ್ ಸಿಗರೇಟ್ ನ್ನು ದಾನ ಮಾಡಿದ
ನೆನಪಾಗಲಿಲ್ಲ.
[2/17 11:23 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೪.
ಊರಿಗೆ ಊರೆ
ಬಾಯ್ಮುಚ್ಚಿದರು,
ಪೊದೆಗಳು ಮಾತ್ರ ಮಾತನಾಡುತ್ತಿದ್ದವು.
[2/17 11:26 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೫.
ಅವನ ದಾಳಿಗೆ
ಇವರೆಲ್ಲ
ಬೂದಿಯಾಗಿ ಹೋದರು.
[2/17 11:28 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೬.
ಅವರಂದು ಕೊರೆದ
ಗೆರೆಗೆ
ನಾವಿಂದೂ ನೆತ್ತರನ್ನು
ಬಸಿಯುತ್ತಿದ್ದೇವೆ.
[2/17 11:29 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೭.
ಹಡಪದ ಅಪ್ಪಣ್ಣನ
ಕತ್ತಿ ಇನ್ನಷ್ಟು ಹರಿತವಾಗಿರಬೇಕಿತ್ತು.
ಎಲ್ಲರು ಸಮಾನರಾಗಿರುತ್ತಿದ್ದರು.
[2/17 11:35 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೮.
ಮದುವೆಗೂ ಮುನ್ನವೆ
ಬಸುರಿಯಾದಳು.
ಆದರೂ ಕುಂತಿಯಾಗಲಿಲ್ಲ.
[2/17 11:38 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೫೯.
ನಿಂತಲ್ಲೆ, ನಿಂತಿದ್ದೆ
ಕಲ್ಯಾಣಿಯಾಗಲೆಂದು.
ಯಾರು ಕಟ್ಟೆಯನ್ನೆ ಕಟ್ಟಿಸಲಿಲ್ಲ!
[2/17 11:39 ಅಪರಾಹ್ನ] ಶರಣಪ್ಪ ಕ. ಬೇವಿನಕಟ್ಟಿ: ೬೦.
ಬರೆಯುತ್ತೇನೆ
ಎಂದಾಗಲೆಲ್ಲ,
ಡೈರಿಯಲ್ಲಿನ ಕವಿತೆಗಳು ನಗುತ್ತವೆ.

ಹಾಯ್ಕುಗಳು ೧-೩೦

೧.
ಸಾಗರದೊಡಲು
ಬರಿದಾಗುತ್ತಿದೆ.
ಉಳ್ಳವರ ಹಸಿವು ಇನ್ನೂ ನಿಗಿಲ್ಲ!!

 ೨.
ಅನಾದಿಯಿಂದಲೂ ಗಂಗೆ
ಹರೆಯುತ್ತಿದ್ದಾಳೆ.
ಪಾಪದ ಮೂಟೆ ಇನ್ನೂ ಹೆಚ್ಚುತ್ತಲೆ ಇದೆ!

೩.
ತುಳಿದವರು ಬಲವಂತರೇನಲ್ಲ
ಬಲಹೀನರು.
ನಾವೆ ಕೊಸರಾಡಲಿಲ್ಲವಷ್ಟೆ

:೪.
ಸಿರಿವಂತರ ಮಾತುಗಳು
ಹೆಚ್ಚು ಸಿಹಿಯಾಗಿರುತ್ತವೆ.
ಹೊಟ್ಟೆಯನ್ನು ತುಂಬಿಸುವುದಿಲ್ಲ.

 ೫.
ಹೆಣಕ್ಕೆ ಒಯ್ದ ಕಾಯಿಯೊಳಗೆ
ನೀರಿರಲಿಲ್ಲ‌.
ಮಾಡಿದ ಸಾರು ಮಾತ್ರ ರುಚಿಯಾಗಿತ್ತು.

೬.
ಇಲ್ಲಿ ವಿವಿಧ ಹೂಗಳು
ಅರಳುತ್ತವೆ.
ಆಸ್ವಾದಿಸುವುದಕ್ಕಿಂತ, ಹೊಸಕುವವರೆ ಜಾಸ್ತಿ.

೭.
ತೆಪ್ಪದಲ್ಲಿ ಕೂರಿಸಿಕೊಂಡವರು
ದಡವನ್ನು ಸೇರಿಸಲಿಕ್ಕಿಲ್ಲ.
ಈಜುವ ಬಲವಿದ್ದವರಷ್ಟೆ ಪಯಣಿಸಬೇಕು.

೮.
ಊರಿನಲ್ಲಿ ಅವರ ಮನೆಯೆ
ಗ್ರಂಥಾಲಯವಾಗಿತ್ತು.
ಒಬ್ಬ ಓದುಗನು ರೂಪಗೊಳ್ಳಲಿಲ್ಲ.

೯.
ಮುಳ್ಳಿನ ಕಂಟಿಗಳಲ್ಲೂ
ಹೂವು ಅರಳುತ್ತವೆ.
ಜನ, ಮುಳ್ಳಿಗೆ ಹೆಚ್ಚು ಪ್ರಾಶಸ್ತ್ಯವನ್ನು
ನೀಡುತ್ತಾರೆ.

೧೦.
ಜನರು ತಮ್ಮೊಳಗಿನ
ವಿಶ್ವಾಸಕ್ಕಿಂತ,
ಪಂಥಗಳನ್ನು ಹೆಚ್ಚು ನಂಬುತ್ತಾರೆ.

೧೧.
ಅವಳು ಮುಖಕ್ಕೆ ಹಚ್ಚಿದ್ದ
ಬಣ್ಣದ ಬೆಲೆ,
ಮಾತನಾಡಿದಾಗಲೆ ಅರಿವಾದದ್ದು.

೧೨.
ಹೊಟ್ಟೆ ಸರಿಯಿಲ್ಲವೆಂದು ತಟ್ಟೆಯಲ್ಲಿ
ಅಗುಳನ್ನುಳಿಸಿದೆ.
'ಅಮ್ಮಾ...' ಎನ್ನುವ ಕೂಗು ಮನೆಯಿಂದಾಚೆ ಕೇಳಿಸಿತು. 

೧೩.
'ರಾಮ'ನೆಂದಾಗ
ನನ್ನೊಳಗಿನ ಗಂಡಸು
ನಡಗುತ್ತಾನೆ.

೧೪.
ನಗುವನ್ನೆ ಮರೆತು
ಕೇಳುತ್ತಾರೆ.
ಹಗೆಯನ್ನು ಮರೆಯುವುದು ಹೇಗೆ?

೧೫.
ಚೆಲ್ಲಿದ ಮುಸುರಿಗೆ ಹಂದಿಗಳು
ಕಾದಾಡುವಾಗ,
ಕಾಳು, ಕಾಳಿಗೂ ಹೊಲದಲ್ಲಿ
ಅವ್ವ ಬಾಗಿದ್ದು ನೆನಪಾಯಿತು.

೧೬.
ನಾನಿನ್ನೂ ಮಲಗಿಯೆ
ಇದ್ದೆ.
ಯಾರೊ ಮಗ್ಗುಲಲ್ಲಿ ಹಾದು
ಹೋದ ಹಾಗಾಯಿತು.

೧೭.
ಹೊಸಮನೆಯ ಮಧುಮಂಚದಲ್ಲಿ
ಹೆಂಡತಿಯ ರವಿಕೆಯನ್ನು
ಬಿಚ್ಚುವಾಗ,
ಹಾಲುಣಿಸಿದ ಅವ್ವನೆದೆ ನೆನಪಾಗಲಿಲ್ಲ.

೧೮.
ಆಸ್ಪತ್ರೆಯ ಬಿಲ್ ನ್ನು 
ಕಟ್ಟುವಾಗ,
ರಾತ್ರಿ ತಿಗಣೆ ಕಚ್ಚಿದ ನೆನಪಾಯಿತು.

೧೯.
ತಿರುವಿನಲ್ಲಿ ನಿಂತು, ಈ
ದಾರಿ ಎಲ್ಲಿಗೆ ಹೋಗುತ್ತದೆ
ಎಂದೆ,
'ನೀನೆ ಹೋಗಬೇಕು' ಎಂದ.

೨೦.
ಎದೆಯ ಜೇಬಿನಲ್ಲಿ
ಹಣವಿರಲಿಲ್ಲ.
ಶಾಲೆಯ ಗೇಟಿನ ಹತ್ತಿರ ಹೋಗಲಿಂದು
ಧೈರ್ಯ ಸಾಲಲಿಲ್ಲ.
 
೨೧.
ಅವಳು ಎದುರು 
ಬಂದಾಗಲೆಲ್ಲ,
ಅಪ್ಪನ ಮನೆ ಸಾಲದ ಕಂತು
ಎದುರುಗೊಳ್ಳುತ್ತದೆ.

೨೨.
ನಾನಿಟ್ಟ ಹೆಜ್ಜೆಗಳೆ
ದಾರಿಯಾಗುತ್ತದೆಂದುಕೊಂಡೆ.
ನನಗಿಂತ ದೊಡ್ಡವರೆ, ಅಲ್ಲಿ
ನಡೆದು ಹೋದರು.

೨೩.
ಲಕ್ಷ್ಮಣನೆಳೆದಿದ್ದ ಗೆರೆ
ಪಾಲಿಸದಿದ್ದಕ್ಕೆ,
ರಾವಣನೆಳೆದಿದ್ದ ಬರೆ.

೨೪.
ದುಃಖವನ್ನು
ಹಿಡಿದಿಟ್ಟುಕೊಂಡೆ.
ಸಂತನಾಗಲಿಲ್ಲ! ಗಟ್ಟಿಗೊಂಡೆ.

೨೫.
ಗೋಡೆಗೆ ಬರೆಯಲಾಗಿತ್ತು
'ನೀರನ್ನು ಉಳಿಸಿ'
ಸರಕಾರಿ ನಲ್ಲಿಗೆ ನಳವೆ ಇರಲಿಲ್ಲ.

೨೬.
ವೀರಾವೇಶದಿಂದ ಮಾತನಾಡುತ್ತಿದ್ದವನ
ಪುಸ್ತಕದ ಮದ್ಯದಿಂದ
ಬ್ಲ್ಯಾಂಕ್ ಚೆಕ್ಕೊಂದು ಜಾರಿ 
ಬಿದ್ದಿತು.

೨೭.
ಮಾತು ಮಾತಿನಲ್ಲಿ
ಬುದ್ಧನಿರುತ್ತಿದ್ದ.
ಅಡುಗೆ ಮನೆ ಪಾತ್ರೆಯಲ್ಲಿ
ಕೋಳಿ ಚೆನ್ನಾಗಿ ಬೆಯುತ್ತಿತ್ತು.

೨೮.
ಗುಡ್ಡವ ಕಡೆದು, ಕಟ್ಟಿದ
ಕಟ್ಟಡದಲ್ಲಿ
ಅರಣ್ಯ ರಕ್ಷಣೆಯ ಕುರಿತು
ಮಾತಾಗುತ್ತಿತ್ತು.

 ೨೯.
ಕೆರೆಯ ಮುಚ್ಚಿ
ನಗರವಾಗಿಸಿಕೊಂಡವರು, 
ನೀರಿಗಾಗಿ ಪ್ರಾರ್ಥನೆಗೈಯ್ಯುತಿಹರು.

೩೦.
ಕೆರೆಯನ್ನು ಮುಚ್ಚುವ
ಮದ್ಯದಲ್ಲಿ
ಇಂಜಿನೀಯರ್ ಬಿಕ್ಕತೊಡಗಿದನು.

ಚುಟುಕು

ಇರಲಿಬಿಡು,
ತುಟಿಗೆ ಸವರಿಕೊಂಡ
ಬಣ್ಣದ ಗುಟ್ಟನ್ನು, 
ಗುಲಾಬಿಗೆ ನಾ....
ಹೇಳುವುದಿಲ್ಲ.
ಸೊಗಸಾಗಿದೆ ಅಣ್ಣವ್ರೆ.

Wednesday, February 5, 2020

ಶಾಯರಿ

ರಂಗೀಯ ನೆನಪುಗಳೆ
ನನಗೀನ್ನೂ...
ನೀಡುತ್ತಿಲ್ಲ
ವಿಮುಕ್ತಿ!
ಸಾಕಿ...
ನಾ ಹೇಗೆ
ಕಡಿದುಕೊಳ್ಳಲಿ
ನಿನ್ನರಮನೆಯಿಂದ
ಮುಕ್ತಿ!


Sunday, February 2, 2020

ಚುಟುಕು

ಕಣ್ಣು....,
ಮನಸ್ಸಿನೊಳಗಿಳಿಯದಂತೆ
ದಿಗ್ಭಂದನವ ಹಾಕಿಬಿಟ್ಟಿದೆಯಲ್ಲ
ನಿನ್ನೀ....ಕಣ್ಣ ಕಾಡಿಗೆ!
ಕಾಯುವುದಾದರು
ಎಷ್ಟಂತ!?
ವಿರಹದಲೆ ಸುಟ್ಟು,
ಅಟ್ಟಿಬಿಡುವುದೇನೊ?
ನನ್ನನು ಸುಡುಗಾಡಿಗೆ!