ನಿನ್ನ ಮಧುಬಟ್ಟಲಿನ
ಲೆಕ್ಕವನ್ನೇನೊ...
ನಾನೀಗಲೆ ಚುಕ್ತಾ
ಮಾಡಿ ಬಿಡಬಲ್ಲೆ...
ಸಾಕಿ
ನನ್ನ ನೋವಿನ
ದಿನಗಳಿಗೆ
ಸುಂಕವನ್ನು
ತುಂಬಲು...
ಯಾರಾದರೂ
ಇರುವರೇನು?
Monday, January 28, 2019
ಶಾಯರಿ ೭೦೬
ಶಾಯರಿ ೭೨೬
ಮೋಸ ಮಾಡಿ
ಹೋದವಳು
ನಗುತ್ತಲೆ
ಇರುವಳು
ಸಾಕಿ
ನೋವಿಗೆ,
ಮದ್ದಿನ....
ಮದ್ಯವನ್ನು
ಕುಡಿಯುತ್ತಿರುವುದು
ಮಾತ್ರ ನಾನು.
ಶಾಯರಿ ೭೪೫
ಮನಸ್ಸನ್ನೇ...
ಮಾರಿಕೊಂಡು
ಬಂದವನು ನಾನು
ಸಾಕಿ...
ಕೊನೆಯವರೆಗೂ..
ನಿನ್ನರಮನೆಯಲ್ಲಿಯೆ
ಇರುವೆನೆಂಬ, ಭಾಷೆಯನ್ನು
ನಾನು ನೀಡಲಾರೆ.
ಶಾಯರಿ ೫೭೮
ಹರಿವ ಝರಿಯ
ಜುಳು...ಜುಳುವಿಗೆ
ಎಷ್ಟೆಂದು.. ಕೆಸರನ್ನು
ಮೆತ್ತುವರು ಸಾಕಿ...
ಹರಿಯುವ ನೀರದು
ತಿಳಿಯಾಗುತ್ತಲೆ...
ಹರಿವುದು.
ನಿಂತ ಕೆಸರ ಕೊಳದಲ್ಲಿ
ಎಷ್ಟೆಂದು ಪನ್ನೀರನ್ನು
ಸುರಿಯುವೆ...ಸಾಕಿ
ಬೆರೆತ ಕೆಸರು
ದ್ವಿಗುಣವಾಗುವುದಲ್ಲದೆ,
ತಿಳಿಯೆಂದು ಆಗದು.
Sunday, January 27, 2019
ಚುಟುಕು ೫೭೬
ನಿನ್ನ ಚಿಗುರು
ಮೀಸೆಯ ನಗುವಿಗೆ
ಸೋತು ಹೋಗಿದೆ
ಮನಸು...
ರಪ್ಪೆಗಳೆರಡು
ಅಪ್ಪಿಕೊಳ್ಳುತ್ತಲೆ...
ಇಲ್ಲ, ನಲ್ಲ
ಬರಿ ನಿನ್ನದೆ
ಕನಸು..
Saturday, January 26, 2019
ಶಾಯರಿ ೫೪೧
ನಿ ಕೊಟ್ಟ
ಮಧು ಬಟ್ಟಲಿಗೆ
ಹಣವನ್ನು
ಕೊಡುವವರಾರೀಗ
ಸಾಕಿ...
ನನ್ನ ಜೇಬಿನಲ್ಲಿ
ಉಳಿದಿರುವುದು
ರಂಗೀಯ
ವಿರಹವೊಂದೆ
ಬಾಕಿ..
Friday, January 25, 2019
ಶಾಯರಿ ೫೪೨
ಬೇಡವೆಂದಾಗಲೆಲ್ಲ...
ಮತ್ತೆ...ಮತ್ತೆ...
ರಂಗೀಯ ಮಾತುಗಳೆ
ನೆನಪಾಗುತ್ತವಲ್ಲ
ಸಾಕಿ...
ಬೇಕು...ಬೇಕೆಂದಾಗಲೆಲ್ಲ
ಬರೀ...ನೋವಿನ
ಪುಟಗಳೆ ನೆನಪಾಗುವವಲ್ಲ!!
ಎದೆಯನ್ನೆ ಕಲಕಿ
ಚುಟುಕು ೭೬೭
ಹುಡುಗಿ ಮಾತ
ಅದಾವು ಬಲು ಚೂಟಿ
ನೋಡಾಕದಾಳ
ಭಾಳ ಘಾಟಿ
ಹುಷಾರ್ಲೆ ತಮ್ಮಾ..
ಕೈಯ್ಯಾಗ ಹಿಡ್ಕೊಂಡಾಳ ಆಕಿ
ಪೋಲಿಸ್ ಲಾಠಿ
ಶಾಯರಿ ೫೨೯
ಸನಿಹ ದೂರದ
ಮಾತೆಕೀಗ.
ಬಿಟ್ಟುಬಿಡು
ಸಾಕಿ...
ಸಹನೆ ಮೀರಿ...
ಒಡೆದ
ಕನ್ನಡಿಯಲ್ಲಿ
ಮತ್ತೆ...
ಮುಖವನ್ನೊಮ್ಮೆ
ನೋಡಿಕೊಳ್ಳಲಾದೀತೆ
ಶಾಯರಿ ಇ ೫೨೫
ಮತ್ತೇರಿಸುವೆನೆಂಬ,
ಸುಳ್ಳು ಭರವಸೆಯಲ್ಲಾದರೂ
ಮದ್ಯವನ್ನು ಸುರಿದುಬಿಡು
ಸಾಕಿ...
ಕುಡಿದು ಮರೆತು
ಬಿಡುವೆನೆಂಬ
ಭ್ರಮೆಯಲ್ಲಾದರೂ...
ನಾನಿಂದು
ಮಲಗಿಬಿಡುವೆ.
ಶಾಯರಿ ೫೨೩
ಬದುಕಿನ
ಪುಟಗಳನ್ನು ತಿರುತಿರುವಿ
ನೋಡಲು...
ನಾನೇನು ಇತಿಹಾಸವನ್ನು
ಸೃಷ್ಟಿಸಿಲ್ಲ
ಸಾಕಿ...
ಪರಾಮರ್ಶಿಸಲು
ಇನ್ನೇನಿದೆ...
ವಿಮರ್ಶೆಯ
ತಕ್ಕಡಿಯಲ್ಲಿ
ಬಾಳನ್ನೆ ಕಟ್ಟಿಟ್ಟು
ಬಿಟ್ಟಿರುವಾಗ
ಶಾಯರಿ ಇ ೫೧೯
ಬೆಲ್ಲವ ನೀಡಲು
ಅವಳಿಲ್ಲಿ...
ಈಗಿಲ್ಲವಲ್ಲ..!!!
ಸಾಕಿ...
ಹೋಗಲಿ ಬಿಡು
ಬಟ್ಟಲಿಗೆ ಮಧುವನ್ನು
ಸುರಿಯಲು
ನೀನಾದರು ಇರುವೆಯಲ್ಲ
ಶಾಯರಿ ೫೧೮
ಶಾಂತಿಯ
ಹಿಂದೆಯೇ... ಹೋದವನು
ಸಿಗಲಾರದೆ, ನಿನ್ನರಮನೆಗೆ
ಬಂದಿರುವೆನಿಂದು
ಸಾಕಿ...
ಸುರಿದುಬಿಡು
ಬಡವನೆದೆಗೆ
ಹನಿ...ಹನಿಯಾಗಿಯಾದರೂ
ಮದ್ಯವನು.
ಚೂರಾದರು ಸಿಗಲಿ
ಮನಃಶಾಂತಿ.
ತಮ್ಮಾ
ಶ್ಯಾಣೆರು....ಶ್ಯಾಣೆರು.....ಅನ್ಕೊಂಡು..ಮಂದಿ ಮನಿ
ಅಂಗ್ಳ ತುಂಬಾ ಚೆಂದಾನ...ರಂಗೋಲಿ ಹಾಕ್ಕೊಂತ
ಅಡ್ಡ್ಯಾಡ್ತಾರೊ ತಮ್ಮಾ...
ಅವ್ರ ಮನಿ ದ್ಯಾವ್ರ ಕೋಣಿ ತುಂಬ.. ಜೇಡ
ಬಲಿ ಹೆಣ್ದ ಕುಂತೈತಿ.. ಅದನ್ನ ಸ್ವಚ್ಛ ಮಾಡ್ಕೊಳ್ಳೊ
ಪುರಸೊತ್ತ, ಅವ್ರಿಗಿಲ್ದಂಗಾಗೈತಿ ನೋಡ್ತಿಮ್ಮ..
ಬಿರ್ದು ಬಾವ್ಲಿಗಳ್ನ ಕಾಡಿಬೇಡಿ ಇಸ್ಕೊಂಡ
ಬರೋದು ಏನ್ ದೊಡ್ಡಸ್ತನಾನೊ ತಮ್ಮಾ...
ತಲ್ಯಾಗ ನಾಕಕ್ಷರ ಇಲ್ದಿದ್ರ... ಅರೆಬರೆ ನೀರ್
ತುಂಬಿದ ತಾಮ್ರದ ಕೊಡ್ದಂಗ ಬರೀ..
ಬಡಾಯಿ ಕೊಚ್ಗೊಳ್ಳೊದ ಆಗ್ತೈತಲ್ಲೊ ತಿಮ್ಮ...
ಎಷ್ಟೇಷ್ಟೊ ಮುಖವಾಡನ ಹಾಕಿ..ಸಾಕಷ್ಟು
ಮಂದಿನ ಮೋಸ ಮಾಡಿವಂತಂದು ಬೀಗಾಕ
ಹತ್ತ್ಯಾರು ನೋಡ್ತಮ್ಮ
ಇಲ್ಲಿ ತಿಳ್ಕೊ...
ಹತ್ತ್ ತಲಿ ಹೊತ್ಗೊಂಡಿದ್ದ ರಾವಣನ್ನ
ಕೊಂದದ್ದ.. ಒಂದ ತಲಿ ರಾಮ್ನಾನೊ ತಿಮ್ಮ
ಲೆಕ್ಕಿಲ್ದಷ್ಟ...ಮಂದಿ ಮನಿ ಉಣ್ಣೊ ಅಡಿಗ್ಯಾಗ,
ಉಪ್ಪು ಸುರ್ಕೊಂತ ಅಡ್ಡಾಡಿಕೊಂಡ ಬರ್ಬೊದು
ಏನ್ ತಮ್ಮಾ...
ಒಂದು ಕೇಳು..
ಉಪ್ಪ ತಿಂದಾವ ಕಡಿಗೊಮ್ಮೆ...ನೀರ್ ಕುಡಿಲೆಬೇಕು ಅನ್ನೊದನ್ನ...ಮರ್ತ ಕುಂದ್ರಬ್ಯಾಡೊ ತಿಮ್ಮ...
ಹೀರೇರು ಹೇಳ್ಯಾರು.. ನಂಬ್ಕಿ ಅನ್ನೋದು...
ಕೋಳಿ ಮೊಟ್ಟಿದ್ಹಂಗ ಕಾಯ್ಕೊಂಡಿರಬೇಕ,
ಒಡ್ದಮ್ಯಾಲ ಗೊತ್ತಾಗೋದ ಒಳ್ಗೀನ ಬಣ್ಣ ಏನ್ತಮ್ಮಾ..
ಪ್ರೀತಿ ಬುತ್ತಿ ಹೊತ್ಗೊಂಡು ಊರೂರು ಅಡ್ಡಾಡಿ
ಹಂಚ್ಗೊಂಡ ಬರ್ಬೇಕ...ಕಿತ್ತಾಡ್ಗೊಂಡ ಅಲ್ಲ...
ಹಂಚಿದ ಮ್ಯಾಲ, ಯಾರ್ದರ ಬುತ್ತಿ ಖಾಲಿಯಾಗಿತ್ತಂದ್ರ ನಂಗ್ಬಂದ ಹೇಳೊ ತಿಮ್ಮ..
Sunday, January 20, 2019
ಶಾಯರಿ ಇ ೫೧೪
ಹೇಳಿಕೊಳ್ಳಲು
ಅದೇಷ್ಟೊ...
ನೋವುಗಳಿವೆ
ನನ್ನೆದೆಯಲ್ಲಿ.....
ಸಾಕಿ.
ಕೇಳಿಸಿಕೊಳ್ಳುವ
ಮನಗಳೆ
ಇಲ್ಲವಲ್ಲ
ನಿನ್ನರಮನೆಯಲ್ಲಿ
ಶಾಯರಿ ೫೧೩
ಬೆಂಕಿಯಿಡಲೆಂದೆ
ರಂಗೀಯು ಬರುವುದಾದರೆ...
ಮುಡಿಗೆ ಮಲ್ಲಿಗೆಯನ್ನೇ...
ಮುಡಿದುಕೊಂಡು ಬರಲು
ಹೇಳು ಸಾಕಿ...
ಖಬರಸ್ತಾನದ ತುಂಬೆಲ್ಲ
ಅರೆಬೆಂದ....
ಎದೆಗಳ ವಾಸನೆಯೆ
ತುಂಬಿಕೊಂಡಿದೆಯಿಲ್ಲಿ.
ಶಾಯರಿ ಇ ೫೧೨
ಪ್ರೀತಿಸುವ
ಕೆಲಸವನ್ನೂ...
ಕಳೆದುಕೊಂಡು
ಬಂದಿರುವೆ
ಸಾಕಿ...
ಕುಡಿಯುವದನ್ನಾದರೂ
ಕಲಿಸಿಕೊಡು...
ನಿನ್ನರಮನೆಯನ್ನು
ಬಿಟ್ಟು ಹೋದರೆ
ಕೇಳು, ನೀನಾಗ
ಶಾಯರಿ ಇ ೫೧೧
ಹೂವ ತರಲೆಂದೆ
ಮಾರುಕಟ್ಟೆಗೆ
ಹೋಗಿದ್ದೆ....
ಅವಳ ನೆನಪಾಯಿತು,
ಬಿಟ್ಟು ಬಂದುಬಿಟ್ಟೆ
ಸಾಕಿ...
ಮದ್ಯದ ಬಟ್ಟಲನ್ನು
ಕೈಗೆತ್ತಿಕೊಂಡಾಗಲೂ...
ಮತ್ತೆ ರಂಗೀಯೇ...
ನೆನಪಾದಳು...
ಈ ಸಲ........
ಬಟ್ಟಲನ್ನು ಮಾತ್ರ
ಕೈ ಬಿಡಲಿಲ್ಲ.
ಶಾಯರಿ ೫೧೦
ಹುಗಿದ ಗೋರಿಯ
ಮೇಲೊಂದು...
ಗೆದ್ದಲುಗಳು
ಹುತ್ತವನ್ನು ಕಟ್ಟಿವೆ
ಸಾಕಿ...
ಹಾಲಾಹಲ ಕಕ್ಕುವ
ಹಾವೊಂದು ಬಂದು
ಸೇರುವ ಮುನ್ನ...
ಹಾಲನ್ನಾದರು
ಸುರಿದು ಹೋಗೆಂದು
ಹೇಳಿಬಿಡು ನೀ....
ರಂಗೀಗೆ
ಶಾಯರಿ ಇ ೫೦೯
ಮೊನ್ನೆ ಸುರಿದ....
ಮಾಗಿ ಚಳಿಯ
ಇಬ್ಬನಿ
ನನ್ನ ಗೋರಿ ಮೇಲಿನ
ಮಣ್ಣನ್ನು
ತಂಪಗಾಗಿಸಿತ್ತು
ಸಾಕಿ...
ಪಕ್ಕದಲಿ ಅವಳೆ
ಕುಳಿತು..
ಇಂಪಾಗಿ ಹಾಡು
ಹೇಳಿದಂತಾಗಿತ್ತು...
Saturday, January 19, 2019
ಶಾಯರಿ ೫೦೮
ಜೇಬಿನ ತುಂಬಾ
ದುಡ್ಡಿದ್ದರೂ...
ರಂಗೀಯ ಒಲವನ್ನು
ಪಡೆಯಲಾಗಲಿಲ್ಲ!!
ಸಾಕಿ....
ಹೂಜಿಯ ತುಂಬಾ
ಮದ್ಯವೆ ತುಂಬಿದ್ದರೂ...
ಅವಳ ನೆನಪುಗಳನ್ನು
ಮರೆಯಲಾಗಲಿಲ್ಲ !!!
ಶಾಯರಿ ಇ ೫೦೭
ಇಲ್ಲಿಗೆ ಬರದವಳು...
ಮಸಣಕ್ಕೆ
ಬರುವಳೇನು?
ಸಾಕಿ...
ಬರುವುದಾದರೆ...
ಹುಗಿಯಬೇಡ
ನನ್ನನಿಂದು....
ಸುಟ್ಟುಬಿಡು
ಶಾಯರಿ ೫೦೩
ನಾನು ಸೋತು
ರಂಗೀಯ ಮನಸ್ಸನ್ನು
ಗೆದ್ದುಕೊಂಡಿದ್ದೇ...ಅಂತಾ
ಅಂದುಕೊಂಡಿದ್ದೆ
ಸಾಕಿ...
ಸೋಲುವ ನಾಟಕ
ಮಾಡಿ, ನನ್ನ ಕನಸಿನರಮನೆಗೆ
ಬೆಂಕಿಯನ್ನೆ ಇಟ್ಟು
ಹೋದಳಲ್ಲಾಕಿ
ಶಾಯರಿ ಇ ೫೦೬
ಚಾದರವ ಹೊದ್ದು
ಹಾದರವ ಮಾಡುವ
ಮನಸ್ಸು... ನನ್ನದಲ್ಲ
ಸಾಕಿ...
ಆರಾಧಕನನ್ನೆ...
ಅನಾಧರಿಸಿ ಹೊರಟು
ಹೋದಳಲ್ಲ!!!
ಬದುಕುವುದಕ್ಕೆ
ಇನ್ನೇನುಳಿದಿದೆ
ಬಾಕಿ
ಶಾಯರಿ ಇ ೫೦೫
ನನ್ನೆದೆಯಂಗಳವನ್ನೇ...
ರಂಗೀಯ
ಓಡಾಟಕ್ಕೆಂದು
ಮೀಸಲಿಟ್ಟಿದ್ದೆ
ಸಾಕಿ....
ನನಗರಿವಾಗಲೆ
ಇಲ್ಲ...
ಮೈದಾನವನ್ನು
ಅವಳು
ಖಬರಸ್ತಾನಕ್ಕೆ
ಮಾರಿ ಹೋದದ್ದು..
Thursday, January 17, 2019
ಶಾಯರಿ ಇ ೫೦೪
ಹೊತ್ತು ಹೊತ್ತಿಗೂ
ಬೆಚ್ಚಗಿರಿಸುವ...
ನಿನ್ನ ಮದ್ಯಕ್ಕೊಂದು
ಸಲಾಮ್
ಹೇಳಿಬಿಡಲೆ
ಸಾಕಿ...
ರಂಗೀಯ ನಗುವಿಗಿಂತಲೂ
ಹೆಚ್ಚು....ನಶೆಯನೇರಿಸುವ
ನಿನ್ನ ಕೆಂದುಟಿಗಳಿಗೆ
ಗುಲಾಮನಾಗಿಬಿಡಲೆ..
ನಾನಿಂದು
ಶಾಯರಿ ೫೦೨
ಮಾಗಿಯ
ಚಳಿಯೇನೊ....
ಮುಗಿಯಿತು.
ರಂಗೀಯ ನೆನಪುಗಳ
ಚಳಿಯಿನ್ನೂ....
ಬಿಟ್ಟಿಲ್ಲ !!!
ಸಾಕಿ...
ಹರಿದು ಹೋಗಿವೆ
ಅದೇಷ್ಟೊ
ಕಂಬಳಿಗಳು...
ಹೊದಿಯುವುದನ್ನು
ನಾನೀನ್ನೂ....
ಬಿಟ್ಟಿಲ್ಲ
Wednesday, January 16, 2019
ಶಾಯರಿ ಇ ೫೦೧
ರಂಗೀಯನ್ನು
ಮರೆತುಬಿಟ್ಟರೆ...!!!!
ನಿನ್ನ ಮದ್ಯದ
ಗತಿಯೇನು?
ಸಾಕಿ....
ಅವಳಿಲ್ಲದ ಬಾಳಲ್ಲಿ
ನಶೆಯೂ...
ಇಲ್ಲವಾದರೇ...
ಈ ಸಂಜೆಗಳಿಗೆ
ಉಳಿಯುವುದಾದರು
ಇನ್ನೇನು?
Monday, January 14, 2019
ಶಾಯರಿ ೫೧೬
ಬೆನ್ನೇರಿದ
ಬೇತಾಳದಂತೆ
ಬೆಂಬಿಡದೆ...
ಕಾಡುತಿರುವವಳ
ನೆನಪುಗಳ ಮಾತು
ಒತ್ತೊಟ್ಟಿಗಿರಲಿ...
ಸಾಕಿ....
ನೆಮ್ಮದಿಯಾಗಿ
ಮಲಗಲು...ಹೂಜಿ
ಹೂಜಿಗಳ ಮದ್ಯವನ್ನೇ...
ಕುಡಿದರು, ಮಲಗಲು
ಬಿಡದಂತೆ ಕಾಡುವವಳ
ಕನಸುಗಳ ಕಾಟವನ್ನು
ಯಾರಲ್ಲಿ ಹೇಳಿಕೊಳ್ಳಲಿ.
ಶಾಯರಿ ೫೧೭
ಬಿರಿದ ಹಿಂಬಡಿಗಳಿಗೆ
ಮದ್ದನ್ನು ಸವರಿಯಾದರೂ...
ಗಾಯವನ್ನು ವಾಸಿ
ಮಾಡಿಕೊಳ್ಳಬಹುದು
ಸಾಕಿ...
ಗುಣಪಡಿಸಿಕೊಳ್ಳಬಹುದೆ?
ಮತ್ತೇ.....
ಒಡೆದು ಹೋದ
ಎದೆಯನ್ನು ಜೋಡಿಸಿ..
ಎದ್ದೇಳುವುದಾದರು ಯಾವಾಗ?
ಏಳಿ...ಏದ್ದೇಳಿ ಎಂಬ ವಿದ್ಯುತ್ ಸಂಚಾರದ
ವಾಣಿಗೆ..ಎದ್ದವರೇಷ್ಟೊ? ಬಿದ್ದವರೇಷ್ಟೊ?
ಎದ್ದು ಬಿದ್ದು ಓಡಿದವರೇಷ್ಟೊ?ಲೆಕ್ಕವನಿಟ್ಟವರಾರು?
ಕೇಳಿಯೂ...ಕೇಳದ ಹಾಗೆ ಮಲಗಿಕೊಂಡವರನ್ನು
ಎಬ್ಬಿಸುವವರಾದರು ಯಾರು ?
ಮಣ್ಣನುಳಿಸಿಕೊಳ್ಳಲು ಎದೆಗೆ ಗುಂಡು ತಿಂದು
ಮಣ್ಣು ಸೇರಿದವವರ ನೆನೆಯುವುದಾದರೂ ಎಂದು?
ಒಂದು ಹಾರ, ಒಂದು ಕಾಯಿ, ಮೂಗು ಮುಚ್ಚಿಕೊಳ್ಳುವಷ್ಟು
ಗಬ್ಬು ನಾರುವ, ಒಂದೈದು ಊದು ಬತ್ತಿಯನ್ನು
ಹಚ್ಚಿಟ್ಟು ಬಿಟ್ಟರೆ, ಸಾಕಾಯಿತಲ್ಲವೆ ?
ಅವರ ತ್ಯಾಗ ಬಲಿದಾನಗಳ ನೆನೆಯುವಷ್ಟು ವ್ಯವಧಾನವು
ನಮಗಿಲ್ಲದಿರುವಾಗ
'ಹಿಂದೂ' ಎಂದೂ ಗಟ್ಟಿಯಾಗಿ ಕೂಗಿ..ಕೂಗಿ..
ಸಾರಿ...ಸಾರಿ ಬಂದೆ ಸಾಗರದಾಚೆ ನರೇಂದ್ರ.
'ಹಿಂದೂ' ಎಂದು ಮೇಲುಧ್ವನಿಯಲ್ಲಿಯೆ ಕೂಗಿಕೊಳ್ಳಲು
ಹಿಂದು ಮುಂದು ನೋಡಿಕೊಳ್ಳಬೇಕಿದೆಯಿಂದು
ನಮ್ಮದೆ ನೆಲದಲ್ಲಿ...ದುರದೃಷ್ಟಕರ ? ಅಲ್ಲ...ಅಲ್ಲ..
ಉರಿವ ದೀಪದ ಕೆಳಗೆ ಯಾವಾಗಲೂ ಕತ್ತಲಿರುವುದಲ್ಲವೆ
ಎಂಬ ಜಾಣ ಉತ್ತರದ ಸಮಂಜಸ.
ಹೀಗಿರುವಾಗ ಸಹೋದರ ಸಹೋದರಿಯರೆ ಎಂಬ
ಮಾತಿಗ ಗಗನ ಕುಸುಮ.
ಈಗೀಗ ಎಲ್ಲರಿಗೂ ಮಲಗುವ ಹುಚ್ಚು ಖಯಾಲಿ
ಜೋರಾಗಿಯೆ ಬಡಿದುಕೊಂಡುಬಿಟ್ಟಿದೆ, ಇವರಿಗೀಗ
ನಿನ್ನ ಕೂಗು ಕೇಳದು ನರೇಂದ್ರ...ಅವರೇಳುವುದು
ಹಾಲಿನವನ ಕೂಗಿಗೆ, ವಿದ್ಯುತ್ ಬಿಲ್ ವಸೂಲಿದಾರನಿಗೆ,
ಡಿ.ಟಿ.ಎಚ್.ಆಪರೇಟರ್ ನಿಗೆ, ಮನೆಪಟ್ಟಿಯ ಕರವ ಕಟ್ಟಿಸಿಕೊಳ್ಳಲು ಬರುವ ಮುನ್ಸಿಪಲ್ ನೌಕರನಿಗೆ, ರಾತ್ರೊ
ರಾತ್ರಿ ಹಣವನ್ನೆಲ್ಲ ಗುಡಿಸಿ ಗುಂಡಾಂತರಿಸಿಕೊಂಡ್ಹೋಗುವ
ಕತ್ತರಿ ಕಂಪನಿಗಳ ಛೇಲಾಗಳಿಗೆ... ಇವರೆಲ್ಲರನ್ನು ಬಿಟ್ಟು
ಅಬ್ಬಬ್ಬಾ ಎಂದರೆ ಐದು ವರ್ಷಕ್ಕೊಮ್ಮೆ ಮತ ಯಾಚಿಸಲು
ಬರುವ ಖಾದಿ ಮಂದಿಗಳ ಕೂಗಿಗೆ
ಮಲಗಲಿಬಿಡು...ಮಲಗಲಿಬಿಡು...ಇನ್ನೂ ಮಾಗಿಯ ಚಳಿಯಿದೆ
ನನ್ನೂರು...ನನ್ನ ದೇಶ... ನನ್ನ ಜನವೆಂಬ ಅಂತರಾತ್ಮದ
ಬೆಂಕಿ...ಧಗಧಗನೆ ಒಳಗೊಳಗೆ ಉರಿದೆಳದ ಹೊರತು..
ಅವರಾರು ಏಳರು...ಏಬ್ಬಿಸಲೂ...ಆಗದು..
ಏಳಿ...ಏದ್ದೇಳಿ ಎಂಬ ಕೂಗು ಅವರನ್ನು ಅಲ್ಲಾಡಿಸಲು ಆಗದು.
ಶಾಯರಿ ಇ ೫೨೦
ಈ ರಾತ್ರಿಗೆ
ರಂಗೀಯ ನೆನಪುಗಳು
ನನ್ನನು ಕೊಲ್ಲುವ
ಹುನ್ನಾರವ
ಹೂಡಿವೆ ಸಾಕಿ...
ಸುರಿದುಬಿಡು ಕೊನೆಯ
ಮದ್ಯವನ್ನು
ಬಟ್ಟಲಿಗೆ....
ಕುಡಿದೀಂದು
ಬಲಿಯಾಗಿಬಿಡುವೆ.
Sunday, January 13, 2019
ಶಾಯರಿ ೫೨೧
ಎದೆಯ ನೆಲದಲ್ಲಿ
ಮುಳ್ಳುಗಳನ್ನೆ
ಬಿತ್ತಿ ಹೋದವಳ
ಚಿಂತೆ...
ನನಗೇಕಿಗ ಸಾಕಿ....
ಹಾದಿಯಲ್ಲಿ ಚುಚ್ಚಿದ
ಮುಳ್ಳಿನ ನೋವು...
ರಂಗೀ ನೀಡಿದ
ನೋವಿಗೆ
ಸಮವಾಗುವುದೇನು?
Saturday, January 12, 2019
ಶಾಯರಿ ೫೨೪
ರಂಗೀಯೊಡಗೂಡಿ
ಒಂದು ರಾತ್ರಿಗೂ...
ದೀಪವನಾರಿಸುವ
ಭಾಗ್ಯ.. ನನ್ನದಾಗಲಿಲ್ಲ
ಸಾಕಿ...
ಹಾಲು ಕೆನೆ ಗಟ್ಟಿತು..
ಹೂಹಾಸುವೆಲ್ಲ
ಮುದುಡಿ ಹೋಯಿತು..
ಆಸೆ ಮಾತ್ರ...
ನನಸಾಗದೆ ಉಳಿದುಬಿಟ್ಟಿತು.
ಶಾಯರಿ ಇ ೫೨೬
ಗಟಗಟನೆ ಕುಡಿದ
ಮದ್ಯವು
ಒಡಲನ್ನು
ಸೇರಿತ್ತು
ಸಾಕಿ....
ಇಳಿಯುವ
ಮಧ್ಯದಲ್ಲಿ
ಎದೆಯುರಿಯ
ಬತ್ತಿಸುವುದನ್ನೇ...
ಮರೆತಿತ್ತು
Friday, January 11, 2019
ಶಾಯರಿ ಇ ೫೨೭
ರಂಗೀಯ
ನೆನಪುಗಳೆ
ಹಾಗೆ
ಸಾಕಿ...
ಹೊಟ್ಟೆಯಿಂದ
ಹೊರ ಬರಲಾರವು...
ಎದೆಯಲ್ಲಿಯೆ ಸತ್ತು
ಸಮಾಧಿಯು
ಆಗಲಾರವು.
ಶಾಯರಿ ಇ ೫೨೨
ನನ್ನ ನೆನಪುಗಳಿಗೆ
ಈಗಾಗಲೇ... ರಂಗಿಯು
ಗೋರಿಯನ್ನು
ತೋಡಿರುವಾಗ
ಅವುಗಳ ಚಿಂತೆ
ನನಗೇಕಿಗ
ಸಾಕಿ...
ಇತಿಹಾಸದ ಪುಟದಲ್ಲಿ
ಹೆಸರನ್ನು
ಅಚ್ಚೊತ್ತಿಸಿಕೊಳ್ಳಲು...
ನಾನೇನು ದೇವದಾಸನೇನು?
ಶಾಯರಿ ೫೨೮
ರಂಗೀಯ ಬರುವಿಕೆಗೆ
ಹೂಭಾವನೆಗಳನ್ನೆ
ಹಾಸಿದ್ದೆ ಸಾಕಿ...
ಮನದಲ್ಲಿ...
ಹೂಗಳನ್ನೇನೊ
ದಾಟಿ ಬಂದಿದ್ದಳು.
ಹೋಗುವಾಗ ಮಾತ್ರ,
ನೋವಿನ ಬೇಲಿಯನ್ನೆ
ಕಟ್ಟಿ ಹೋದಳು.
ಶಾಯರಿ ೫೩೦
ಸಂಜೆಗಟ್ಟೆಯಲಂದು
ರಂಗೀಯು
ಹೇಳುತ್ತಿದ್ದ..
ಪ್ರೇಮ ಕಥೆಗಳನ್ನು
ಕೇಳಲು
ಎಷ್ಟೊಂದು
ಹಿತವಾಗಿರುತ್ತಿತ್ತು...
ಸಾಕಿ....
ನನ್ನೊಲವು
ನಾನಳಿದ ಮೇಲೆ,
ಇತಿಹಾಸವಾಗಬಹುದೇನೊ?
ಹೇಳುವರಾರು..?
ಶಾಯರಿ ೫೧೫
ಸೇಬುಗೆನ್ನೆಯ
ಮುತ್ತಿಕ್ಕಿದವನ
ಅಧರಗಳಿಗೆ...ನಿನ್ನ
ಮಧು ಬಟ್ಟಲನ್ನು
ಮುತ್ತಿಕ್ಕಲು
ಕೊಟ್ಟಳು ಸಾಕಿ....
ಒಲವಿಗೆ ಬೆನ್ನು
ತೋರಿಸಿ ನಡೆದವಳ
ಮರೆಯಲೆಂದರೆ...
ರಂಗೀಯ ರಂಗು ರಂಗಿನ
ನೆನಪುಗಳೇ ಇನ್ನೂ...
ಬೆನ್ನ ಬಿಡುತಿಲ್ಲವಲ್ಲ !!!
Thursday, January 10, 2019
ಶಾಯರಿ ೫೩೧
ರಂಗೀಯ ನೆನಪಿನ
ನಂಜು... ನನ್ನೆದೆ ಗೂಡನ್ನು
ಆಗಾಗ
ಹೆಪ್ಪುಗಟ್ಟಿಸುತ್ತದೆ
ಸಾಕಿ...
ಬೆಚ್ಚಗಿರಿಸಿಕೊಳ್ಳಲು
ಈಗೀಗ, ನಿನ್ನ
ಮದ್ಯವನ್ನು
ಕುಡಿಯುತ್ತಿರುವೆ.
ಶಾಯರಿ ೫೩೨
ದಿನವೂ...
ನಗುನಗುತಲಿ ಅರಳುವ
ಮಲ್ಲಿಗೆಯದ್ದೇನು
ತಪ್ಪು ಸಾಕಿ...
ಅವಳೆದೆಯ
ನೆಲದಲ್ಲಿ, ನನ್ನೊಲವಿನ
ಬಳ್ಳಿಯೇ... ಬಾಡಿ
ಹೋಗಿರುವಾಗ
ನಾನೇನು ಬರೆಯಲಯ್ಯ
ನಾನೇನು ಬರೆಯಲಿ ಅಕ್ಷರ
ಬಡವನಯ್ಯ..
ಮನವಿದು ಈಗ ಗೊಂದಲದ
ಗೂಡಾಗಿರುವಾಗ
ನಾನೊಬ್ಬನು ನರನಲ್ಲವೆ?
ಕಾಲನ ಕರಗಳಲಿ ಸಿಕ್ಕು
ಸೀಳಿ ಹೋಗುತಿರುವೆ...
ಹುಸಿನಗುವ ಹೊತ್ತ
ಮನುಜರ ಸುಳಿಗೆ ಸಿಕ್ಕು
ನರಳಾಡುತಿರುವೆ.
ಹಾಕಿಕೊಂಡ ಉದ್ದೇಶಗಳಿಗೆಲ್ಲ
ಭದ್ರ ಬುನಾದಿಗಳೆ ಸಿಗುತಿಲ್ಲ
ಕನಸುಗಳ ಕಟ್ಟುವ ಕೆಲಸವಂತೂ
ಇನ್ನೂ ದೂರದ ಮಾತು.
ಪ್ರಯತ್ನವೊಂದನ್ನು ಬಿಟ್ಟಿಲ್ಲ..
ಮೆಟ್ಟಿ...ಮೆಟ್ಟಿ ಮೇಲೆರಲೆ ಪ್ರಯತ್ನಿಸುತ್ತಿರುವೆ,
ಜಾರುತಿರುವೆ, ಹತ್ತುತಿರುವೆ,
ಜಾರುತಿರುವೆ. ಏರು ಜಾರುವಿಕೆಯ
ಮಧ್ಯೆ... ಮನಸ್ಸೆಷ್ಟೊ ಘಾಸಿಕೊಂಡಿದೆ.
ಸಂತೈಸುವವರಿಗಿಂತ ಹುಳಿ ಹಿಂಡುವವರೆ
ಹೆಚ್ಚಿರುವಾಗ... ಸಹಿಸಿಕೊಳ್ಳಲಾದರು
ಎಷ್ಟು ದಿನ?
ಬಾಳ ಕ್ಷೀರವು ಖುದ್ದು..ಖುದ್ದು...
ಹೊತ್ತು...ಕರಕಲಾಗಿ, ಪಾತ್ರಗೆ
ಮೆತ್ತಿಕೊಂಡಿರುವಾಗ
ನನ್ನೊಳಗೆ ನನ್ನನೆ ಸುತ್ತಿಕೊಂಡ ಹತ್ತಿ
ಹುಳುವಿನಂತಾಗಿದೆ ನನ್ನ ಸ್ಥಿತಿ..
ಬರುವೆ... ಬಂದೆ ಬರುವೆ...ಹಿಸುಕಿ
ಉಸಿರಕಟ್ಟಿಸುತ್ತಿರುವ ಪೊರೆಯನು
ಸೀಳಿ ಬರುವೆ...ಬರುವೆ...ಕಾಲವೆ
ಎದುರು ನೋಡುತ್ತಿರು ನನ್ನನು...
ಶಾಯರಿ ೫೫೦
ಈಗಷ್ಟೇ...
ಕುಡಿದ ಮದ್ಯದಲ್ಲಿ
ಅವಳ ದೇಹಕ್ಕೆ
ಪೋಸಿಕೊಂಡ
ಅತ್ತಾರಿನ ವಾಸನೆಯಿತ್ತು
ಸಾಕಿ...
ಮರೆಯಲೆಂದೆ
ಬಂದವನಿಗೆ,
ಮತ್ತೆ...ಮತ್ತೆ ರಂಗೀಯ
ನೆನಪುಗಳನ್ನು,
ನೆನಪಿಸುವುದೇ......
ನಿನ್ನ
ಹುನ್ನಾರವೇನು.
Wednesday, January 9, 2019
ಚುಟುಕು ೫೩೭
ಕೆರಿ ದಂಡಿಮ್ಯಾಲ
ಚಿಗರ್ssಮೀಸಿ ತಿರ್ಗಸ್ಗೊಂತ
ನಿಂತೆಂದ್ರsss
ಮನದಾಗ ಹೇಳಲಾರ್ದಂತಾ
ಪುಳಪುಳಕ.
ನೀನೊಮ್ಮೆ ನಕ್ಕ ಬಿಟ್ರ ಸಾಕ
ಮಾಗಿ ಚಳಿಯೊಳ್ಗು..
ಮೈತುಂಬಾ ಬೆವರಿನ
ಜಳಕಾ...
ಚುಟುಕು ೫೩೮
ಹಾದ್ಯಾಗ, ಹೋಗ್ಬರೊ ಮುಂದ
ನಿಂತ್ಗೊಂಡ ಹಿಂಗ...
ಕಾಮದ ಕಣ್ಣೀಲೆ ನಿ
ನೋಡಬ್ಯಾಡ.
ಮಾಗಿ ಚಳಿ ಐತಿದು...
ನಿದ್ದಿ ಬಿಟ್ಟು,
ರಾತ್ರಿಗೆಲ್ಲ
ನನ್ನ ನೆನ್ಸಗೊಂತ
ಕುಂದ್ರಬ್ಯಾಡ
ಚುಟುಕು ೫೩೯
ನಿನ್ನ ಎದಿ ಅಂಗಳ್ದಾಗ
ನನ್ ಪ್ರೀತಿ ರಂಗೋಲಿನ
ಹಾಕ್ಬೇಕೆಂದಿದ್ದೆ
ರಾಜಾ...
ನಿಮ್ಮವ್ವನ ವಡವಡ್ಕ
ಬಾಯಿಗೆ ಸಿಕ್ಕು...
ದಕ್ಕೈತಲ್ಲೊ
ನಂಗೀಗ ನೋವಿನ
ಸಜಾ...
ಚುಟುಕು ೫೪೦
ಹಂಗೂ... ಹಿಂಗಂತ
ಯಾಕಂತೀ....
ಮಲ್ಗಿ ಮಾತನ್ಯಾಗ,
ಎದಿಯಾಗೊಂದು
ಪ್ರೀತಿ ಬೀಜ ಬಿತ್ಬೀಡು...
ಬರಗಾಲ ಎಷ್ಟ ತುಂಬಿದ್ರೇನ..
ಈ ತುಟಿಗೆ...
ನಿನ್ನ ತುಟಿಯೊತ್ತಿ
ಜೇನನ್ನ ಸುರ್ದಬಿಡು...
Tuesday, January 8, 2019
ಶಾಯರಿ ಇ ೫೩೩
ಪುಸ್ತಕದ ಪುಟಗಳ
ತುಂಬಾ...ಅವಳೊಲವನ್ನೆ
ತುಂಬಿಟ್ಟಿರುವೆ
ಸಾಕಿ....
ವಿರಹದ ಶಬ್ದವನ್ನು
ಮೂಡಿಸಲು...
ಇಂಚು ಜಾಗವು
ಉಳಿದಿಲ್ಲವಲ್ಲಿ...
ಶಾಯರಿ ಇ ೫೩೪
ಅವಳು ಬಿಟ್ಟು
ಹೋದ ಸುದ್ದಿ...
ನಿನ್ನ ಮಧು ಬಟ್ಟಲಿಗೂ
ಗೊತ್ತಾಗಿದೆ ಸಾಕಿ...
ಎದೆಯಲ್ಲಿ..
ವಿರಹವನ್ನು ನಂದಿಸುವ
ಬದಲು, ಉರಿಯನ್ನೆ
ಹೆಚ್ಚಿಸುತಿದೆ.
Monday, January 7, 2019
ಶಾಯರಿ ಇ ೫೩೫
ಕುಡಿಯದಿದ್ದಾಗಲೆ,
ಅವಳ ಹೆಜ್ಜೆ
ಗುರುತುಗಳನ್ನು
ಗುರುತಿಸದೆ...
ದಾರಿ ತಪ್ಪಿ
ನಿನ್ನರಮನೆಗೆ
ಬಂದೆ ಸಾಕಿ...
ಇನ್ನೂ ಈ...
ಮತ್ತಿನಮಲಿನಲಿ
ಮತ್ತಾವ ಹೆಜ್ಜೆಯ
ಗುರುತುಗಳ
ಹಿಡಿದು ಹೋಗಲಿ...
ಶಾಯರಿ ಇ ೫೩೬
ನಡೆದು ಬಂದ
ದಾರಿಯನ್ನೇ...ತಿರುತಿರುಗಿ
ನೋಡುವಾಸೆಯಾಗಲಿ,
ಧೈರ್ಯವಾಗಲಿ
ನನಗೀಗಿಲ್ಲ ಸಾಕಿ...
ಸಹಿಸಿಕೊಳ್ಳಲಿ
ಹೇಗೆ?
ಹಾದಿಯ ತುಂಬಾ...
ಅವಳು ಹೊಸಕಿ
ಹೋದ ಹೂಗಳ
ಎಸಳುಗಳೀಗ...
ಬಿಕ್ಕುತ್ತಿರುವಾಗ
ಶಾಯರಿ ಇ ೫೦೦
ಕ್ಷಮಿಸಿಬಿಡು
ಸಾಕಿ...
ಕುಡಿದು ಎಸೆದುಬಿಟ್ಟ
ಮದ್ಯದ ಬಟ್ಟಲಿನ
ತುಂಬಾ...ನಿ
ತುಂಬಿಕೊಟ್ಟ ಸಾಂತ್ವಾನದ
ಮಾತುಗಳಿದ್ದವೆಂಬುದನ್ನು
ನಾನರಿಯಲೆ ಇಲ್ಲ...
Tuesday, January 1, 2019
ತಮ್ಮಾ...
ಸಾಕಷ್ಟಿದ್ರು ಬೇಕು... ಬೇಕು...ಅನ್ಕೊಂತ ದೇವ್ರ
ಹುಂಡಿಗೆ ಇಷ್ಟ ಹಾಕಿ... ಅಷ್ಟ ಬೇಡೊ ಹುಳ್ಕು
ಮನಸ್ಸಿರುವಾಗ ತಿಮ್ಮಪ್ಪನ ಹುಂಡಿ ಎಂದರ
ಬರಿದಾಗ್ಬೇಕೊ ತಮ್ಮಾ...
ಗಳ್ಸಿದ್ದು.. ಇವತ್ಗಿಷ್ಟ ಸಾಕ ಅಂತಂದ, ಆಸೆ
ಮಾಡೋದ ಬಿಡಲಾರ್ದನ ಕುಬೇರನ
ಸಾಲ ಹ್ಯಾಂಗ ತಿರತೈತೊ ತಿಮ್ಮ
ನಿಮ್ಮ ಹೊಟ್ಟಿ ಸಲುವಾಗಿ ದೇವ್ರ ಹೆಸರನ್ಯಾಗ
ಬಾಯಿಲ್ಲದ ಪ್ರಾಣಿನ ಮೆಯ್ಸಿದ್ರೇನ ಬಂತೊ
ತಮ್ಮಾ...
ನಿಮ್ಮ ಹಸ್ವು ನಿಗಲಾರ್ದಾನ.. ಬಲಿಬೇಡೊ
ಕಲ್ಲಿನ ದ್ಯಾವ್ರ ಹಸ್ವು ನೀಗತೈತೇನೊ ತಿಮ್ಮ...
ಎಷ್ಟೊತ್ತ ಕೂಗಿ...ಕೂಗಿ...ಕಾಣ್ದ ದ್ಯಾವ್ರ ಪ್ರಾರ್ಥನಾ
ಮಾಡಿದ್ರೇನ ಬಂತ, ನಂಗ ಕೇಳ್ಸೈತಂತ ದ್ಯಾವ್ರ
ಯಾರಿಗಾದ್ರೂ ಹೇಳ್ಯಾನೇನೊ ತಮ್ಮಾ...
ಕಂಡು...ಕಂಡು...ಪಕ್ಕದ್ಮನಿಯವ್ರ ಕಷ್ಟದ ಕೂಗಿಗೆ
ನಾವ್ ಕಿವಿಯಾಗ್ಲಿಲ್ಲಂದ್ರ, ಮ್ಯಾಲ್ನವಂಗ ಹ್ಯಾಂಗರ
ನಂ ಕೂಗು ಕೇಳ್ಸತೈತೊ ತಿಮ್ಮ...
ಮೈಯ್ಯಾಗ ದ್ಯಾವ್ರ ಬಂದೈತನ್ಕೊಂಡ ಹುಚ್ರಂಗ
ಕುಣಿಯೊರ್ನ ಕಂಡು ಏನ್ ಹೇಳ್ಬೇಕೊ ತಮ್ಮಾ...
ಮೈಯ್ಯೊಳ್ಗ ಹೊಕ್ಕೊಂಡಿರೊ ಬುದ್ದಿಗೇಡಿತನಾನ
ಕಳ್ಕೊಳ್ಳೊ ತನ್ಕ...ಏರೀರೊ.. ಹುಚ್ಚನ್ನ ಇಳ್ಳೊರಾದ್ರು
ಯಾರೊ ತಿಮ್ಮ
ಹಾದಿ ಬೆಳ್ಕಿಗಂತಂದ ದೀಪ ಹಚ್ಚಿಟ್ರ, ಊರೊರ
ಮನಿಗೆ ಬೆಂಕಿ ಹಚ್ಕೊಂತ ಹೊಂಟ್ರ ಹ್ಯಾಂಗೊ
ತಮ್ಮಾ....
ನಿನ್ನ ಮನಿಯ್ಯಾನ ದೀಪಾನ ನೀನ ಹಚ್ಗೊಳ್ದನ
ಮಂದಿ ಮನಿ ದೀಪಾನ ನಿನೇನ ಹಚ್ತೀಯೊ ತಿಮ್ಮ...
ಶರಣ್ರು...ಪ್ರವಾದಿಗಳು ಅಂಗೈಯ್ಯೊಳ್ಗ ತುತ್ತ ಹಿಡ್ದಂಗ
ಜ್ಞಾನದ ಬುತ್ತಿನ... ಬೀದಿ...ಬೀದಿಯೊಳಗ ಹಂಚ್ಗೊಂಡ
ಹೋದಂತ ಮಣ್ಣೈತಿದು, ಗೊತ್ತೇನೊ ತಮ್ಮಾ....
ಓದ್ಲಿಲ್ಲ...ಅನುಭವಿಸ್ಲಿಲ್ಲ..ಮಾತ್ ಮಾತಿಗೂ ಕೈಯ್ಯಾಗ
ಕತ್ತಿ ಹಿಡ್ಕೊಂಡ.. ನಡು ಬೀದಿ ತುಂಬಾ ರಕ್ತದ ಹೊಳಿನ
ಹರಸ್ಯಾರು ನೊಡ್ತೀಮ್ಮ..