ಈ ಒಂದು ಕವನ ನರಗುಂದ ತಾಲೂಕಿನ, ನರಗುಂದ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ಊರಿಗೆ ಹೊಂದಿಕೊಂಡಿರುವ ಬೆಣ್ಣೆ ಹಳ್ಳದ ಪ್ರವಾಹದ ಕುರಿತಾಗಿದೆ ಅದಕ್ಕೆ ಇದರ ಹೆಸರು "ಮುರುಳಿಯ ಫಾಸ್ಟ ಫುಡ್ ತೀರದಲಿ "
ಮುರುಳಿಯ ಫಾಸ್ಟ್ ಫುಡ್ ತೀರದಲಿ
ಹರಿದು ಹೋಗಿದೆ ಅವರ ಬದುಕು
ಒಳ ಹರಿವು ಹರಿವ ರಭಸಕೆ
ಕೊಚ್ಚಿ ಹೋಗಿವೆ ಮಧುರ ಕ್ಷಣಗಳು
ಮುರುಳಿಯ ಫಾಸ್ಟ್ ಫುಡ್ ತೀರದಲಿ
ನಾರುತಿದೆ ಅವರ ಬದುಕು
ತಂದು ಹಾಕಿದೆ ನೂರೆಂಟು ಹೊಲಸು
ಮುಚ್ಚಿ ಹೋಗಿದೆ ಬದುಕ ಬಂಡಿಯ ಹಾದಿಗಳು
ಮುರುಳಿಯ ಫಾಸ್ಟ್ ಫುಡ್ ತೀರದಲಿ
ಮೂಗು ಮುಚ್ಚಿ, ಕಣ್ಣು ಕಿರಿದು ಮಾಡಿ
ಹೆಜ್ಜೆ ಮೇಲೊಂದು ಹೆಜ್ಜೆಯಿಡುವವರೆ ಹೆಚ್ಚು
ಕೆನ್ನೆಗೆ ಮೆತ್ತಿದ ಕಣ್ಣಿರಿನ ಮುತ್ತನು
ಒರೆಸುವವರೆ ಇಲ್ಲವಿಲ್ಲಿ
ಮುರುಳಿಯ ಫಾಸ್ಟ್ ಫುಡ್ ತೀರದಲಿ
ತಗಡಿನ ಬಂಕುಗಳೇ ಅವರ ಅರಮನೆ,
ಅಡಿಗೆಮನೆ, ಬಚ್ಚಲು ಮನೆ
ಮಗು ಹೆತ್ತ ಹಸಿ ಮೈ ಬಾಣಂತಿಯ ಮನೆ
ನಮ್ಮ ಮುರುಳಿಯ ಫಾಸ್ಟ್ ಫುಡ್ ತೀರದಲಿ
ಹಸಿದಿಹ ಹೊಟ್ಟೆಗೆ ಅನ್ನವನಿಕ್ಕದೆ
ಅಯ್ಯೋ ಪಾಪವೆಂದರೆ ಹಸಿವು ಇಂಗುವುದೇ
ಹಸಿವಿನ ಕಾವು ತಾಕುತಿದೆ ಮುರುಳಿಯ ತೀರದಲಿ
ನೀರ ಮದ್ಯ ನಿಂತವರಿಗೆ ಬೇಕಿದೆ ನಮ್ಮದೊಂದು ಬಾಹು
ಇದಾಗದಿದ್ದರೆ ಒಂದು ಕಿರು ಬೆರಳನ್ನಾದರೂ ನೀಡಿ
ಮುಳುಗದೆ ನಿಂತಿರಲಿ ಕೊಳೆತ ಶವದ ನೀರಿನಲಿ
ಈ ಮುರುಳಿಯ ಫಾಸ್ಟ್ ಫುಡ್ ಹಳ್ಳದ ಬಿರುಸಿಗೆ,
ನೊಂದವರ ಬಾಳಿಗೆ ಸೀರೆ ಕದ್ದ ಕಳ್ಳನೆ ದಾರಿದೀಪವಾಗಬಲ್ಲನೆ ?
ಮುರುಳಿಯ ಫಾಸ್ಟ್ ಫುಡ್ ತೀರದಲಿ
ಹರಿದು ಹೋಗಿದೆ ಅವರ ಬದುಕು
ಒಳ ಹರಿವು ಹರಿವ ರಭಸಕೆ
ಕೊಚ್ಚಿ ಹೋಗಿವೆ ಮಧುರ ಕ್ಷಣಗಳು
ಮುರುಳಿಯ ಫಾಸ್ಟ್ ಫುಡ್ ತೀರದಲಿ
ನಾರುತಿದೆ ಅವರ ಬದುಕು
ತಂದು ಹಾಕಿದೆ ನೂರೆಂಟು ಹೊಲಸು
ಮುಚ್ಚಿ ಹೋಗಿದೆ ಬದುಕ ಬಂಡಿಯ ಹಾದಿಗಳು
ಮುರುಳಿಯ ಫಾಸ್ಟ್ ಫುಡ್ ತೀರದಲಿ
ಮೂಗು ಮುಚ್ಚಿ, ಕಣ್ಣು ಕಿರಿದು ಮಾಡಿ
ಹೆಜ್ಜೆ ಮೇಲೊಂದು ಹೆಜ್ಜೆಯಿಡುವವರೆ ಹೆಚ್ಚು
ಕೆನ್ನೆಗೆ ಮೆತ್ತಿದ ಕಣ್ಣಿರಿನ ಮುತ್ತನು
ಒರೆಸುವವರೆ ಇಲ್ಲವಿಲ್ಲಿ
ಮುರುಳಿಯ ಫಾಸ್ಟ್ ಫುಡ್ ತೀರದಲಿ
ತಗಡಿನ ಬಂಕುಗಳೇ ಅವರ ಅರಮನೆ,
ಅಡಿಗೆಮನೆ, ಬಚ್ಚಲು ಮನೆ
ಮಗು ಹೆತ್ತ ಹಸಿ ಮೈ ಬಾಣಂತಿಯ ಮನೆ
ನಮ್ಮ ಮುರುಳಿಯ ಫಾಸ್ಟ್ ಫುಡ್ ತೀರದಲಿ
ಹಸಿದಿಹ ಹೊಟ್ಟೆಗೆ ಅನ್ನವನಿಕ್ಕದೆ
ಅಯ್ಯೋ ಪಾಪವೆಂದರೆ ಹಸಿವು ಇಂಗುವುದೇ
ಹಸಿವಿನ ಕಾವು ತಾಕುತಿದೆ ಮುರುಳಿಯ ತೀರದಲಿ
ನೀರ ಮದ್ಯ ನಿಂತವರಿಗೆ ಬೇಕಿದೆ ನಮ್ಮದೊಂದು ಬಾಹು
ಇದಾಗದಿದ್ದರೆ ಒಂದು ಕಿರು ಬೆರಳನ್ನಾದರೂ ನೀಡಿ
ಮುಳುಗದೆ ನಿಂತಿರಲಿ ಕೊಳೆತ ಶವದ ನೀರಿನಲಿ
ಈ ಮುರುಳಿಯ ಫಾಸ್ಟ್ ಫುಡ್ ಹಳ್ಳದ ಬಿರುಸಿಗೆ,
ನೊಂದವರ ಬಾಳಿಗೆ ಸೀರೆ ಕದ್ದ ಕಳ್ಳನೆ ದಾರಿದೀಪವಾಗಬಲ್ಲನೆ ?
No comments:
Post a Comment