Monday, August 26, 2019

ನಿರ್ಭಾವ ೧

ಈ ರಾತ್ರಿಗೆ, ನಿನ್ನೆಲ್ಲ
ನೆನಪುಗಳು ಮುತ್ತಿಕ್ಕಿ
ಕೊಂದುಬಿಡಲಿ ನನ್ನನು
ಇಂತಹ ನಿದಿರೆ ಬಾರದ
ಅದೇಷ್ಟೊ.... ಕತ್ತಲುಗಳನ್ನು
ಜಯಸಿಯೆನು,
ಹೇಗಿರಲಿ? ನೀನೆ ಹೇಳು...
ನಿನ್ನಂಗಸಂಗವಿಲ್ಲದೆ ಕಳೆಯುವ
ಇರುಳುಗಳು.. ನನ್ನ ಕೊರಳಿಗೆ
ಉರುಳುಗಳಂತಾಗುವುದಿಲ್ಲವೇನು?

No comments:

Post a Comment