Sunday, April 7, 2019

ಶಾಯರಿ ೬೧೫

ಮದ್ಯ
ಕೆಟ್ಟದ್ದೆಂದು
ನೀ...
ದೂರಬೇಡ
ಗೆಳೆಯ.
ದೂರಾದವಳ
ಮರೆಯಲು
ನನಗೀದೆ
ಔಷಧಿಯಾಗಿದೆಯಲ್ಲ!!!

ಶಾಯರಿ ೬೦೫

ಅವಳು
ಕಟ್ಟಿಕೊಟ್ಟ
ಕನಸಿನರಮನೆಯಲ್ಲಿ
ನಾನೀಗ
ಏಕಾಂಗಿ
ಸಾಕಿ...
ನನಸಾಗುವವೇನೊ?
ಎಂಬ ಹುಸಿ
ಭರವಸೆಯೊಂದಿಗೆ
ಬದುಕುತ್ತಿರುವ
ನಾನೊಬ್ಬ
ಕುರುಡು ಪ್ರೇಮಿ..

ಶಾಯರಿ ೬೧೬

ಕುಡಿದುಬಿಟ್ಟ
ಮದ್ಯದ
ಬಾಟಲಿಗಳನ್ನು
ಎತ್ತಿಟ್ಟುಬಿಡು
ಸಾಕಿ...
ಸದ್ದಾಗದಂತೆ!!!!

ಈ ಹುಣ್ಣಿಮೆಯ
ರಾತ್ರಿಯಲ್ಲಿ...
ರಂಗೀಯು ದಾರಿ
ತಪ್ಪಿ...
ನಿನ್ನರಮನೆಗೆ
ಬಂದಿರುವಳಂತೆ

ಶಾಯರಿ ೬೦೪

ಎದೆಯಂಗಳದಲ್ಲಿ
ಕಹಿಯ ಬೀಜಗಳನ್ನು
ಬಿತ್ತಿ ಹೋದವಳು
ಅವಳೆ...
ಅಲ್ಲವೆ ಸಾಕಿ...
ವಿರಹದ ಮರವೀಗ
ಹೂಬಿಟ್ಟಿದೆ...
ಕೀಳಲಾದರು
ಬರುವಳೇನೊ?

ಶಾಯರಿ ೬೧೦

ನಿರೀಕ್ಷೆಯು
ಸಿಹಿಯಾಗುವುದೆಂದು
ನಾನೇನು
ಊಹಿಸಿಲ್ಲ
ಸಾಕಿ...
ಅದು ಸಹ
ಕಹಿಯಾಗದಿರಲೆಂದು
ಆಪೇಕ್ಷಿಸುತ್ತಿರುವೆ.

ಶಾಯರಿ ೬೧೭

ಅವಳಿಗಾಗಿ
ಕಾಯುವುದು
ತಪ್ಪೇನಲ್ಲ
ಸಾಕಿ...
ಬರುವವರೆಗಾದರೂ...
ನಿನ್ನ ಮದ್ಯವನ್ನು
ಕುಡಿಯುವುದರಲ್ಲಿ
ತಪ್ಪೇನೂ....
ಇಲ್ಲ.

ಶಾಯರಿ ೬೦೦

ಅವಳು
ಬರುವಳೆಂಬ
ನಿರೀಕ್ಷೆಯಲ್ಲಿ
ಕಾಯುವುದು
ತಪ್ಪೇನಿದೆ?
ಸಾಕಿ....
ನೋಡು...
ಬೇವಿನಮರದಲ್ಲೂ...
ಇಂದು
ಹೂಗಳು
ಅರಳಿವೆ.....