Tuesday, May 2, 2017

ಕಾವ್ಯ ಕಾವ್ಯ


ಜೊತೆಯಾಗಿ ನಿನ್ನ ಕೈ ಹಿಡಿದಿದ್ದು ಆಸೆಯಿಂದ ಅಲ್ಲ
ನನ್ನ ಬಿಟ್ಟು ಹೊಗಬಹುದೆಂಬ ನಿನ್ನ ಮೇಲಿನ ಭಯದಿಂದ.


ಭಯದ ಮೇಲಿನ ಪ್ರೀತಿ
ಎಷ್ಟು ದಿನ.. ಅದಕ್ಕೆ
ಮಡಿವಂತಿಕೆ ಜಾಸ್ತಿ...

ಕೈಯ ಹಿಡಿದ ಹಾಗೆಯೆ...
ಮನದ ಬಾಗಿಲನೊಮ್ಮೆ ತಟ್ಟಿ
ನೋಡು...
ಉಸಿರು ನಿಲ್ಲುವವರೆಗೂ.... ನಾ
ನಿನ್ನ ಕೈಯ ಬಿಡೆನು..

ವಿರಹದ ಸರಹದ್ದು

ಪರಿಣಯದ ತಿರುವದು
ಇಹುದದೇಷ್ಟು ದೂರ..
ಪ್ರಣಯದೊಡತಿ ನೀ
ಇರುವೆಯಲ್ಲ ಅದೇಷ್ಟು ಸನಿಹ...

ಬೇಲಿಯೊಳಗೆಯೆ...ನೀನಿದ್ದರೂ..
ನಿನ್ನೆದೆಯ ಮಕರಂದವು...
ಹಾಗೆ ಸುಳಿ ಗಾಳಿಗೆ ಸುಳಿ ಸುಳಿದು
ಬರುತಿಹುದು ನನ್ನಲ್ಲಿಗೆ..

ಹೇಗಾದರೊ...
ಸರಹದ್ದಿನ ಬೇಲಿಯ
ದಾಟದೆ ನಿಂತಿರಲಿ...

ಮನಸಿಗೆ ಹೇಳುವ ಪಿಸು
ಮಾತುಗಳ ಪದಗಳು
ನಿನ್ನೆದುರು ಉಸಿರಲು
ಚಡಪಡಿಸುತಿರುವಾಗ....

ನಿನ್ನ ಚಂದನದ ಮೊಗದ
ಮೇಲೆ ಕುಳಿತ ಮೊಡವೆಗೆ
ನಗುವ ಕಲೆಯ ಕಲಿಸಬೇಕಿರುವಾಗ..

ನಾ ಹೇಗೆ ಇರಲಿ...
ಈ ವಿರಹದ ಸರಹದ್ದಿನಾಚೆಯಲಿ

Monday, May 1, 2017

ಕದನ ಜಯಲಕ್ಷ್ಮಿ ೧


ಅಯ್ಯು ಗೆಳೆಯ ಮುಂದಿನ
ಜನ್ಮ ಕಂಡವರು ಯಾರು..
ಈ ಜನ್ಮದಲ್ಲಿ ನಿ ಕೈ ಬಿಟ್ಟು
ಮುಂದಿನ ಜನ್ಮದ ಬಗ್ಗೆ ಹೇಳುವೆಯ..

ಹಾಗದರೆ ನಾ ತಪಸ್ಸು ಮಾಡದೆ ನಿನ್ನ ಪಡೆದನೆ ಹೃದಯದಲ್ಲಿ ಜಾಗ ಕೊಟ್ಟೆನೆ...

ಬಿಡು ಗೆಳೆಯ ಮುಂದಿನ ಜನ್ಮ ಯಾಕೆ..
ಈ ಜನ್ಮದಲ್ಲಿ ಇಲ್ಲದವ ಮುಂದಿನ ಜನ್ಮಕ್ಕೆ ಯಾಕೆ ಬೇಕು..

ಅವಳ ತಪಸ್ಸಿಗೆ ಮೆಚ್ಚಿ ವರವಾಗಿ ಹೊಗಿದ್ದಿಯ ಹೋಗು..
ಮತ್ತೆ ಯಾಕೆ ನನ್ನ ಜೊತೆ ಮಾತು..

ಈ ಜನ್ಮದ ಋಣ ತೀರಿತು ಮುಂದಿನ
ಜನ್ಮದಲ್ಲಿ ಯಾಕೆ ಮತ್ತೆ ಹೀಗೆ ಹರಿಯುಕೆ..

ಬೇಡ ಗೆಳೆಯ ಯಾವ ಜನ್ಮದ ಮಾತು..
ಈ ಜನ್ಮದಲ್ಲಿ ನಿ ಕೊಟ್ಟ ನೆನಪುಗಳು ಸಾಕು..
ಮುಂದಿನ ಏಳೇಳೂ ಜನ್ಮಕ್ಕೆ ಉಂಟು


ಹ್ಹ‌...ಹ್ಹ...
ಯಾಕೋ ನನಗೆ ಯಾರದೊ
ಹೃದಯ ಸುಟ್ಟಿರುವ ವಾಸನೆ ಬರುತ್ತಿದೆ..
ಅದು ನಿನ್ನದಲ್ಲ ತಾನೆ ಸುಶೀಲೆ..
ನೋಡಿದೆಯಾ ಎರಡು ಮಾತಿಗೆ
ಆ ಮೂಗಿನ ಮೇಲಿನ ಕೋಪ
ಹೇಗೆ ಹೆಡೆ ಎತ್ತಿತು...

ಇದೇ ಕಾರಣಕ್ಕಾಗಿ ಅಲ್ಲವೆ ನಮಿಬ್ಬರ
ಮಧ್ಯೆ ವೈಮನಸ್ಸು ಹುಟ್ಟಿದ್ದು...
ಇದನ್ನು ನಾನು ಕಡೆದು ಹಾಕಲು
ನೋಡಿದೆ...
ನೀನು ನೀರು ಹಾಕಿ ಬೆಳಸಿದೆ..

ನಾ ಕೊಟ್ಟ, ಬಿಟ್ಟು ಹೋಗಿರುವ
ನೆನಪುಗಳನಾದರೂ ಜೋಪಾನವಾಗಿಟ್ಟುಕೊ
ನಿನಗೆ ಬೇಡವಾಗಿರಬಹುದು ಮುಂದಿನ
ಜನ್ಮದ ನಮ್ಮಿಬ್ಬರ ಪ್ರೇಮ ಬಂಧನ

ನಾನೆ ಕೋರಿಕೊಳ್ಳುತ್ತೇನೆ ಆ ದೇವರಲ್ಲಿ
ಇವಳಿಗೆ ಮೂಗಿನ ಮೇಲೆ ಕೋಪವಿಲ್ಲದ
ಮೂಗನು ಕೊಟ್ಟು ನನ್ನ ಮನದ ಅರಸಿಯನ್ನಾಗಿಸಯ್ಯ ಎಂದು


ಹ್ಹ ಹ್ಹ
ಯಾವ ಹೃದಯ ಸುಟ್ಟಿಲ್ಲ
ಯಾವ ಹೃದಯ ಅಳುತ್ತಿಲ್ಲ..

ಮತ್ತೋಂಬ್ಬಳ ಹೃದಯ ವಾಸಿ ನಿನು..
ನಿಮ್ಮ ನೆನಪುಗಳನ್ನು ನಿಮ್ಮ ಜೊತೆ
ಹರಿದು ಬಿಡುವೆ..

ನೀವು ಆ ನೆನಪುಗಳನ್ನು ಜೋಪಾನ ಮಾಡಿ ..
ಅ ಹೃದಯ ವಾಸಿ ನೆಲಸಿ...


ಹ್ಹ‌...ಹ್ಹ... ಹ್ಹ...ಹ್ಹ...
ಅಂತು ಇಂತ ಸತ್ಯ ಹೇಗೆ
ಹೊರಗೆ ಬಂತು ನೋಡು
ಮನದನ್ನೆ...

ನಿನ್ನ ಹೃದಯ ಅಳುವುದು ಇಲ್ಲ
ಸುಡುವುದು ಇಲ್ಲ.. ಯಾಕೆ ಹೇಳು..
ಅದು ಕಲ್ಲು ಹೃದಯ...

ನನ್ನನ್ನು ಅಷ್ಟು ಇಷ್ಟ ಪಡುತ್ತಿದ್ದವಳು
ನಿನ್ನ ನೆನಪುಗಳಲ್ಲೆ ಬದುಕುವೆನೆಂದವಳು
ಒಂದು ದಿನವು ಇನ್ನೂ ಆಗಿಲ್ಲ...
ಆಗಲೇ ನನ್ನ ನೆನಪುಗಳು ಹಳೆಯ
ಸರಕುಗಳಾಗಿ ಬಿಟ್ಟವೆ..


ಹ್ಹ ಹ್ಹ
ಬಿಟ್ಟು ಹೋದ ನೆನಪುಗಳನ್ನು
ಹೊತ್ತು ಅಳುವ ಬದಲು..

ಬೇರೆಯವರ ಹೃದಯ ವಾಸಿಯನ್ನು
ನೆನೆಯುವ ಬದಲು..
ಏಕಾಂಗಿ ವಾಸಿ ಯಾಗುವುದು ಒಳಿತು..

ಹೃದಯದಲ್ಲಿ ಜಾಗ ಕೊಡುವುದು ಬೇಡ..
ನೋವು ತಿನ್ನುವುದು ಬೇಡ..

ಮತ್ತೊಬ್ಬರ ಹೃದಯ ವಾಸಿ
ನನಗೆಕೇ ಬೇಕು.
ಅದರ ಬದಲು ಏಕಾಂಗಿ ವಾಸಿ ಮೇಲು...


ಅಷ್ಟು ಬೇಡವಾಗಿಬಿಟ್ಟೇನೆ...
ನೀನಿಲ್ಲದ ಏಕಾಂತ...
ಕವಿಯಾಗಿಸುವುದೊ... ರವಿಯಾಗಿಸುವುದೊ ನನ್ನ
ನಿನಿಲ್ಲದ ಬಾಳು ನರಕ ಎನ್ನುತ್ತಿದ್ದವಳು
ನನ್ನನು ಇನ್ನೊಬ್ಬರ ಮನದ ಅಂಗಳಕೆ ನೂಕಿ..
ಏಕಾಂತ ವಾಸವೆ ವಾಸಿ ಎನ್ನುತಿರುವೆಯಲ್ಲ..
ನಿನಗಿದು ಸರಿಯೆ...?

ನೀನು ಮಾತ್ರ ದೂಡಿ... ನಮ್ಮಿಬ್ಬರ ಪ್ರೀತಿಯ
ನೋವನು ನನಗೆ ಮಾತ್ರ ನೀಡಿ... ಈಗ
ನೋವು ತಿನ್ನುವುದು ಬೇಡವೆಂದರೆ...
ಹೇಗೆ...

ಆ ತಾಯಿ ಕರುಳ ಕರುಣೆ ನಿನಗಿಲ್ಲವಾಯಿತೆ..
ಧರಣಿಯಂತೆ ಒಂಚೂರಾದರು ಕ್ಷಮಾಗುಣ
ನಿನ್ನಲ್ಲಿದ್ದಿದ್ದರೆ...
ನಾನಿಂದು ಇನ್ನೊಬ್ಬರ ಮನದ ಸ್ವತ್ತಾಗುತ್ತಿರಲಿಲ್ಲ.


ನಾನು ಕ್ಷಮಾಯಾದರತ್ರಿ
ಯಾಗಿರುವುದರಿಂದ ನಿನು
ಅವಳ ಮನದಲ್ಲಿ ಹರಿಯುತ್ತಿರುವೆ...

ನನ್ನ ಅರಿವಿಗೆ ಬಾರದ ರೀತಿಯಲ್ಲಿ
ಹರಿದು ಅವಳ ಮನದ ಒಡಯನಾದೆ..

ನಾ ನಿನ್ನ ಹಾಗೆ ಹರಿಯುವ ನೀರು ಅಲ್ಲ..
ಹಾಗಾಗಿ ನಾ ಆಗಿರುವೆ ಏಕಾಂಗಿ..
ನಿನ್ನ ನಾ ಕ್ಷಮಿಸಿ ಅವಳ ಮನದ ಒಡೆಯನ್ನಗಾಗಿ ಮಾಡಿ ಬಿಟ್ಟಿರುವೆ..

ಗೆಳೆಯ ಜಂಭ ಬೇಡ ನಾ ನಿನ್ನ ಕ್ಷಮಿಸಿ ಅವಳ ಹೃದಯದಲ್ಲಿ ಸರಗಾವಾಗಿ ಹರುಯಲು ಬಿಟ್ಟಿರುವೆ..


ಎಷ್ಟೊಂದು ತಪ್ಪು ಕಲ್ಪನೆಗಳ
ಕಟ್ಟಿಕೊಂಡಿರುವೆ ಆ ಮನದಲ್ಲಿ..
ನಿನ್ನರಿವಿಗೆ ಬಾರದ ಹಾಗೆ ನಾ
ಹೇಗೆ ಹರೆದು ಹೋದೆ..

ಕ್ಷಮಿಸಲು ನಾ ಮಾಡಿರುವ
ತಪ್ಪಾದರೂ ಏನು ?
ಹರಿವ ಒಲವನು ಹಿಡಿದಿಡದೆ...
ತಿರುಗಿಸಿಬಿಟ್ಟೆ ಸರಕಾರಿ ನಲ್ಲಿಯಂತೆ
ಹರಿದು ಹರಿದು ಕೊಳೆಯನು
ಸೇರಲೆಂದು...

ಜಂಭದ ಕೋಳಿ ನೀನು...
ಬಿಂಕದ ಬೆಡಗಿ ನೀನು
ನನ್ನ ಕ್ಷಮಿಸುವುದೆಂತು
ಮೊದಲು ನಿನ್ನ ನಿ ಅರಿತುಕೊ..
ನಿನ್ನ ನೀ ಅರಿತಿದ್ದರೆ.. ಹೀಗೆ
ಇನ್ನೊಬ್ಬರ ಮನಕೆ ಹರೆಯುವ
ಪ್ರಮೇಯೆ ಬರುತ್ತಿರಲಿಲ್ಲ..


ಅರೆಯದ ಹೃದಯದಲ್ಲಿ
ಮನೆಯ ಮಾಡಿ..
ಅರಿಯದೆ ಹೋಗಿದ್ದು ತಪ್ಪು ಅಲ್ಲವೇ...

ನಾ ಮಾಡಿದ ಮೋಸವಾದರು ಏನೂ.
ನನ್ನ ಪ್ರೀತಿಯಲ್ಲಿ ನಿನಗೆ ಕಂಡ
ಕೊರತೆಯಾದರು ಏನೂ..

ಅವಳ ಮನದಲ್ಲಿ ನಿನಗೆ ಸಿಕ್ಕಿದ್ದದರು ಏನೂ..
ಹೋಗು ಗೆಳೆಯ ನಿ ನನ್ನ ಮನ ಮರಿದು ಹರಿದು ಹೋದೆ...

ನಾ ಜಂಭದ ಕೋಳಿ ಅಲ್ಲ ಗೆಳೆಯ..
ನಿನ್ನ ಕಳೆದುಕೊಂಡ ಖಾಲಿ ಹೃದಯದವಳು..

ಏಕಾಂಗಿ ಯಾಗಿ ನಿ ಆಡುತ್ತಿರುವ ಮಾತುಗಳನ್ನು ಕೇಳುತ್ತಿರುವವಳು..

ನಾ ಮಾಡಿದ ಮೋಸ ವಾದರು ಏನೂ..
ನಾ ಮಾಡಿದ ಅನ್ಯಾಯ ವಾದರು ಏನೂ..

ಅಷ್ಟಕ್ಕೂ ನಿ ಬೇರೆಯ ಮನದಲ್ಲಿ ಹರಿಯುತ್ತಿರುವ ನೀರು..
ನಿನ್ನ ನೆನೆಯುವುದು ಮಹಾ ಪಾಪ..

ನಾ ಏಕಾಂಗಿಯಾಗಿ ಇರುವೆ ಬಿಡು ಗೆಳೆಯ


ಅದು ಅರೆಯದ ಹೃದಯವಲ್ಲ..
ಮರೆಯದ ಹೃದಯ..
ನೊಂದ ಮನಸ್ಸಿಗೆ ಸಂಜೀವಿನಿಯಾದ
ಜೀವ..

ನಿನ್ನ ಮನವ ನಾನೇಕೆ ಮುರಿಯಲಿ
ನಿನಾಗಿಯೆ ಕೋಟೆಯ ಬಾಗಿಲನು
ತೆರೆದು ಬಿಟ್ಟೆಯಲ್ಲ..

ನಿ ನೊಂದಿಸಿ ದೂಡಿದ ಮನಕೆ
ನೆಮ್ಮದಿ ನೀಡಿದ ಗುಡಿಯದು

ಹತ್ತಿ ಹುಳು ತನ್ನ ಸುತ್ತ ತಾ ಹತ್ತಿಯ
ಗೂಡನು ಕಟ್ಟಿಕೊಂಡು ಸಾಯುವ ಹಾಗೆ..
ಮನ ತುಂಬಿದ ನನ್ನನು...
ಬೇರೊಬ್ಬರ ಕಾಲುವೆಗೆ ಹರಿಸಿ..
ಮನವ ಬರಿದು ಮಾಡಿಕೊಂಡು.
ಸಾಯುವ ಮುನ್ನ ಹತ್ತಿ ಹುಳುವಿನ
ವೇದನೆಯನ್ನ ನೀನಿಗ ಅನುಭವಿಸುತ್ತಿರುವೆ.

ನೀನೆನೊ ಏಕಾಂಗಿಯಾಗಿರುವೆ ಎಂದು
ಇಷ್ಟು ಸರಳವಾಗಿ ಹೇಳುತ್ತಿರುವೆ..
ನಾ ಅವಳ ಮನದಲಿದ್ದರೂ...
ನನ್ನ ಮನವದು ನಿನ್ನ ಚಿಂತೆಯಲ್ಲೆ
ಬೆಯುತಿದೆ.


ಗೆಳೆಯ ನಾ ಬಿಟ್ಟೆ ಅಂದೆಯಲ್ಲ.
ಅವಳು ನಿನ್ನ ಮನದಲ್ಲಿ ಬಂದಿದ್ದು
ನನಗೆ ಗೊತ್ತೆಯಿಲ್ಲ..
ನಿ ಯೆಂದು ನನ್ನ ಮುಂದೆ ಪ್ರಸ್ತಾಪಿಸಿಲಿಲ್ಲ...

ನಾ ನಿನ್ನ ಹೇಗೆ ಅನುಮಾನಿಸಲಿ..
ಬಿಟ್ಟೆ ನಿನ್ನ ನನ್ನ ಮನದಲ್ಲಿ ಹರಿಯುವ
ನನ್ನ ಹೃದಯದ ಒಡೆಯನೆಂದು..

ನಿ ಅವಳ ಜೊತೆ ಹೋಗುವ ಮುನ್ನ
ನನ್ನ ಸಮ್ಮತಿಯನ್ನು ನಿ ಪಡೆಯಲೇ ಇಲ್ಲ...

ಹತ್ತಿ ಹುಳು ನಾನು..
ನಿನ್ನ ಮಡಿಲಲ್ಲಿ ಬೆಚ್ಚಗೆ ಇದ್ದವಳನ್ನು
ಹೊರಹಾಕಿ ತಿರಗಿಯು ನೋಡದೆ
ಹೊರ ಹರಿದವನು ನೀನು...

ಎಷ್ಟೇ ಅದರು ನಿನು ಅವಳ ಮನದಲ್ಲಿ
ಹರಿಯುತ್ತಿರುವವನು..
ನಿನಗೆಗೆ ನನ್ನ ಚಂತೆ..
ಹೋಗುವಾಗ ಇರದ ಚಿಂತೆ ಇಂದು ಯಾಕೆ...

ನಿನಗೆ ಗೊತ್ತಿಲ್ಲದ್ದೇನಿದೆ ಗೆಳತಿ
ನೀನು ನನ್ನ ಕೈ ಬಿಟ್ಟ ಕ್ಷಣ..
ಎಷ್ಟು ಬೇಡಿಕೊಳ್ಳಲಿಲ್ಲ ನಿನ್ನನು..
ಆದರೂ ಕರಗಲಿಲ್ಲ ನಿನ್ನ ಹೃದಯ 

ಅವಳ ಮನದ ಮನೆಗೆ ಹೋಗಲು
ನಿನ್ನ ಸಮ್ಮತಿ ನನಗೇಕೆ ಬೇಕು..
ನಮ್ಮ ಪ್ರೇಮ ಬಂಧನಕೆ ಮೊದಲೆ
ವಿಚ್ಛೇದನವನ್ನು ಕೊಟ್ಟುಬಿಟ್ಟಿದ್ದಿಯಲ್ಲ.

ನಿನ್ನ ಮನದ ಗುಂಡಿಗೆಯಲಿ ಎಷ್ಟು
ತಿಳಿಯಾಗಿದ್ದೆ ನಾನು..
ಕೊಳೆಮಾಡಿ ಹೊರ ಹರಿಯಬಿಟ್ಟೆ
ಮತ್ತೆ ನನ್ನನು ತಿಳಿಯಾಗಿಸಿ...
ಒಳ ಬಿಟ್ಟುಕೊಂಡಳವಳು ಸುಮತಿ..


ಇನ್ನೂ ಅದೆಷ್ಟು ಅಪವಾದ ಹೋರಿಸಬೇಕು ಹೋರಿಸು ಗೆಳೆಯ
ನಾ ಏನೂ ಮಾಡಲಿ ನಾನು ಎಂದು
ನಿನ್ನ ಹೊರ ಹಾಕಿದವಳಲ್ಲ...

ನನ್ನ ಹೃದಯದ ಗರ್ಭಗುಡಿಯಲ್ಲಿ
ನಿನ್ನ ಪೂಜಿಸಿದವಳು ನಾನು..
ನಿ ನಿನ್ನ ಇಚ್ಛೆಯಂತೆ ಹರಿದವನು ನಿನು


ನನ್ನನಷ್ಟು ಕಟುಕನೆಂದು ಕೊಂಡೆಯಾ...
ಅಗಸನ ಅಪವಾದಕೆ ರಾಮನು ಸೀತೆಯನ್ನು
ಕಾಡಿಗೆ ಅಟ್ಟಿದಂತೆ..
ಅವರಿವರ ಮಾತು ಕಟ್ಟಿಕೊಂಡು
ವಿರಹದ ಕಾನನಕ್ಕೆ ನೂಕಿಬಿಟ್ಟೆ ನನ್ನನು

ಮನದ ಬನದ ದೇವತೆಯು ನೀನು
ನನ್ನೊಲವ ಉಸಿರ ಬಲವು ನೀನು
ಕೂಗಿ ನೋಡು ಒಮ್ಮೆ..
ದುಂಬಿಯಂತೆ ಹಾರಿ ಬರುವೆ
ನಿನ್ನೆದೆಗೆ


ಬೇಡ ಎಂದು ಹೋದವರನ್ನು
ನಾ ಕೂಗಲಾರೆ..
ಬಲವಂತದ ಪ್ರೀತಿ ನಾ ಪಡೆಯಲಾರೆ ಗೆಳೆಯ...

ಬೇಡ ಎಂದು ಹೋಗಿದ್ದು ನಿನ್ನ ಇಚ್ಛೆ
ಬೇಕು ಎಂದು ಬರುವುದು ನಿನ್ನ ಇಚ್ಛೆ.

ಈ ಎರಡೂ ನನ್ನ ಇಚ್ಛೆ ಯಾಗಿರಲಿಲ್ಲ ಗೆಳೆಯ..
ಮತ್ತೊಂದು ಹೃದಯವ ಕೊಂದು
ನಾ ಮರಳಿ ನಿನ್ನ ಪಡೆಯಲಾರೆ

ಪಡೆಯುವ ಭಾಗ್ಯ ಇನ್ನೇಲ್ಲಿ..
ಕಳೆದು ಹೋದ ಮುತ್ತು ನಾನು
ನಿನ್ನ ಪಾಲಿಗೆ..

ಬಲವಂತವಾಗಿ ನನ್ನನು...
ಇರುಳ ಕಂಡ ಬಾವಿಗೆ ಹಗಲಿನಲ್ಲಿ
ಬಿದ್ದರಂತೆ ಎಂಬಂತೆ...
ಹಗಲಿರುಳು ಅನುಭವಿಸಿದ ಪ್ರೀತಿಯನು
ಮುಸ್ಸಂಜೆಯಲಿ ಮನದಿಂದ ಹೊರದೂಡಿಬಿಟ್ಟೆಯಲ್ಲ...

ಒಂದು ಹೃದಯವ ಕೊಂದ ನಿನಗೆ
ಇನ್ನೊಂದು ಹೃದಯವ ಕೊಲ್ಲುವುದು
ಕಷ್ಟವಾಗಲಾರದೇನೊ..


ಆ ಕೆಲಸ ನಿನ್ನದು ಗೆಳೆಯ
ನನ್ನದಲ್ಲ..
ನಾನು ಏಕಾಂಗಿ..
ನಿನು ಹರಿಯುವ ನೀರು..

ಬಣ್ಣ ಬಣ್ಣದ ಹೂವಿಗೆ ಹಾರುವ ದುಂಬಿ ನಿನು..

ನನ್ನ ನಿ ಬಿಟ್ಟು ಹೋಗಿ ಮತ್ತೆ ಬರುವೆ
ಅನ್ನವೇ ಅಲ್ಲ..
ಮತ್ತೆ ನಿ ಹಾರಿದರೆ ನಾ ಏನೂ ಮಾಡಬೇಕು..

ನಿನ್ನ ಹತ್ತಿರ ಕೊಲೆ ಮಾಡಿಸಿಕೊಳ್ಳಲು
ನನ್ನ ಬಳಿ ಮತ್ತೊಂದು ಹೃದಯ ವಿಲ್ಲ..

ಇದ್ದ ಹೃದಯ ಕೊಂದ ಕೊಲೆಗಾರ ನಿ


ಆ ಒಂದು ಹೃದಯವಾದರೂ
ಬದುಕಿತ್ತು ಯಾವಾಗ..
ನನ್ನ ಮನಸಿನ ಭಾವಗಳಿಗೆ
ಮಿಡಿಯದೆ ನಿಂತು ಹೋಗಿತ್ತು
ಯಾವಾಗಲೊ...

ಬಣ್ಣ ಬಣ್ಣದ ಹೂವಿಗೆ ಹಾರುವವನು
ನಾನಾಗಿದ್ದರೆ..
ನಿನ್ನೆದೆಯ ಮಕರಂದವ ಹೀರಿ..
ನಿನ್ನತ್ತ ಹೊಳ್ಳಿ ನೋಡದಂತೆ ಹಾರಿಬಿಡುತ್ತಿದ್ದೆ..

ನಾನು ನಿನ್ನೆದೆಯ ನೋವಿಗೆ
ಮಿಡಿಯುವ ವೀಣೆ ನಾನು..
ನೋವಿನ ರಾಗವ..
ಒಲವಿನ ಗೀತೆಯಾಗಿಸುವವನು..
ನಾನು ನಿನ್ನವನು..


ಹೌದ ಗೆಳೆಯ.
ಹಾಗಾದರೆ ನನ್ನ ಮನ ತೋರದೆ
ಯಾಕೆ..

ನೀ ನನ್ನ ಕೇಳದೆ ನನ್ನ ಬಳಿ
ಬರಬಹುದ್ದಿತ್ತು ಅಲ್ಲವ..

ಮಕರಂದ ಹಿರಿ ಹಾರಿ ಹೋಗಲು
ಮನಸ್ಸು ಇಲ್ಲದಾಗ
ಬೇರೆ ಮನಸ್ಸಿನಲ್ಲಿ ಮನೆ ಮಾಡಿದ್ದು ಯಾಕೆ..

ನಿನ್ನ ಮನಸ್ದಿನ ಭಾವನೆಗಳನ್ನು
ನನ್ನ ಭಾವನೆ ಅಂತ ತಿಳಿದಿದ್ದು ತಪ್ಪಾ..

ಅವಳ ಮನದಲ್ಲಿ ಹೇಗೋ ಜಾಗವ
ಪಡೆದು ಅಯಿತ್ತಲ್ಲ.
ಬೀಡು ಮತ್ತೆ ಯಾವ ಮಾತು ಬೇಡ..

ನನ್ನ ಪ್ರೀತಿಗೆ ನಿ ಕೊಟ್ಟ ಉಡುಗೊರೆ
ಎಂದು ನಾ ಭವಿಸಿವೆ ಅಷ್ಟೇ ಗೆಳೆಯ...


ನಮ್ಮಿಬ್ಬರ ಪ್ರೀತಿಗೆ..
ವಿರಹದ ಉಡುಗೊರೆಯ
ಕೊಡುವಷ್ಟು ಅರಸಿಕನಲ್ಲ ನಾನು

ಹೇಗೊ ಹಾಗೊ ಅವಳ
ಮನದಲ್ಲಿ ಜಾಗವ ಪಡೆದುದಲ್ಲ
ಅದು ಅವಳಾಗಿಯೆ ನನಗಾಗಿ
ಕಾಯ್ದಿಟ್ಟ ಜಾಗವಾಗಿತ್ತು..

ಇಬ್ಬರ ಭಾವನೆಗಳು ಒಂದೆ
ಆಗಿದ್ದಾಗ ನಿನ್ನ ಮತ್ತು ನನ್ನ
ಅಂಥ ಬೇರ್ಪಡಿಸುವುದಾದರೂ
ಎಲ್ಲಿ...

ಬಿಡು ಬಿಡು ಹುಡುಗಿ..
ಇದು ನಿನ್ನಿಂದಾಗದ ಮಾತು..

ಕದನ ಜಯಲಕ್ಷ್ಮಿ


ಹರಿಯುವ ನೀರಿನಂತೆ
ನಿನ್ನ ಮನ..
ಹರಿದು ಬಂದೆ ಹೃದಯದ ಮನೆಗೆ..
ಅರಿಯದೆ ಹರಿದು ಹೊರಟೆ
ಮತ್ತೊಂದೆಡೆ...
ನಿನ್ನ ನಾ ಸೇರಬಲ್ಲನೆ..
ಹಿಡಿಯಬಲ್ಲನೆ.. ಅಸಾಧ್ಯ ಇದನರಿತು..
ಬಿಟ್ಟೆ ಮನ ಬಂದಂತ್ತೆ ಹರಿಯಲು... # ಜಯ #


ಹರಿಯುವ ನೀರಿನಂತೆ
ನನ್ನ ಮನ ನಿಜ ಗೆಳತಿ..
ಹರಿಯುವ ಮನವೆಂದು
ತಿಳಿದು ತಿಳಿದು ನಿನ್ನ
ಮನವದು...
ಕೊಳವಾಗಲಿಲ್ಲವೇಕೆ?
ನನ್ನ ಪ್ರೀತಿಗೆ ಕಟ್ಟೆಯ ಕಟ್ಟಿ
ನಿಲ್ಲಿಸಲಿಲ್ಲವೇಕೆ ?

ನೀರೆಂದಿರುವೆ ನನ್ನ ಮನವನು
ನಿಲ್ಲುವುದೆ ಒಂದೆ ಕಡೆ ..
ಹರಿಯದೆ.. ಹುಚ್ಚು ಕೊಡಿ
ಮನಸ್ಸಿದು..

ತಪ್ಪನೆಲ್ಲ ನಿನ್ನಲಿಟ್ಟುಕೊಂಡು
ದೂಷಿಸದಿರು ಚೆಲುವೆ ನನ್ನೊಲವನು
ಬರುವೆ ಮತ್ತೆ ಮುಂಗಾರಿಗೆ
ನಿನ್ನೊಲವಿನ ಮಳೆಹನಿಯಾಗಿ
ಸಾಧ್ಯವಾದರೆ....
ತಡೆಹಿಡಿದಿಕೊ...


ಹರಿಯುವ ನೀರು
ತಡೆಯಲಾಗದು ಗೆಳೆಯ.
ಅರಿಯದೆ ಹೋದೆ ನಿನು
ಅರಿತು ಹೊಗಿದ್ದರೆ
ನಾ ಹಾಕುತ್ತಿದ್ದೆ...
ನನ್ನ ಪ್ರೀತಿಯ ಕಟ್ಟೆ


ಇದು ನಿಜವೆ..
ಹರಿಯುವ ನೀರನು ತಡೆಯಲಾಗದು
ಆದರೆ.. ಆ ಹರಿದು ಹೋಗುವ ನೀರಲಿ
ಸ್ವಲ್ಪನ್ನಾದರೂ ಎತ್ತಿಟ್ಟುಕೊಳ್ಳಬಹುದಿತ್ತಲ್ಲ
ನೆನಪಿಗಾಗಿ..


ಹರಿಯುವ ಮುನ್ನ
ನಿನಗರಿಯದೆ
ನಿ ಬಿಟ್ಟ ನೆನಪುಗಳು
ಅಲ್ಲಿ ಅಲ್ಲೇ ನಿಂತ
ಹನಿ ಹನಿ ನೀರಿನ ರೂಪದಲ್ಲಿ
ನೆಲೆಸಿದೆ ಗೆಳೆಯ..

ನಾ ಹೊರ ಹಾಕಿದರು
ಹೋಗದಂತೆ ನಿಂತಿದೆ
ನಿನ್ನ ನೆನಪುಗಳು..

ಮರಳಿ ಬರುವ
ದಾರಿಯ ಕಾಯುತ್ತಾ
ತವಕದಿ ನಿಂತಿದೆ ನೆನಪುಗಳು


ಕಾಯಿಸುವ ಹನಿಗಳು ನಾನಲ್ಲ
ಕಣ್ಣಂಚಿದ ಜಾರುವ ಹನಿಗಳಿಗೆ
ಹೊಣೆಗಾರನು ನಾನೂ ಅಲ್ಲ..

ಬಿಟ್ಟು ಕೆಟ್ಟಿರುವೆ ನೀನು
ನೋಡು ಈಗ...
ಇನ್ನೊಬ್ಬರ ಮನದಲಿ
ಕಟ್ಟಿ ಹಾಕಿರುವರು ನನ್ನ

ಹರೆಯುವ ಮುನ್ನ ಒಂದೆ... ಒಂದು
ಕಲ್ಲನ್ನಿಟ್ಟಿದ್ದರೂ ಸಾಕಿತ್ತು..
ನಿನ್ನ ಮನದ ಬಾಗಿಲನು ದಾಟದೆ
ಇರುತ್ತಿದ್ದೆ..


ಹೋಗಲಿ ಬಿಡು ಗೆಳೆಯ
ನನ್ನ ಅರಿವಿಗೆ ಬಾರದೆ
ಹೊರಟಿದ್ದು ನಿನ್ನ ತಪ್ಪು..

ನಿ ಹೋಗಲು ಸದ್ದಿವಾಗಿದ್ದೆ
ನಾ ಏನೂ ಮಾಡಲಾದಿತು
ಹೇಗೂ ಅಲ್ಲಿಯಾದರು
ಶಾಶ್ವತವಾಗಿ ನೆಲೆಸು

ನಾ ನಿನ್ನ ಹೊಣೆ ಮಾಡಲಾರೆ
ವಿಧಿಯ ಆಟದ ಮುಂದೆ
ಸಾಗದು ನಮ್ಮ ಆಟ..

ಚನ್ನಾಗಿ ಸಂತೋಷದಿಂದ
ತುಂಬಿ ಹರಿ
ಅವಳ ಮನದ ಒಡೆಯನಾಗಿ
ಹರಿದು ಬಿತ್ತು ನಿ ಪ್ರೀತಿಯ ಬೆಳೆ


ಏಕೆ ಈ ವಯ್ಯಾರದ ಮಾತುಗಳು
ಮಲ್ಲಿಗೆ..
ನಿನ್ನರಿವಿಗೆ ಬಾರದೆ ನಾನು ನಡೆದನೆ..
ಹೊರಡುವಾಗ ಕೂಗಿ ಕೂಗಿ ಹೇಳಿದೆ
ಕೇಳಿಯು ಕೇಳದಂತೆ ಕಿವುಡಿಯಾಗಿ
ಅತ್ತ ಹೊರಳಿ ನಿಂತೆ...
ಆ ನಾಗರಜಡೆಗೆ ನಾ ಮುಡಿಸಿದ್ದ
ಮಲ್ಲಿಗೆ ನಿನ್ನ ಕಾಲಡಿಯಲ್ಲಿ ನಲುಗಿತ್ತು..

ವಿಧಿಯ ತಂದು ಅಪರಾಧವೆಸಗದಿರು..
ನಿನ್ನ ಅಹಂಕಿಗೆ ಆ ಹೆಸರನ್ನೇಕೆ ಬಳಸುವೆ

ಇನ್ನೆಲ್ಲಿಯ ಸಂತೋಷದ ಹೊಳೆ
ಮನದ ತುಂಬ ನಿನ್ನ ತುಂಬಿಕೊಂಡಿರುವ
ನನಗೆ... ಬಿತ್ತಲಾದರೂ ಹೇಗೆ ಅವಳ
ಮನದಲಿ ಬೆಳೆ


ನಿನ್ನ ತಪ್ಪು ನಿ ಅರಿಯಲಾದರೆ
ನಾ ಯಾರ ಮಾಡಲಿ ಹೊಣೆ..

ನಿ ಒಮ್ಮೆ ಕೊಗಿದರೆ ಸಾಕು
ಎಂದು ಕಾಯುವವಳು ನಾನು

ನಿ ಬಿಟ್ಟು ಹೋಗಿ ನನ್ನ ಹೊಣೆ ಮಾಡಿದೆಯಲ್ಲ ಸರಿಯೇ..

ಸಾವಿರ ಸಲ ಅ ಹೃದಯ ಕರೆದರು
ನಿ ಹೋಗಿದ್ದು ಯಾಕೆ..

ನಿ ಇಲ್ಲಿಯೇ ನೆಲಸಿ ಕೊಡ
ಬಹುದಿಂತ್ತು ನಿ ಉತ್ತರ ವ..

ನಿ ಅವಳ ಮೇಲೆ ಮನಸ್ಸು ಮಾಡಿ
ನನ್ನ ಅರಿವು ಬಾರದೆ ಹೋಗಿದ್ದೆ
ಗೆಳೆಯ..

ನನ್ನ ಕೊಗಿದ್ದರೆ ನನ್ನ ಉಸಿರು
ಬಿಗಿ ಹಿಡುದು ನಾ ನಿನ್ನ
ನಿಲ್ಲಿಸುತ್ತಿದ್ದೆ ಗೆಳೆಯ...


ನನ್ನುಸಿರಿನಲಿ ನಿನ್ನುಸಿರಿದೆ ಎಂದವಳು
ಈ ಉಸಿರನು ಇನ್ನೊಬ್ಬರ ಮನದ
ಉಸಿರಾಗಿಸಿದ್ಹೇಗೆ..

ಕೂಗಿ ಕರೆಯಲೆಂದೆ ಮನದ ಮನೆಯ ತಟ್ಟಿದೆ
ಕಲ್ಲುಗಳೆ ಕಟ್ಟಿದ ಮನೆಯಲಿ ಕುಳಿತು ನೀನು
ನಿನ್ನ ಮನವು ಕಲ್ಲಾಗಿ ಹೋಗಿತ್ತು..

ನಿನ್ನ ಮನದ ಬಾಗಿಲನು ಬಡೆದು
ಬಡೆದು ಕೈಗಳೆ ಸೋತು ಹೋದವು
ನಿನ್ನ ಮನವು ಮಾತ್ರ ಕರಗಲಿಲ್ಲ

ಅವಳ ಮೇಲೆ ಮನಸ್ಸು ಮಾಡಿ
ಅಲ್ಲ ಹುಡುಗಿ..
ನಿನ್ನಷ್ಟು ಅಂದವಿಲ್ಲದಿರಬಹುದು
ಮನಸಿನಲಿ ನಿನಗಿಂತಲೂ ಎರಡು
ಹೆಜ್ಜೆ ಮುಂದೆಯೆ..


ಅಯ್ಯು ಗೆಳೆಯ
ನನ್ನ ಮನಸ್ಸು ಕಲ್ಲು
ಮನಸ್ಸು ಅಲ್ಲ..

ನಿನು ಎಷ್ಟೇ ಅದರು ಹರಿಯುವ ನೀರು.
ನಿನಗೆ ಒಂದು ನೆಪ ಬೇಕು ಅಷ್ಟೇ..

ಹೋಗಲಿ ಬೀಡು
ನಾನು ಕಲ್ಲು ಬಂಡೆಯಾದರೆ
ಅದರ ಮೇಲೆ ನಿ ಯಾಕೆ ಕೆತ್ತಲಿಲ್ಲ
ನಿನ್ನ ಹೆಸರು...

ಇದರಲ್ಲಿ ಅರಿತಿಕೊ ಗೆಳೆಯ
ನಿನ್ನ ತಪ್ಪು ಒಪ್ಪದಿದ್ದರು
ಚಿಂತೆ ಇಲ್ಲ..
ಮನಸಾಕ್ಕಿ ಹೇಳುವುದು ಕೇಳಿ ನಿ ನಡೆ ಗೆಳೆಯ..

ಹರಿಯುವ ನೀರು ಎಂದು
ಗೋತ್ತಿದ್ದರು ನಾ ಸ್ಥಾನ ಕೊಟ್ಡೆ..
ಪ್ರೀತಿಯ ಧಾರೆ ಎರೆದು ನಿನ್ನ
ನಂಬಿ ಹೃದಯದಲ್ಲಿ ಹರಿಯಲು ಸ್ಥಳ ಕೊಟ್ಟೆ...

ಇಂದು ನಿ ನನ್ನ ನಿಂದಿಸಿ
ಹೊರಟೆ ಮತ್ತೊಂದು ಮನಸ್ಸಿನ ಕಡೆ..
ಹರಿಯುವ ನೀರು ಚಂಚಲ ಎಂದು
ಸಾಭಿತು ಮಾಡಿದೆ ಗೆಳೆಯ

ಹರಿಯುವ ನೀರು ಚಂಚಲವಲ್ಲ ಒಡತಿ..
ಹೆಣ್ಣಿನ ಮನಸ್ಸು ಚಂಚಲ...
ನಿನ್ನ ನಿಂದಿಸಿ ಆನಂದ ಪಡುವ
ಮನವಲ್ಲ ನನ್ನದೂ... ಅದು ನಿನಗೂ ಗೊತ್ತು..

ನನ್ನ ನಂಬಿ ಹೃದಯದಲ್ಲಿ ಹರಿಯಲು
ಸ್ಥಳಕೊಟ್ಟೆ ನಿಜ ನಾ ಇಲ್ಲವೆಂದಿಲ್ಲ..
ನಾನು ಕೇಳುತ್ತಿರುವುದನ್ನೂ ಇದನ್ನೆ..
ಹರಿಯುವ ನೀರೆಂದು ಗೊತ್ತಿದ್ದರೂ..
ಗೋಡೆಯೊಂದನು ಏಕೆ ಕಟ್ಟಲಿಲ್ಲ..

ಮನಸಾಕ್ಷಿಯನೆ ಕೊಂದು ನಿ ಹೋಗಿರುವಾಗ
ಇನ್ನಾರಲಿ ನನ್ನ ದುಗುಡವ ಹೇಳಲಿ, ಕೇಳಲಿ

ಕೆತ್ತಲೇನೂ ನಿನ್ನ ಹೆಸರು.. ಮನವದು
ಬದಾಮಿಯ ಮೇಣಬಸದಿಯ ಬಂಡೆಯಾಗಿರಲಿಲ್ಲ
ಆಗಿದ್ದರೆ... ಕೇವಲ ಹೆಸರೊಂದೆ ಏನೂ..
ನಮ್ಮ ಪ್ರೇಮದ ಇತಿಹಾಸವನೆ ಕೆತ್ತುತ್ತಿದ್ದೆ...

ನೆಪವ ನೀ ಮಾಡಿಕೊಟ್ಟೆ ಹರಿದು ಹೋಗಲು
ತುಂಬಿದ ಕೆರೆಗೆ ಒಂದು ಸಣ್ಣ ಬಿರುಕು ಸಾಕು
ಒಡೆದು ಹರೆಯಲು..
ನೀನು.. ಕಾಲುವೆಯನೆ ಹರಿಸಿಬಿಟ್ಟೆ.


ಇಲ್ಲ ಗೆಳೆಯ
ಎಂದು ಆ ತಪ್ಪು ನಾ ಮಾಡಿಲ್ಲ.

ನಾ ಪ್ರೀತಿಯ ಗೋಡೆ ಹಾಕಿದ್ದೆ
ನಿನ್ನ ಮೇಲೆ ಅಪಾರ ನಂಬಿಕೆ ಇಟ್ಟು

ನಾ ಹಾಕಿದ್ದೆ ಪ್ರೀತಿಯ ಗೋಡೆ
ಅದನ್ನು ನಿ ಅರಿಯದೆ..
ನನ್ನ ಕಲ್ಲು ಬಂಡೆ ಮಾಡಿದೆಯಲ್ಲ..

ನಾ ಕಲ್ಲು ಬಂಡೆಯಾಗಿದ್ದರೆ ನಿನಗೆ
ಪ್ರೀತಿಯ ಗೋಡೆ ಕಟ್ಟಿ ಸ್ವೇಚ್ಛೆಯಾಗಿ
ಹರಿಯಲು ಬಿಡುತ್ತದ್ದೆಯನು...

ಪ್ರೀತಿ, ವಿಶ್ವಾಸ, ನಂಬಿಕೆಯ ಗೋಡೆಯ ಮುಂದೆ ಬೇರೆ ಗೋಡೆ
ಬೇಕಾ ಗೆಳೆಯ..

ಹೆಣ್ಣು ಚಂಚಲೆ ಅಲ್ಲ ಗೆಳೆಯ
ಅವಳು ವಿಶಾಲ ಮನಸ್ಸಿನವಳು
ತುಂಬು ಹೃದಯದವಳು..

ನಿ ನನ್ನ ಮನ ಅರಿತಿದ್ದರೆ ನನ್ನ ಪ್ರೀತಿಯ ಗೋಡೆ ಎಂದು
ದಾಟಿ ಮತ್ತೊಂದು ಮನ ಸೇರುತ್ತಿರಲಿಲ್ಲ ಗೆಳೆಯ...

ನಾನು ಹೂ ಮನಸ್ದಿನವಳು
ನಿ ಮಾಡಿದೆ ನನ್ನ ಕಲ್ಲು ಮನಸ್ಸು ಇಂದು...


ಈ ಕಲ್ಲು ಮನಸಿನ ಅರಗಿಣಿಯ
ಮನವ ಹೂವಾಗಿಸಿದ್ದೆ ನಾನು
ಇಲ್ಲವಾದರೆ.. ಮನದ ಮನೆಯ
ಹೊಸ್ತಿಲನ್ನಾದರೂ.. ದಾಟಿಸುತ್ತಿದ್ದೇಯಾ
ನೀನು..

ಹೌದು ಹೆಣ್ಣು ವಿಶಾಲ ಹೃದಯವದಳು
ಆ ನಂಬಿಕೆಯಿಂದಲೆ ತಾನೆ ನಿನ್ನ ಬಳಿ
ಹರಿದದ್ದು ನಾನು..
ಹಿಡಿದಿಡಿಯದೆ ನನ್ನೊಲವಿನ ಭಾವ ಗಂಗೆಯನು
ಹರಿಬಿಟ್ಟು... ಈಗ ತಲೆಯ ಮೇಲೆ
ಕೈ ಇಟ್ಟು ಕುಳಿತರೆ..
ಹರಿದ ನೀರು ಹಿಮ್ಮುಖವಾಗೆಂದು ಹರೆಯದು

ನನಗೆ ಬೇಕಿರುವುದು ಕಾಣುವುದನೆಲ್ಲವ
ನೋಡುವ ಹೊರಗಣ್ಣುಗಳಲ್ಲ..
ಮನದೊಳಗಿದನೆಲ್ಲವ ಅರಿಯುವ ಒಳಗಣ್ಣಿನ
ಅಂತಃಕರುಣೆಯ ದೇವತೆ ಬೇಕು..

ಪ್ರಾರ್ಥಿಸು ಆ ದೇವರಲ್ಲಿ...
ಆವಿಯಾಗಿ ಮಗಿಲೊಡಲ ಸೇರಿ
ಪರಿಶುಭ್ರವಾಗಿ ಮರಳಿ ಪ್ರೀತಿಯ
ಮಳೆಹನಿಯಾಗಿ ನಿನ್ನೆದೆಗೆ ಸೇರಲೆಂದು

ಆಗಲಾದರೂ..
ಹಿಡಿದಿಡುವೆಯೊ... ಹರಿಬಿಡುವೆಯೊ...
ಎರಡು ನಿನಗೆ ಬಿಟ್ಟಿದ್ದು


ಗೆಳೆಯ ನಾ ನಿನ್ನ ಮನದ ಅರಸಿಯಾದರೆ ನಿ ಇಂದಲ್ಲ ನಾಳೆ ಬರುವೆ..

ನಿ ಹಿಮ್ಮುಖ ಹರಿದು ಬಾ ಎಂದು
ನಾ ಬಯಸಲಾರೆ..

ಅಕೆಯು ಒಂದು ಹೆಣ್ಣು ನಿ ಅವಳ ಮನ ಹೊಕ್ಕಿದ್ದು ನಿನ್ನ ತಪ್ಪು..

ನಾ ಪ್ರಾರ್ಥನೆ ಮಾಡಿ ನಿನು ಆವಿ ರೂಪ ಪಡೆದು..
ಮರಳಿ ನನ್ನ ಮನದ ಮನೆಗೆ ಬರವೆ ಸರಿ..

ಆ ಹೆಣ್ಣು ಅವಳು ಏನೂ ಮಾಡಿಯಾಳು ಅವಳು ಯಾರ ಬಳಿ ಬೇಡಿಯಾಳು..

ನಿ ಹಿಮ್ಮುಖ ಬಾರದೆ ಅವಳ ಮನದ
ಮಡಿಲಲ್ಲಿ ಯೆ ಹರಿದು ಪ್ರೀತಿಯ ಬೆಳೆ
ಬಿತ್ತು ಅವಳಲ್ಲಿ ಯಾದರು ಭದ್ರ ಗೋಡೆಯ ಹಾಕಿಸಿಕೂ ಗೆಳೆಯ


ನಾನಾಗಿಯೆ ಹೊಕ್ಕಿಲ್ಲ ಕೋಗಿಲೆ..
ಅವಳಾಗಿಯೆ ಕರೆದಳು..
ಭಗೀರಥನು ಗಂಗೆಯನು ಭೂವಿಗೆ
ತಂದಂತೆ.. ನನ್ನ ಬರುವಿಕೆಗಾಗಿ
ಮನದ ತೊಟ್ಟಿಲಲಿ ಮಲಗಿಸಿ
ತೂಗಲಿಕ್ಕಾಗಿ ತಪವಗೈದಂತೆ
ನನ್ನ ಕಾಯುತ್ತಿದ್ದಳು..
ಕಾದಳು.. ನನ್ನ ಪಡೆದಳು

ಹಾಗಂತ ಅವಳಿಗೆ ನಾನೇನೂ
ಮೋಸ ಮಾಡುತ್ತಿಲ್ಲವಲ್ಲ
ಅವಳಿಗೆ ಮೋಸ ಮಾಡಿದರೆ
ಎರಡು ಕಂಗಳಿಗೆ ಸುಡುವ
ಕಬ್ಬಿಣದ ಸಲಾಕೆಗಳನ್ನಿಟ್ಟುಕೊಂಡು
ಕುರುಡನಾದಂತೆ...

ಸಿಗೋಣ ಮುಂದಿನ ಜನ್ಮದಲ್ಲಾದರೂ
ನಿನ್ನ ಸೀರೆಯ ಸೆರಗಂಚಲಿ ನನ್ನ ಹೆಸರಿದ್ದರೆ
ನನ್ನ ಎದೆಯ ಮೇಲೆ ಆ ದೇವರು ನಿನ್ನ ಹೆಸರನ್ನು
ಕೆತ್ತಿದ್ದರೆ..

ಹರಿಯುವ ಮನ

ಹರಿಯುವ ನೀರಿನಂತೆ
ನನ್ನ ಮನ ನಿಜ ಗೆಳತಿ..
ಹರಿಯುವ ಮನವೆಂದು
ತಿಳಿದು ತಿಳಿದು ನಿನ್ನ
ಮನವದು...
ಕೊಳವಾಗಲಿಲ್ಲವೇಕೆ?
ನನ್ನ ಪ್ರೀತಿಗೆ ಕಟ್ಟೆಯ ಕಟ್ಟಿ
ನಿಲ್ಲಿಸಲಿಲ್ಲವೇಕೆ ?

ನೀರೆಂದಿರುವೆ ನನ್ನ ಮನವನು
ನಿಲ್ಲುವುದೆ ಒಂದೆ ಕಡೆ ..
ಹರಿಯದೆ.. ಹುಚ್ಚು ಕೊಡಿ
ಮನಸ್ಸಿದು..

ತಪ್ಪನೆಲ್ಲ ನಿನ್ನಲಿಟ್ಟುಕೊಂಡು
ದೂಷಿಸದಿರು ಚೆಲುವೆ ನನ್ನೊಲವನು
ಬರುವೆ ಮತ್ತೆ ಮುಂಗಾರಿಗೆ
ನಿನ್ನೊಲವಿನ ಮಳೆಹನಿಯಾಗಿ
ಸಾಧ್ಯವಾದರೆ....
ತಡೆಹಿಡಿದಿಕೊ...

ಬಾಲ ಕಾರ್ಮಿಕ

ಅವ್ವ....
ನನಗಿಲ್ಲವೆ.. ನೂರಾರು ಕನಸು
ಅರಿತುಕೊಳ್ಳುತ್ತಿಲ್ಲವೇಕೆ ನಿಮ್ಮ ಮನಸು
ನಾನಲ್ಲವಲ್ಲ ನಿಮ್ಮಷ್ಟು ಬಿರುಸು
ಮತ್ತೇ....ಕಿ ಭಾರವಾದ ಕಲ್ಲುಗಳ
ಹೊರೆಯು...

ಆಡಬೇಕಿದೆ.. ಓಡಬೇಕಿದೆ..ನಲಿಯಬೇಕಿದೆ..
ಊರ ಮುಂದಿನ ಮಾವಿನ ಮರಕೆ ನುಗ್ಗಿ
ಮಾವನು ಕದ್ದು ತಿನ್ನುವಾಸೆ..
ಟಾರ್ ಹಾಕಿರದ ರಸ್ತೆಯ ಮೇಲೆ ಟೈರ್
ಗಾಲಿಯ ಹಿಡಿದು ಓಡುವ ಆಸೆ...
ನೆಲ್ಲಿಯ ಮರವ ಹತ್ತಿ ಕಾಯಿಗಳನು
ಚಪ್ಪರಿಸಿ ತಿನ್ನುವಾಸೆ..
ಕೆರೆಯಲಿ ಜಿಗಿಯಲು, ಜಾತ್ರೆಗೆ ಹೋಗಲು
ಲಗೋರಿಯ ಆಡಲು, ಬಾನೆತ್ತರೆತ್ತರಕೆ
ಪಟವ ಹಾರಿಸಲು ಆಸೆ.. ಆಸೆ.. ಆಸೆ.
ಎಲ್ಲ ಆಸೆಗಳಲ್ಲೂ ನಿರಾಸೆ ತುಂಬಿದೆ ಅವ್ವ...

ನನಗೆ ಗೊತ್ತು...
ನೀವು ಒಳ್ಳೆಯ ಧಿರಿಸನು ಕೊಡಿಸಲಾರಿರೆಂದು
ಉತ್ತಮ ಶಾಲೆಗೆ ಕಳಿಸಲಾರಿರೆಂದು..
ಅಂದ ಚೆಂದದ ಬಣ್ಣದ ಗೊಂಬೆಗಳ
ಕೊಡಿಸುವುದಿಲ್ಲವೆಂದು..

ನನಗೆ ಗೊತ್ತಿಲ್ಲ...
ಹಸಿವಿಗೆ ನಾವು ಜೋತು ಬಿದ್ದಿರುವೆವೊ
ಹಸಿವು ನಮಗಷ್ಟೇ ಅಂಟಿಕೊಂಡಿದೆಯೊ..
ಮನೆಯವರೆಲ್ಲರೂ ದುಡಿದರೂ..
ಒಂದು ಹೊತ್ತಿಗಾಗುವಷ್ಟು ಅನ್ನ ಸಿಗುತ್ತಿಲ್ಲ..

ಇದು ನನಗೆ ಗೊತ್ತಾಗುತ್ತದೆ..
ನನ್ನ ಬಾಲ್ಯವನು ಈ ದುಡಿಮೆಯ
ಸಂಕೋಲೆಗೆ ಕಟ್ಟಿ ಹಾಕಿರುವಿರಿ..
ಈ ಹೆಗಲಿಗೆ ಹೊರಲಾರದ ಭಾರವನ್ನು
ಹೊರಿಸಿಬಿಟ್ಟಿರುವಿರಿ..
ಕಾಲುಗಳಿಗೆ ಅಜ್ಞಾನವೆಂಬ ಕಲ್ಲು ಗುಂಡನ್ನು
ಕಟ್ಟಿ ಕೈ ಬಿಟ್ಟಿರುವಿರಿ..

ಬಿಡುಗಡೆಗೊಳಿಸಿ ನನ್ನನು...
ಈ ಸಂಕೋಲೆಯಿಂದ..
ನೋಡಿ ಕರಗಿಹೋಗುತ್ತಿದೆ ನನ್ನ ಬಾಲ್ಯ
ಹಿಂದೆ ಉಳಿದು ಹೋಗುತ್ತಿದೆ ಅಭ್ಯಾಸ
ಮುಂದೆ ಓಡಿ ಹೋಗುತಿದೆ ಕಾಲ

ಅವ್ವ...
ಮೆಟ್ಟಿ ನಿಲ್ಲಬೇಕಿದೆ ಕಣೇ...
ಈ ಹಸಿವಿನ ಲೋಕವ
ಹಸಿವಿನ ಗಾಳಿಯೂ ಸುಳಿಯದಂತೆ
ಕಟ್ಟಬೇಕಿದೆ ಕಣೆ.. ಕೋಟೆಯೊಂದನು..
ನೋವಿನ ನೆರಳು ಬೀಳದಂತೆ ಕಟ್ಟಬೇಕಿದೆ
ಕಣೆ ಅವ್ವ..

ಹೋಗಬೇಕಿದೆ ನಾನು ಶಾಲೆಗೆ...
ಅನುಭವಿಸಬೇಕಿದೆ ಬಾಲ್ಯವ...
ಅರಿಯಬೇಕಿದೆ ಈ ಬಣ್ಣದ ಲೋಕವ
ಬಿಡಿಸಬೇಕಿದೆ... ನನ್ನಂಥ ಎಷ್ಟೋ
ಹುಡುಗರ ಬಾಲ್ಯದ ಸಂಕೋಲೆಗಳ...
ಅವ್ವ...
ಕಳಿಸೆ... ನನ್ನನೊಮ್ಮೆ ಶಾಲೆಗೆ
ಸಾಕಿನ್ನೂ... ದೂಡದಿರು ಈ ಸಂಕೋಲೆಗೆ

ಕಾರ್ಮಿಕರು

ಕಾರ್ಮಿಕರು ನಾವು.... ನಿಜ..
ಧನಿಕರೇ..
ನಿಮ್ಮ ಹಾಗೆ ನಮಗೂ...
ಮನಸ್ಸಿದೆ...
ನೋವು ನಲಿವುಗಳಿಗೆ...
ರಕ್ತ ಖಂಡಗಳ, ಮಾಂಸ ಪಿಂಡಗಳ
ಕಾಯವಿದೆ..
ಬಿದ್ದರೆ, ಎದ್ದರೆ, ಎಡವಿದರೆ ಈ
ದೇಹಕ್ಕೂ... ಗಾಯವಾಗುತ್ತದೆ.
ಅದೇ...ಕೆಂಪು ರಕ್ತವು ಹರಿಯುತ್ತದೆ..
ನಿಮ್ಮ ರಕ್ತದಲ್ಲಿ ಸ್ವಲ್ಪ ಸಕ್ಕರೆಯ
ಅಂಶ ಜಾಸ್ತಿ ಇದ್ದೀರಬಹುದು...
ನಮ್ಮ ನೆತ್ತರಿನಲ್ಲಿ... ನಿಮಗಿಂತಲೂ
ದುಪ್ಪಟ್ಟು ನಿಯತ್ತಿನ ಅಂಶವಿದೆ....

ಕೂಲಿಕಾರರು... ನಾವು...
ಈ ಭವ್ಯ ಭಾರತಾಂಬೆಯ
ಬೆನ್ನೆಲುಬುಗಳು ನಾವು..
ಬೆವರಿನ ಹೊಳೆಯನೆ ಹರಿಸಿ..
ನಾಡನು ಕಟ್ಟುವವರು ನಾವು..
ಮುತ್ತಿನ ಹೊತ್ತುಗಳ ದುಡಿಸಿ
ಚಿಲ್ಲರೆ ಕಾಸುಗಳ ಪಡೆಯುವವರು ನಾವು

ಮಣ್ಣನು ಅಗೆದು... ಅಗೆದು...
ಬಂಗಾರವ ಬಗೆದು.. ಬಗೆದು
ಕೊಡುವವರು ನಾವು...
ಆ ಮಣ್ಣ ಕುಸಿತದಲಿ ಮಡಿದರೆ
ಹಾಕುವಿರಲ್ಲ ನಮ್ಮ ಬಾಯಿಗೆ
ಮಣ್ಣು....

ನಮ್ಮ ಮಡದಿ ಮಕ್ಕಳು ಹುಣ್ಣಾಗಿ
ಕಾಣುವರಲ್ಲ ನಿಮ್ಮಂಥ ಧನಿಕರ ಕಣ್ಣಿಗೆ..
ಪರಿಹಾರದ ನೆಪದಲ್ಲಿ ಅಷ್ಟೋ ಇಷ್ಟೋ
ಕೊಟ್ಟು ಮಾಡುವಿರಲ್ಲ ಬೀದಿಪಾಲು..

ಅರಿಯಿರಿ... ರೊಕ್ಕ ಭಕಾಸುರರೆ....
ನಿಮಗಿದೊಂದೆ ಊರು
ನಮಗಿಲ್ಲಾವ ಊರು ಸೂರಿನ ಖಬರು
ಎಲ್ಲಿ ಕಾಯಕವೊ... ಅದೇ ನಮ್ಮೂರು
ಬಯಲು ಜಾಗವೆ.. ನಮ್ಮರಮನೆಯ ಸೂರು

ದೇಹದೊಳಗಿನ ನೆತ್ತರಿನ ಬಿಸಿ
ಆರುವವರೆಗೂ ದುಡಿದು ತಿನ್ನುವೆವು..
ನೋಡಿರಿ... ನಿಮ್ಮ ಮನೆಗಳನ್ನು..
ಕೇಳಿರಿ ಆ ಕಲ್ಲುಗಳಿಗೆ...
ತರುವಾಗ.. ಎತ್ತುವಾಗ... ಕಟ್ಟುವಾಗ
ನನ್ನ ಬೆವರು... ನನ್ನ ಕೈ ಬೆರಳಿನ, ಕಾಲ್ಬೆರಳಿನ
ರಕ್ತವು ಸೋಕದೆಯೆ ನಿರ್ಮಾಣಗೊಂಡಿದೆಯೆ ಎಂದು..

ಇರಲಿ ನಮ್ಮ ಮೇಲೂ ಸ್ವಲ್ಪ ಕರುಣೆ
ನಮ್ಮನೆ ನಂಬಿ ಇರುವವು ಮನೆಯಲಿ
ಒಂದಿಷ್ಟು ಜೀವಗಳು...
ಬಾಯಾರಿ ಹಸಿವಿನಿಂದ ಕುತಿವೆ...
ದುಡಿತಕ್ಕೆ ತಕ್ಕಂತಾದರೂ ಹಣವ ನೀಡಿ
ಎರಡು ಹೊತ್ತಿಗಾಗದಿದ್ದರೂ...
ಒಂದು ಹೊತ್ತಿಗಾಗುವಷ್ಟಾದರೂ ನೀಡಿ
ಇಲ್ಲವಾದರೆ ಕಣ್ಣೀರಿವೆಯಲ್ಲ.....ಕುಡಿಯುವೆ
ಬಿಡಿ......