Thursday, December 8, 2016

ಒಂದೇ ಹೃದಯ ಸಾಲದೇ

ನಿನ್ನೊಟ್ಟಿಗೆ ಕಳೆದ ಎಷ್ಟೋ ಕ್ಷಣಗಳ
ಸವಿ ನೆನಪುಗಳನ್ನ ಹೃದಯ ಬಾಚಿ ಬಾಚಿ
ಒಂದು ನೆನಪು ಕಳೆಯದಂತೆ ಹಿಡಿದಿಡುತ್ತಿತ್ತು
ಎಷ್ಟೇ ಬಾಚಿದರು, ಎಷ್ಟೋ ತುಂಬಿದರು ಅದು
ಯಾಕೋ ಬರಿದೇ ಅನ್ನಿಸುತ್ತಿತ್ತು

ನಿನ್ನದರದ ಮಾತುಗಳು, ನಿನ್ನೊಂದಿಗಿನ ಕಳೆದ
ದಿನಗಳ ರಸನಿಮಿಷಗಳು ಇನ್ನೂ ಬೇಕು ಬೇಕು
ಎಂದು ನಿದ್ರಿಸಲು ಬಿಡದೆ ಬೇಡುತ್ತಿತ್ತು ಹೃದಯ

ನೀನು ಬಿಟ್ಟು ಹೋದ ಕ್ಷಣ....
ನೀನು ಬಿಟ್ಟು ಹೋದ ಕ್ಷಣವಿದೆಯಲ್ಲಾ
ಆತ್ಮ ವಂಚಕಿ
ಆ ಒಂದು ಕ್ಷಣದ ನೆನಪನ್ನ ನನ್ನೆದೆಯು
ಹೊರಲಾಗುತ್ತಿಲ್ಲ, ಹಿಡಿದಿಡಲಾಗುತ್ತಿಲ್ಲ
ತಡೆಯದೆ ಒಡೆದು ಬಿಡುವುದೇನೊ?
ಎನ್ನುವಂತಾಗಿದೆ ಈ ಬೀಭತ್ಸ ಕ್ಷಣ
ನೋಡು ನನಗೆ ಸಾಲದಾಗಿದೆ ಈ ನೋವಿಗೆ
ಒಂದೇ ಹೃದಯ

No comments:

Post a Comment