ನನ್ನ ಬಗ್ಗೆ
ನಿನಗಿಲ್ಲ
ಒಂಚೂರು
ಮರುಕ...
ನನ್ನೆದೆಯ
ನೋವಿಗೆ,
ಭೂಮಿಯು
ಬಿಟ್ಟಿದೆ ನೋಡ..
ಬಿರುಕ..
Friday, May 3, 2019
ಚುಟುಕು ೭೮೩
ಕಡೆದು, ಗೂಡಿಸಿ
ಹಾಕಿಬಿಟ್ಟೆ...
ಹೊಲದೊಳಿದ್ದ
ಕಸ-ಕಡ್ಡಿ,
ಮುಳ್ಳು ಕಂಟಿಗಳ...!!
ಕಿತ್ತೊಗೆಯಲೆ
ಆಗುತ್ತಿಲ್ಲ....
ಮನದಾಳದಲ್ಲಿ
ಬೇರು ಬಿಟ್ಟಿರುವ
ಮೋಹ-ವ್ಯಾಮೋಹಗಳ..!!
ಚುಟುಕು ೭೮೨
ಬಾಡಿ ಹೋಗಿವೆ
ಗುಲಾಬಿಯ
ಹೂಗಳು
ಸುಡು ಬಿಸಿಲಿಗೆ...
ಪ್ರೀತಿಯಿಂದ,
ಬಣ್ಣದ ಹಾಳೆಗಳಲ್ಲೆ
ಮಾಡಿಟ್ಟಿರುವೆ
ಹೂಗಳನ್ನು...
ನೀ ಬರದಿದ್ದರೆ!!
ಇವೂ... ಉರಿದು
ಹೋಗುವವು..
ನನ್ನೆದೆಯ ವಿರಹದ
ಬಿಸಿಗೆ
ಚುಟುಕು ೭೮೧
ಕಡೆದು
ಸುಟ್ಟು ಬಿಟ್ಟರೂ...
ಮತ್ತೆ ಚಿಗುರಿ,
ಹೂಗಳರಳಿಸಿ
ತೋರುತ್ತಿದೆ
ಪ್ರೀತಿ..
ಸುಟ್ಟ ಮನಗಳು
ಅರಿತುಕೊಳ್ಳುವವೇ...
ಇದರ ರೀತಿ
ನೀತಿ
ಚುಟುಕು ೭೭೯
ನಿನ್ನ ಹೊಗಳಲೆಂದೆ
ಕವನಗಳನ್ನು
ಬರೆಯುತ್ತಿಲ್ಲ!!
ಏನು ಮಾಡಲಿ,
ನಿನ್ನ ನೋಡಿದ
ಕ್ಷಣ, ಪದಗಳೆ
ಮನದಲ್ಲಿ
ನಿಲ್ಲುತ್ತಿಲ್ಲ!
ಚುಟುಕು ೭೭೮
ಹೌದು ನಾನು
ಸ್ವಲ್ಪ ದಪ್ಪ
ಆದರೂ...
ನಾನಲ್ಲ ಬೆಪ್ಪ
ಸೋತಿರುವೆ,
ಕೊಟ್ಟುಬಿಡಲೆ
ಇಂದೆ...
ನಿನ್ನ ರಂಗೇರಿದ
ಕೆನ್ನೆಗಳಿಗೆ
ಮುತ್ತುಗಳ
ಕಪ್ಪ..
Subscribe to:
Posts (Atom)