ಒಲವಿನ ಹೊಳೆಯಲ್ಲಿ
ಮುಳುಗಿಬಿಟ್ಟಿರುವೆ ಕುತ್ತಿಗೆಯವರೆಗೂ...
ಹೂಮುತ್ತನೊಂದ ಕೊಟ್ಟು
ಮರೆಯಾಗಿಬಿಡಬೇಡ,
ಈಜು ಬಾರದವಳು ನಾನು!!!
ನಡು ನೀರಿನಲ್ಲಿ ಕೈ ಬಿಡಬೇಡ,
ಬಿಟ್ಟರೆ!!!!?...
ಮನೆಯೋ?... ಮಸಣವೋ?...
ಎರಡರಲ್ಲಿ ಒಂದನ್ನು ಆರಿಸಿಕೊಳ್ಳಲು
ನಾನು ಸಶಕ್ತಳಾಗಿಲ್ಲ!!
ನಿಂತಿರುವೆ ತಣ್ಣಿರಿನಲ್ಲಿ ಹೀಗೆ
ನಿನ್ನ ಬೆಚ್ಚನೆಯ ನೆನಪುಗಳೊಂದಿಗೆ!
ಕಾಯುತ್ತಿರುವೆ, ಈಗಲ್ಲದಿದ್ದರೂ
ಬರುವೆ ಇನ್ನರೆಘಳಿಗೆಯೊಳಗೆಂಬ
ನಂಬಿಕೆಯೊಂದಿಗೆ.
Saturday, August 31, 2019
ನಿರ್ಭಾವ ೩
Thursday, August 29, 2019
ನಿರ್ಭಾವ ೩
ಬಿಟ್ಟು ಹೋಗುವ ಕ್ಷಣದಲ್ಲಿ
ನಿನ್ನನ್ನೊಮ್ಮೆ ಆಲಂಗಿಸಿಕೊಳ್ಳಬೇಕಿತ್ತು!!
ಇನ್ನೊಬ್ಬನ ತೆಕ್ಕೆಯಲಿ
ಈ ದೇಹವು ನೋವುಂಡಾಗ,
ನಿನ್ನಪ್ಪುಗೆಯ ಹಿತವನ್ನು
ನೆನಪಿಸಿಕೊಳ್ಳಲು....
ಈ ಸೇಬುಗನ್ನೆಯ ಮೇಲೊಂದು
ಸಿಹಿ ಮುತ್ತಿನ ಮುದ್ರೆಯನ್ನಾದರು
ಒತ್ತಿಸಿಕೊಳ್ಳಬೇಕಿತ್ತು!!
ಸವಿಯನ್ನು ಅನುಭವಿಸುತ್ತಿದ್ದೆ....ಅರಸಿಕನು
ಕೆನ್ನೆಯ ಕಚ್ಚಿಹೋದ ಮೇಲೆ, ಅದರ
ನೋವನ್ನು ಮರೆಯಲು....
Wednesday, August 28, 2019
ನಿರ್ಭಾವ ೨
ಬದುಕಿನ ಹಾದಿಯ
ತುಂಬಾ....
ರಂಗೀಯ ನೆನಪಿನ
ತರಗೆಲೆಗಳೆ ಬಿದ್ದಿವೆ!
ಗುಡಿಸುತ್ತ, ಸಾಗಲೋ?
ತುಳಿಯುತ್ತ ನಡೆಯಲೋ?
ಬಳಿದರೆ ಕಸಕ್ಕಿಂತ ಕಡೆಯಾಗುವವು...
ತುಳಿತಕ್ಕೆ ಸಿಕ್ಕು ಪುಡಿ...
ಪುಡಿಯಾಗಿ, ಹುಡಿಯಾಗಿ
ಹೋದರೆ? ನೊಂದುಕೊಳ್ಳುವಳೇನೊ?
ಹೇಗೆ ಅರ್ಥೈಸಿಕೊಳ್ಳಲಿ? ಅವಳು
ಇಲ್ಲವಲ್ಲ ಈಗ....ಸನಿಹದಲಿ!!
Monday, August 26, 2019
ನಿರ್ಭಾವ ೧
ಈ ರಾತ್ರಿಗೆ, ನಿನ್ನೆಲ್ಲ
ನೆನಪುಗಳು ಮುತ್ತಿಕ್ಕಿ
ಕೊಂದುಬಿಡಲಿ ನನ್ನನು
ಇಂತಹ ನಿದಿರೆ ಬಾರದ
ಅದೇಷ್ಟೊ.... ಕತ್ತಲುಗಳನ್ನು
ಜಯಸಿಯೆನು,
ಹೇಗಿರಲಿ? ನೀನೆ ಹೇಳು...
ನಿನ್ನಂಗಸಂಗವಿಲ್ಲದೆ ಕಳೆಯುವ
ಇರುಳುಗಳು.. ನನ್ನ ಕೊರಳಿಗೆ
ಉರುಳುಗಳಂತಾಗುವುದಿಲ್ಲವೇನು?
ಚುಟುಕು
ಭಾವಗಳ ತುಂಬಿ ಬರೆದ
ಸಾವಿರ ಕವಿತೆಗಳಿಗಿಂತ
ನಿನ್ನದೊಂದು ನುಡಿಮುತ್ತು
ಚೆನ್ನ.... ಚಿನ್ನ!!!
ನೆರೆಬಂದು ಕೊಚ್ಚಿಕೊಂಡು
ಹೋಗುವ ಸಿಹಿನೀರಿಗಿಂತ...
ಕ್ಷಣವು...ಬಿಟ್ಟಿರದೆ, ಇಷ್ಟಿಷ್ಟು
ಮುದ್ದಿಸುವ ಉಪ್ಪು ನೀರಿನ
ಕಡಲ ತೆರೆಗಳಂತೆ, ಅಪ್ಪಿಕೊಂಡಿರು
ನನ್ನ!!!
Sunday, August 25, 2019
ನಿರ್ಭಾವ
ಬಿಟ್ಟ ನಿಟ್ಟುಸಿರು ನನ್ನದಲ್ಲ,
ರಾತ್ರಿ ಮಂಚದಲಿ ಮುಲುಗಿ
ನಲುಗಿ ಹೋದ ಮಲ್ಲಿಗೆಯ
ಎಸಳುಗಳು ನನ್ನದಲ್ಲ,
ಹಾಲಿನ ಲೋಟದ ಅಂಚಿಗೆ
ಮೆತ್ತಿದ ಕೆಳತುಟಿಗಳ ರಂಗು ನನ್ನದೆ!
ಮಿಲನದ ಮಹೋತ್ಸವದ ಮುನ್ನುಡಿಗಾಗಿ
ಕುಡಿದದ್ದಲ್ಲ, ಹರಿಣಿಯ ಮೇಲೆ ಎರಗುವ
ಹುಲಿಯ ಆಕ್ರಮಣವ ನೆನೆದು,
ಗಂಟಲು ಪಸೆಯು ಒಣಗಿ, ಹ್ಞೂಂ...
ಎನ್ನಲು ಶಕ್ತಳಲಿಲ್ಲದಾದಾಗ ಕುಡಿದದ್ದು!!!
ನನ್ನದೇನೂ... ಇಲ್ಲ...
ಇದ್ದದ್ದು ನಿನ್ನೆ ರಾತ್ರಿಗೆ ಹರೆದು...
ತೊಳೆದು ಹೋಯಿತಲ್ಲ!!!!
ಚುಟುಕು
ಎಷ್ಟೊಂದ ಕೆಣಕ್ತಾವಲ್ಲ
ನಿನ್ನ ಕಿವಿಯ್ಯಾಗಿನ ಜಿಮುಕಿ
ನಿನ್ ಬ್ಯಾರೆ ಬಂದ ಕಾಡ್ತಿದಿ
ರಾತ್ರಿ ಕನಸ್ನ್ಯಾಗ ಇಣುಕಿ
ಹುಡುಗ ಭಾಳ ನಾಜೂಕ
ಅದಾನ...ತಡಮಾಡಬ್ಯಾಡ ಲಡಕಿ
ಕೂಡಿ ಹಾಡಿ ಆಡೋಣ ಬಾರ
ಶ್ರಾವಣ್ದ ಜೋಕಾಲಿ ಜೀಕಿ..ಜೀಕಿ...
ಚುಟುಕು
ಬಿಗಿದಪ್ಪಿ ಬಿಡು
ನಲ್ಲ...
ಎದೆಯೊಳಗಿನ
ನೋವು ಹಗುರಾಗಲಿ
ಎಲ್ಲ!
ಆಡುವ ಮಾತಿರಲಿ
ಒಂದೊಂದು ಬೆಲ್ಲ!
ನಾ ಕೊಡುವೆ ಮುತ್ತಿಗೆ
ಕೆಂಪಗಾಗಬೇಕು
ಈ ಸಲ ನಿನ್ನ
ಗಲ್ಲ!!
ರಂಗೀ
ಅವಳು ಕೊಂದು
ಹೋದದ್ದು
ಪ್ರೀತಿಯನ್ನ!!
ನನ್ನ ಭಾವನೆಗಳನ್ನೆನಲ್ಲ
ರಂಗೀ...
ಮಾತುಗಳಿಗೆ ಬರವಿರಬಹುದು!
ಬರೆವ ಪದಗಳಿಗಿಲ್ಲ!!!
ಸೂಪರ್ ಬೀಗರೆ
Saturday, August 24, 2019
ರಂಗೀ
ನಾನೇನು ಗಾಯವನ್ನು
ವಾಸಿಮಾಡಿಕೊಳ್ಳಲು
ಬಂದವನೇನಲ್ಲ!! ಅದರ
ನೋವನ್ನು ಮರೆಯಲು
ಬಂದವನು ರಂಗೀ....
ಅದು ವಾಸಿಯಾದರೆ?
ಬದುಕುವುದಕ್ಕೆ
ನನಗಿನ್ನೇನುಳಿಯುವುದು
ಹೇಳು...
ರಂಗೀ
ಪ್ರೀತಿಗೆ ಬೆನ್ನು
ತೋರಿಸಿದ ದಿನವೆ
ನನ್ನೆಲ್ಲ ಮಾತುಗಳನ್ನು
ಗಂಟುಕಟ್ಟಿ ಒಗೆದುಬಿಟ್ಟೆ,
ಮದ್ಯದ ಬಟ್ಟಲಿನೊಳಗೆ
ರಂಗೀ....
ನನ್ನ ಬಳಿ ಇರುವುದೊಂದೆ
ಈಗ.... ಅವಳ
ಮರೆಯಲು, ಮನೆ ಮಾರಿ,
ಕುಡಿಯಲು ತಂದಂತಹ
ಹಣದ ಗಂಟು...
ನನಗೆ ಗೊತ್ತು. ಇದಕ್ಕೂ
ನಿನಗೂ ಬಹಳ ನಂಟು
ರಂಗೀ
ನಾನೂ....
ಕುಡಿಯದಿದ್ದಾಗ
ಅವಳನ್ನು ಎದೆಯಲ್ಲಿಯಟ್ಟಿಕೊಂಡೆ
ಪೂಜಿಸುತ್ತಿದ್ದೆ
ರಂಗೀ....
ಅವಳೀಗ ಎದೆಯಲ್ಲಿಲ್ಲ!
ತಲೆಗೆರಿಬಿಟ್ಟಿದ್ದಾಳೆ, ಅದಕೆ
ಕುಡಿದ ಮತ್ತು
ತಲೆಗೆರುವುದೆ ಇಲ್ಲ!!!
ರಂಗೀ
ಇತ್ತೀಚೆಗೆ
ನಿನ್ನರಮನೆಯ ಮದಿರೆಯ
ಬಟ್ಟಲುಗಳು
ಮಾತನಾಡುತ್ತಿವೆ
ರಂಗೀ...
ಕುಡಿದು ಅವಳನ್ನಾದರು
ಮರೆ...ಇಲ್ಲವಾದರೆ
ನಮ್ಮನ್ನಾದರೂ ಬಿಡು,
ಎರಡು ಆಗದಿದ್ದರೆ?
ಮರೆಯುವುದಂತನ್ನಾದರು
ನೆನಪಿಸಿಕೊಂಡು, ನಮ್ಮನ್ನು
ಕುಡಿ ಎಂತೆಂದು
ರಂಗೀ
ಒಂಟಿತನಕ್ಕಿಂತಲೂ
ಖಾಲಿತನವು ಬಹು
ಅಪಾಯಕಾರಿಯಾದದ್ದು
ರಂಗೀ...
ಹೇಗೆ ಅಂತ ಹೇಳಲೆ?
ಒತ್ತೊತ್ತುಕೊಂಡು ಬರುವವಳ
ನೆನಪುಗಳ ಮರೆಯಲು...
ಮದಿರೆಯನ್ನು ಕುಡಿಯಬೇಕೆಂದಾಗ
ನಿನ್ನರಮನೆಯ ಹೂಜಿಯು
ಖಾಲಿ ಇರುವುದಲ್ಲ!
ರಂಗೀ
ಅವಳು
ಕಟ್ಟಿಕೊಟ್ಟು ಹೋದ
ನೆನಪುಗಳ ಹೊರೆಯನ್ನು,
ಯಾವ ಸಂತೆಯಲ್ಲಿ
ಮಾರಟಕ್ಕಿಡಲಿ
ರಂಗೀ....
ಬಜಾರಿನ ಮೂಲೆ
ಮೂಲೆಗಳಲ್ಲೂ... ಅವಳೆ
ಕಳುಹಿಸಿಕೊಟ್ಟ, ವಿರಹಿಗಳೆ
ತುಂಬಿರುವಾಗ
ಚುಟುಕು
ಕದ್ದು ನೋಡುವ
ಈ ನೋಟಕ್ಕೆ
ನನ್ನೊಳಗೇನಿಲ್ಲ
ಉತ್ತರ...
ಗೆಳತಿ,
ಕಳೆಯಿತಲ್ಲವೆ!!
ಆಷಾಢ... ಶ್ರಾವಣ.
ಇನ್ನೂ ನಿಂತಿರುವೆ
ಏಕೆ? ದೂರ...
ಬರಬಾರದೆ ನೀ...
ಹತ್ತಿರ...
Friday, August 16, 2019
ಚುಟುಕು
ಸಂತಸಗೊಂಡಿದ್ದೀರಾ?
ನೋಡುತ್ತಾ ಎದುರು
ಮನೆಯ ಶಾಂತಾ
ತಪ್ಪಿಸಿಕೊಳ್ಳುವೇಯೊ
ಹೇಗೊ? ಅಡುಗೆ ಮನೆಯ
ಲಟ್ಟಣಿಕೆಯ ಏಟಿಗೆ
ಕಾಂತ 😁😁😁😁
Thursday, August 15, 2019
ಚುಟುಕು
ಚಂದಿರನಿಗೂ ದಕ್ಕಿತಿಂದು
ಸ್ವಾತಂತ್ರ್ಯ.....
ಮೋಡಗಳ
ಸೆರೆಯಿಂದ!
ಇನ್ನಾದರೂ...
ಸಿಗಬಹುದೇನೊ?
ನಮಗೆಲ್ಲ ಮುಕ್ತಿ
ನೆರೆಯಿಂದ!!!
Tuesday, August 13, 2019
ಚುಟುಕು
ಎಡೆಬಿಡದೆ ಸುರಿದು
ಹೋಗಿದೆ ಮಳೆ
ಫಸಲಿಗಿಂತಲೂ ಫಲವತ್ತಾಗಿ
ಬೆಳೆದಿದೆ ಕಳೆ
ಎರಡರ ನಡುವೆ ಸಿಕ್ಕು
ಕೊಳೆತು ಹೋಗುತ್ತಿದೆ
ಬೆಳೆದ ಬೆಳೆ
Tuesday, August 6, 2019
ಚುಟುಕು
ನಿನ್ನ ಹುಡುಕಿಕೊಂಡು
ಬರುವ ಹಾದಿಯು
ಮುಚ್ಚಿ ಹೋಗಿದೆ!
ಗೊತ್ತಿರುವುದು ನಿನಗೊಬ್ಬಳಿಗೆ,
ಮರಳಿಬಿಡು ಎದೆಗೂಡಿಗೆ
ನೆರೆಯ ನೀರು ನಿನ್ಹೆಸರಿನ
ಉಸಿರಿನು ಕಸಿಯುವ
ಮುನ್ನ!!
Saturday, August 3, 2019
ಚುಟುಕು
ಎಲ್ಲರೂ ತೋರಿಸುತ್ತಾರೆ
ಪ್ರೀತಿ ಎದೆಯಿಂದಲ್ಲ
ಮಾತಿನಿಂದ!
ನಿನ್ನೆದೆಯಲ್ಲಿ ಸಾಕಷ್ಟಿದೆ
ಪ್ರೀತಿ...
ಹೇಳಿಕೊಳ್ಳುತ್ತಿಲ್ಲ
ಮಾತಿನಲ್ಲಿ!!!
Friday, August 2, 2019
ಕಜಲ್
ಕಲ್ಲು ಮನಸಿನವಳ ನಂಬಿ, ಶಿಲೆಯ ಮೇಲೆ
ನೀನೆ....ಪದವಾಗಿಬಿಟ್ಟಿರುವೆಯಲ್ಲೊ ಪಾಗಲ್...
'ದಾಗ್' ನ್ನು ಬಳಿದುಬಿಟ್ಟಿದ್ದಾರವರು ನಿನ್ನ ಬದುಕಿಗೆ...
ಅರ್ಥೈಸುವುದಾದರು ಹೇಗೆ? ಈ ಜಗಕೆ, ಪ್ರೀತಿಗೆ
ಕುರುಬಾನಿ ನೀಡಿದ ಕಥೆಯನ್ನು...
ಈ ಇಳಿಸಂಜೆಗಳಲಿ, ನನ್ನ ಹಾಗೆ ಬಂದವಳು ನಿನ್ನ
ಎದೆಬಂಡೆಯನ್ನು ಸವರಿ ಹೋಗುವವಳೇನು? ಪಾಗಲ್...
ಹುಗಿದ ಗೋರಿಯ ಮೇಲೆ, ಹಾಕಲು ಹಿಡಿಮಣ್ಣು...
ಭಾರವಾಗಿತ್ತು!!! ಅವಳ ಕೈಗೆ, ಇನ್ನೂ....ನಿನ್ನ ಮುಟ್ಟುವ
ಸಾಹಸವನ್ನವಳು ಮಾಡುವಳೇನು?
ನೀನು ಹೇಳಿದ ಹಾಗೆಯೆ, ಪೌರ್ಣಮಿ ರಸಿಕನ ಬೆಳಕು
ನಿನ್ನ ಸೋಕದ ಹಾಗೆ ಏನೊ ಮರೆಯಾಗಿಸಿಬಿಟ್ಟೆ ಪಾಗಲ್....
ತಡೆಹಿಡಿಯಲಿ ಹೇಗೆ? ಅವಳ ದೇಹಕ್ಕೆ ಪೋಸಿಕೊಂಡ ಅತ್ತಾರಿನ ಸುವಾಸನೆಯನ್ನು, ಹೊತ್ತು ತರುವ, ಸುಳಿಗಾಳಿಯನ್ನು
ನೋವುಂಡು... ಹನಿ ಕಣ್ಣೀರಿಗೂ ದಿಕ್ಕಿಲ್ಲದೆ ಮಸಣವ
ಸೇರಿ ಹೋದೆನೆಂದು ದುಃಖಿಸದಿರು ಪಾಗಲ್....
ನಿನ್ನೀತಿಹಾಸವ ಕೆತ್ತಿದವನು ನಿನಗಿಂತಲೂ ಹೆಚ್ಚಿಗೆಯೇ..
ನೊಂದುಕೊಂಡಿದ್ದನೆ,
ಬಂಡೆಯನ್ನು ಶಿಲೆಯಾಗಿಸುವ ಭರದಲ್ಲಿ, ಕೈಯೊಳಗೆದ್ದ
ಬೊಬ್ಬೆಗಳಿಂದಲ್ಲ, ಪದಪದವನ್ನು ಕೆತ್ತುವಾಗ....
ಮೋಸಹೋದ ನಿನ್ನ ಪ್ರೀತಿಯ ಪರಿಯನ್ನು ಓದಿ
ನೀನು ಹೇಳಿದ್ದೆ, ಅವಳು ಕೊಟ್ಟುಹೋದ ನವಿಲು ಗರಿಯು
ಇತಿಹಾಸ ಪುಸ್ತಕದಲ್ಲಿ ಮರಿಯನ್ನೇನಾದರು ಹಾಕಿದರೆ
ಹೇಳು ಅಂತ!!!.... ಪಾಗಲ್,
ನವಿಲು ಗರಿಯನ್ನು ಇತಿಹಾಸದ ಪುಸ್ತಕದಲ್ಲಿಯೇ... ಏಕಿಟ್ಟೆಯೊ? ಅಂದು, ನಾನರಿಯೆ...
ಇತಿಹಾಸದ ಪುಟದಲ್ಲಿಂದು, ನೀನು ಸೇರಿ ಹೋದದ್ದು
ಮಾತ್ರ....ಸರಿಯೇ...? ಉತ್ತರಿಸುವರಾರು?