ಈ ಕವನ ಓದುವ ಮೊದಲು ನಿಮಗೆ ಒಂದು ಸ್ವಾರಸ್ಯಕರವಾದಂತಹ ಸಂಗತಿಯನ್ನು ತಿಳಿಯಬಯಸುತ್ತೇನೆ ಅದೇನೆಂದರೆ, ನಮ್ಮೂರೋಳಗಿರುವ, ಈ ಕವನದಲ್ಲಿ ಬರುವ ನಿರಂತರ ವೇದಿಕೆಯು ನಿರಂತರವಾಗಿರದೆ ನಿಂತ ನೀರಾಗಿರುವುದು ಅದರ ಕಾರ್ಯದ ಬಗ್ಗೆ ಇಲ್ಲಿ ಕವನದ ಮುಖಾಂತರ ವಿವರಿಸಿದ್ದೇನೆ
ನಿರಂತರ ವೇದಿಕೆ
ನಮ್ಮದೊಂದು ವೇದಿಕೆ
ಅದರ ಹೆಸರು
ನಿರಂತರ ವೇದಿಕೆ
ಸಧ್ಯಕ್ಕೆ ಇದು
ಹೋದಿಕೆ ಹೊದ್ದು
ಮಲಗಿದೆ
ನಾ ಕಂಡಂತೆ .........
ಇದರ ನಿದ್ದೆ ಕುಂಬಕರ್ಣನಿಗಿಂತಲೂ
ಒಂದು ಕೈ ಮೇಲೆಯೆ
ಇವನದು ಆರು ವಸಂತಗಳ ನಿದ್ದೆ
ಇದರದು ಒಂದು ಸಂವತ್ಸರದ ನಿದ್ದೆ
ಏನಾಗಿದೆ............
ಧೂಳು ಮೈ ತುಂಬಿದೆ
ಗೆದ್ದಲು ಮನೆ ಮಾಡಿದೆ
ಜೇಡ ಬಲೆ ಕಟ್ಟಿದೆ
ಇಲಿ ಹೋದಿಕೆಗೆ ರಂದ್ರ ಹಾಕಿದೆ
ಮತ್ತೆ ..........
ಹೊದಿಕೆ ಕಿತ್ತು
ಧೂಳು ಕೊಡವಿ
ಇದನೆಬ್ಬಿಸಲು ಅವರೇ
ಬರಬೇಕು
ಯಾರವರು ................?.
ಹೆಗ್ಗೊಡಿನ ಕುಶಲಿಗರು
ನಿನಾಸಂಘದ ಕಲಿಗಳು
ಕಲಾದೇವಿಯ ಆರಾಧಕರು
ನಂತರ .................
ಕುಣಿಯುವರಾರೊ
ಮೆರೆಯುವರಾರೋ
ನಗುವರಾರೋ
ಮೊದಲಿಸುವರಾರೋ
ಹೂಂ............
ಮತ್ತದೆ ವೇದಿಕೆ
ನಿರಂತರ ವೇದಿಕೆ
ಅದೇ ಹೊದಿಕೆ
ಹೊದ್ದು ಮಲಗಿದೆ
ನಿರಂತರ ವೇದಿಕೆ
ನಮ್ಮದೊಂದು ವೇದಿಕೆ
ಅದರ ಹೆಸರು
ನಿರಂತರ ವೇದಿಕೆ
ಸಧ್ಯಕ್ಕೆ ಇದು
ಹೋದಿಕೆ ಹೊದ್ದು
ಮಲಗಿದೆ
ನಾ ಕಂಡಂತೆ .........
ಇದರ ನಿದ್ದೆ ಕುಂಬಕರ್ಣನಿಗಿಂತಲೂ
ಒಂದು ಕೈ ಮೇಲೆಯೆ
ಇವನದು ಆರು ವಸಂತಗಳ ನಿದ್ದೆ
ಇದರದು ಒಂದು ಸಂವತ್ಸರದ ನಿದ್ದೆ
ಏನಾಗಿದೆ............
ಧೂಳು ಮೈ ತುಂಬಿದೆ
ಗೆದ್ದಲು ಮನೆ ಮಾಡಿದೆ
ಜೇಡ ಬಲೆ ಕಟ್ಟಿದೆ
ಇಲಿ ಹೋದಿಕೆಗೆ ರಂದ್ರ ಹಾಕಿದೆ
ಮತ್ತೆ ..........
ಹೊದಿಕೆ ಕಿತ್ತು
ಧೂಳು ಕೊಡವಿ
ಇದನೆಬ್ಬಿಸಲು ಅವರೇ
ಬರಬೇಕು
ಯಾರವರು ................?.
ಹೆಗ್ಗೊಡಿನ ಕುಶಲಿಗರು
ನಿನಾಸಂಘದ ಕಲಿಗಳು
ಕಲಾದೇವಿಯ ಆರಾಧಕರು
ನಂತರ .................
ಕುಣಿಯುವರಾರೊ
ಮೆರೆಯುವರಾರೋ
ನಗುವರಾರೋ
ಮೊದಲಿಸುವರಾರೋ
ಹೂಂ............
ಮತ್ತದೆ ವೇದಿಕೆ
ನಿರಂತರ ವೇದಿಕೆ
ಅದೇ ಹೊದಿಕೆ
ಹೊದ್ದು ಮಲಗಿದೆ
No comments:
Post a Comment