Wednesday, October 4, 2023

ಚುಟುಕುಗಳು


ಮಾತು ಮಾತಿಗೂ
ಹೇಳುತ್ತಾಳೆ ನನ್ನಾಕೆ
ನಿಮಗಾಗಿಯೇ ಒಲವಿಂದ
ಮಾಡಿದ್ದು ಎಳ್ಳು ಹೋಳಿಗೆ!!
ಭಯವಾಗುತ್ತಿದೆ ಈ 
ಮಾತನ್ನು ಕೇಳುತ್ತಿದ್ದರೆ...
ಯಾವ ಡಿಮ್ಯಾಂಡನ್ನು
ಇಡುತ್ತಾಳೊ..?
ನಾಳೆಗೆ!!

ಆಕಿ ಅಂದ್ಳು
ಹಬ್ಬ ಐತಿ ಮಾಡ್ಕೋ
ಬೇಕಿತ್ತಿಲ್ಲ ದಾಡಿ...!!
ನೀ ಜೊತಿಗಿಲ್ದಿದ್ರ
ನನಗ್ಯಾರು ಅಂಕಲ್ ಅನ್ನಲ್ಲ
ಕಣೇ... ಅಂದೇ ನೋಡಿ..!!
ಸಂಜೆಗಾಗುವ ಅನಾಹುತವನ್ನು
ನೆನಸಿಕೊಂಡು ನಡಗುತ್ತಿದೆ 
ಸಣ್ಣಗೆ ನನ್ನ ಬಾಡಿ!!

ಹೂವಿನಂಥವಳು....
ಹೂವನ್ನೇ ಬಿಟ್ಟಿಲ್ಲ..!!
ಇನ್ನೂ ನನ್ನೆದೆಯ
ಪಾಡೇನು..?
ರಂಗೀ..
ಸತ್ತು, ಬದುಕಿಸಿ
ಬದುಕಿಸಿ, ಸಾಯಿಸುವ
ಕಲೆ ಇವಳಿಗಿಂತ
ಬೇರಾರಿಗೆ ಕರಗತವಾಗಿದೆ
ಹೇಳು..!!

ಭಾವನೆಗಳನ್ನೆ... ಲೆಕ್ಕಕ್ಕಿಡದವರ
ಮದ್ಯದಲ್ಲಿ ನಾನು
ಪದಗಳನ್ನು ಎಣಿಸಿ
ಜೋಡಿಸುತ್ತಿದ್ದೇನೆ
ರಂಗೀ...
ಬರೆದಿಟ್ಟ ಸಾಲುಗಳ
ಅರ್ಥವನ್ನೆ ಅರಿಯದವರು...
ಮನಸಿನ ಮಾತನ್ನು
ಹೇಗೆ ಅರಿತುಕೊಂಡಾರು?

ಮೋಸ ಮಾಡುವ ಈ
ಜೋಡಿ ಕಣ್ಣುಗಳಿಂದ
ಪದೇ..ಪದೇ...
ನನ್ನನು 
ವಂಚಿಸುತ್ತಿರುವಳಲ್ಲ
ರಂಗೀ...
ಜಾಲಕ್ಕೆ ಸಿಕ್ಕಿಬಿದ್ದು
ಒದ್ದಾಡುವವನ
ನೋವಿನಲ್ಲಿ ಇಲ್ಲಿ
ಯಾರು ಪಾಲನ್ನು
ಬೇಡುವುದಿಲ್ಲ..!!

ಮೊದಲ ಮಧು 
ಬಟ್ಟಲನ್ನು
ಕುಡಿದಷ್ಟು ಕಹಿಯಾಗಿರಲಿಲ್ಲ
ನನ್ನ ಅವಳ
ಮೊದಲ ಭೇಟಿ
ರಂಗೀ....
ನಿನ್ನ ಮದ್ಯದೊಳಗಿನ
ಕಹಿಯೇನು ಕಡಿಮೆಯಾಗಿಲ್ಲ
ಕೊನೆಗಿಲ್ಲಿ ಅವಳೇನು
ಸಿಹಿಯನ್ನು ಉಳಿಸಿ ಹೋಗಿಲ್ಲ

ಹತ್ಯಾಕಾಂಡಗಳಂತಹ
ವಿಷಯಗಳನ್ನೆ ಜಗತ್ತು
ಮರೆತು ಬಿಡುತ್ತದೆ
ರಂಗೀ...
ಮರೆವು ನನ್ನ ಪಾಲಿಗೆ
ಎಷ್ಟೊಂದು ನಿಷ್ಕರುಣಿ 
ಪದೇ...ಪದೇ...ಅವಳ
ನೆನಪುಗಳನ್ನೆ ನೆನಪಿಸುತ್ತದಲ್ಲ!!

ಅಲ್ಲಿ ನಿನ್ನ 
ಕಣ್ಣೀರಿಗೆ ಬರವಿದ್ದರೆ..
ಇಲ್ಲಿ ನನ್ನ
ಮದ್ಯದ ಬಾಟಲಿಗೆ
ಬರ ಬಂದಿದೆ
ನಿಮ್ಮ "ಉಚಿತ" 
ಸೌಲಭ್ಯದ ಬೆಲೆ
ಏರಿಕೆಯಿಂದಾಗಿ 😝


No comments:

Post a Comment