ರಂಗೀಯೊಡಗೂಡಿ
ಒಂದು ರಾತ್ರಿಗೂ...
ದೀಪವನಾರಿಸುವ
ಭಾಗ್ಯ.. ನನ್ನದಾಗಲಿಲ್ಲ
ಸಾಕಿ...
ಹಾಲು ಕೆನೆ ಗಟ್ಟಿತು..
ಹೂಹಾಸುವೆಲ್ಲ
ಮುದುಡಿ ಹೋಯಿತು..
ಆಸೆ ಮಾತ್ರ...
ನನಸಾಗದೆ ಉಳಿದುಬಿಟ್ಟಿತು.
Saturday, January 12, 2019
ಶಾಯರಿ ೫೨೪
ಶಾಯರಿ ಇ ೫೨೬
ಗಟಗಟನೆ ಕುಡಿದ
ಮದ್ಯವು
ಒಡಲನ್ನು
ಸೇರಿತ್ತು
ಸಾಕಿ....
ಇಳಿಯುವ
ಮಧ್ಯದಲ್ಲಿ
ಎದೆಯುರಿಯ
ಬತ್ತಿಸುವುದನ್ನೇ...
ಮರೆತಿತ್ತು
Friday, January 11, 2019
ಶಾಯರಿ ಇ ೫೨೭
ರಂಗೀಯ
ನೆನಪುಗಳೆ
ಹಾಗೆ
ಸಾಕಿ...
ಹೊಟ್ಟೆಯಿಂದ
ಹೊರ ಬರಲಾರವು...
ಎದೆಯಲ್ಲಿಯೆ ಸತ್ತು
ಸಮಾಧಿಯು
ಆಗಲಾರವು.
ಶಾಯರಿ ಇ ೫೨೨
ನನ್ನ ನೆನಪುಗಳಿಗೆ
ಈಗಾಗಲೇ... ರಂಗಿಯು
ಗೋರಿಯನ್ನು
ತೋಡಿರುವಾಗ
ಅವುಗಳ ಚಿಂತೆ
ನನಗೇಕಿಗ
ಸಾಕಿ...
ಇತಿಹಾಸದ ಪುಟದಲ್ಲಿ
ಹೆಸರನ್ನು
ಅಚ್ಚೊತ್ತಿಸಿಕೊಳ್ಳಲು...
ನಾನೇನು ದೇವದಾಸನೇನು?
ಶಾಯರಿ ೫೨೮
ರಂಗೀಯ ಬರುವಿಕೆಗೆ
ಹೂಭಾವನೆಗಳನ್ನೆ
ಹಾಸಿದ್ದೆ ಸಾಕಿ...
ಮನದಲ್ಲಿ...
ಹೂಗಳನ್ನೇನೊ
ದಾಟಿ ಬಂದಿದ್ದಳು.
ಹೋಗುವಾಗ ಮಾತ್ರ,
ನೋವಿನ ಬೇಲಿಯನ್ನೆ
ಕಟ್ಟಿ ಹೋದಳು.
ಶಾಯರಿ ೫೩೦
ಸಂಜೆಗಟ್ಟೆಯಲಂದು
ರಂಗೀಯು
ಹೇಳುತ್ತಿದ್ದ..
ಪ್ರೇಮ ಕಥೆಗಳನ್ನು
ಕೇಳಲು
ಎಷ್ಟೊಂದು
ಹಿತವಾಗಿರುತ್ತಿತ್ತು...
ಸಾಕಿ....
ನನ್ನೊಲವು
ನಾನಳಿದ ಮೇಲೆ,
ಇತಿಹಾಸವಾಗಬಹುದೇನೊ?
ಹೇಳುವರಾರು..?
ಶಾಯರಿ ೫೧೫
ಸೇಬುಗೆನ್ನೆಯ
ಮುತ್ತಿಕ್ಕಿದವನ
ಅಧರಗಳಿಗೆ...ನಿನ್ನ
ಮಧು ಬಟ್ಟಲನ್ನು
ಮುತ್ತಿಕ್ಕಲು
ಕೊಟ್ಟಳು ಸಾಕಿ....
ಒಲವಿಗೆ ಬೆನ್ನು
ತೋರಿಸಿ ನಡೆದವಳ
ಮರೆಯಲೆಂದರೆ...
ರಂಗೀಯ ರಂಗು ರಂಗಿನ
ನೆನಪುಗಳೇ ಇನ್ನೂ...
ಬೆನ್ನ ಬಿಡುತಿಲ್ಲವಲ್ಲ !!!