ರಂಗೀಯ ನೆನಪಿನ
ನಂಜು... ನನ್ನೆದೆ ಗೂಡನ್ನು
ಆಗಾಗ
ಹೆಪ್ಪುಗಟ್ಟಿಸುತ್ತದೆ
ಸಾಕಿ...
ಬೆಚ್ಚಗಿರಿಸಿಕೊಳ್ಳಲು
ಈಗೀಗ, ನಿನ್ನ
ಮದ್ಯವನ್ನು
ಕುಡಿಯುತ್ತಿರುವೆ.
Thursday, January 10, 2019
ಶಾಯರಿ ೫೩೧
ಶಾಯರಿ ೫೩೨
ದಿನವೂ...
ನಗುನಗುತಲಿ ಅರಳುವ
ಮಲ್ಲಿಗೆಯದ್ದೇನು
ತಪ್ಪು ಸಾಕಿ...
ಅವಳೆದೆಯ
ನೆಲದಲ್ಲಿ, ನನ್ನೊಲವಿನ
ಬಳ್ಳಿಯೇ... ಬಾಡಿ
ಹೋಗಿರುವಾಗ
ನಾನೇನು ಬರೆಯಲಯ್ಯ
ನಾನೇನು ಬರೆಯಲಿ ಅಕ್ಷರ
ಬಡವನಯ್ಯ..
ಮನವಿದು ಈಗ ಗೊಂದಲದ
ಗೂಡಾಗಿರುವಾಗ
ನಾನೊಬ್ಬನು ನರನಲ್ಲವೆ?
ಕಾಲನ ಕರಗಳಲಿ ಸಿಕ್ಕು
ಸೀಳಿ ಹೋಗುತಿರುವೆ...
ಹುಸಿನಗುವ ಹೊತ್ತ
ಮನುಜರ ಸುಳಿಗೆ ಸಿಕ್ಕು
ನರಳಾಡುತಿರುವೆ.
ಹಾಕಿಕೊಂಡ ಉದ್ದೇಶಗಳಿಗೆಲ್ಲ
ಭದ್ರ ಬುನಾದಿಗಳೆ ಸಿಗುತಿಲ್ಲ
ಕನಸುಗಳ ಕಟ್ಟುವ ಕೆಲಸವಂತೂ
ಇನ್ನೂ ದೂರದ ಮಾತು.
ಪ್ರಯತ್ನವೊಂದನ್ನು ಬಿಟ್ಟಿಲ್ಲ..
ಮೆಟ್ಟಿ...ಮೆಟ್ಟಿ ಮೇಲೆರಲೆ ಪ್ರಯತ್ನಿಸುತ್ತಿರುವೆ,
ಜಾರುತಿರುವೆ, ಹತ್ತುತಿರುವೆ,
ಜಾರುತಿರುವೆ. ಏರು ಜಾರುವಿಕೆಯ
ಮಧ್ಯೆ... ಮನಸ್ಸೆಷ್ಟೊ ಘಾಸಿಕೊಂಡಿದೆ.
ಸಂತೈಸುವವರಿಗಿಂತ ಹುಳಿ ಹಿಂಡುವವರೆ
ಹೆಚ್ಚಿರುವಾಗ... ಸಹಿಸಿಕೊಳ್ಳಲಾದರು
ಎಷ್ಟು ದಿನ?
ಬಾಳ ಕ್ಷೀರವು ಖುದ್ದು..ಖುದ್ದು...
ಹೊತ್ತು...ಕರಕಲಾಗಿ, ಪಾತ್ರಗೆ
ಮೆತ್ತಿಕೊಂಡಿರುವಾಗ
ನನ್ನೊಳಗೆ ನನ್ನನೆ ಸುತ್ತಿಕೊಂಡ ಹತ್ತಿ
ಹುಳುವಿನಂತಾಗಿದೆ ನನ್ನ ಸ್ಥಿತಿ..
ಬರುವೆ... ಬಂದೆ ಬರುವೆ...ಹಿಸುಕಿ
ಉಸಿರಕಟ್ಟಿಸುತ್ತಿರುವ ಪೊರೆಯನು
ಸೀಳಿ ಬರುವೆ...ಬರುವೆ...ಕಾಲವೆ
ಎದುರು ನೋಡುತ್ತಿರು ನನ್ನನು...
ಶಾಯರಿ ೫೫೦
ಈಗಷ್ಟೇ...
ಕುಡಿದ ಮದ್ಯದಲ್ಲಿ
ಅವಳ ದೇಹಕ್ಕೆ
ಪೋಸಿಕೊಂಡ
ಅತ್ತಾರಿನ ವಾಸನೆಯಿತ್ತು
ಸಾಕಿ...
ಮರೆಯಲೆಂದೆ
ಬಂದವನಿಗೆ,
ಮತ್ತೆ...ಮತ್ತೆ ರಂಗೀಯ
ನೆನಪುಗಳನ್ನು,
ನೆನಪಿಸುವುದೇ......
ನಿನ್ನ
ಹುನ್ನಾರವೇನು.
Wednesday, January 9, 2019
ಚುಟುಕು ೫೩೭
ಕೆರಿ ದಂಡಿಮ್ಯಾಲ
ಚಿಗರ್ssಮೀಸಿ ತಿರ್ಗಸ್ಗೊಂತ
ನಿಂತೆಂದ್ರsss
ಮನದಾಗ ಹೇಳಲಾರ್ದಂತಾ
ಪುಳಪುಳಕ.
ನೀನೊಮ್ಮೆ ನಕ್ಕ ಬಿಟ್ರ ಸಾಕ
ಮಾಗಿ ಚಳಿಯೊಳ್ಗು..
ಮೈತುಂಬಾ ಬೆವರಿನ
ಜಳಕಾ...
ಚುಟುಕು ೫೩೮
ಹಾದ್ಯಾಗ, ಹೋಗ್ಬರೊ ಮುಂದ
ನಿಂತ್ಗೊಂಡ ಹಿಂಗ...
ಕಾಮದ ಕಣ್ಣೀಲೆ ನಿ
ನೋಡಬ್ಯಾಡ.
ಮಾಗಿ ಚಳಿ ಐತಿದು...
ನಿದ್ದಿ ಬಿಟ್ಟು,
ರಾತ್ರಿಗೆಲ್ಲ
ನನ್ನ ನೆನ್ಸಗೊಂತ
ಕುಂದ್ರಬ್ಯಾಡ
ಚುಟುಕು ೫೩೯
ನಿನ್ನ ಎದಿ ಅಂಗಳ್ದಾಗ
ನನ್ ಪ್ರೀತಿ ರಂಗೋಲಿನ
ಹಾಕ್ಬೇಕೆಂದಿದ್ದೆ
ರಾಜಾ...
ನಿಮ್ಮವ್ವನ ವಡವಡ್ಕ
ಬಾಯಿಗೆ ಸಿಕ್ಕು...
ದಕ್ಕೈತಲ್ಲೊ
ನಂಗೀಗ ನೋವಿನ
ಸಜಾ...