Friday, January 25, 2019

ತಮ್ಮಾ

ಶ್ಯಾಣೆರು....ಶ್ಯಾಣೆರು.....ಅನ್ಕೊಂಡು..ಮಂದಿ ಮನಿ
ಅಂಗ್ಳ ತುಂಬಾ ಚೆಂದಾನ...ರಂಗೋಲಿ ಹಾಕ್ಕೊಂತ
ಅಡ್ಡ್ಯಾಡ್ತಾರೊ ತಮ್ಮಾ...
ಅವ್ರ ಮನಿ ದ್ಯಾವ್ರ ಕೋಣಿ ತುಂಬ.. ಜೇಡ
ಬಲಿ ಹೆಣ್ದ ಕುಂತೈತಿ.. ಅದನ್ನ  ಸ್ವಚ್ಛ ಮಾಡ್ಕೊಳ್ಳೊ
ಪುರಸೊತ್ತ, ಅವ್ರಿಗಿಲ್ದಂಗಾಗೈತಿ ನೋಡ್ತಿಮ್ಮ..

ಬಿರ್ದು ಬಾವ್ಲಿಗಳ್ನ ಕಾಡಿಬೇಡಿ ಇಸ್ಕೊಂಡ
ಬರೋದು ಏನ್ ದೊಡ್ಡಸ್ತನಾನೊ ತಮ್ಮಾ...
ತಲ್ಯಾಗ ನಾಕಕ್ಷರ ಇಲ್ದಿದ್ರ... ಅರೆಬರೆ ನೀರ್
ತುಂಬಿದ‌ ತಾಮ್ರದ ಕೊಡ್ದಂಗ ಬರೀ..
ಬಡಾಯಿ ಕೊಚ್ಗೊಳ್ಳೊದ ಆಗ್ತೈತಲ್ಲೊ ತಿಮ್ಮ...

ಎಷ್ಟೇಷ್ಟೊ ಮುಖವಾಡನ ಹಾಕಿ..ಸಾಕಷ್ಟು
ಮಂದಿನ ಮೋಸ ಮಾಡಿವಂತಂದು ಬೀಗಾಕ
ಹತ್ತ್ಯಾರು ನೋಡ್ತಮ್ಮ
ಇಲ್ಲಿ ತಿಳ್ಕೊ...
ಹತ್ತ್ ತಲಿ‌ ಹೊತ್ಗೊಂಡಿದ್ದ ರಾವಣನ್ನ
ಕೊಂದದ್ದ.. ಒಂದ ತಲಿ ರಾಮ್ನಾನೊ ತಿಮ್ಮ

ಲೆಕ್ಕಿಲ್ದಷ್ಟ...ಮಂದಿ ಮನಿ ಉಣ್ಣೊ ಅಡಿಗ್ಯಾಗ,
ಉಪ್ಪು ಸುರ್ಕೊಂತ ಅಡ್ಡಾಡಿಕೊಂಡ ಬರ್ಬೊದು
ಏನ್ ತಮ್ಮಾ...
ಒಂದು ಕೇಳು..
ಉಪ್ಪ ತಿಂದಾವ ಕಡಿಗೊಮ್ಮೆ...ನೀರ್ ಕುಡಿಲೆಬೇಕು ಅನ್ನೊದನ್ನ...ಮರ್ತ ಕುಂದ್ರಬ್ಯಾಡೊ‌ ತಿಮ್ಮ...

ಹೀರೇರು ಹೇಳ್ಯಾರು.. ನಂಬ್ಕಿ ಅನ್ನೋದು...
ಕೋಳಿ ಮೊಟ್ಟಿದ್ಹಂಗ ಕಾಯ್ಕೊಂಡಿರಬೇಕ,
ಒಡ್ದಮ್ಯಾಲ ಗೊತ್ತಾಗೋದ ಒಳ್ಗೀನ ಬಣ್ಣ ಏನ್ತಮ್ಮಾ..
ಪ್ರೀತಿ ಬುತ್ತಿ ಹೊತ್ಗೊಂಡು ಊರೂರು ಅಡ್ಡಾಡಿ
ಹಂಚ್ಗೊಂಡ ಬರ್ಬೇಕ...ಕಿತ್ತಾಡ್ಗೊಂಡ ಅಲ್ಲ...
ಹಂಚಿದ ಮ್ಯಾಲ, ಯಾರ್ದರ ಬುತ್ತಿ ಖಾಲಿಯಾಗಿತ್ತಂದ್ರ ನಂಗ್ಬಂದ ಹೇಳೊ ತಿಮ್ಮ..

No comments:

Post a Comment