ಆ ಸಂಜೆ
ನೂರೆಂಟು
ರಾಗಗಳಿದ್ದವು
ಸಾಕಿ
ಅವಳೆದೆಯಲ್ಲಿ...
ಮಿಡಿಸಿ ಹೋದದ್ದು
ಮಾತ್ರ,
ನೋವಿನ
ರಾಗವನನ್ನೇ..
ನನ್ನೆದೆಯಲ್ಲಿ
ಆ ಸಂಜೆ
ನೂರೆಂಟು
ರಾಗಗಳಿದ್ದವು
ಸಾಕಿ
ಅವಳೆದೆಯಲ್ಲಿ...
ಮಿಡಿಸಿ ಹೋದದ್ದು
ಮಾತ್ರ,
ನೋವಿನ
ರಾಗವನನ್ನೇ..
ನನ್ನೆದೆಯಲ್ಲಿ
ಸಂಜೆಗಳು...ರಾತ್ರಿಗಳು...
ದಿನಗಳು...ವರ್ಷಗಳೂ
ಅವಳು ಬರುವವಳೆಂಬ
ನಿರೀಕ್ಷೆಯಲ್ಲಿಯೇ...
ಕಳೆದು ಹೋದವು
ಸಾಕಿ...
ಅವಳು ಬರಲೇ
ಇಲ್ಲ...!!!
ಇರಲಿಬಿಡು,
ನಿನ್ನ ಮಧು ಬಿಂದಿಗೆ
ಇನ್ನೂ ತುಂಬಿಯೇ...
ಇದೆಯಲ್ಲ.
ಸಾವು ನೀಡಿ
ಹೋಗುವ
ನೋವು...
ಮಾಸಲಾರದ್ದು
ಸಾಕಿ...
ವಿಧಿ ಲಿಖಿತವ
ಬದಲಿಸುವರಾರು?
ನೋವ ನುಂಗಿ
ಬದುಕಬೇಕಲ್ಲವೆ...
ಉಸಿರಿರುವವರೆಗೂ...
ನನ್ನೆಲ್ಲ
ನೋವುಗಳನ್ನು
ತಂದು... ನಿನ್ನ
ಮಡಿಲೊಳಗೆ
ಸುರಿದರೇನು
ಬಂತು ಸಾಕಿ....
ಬಟ್ಟಲೊಳಗೆ
ಮದ್ಯವನ್ನು ಸುರಿಯಲು
ಸುಂಕವನ್ನು...
ಕೇಳುವುದನ್ನೇ...ನಿ
ಬಿಡುವುದಿಲ್ಲವಲ್ಲ.
ಹಣೆಯಲ್ಲಿದ್ದರೆ.. ಬಂದು ಹೋಗುವುದು
ನಾಳೆಯೊಂದು ದಿನ ಸಾಕಿ...
ಕಳೆದುಹೋಗುವ ಚಿಂತೆಯೊಂದು ಚಿತೆಯಾಗಿ
ಸುಡುತಿಹುದಲ್ಲ..!!!
ಏನನ್ನು ತರಲಿಲ್ಲ.. ತಂದವರಾರು ಇಲ್ಲ.
ಬಿಟ್ಟು ಹೋದವರುಂಟು, ನನ್ನಲೇನಿದೆ
ಮುದ್ದೆ ಮಾಂಸವೊಂದ ಹೊರತುಪಡಿಸಿ..
ಸತ್ತಾಗ ಹೊರುವವರಿಗೂ ಭಾರ.
ಕಷ್ಟ-ಸುಖ, ನೋವು-ನಲಿವು, ಸೋಲು-ಗೆಲುವು,
ಏಳು-ಬೀಳುಗಳು... ಒಂದೆ ನಾಣ್ಯದ ಎರಡು ಮುಖಗಳಾಗಿರುವಾಗ, ಬರುವ ದಿನಗಳಲ್ಲಿ
ಬರೀ ಸುಖವನ್ನೆ ಬಯಸುವುದು ಸ್ವಾರ್ಥವಲ್ಲವೆ?
ಸಾಕಿ...
ಬಂದುದನೆಲ್ಲವನುಂಡು ಅರಿತು-ಬೆರೆತು,
ಕೆಡಕಿಂದ ಪಾಠವ, ನಡೆ ನುಡಿಗಳಿಂದ, ಸಜ್ಜನರ
ಸಂಗದಿಂದ, ಬದುಕಿನ ಹಾದಿಯನ್ನು
ರೂಪಿಸಿಕೊಳ್ಳಬೇಕಲ್ಲವೆ?
ಹುಟ್ಟಿನೊಂದಿಗೆ ಸಾವನ್ನು ಕಟ್ಟಿಕೊಂಡು
ಬಂದವರು ನಾವು ಸಾಕಿ...
ಹಾಗಂತ, ಸಾಧಿಸದೆ ಸತ್ತು ಹೋಗುವುದು,
ಸೃಷ್ಟಿ ಲಯಕಾರನಿಗೆ ಮಾಡುವ ಅಪರಾಧವಲ್ಲವೆ.
ಜೀವ ತುಂಬಿದ ಋಣಕ್ಕಾದರು.....ಏನನ್ನಾದರು ಸಾಧಿಸಬೇಕಲ್ಲ!!!
ಬೆಟ್ಟದಷ್ಟಲ್ಲದಿದ್ದರೂ... ಸಾಸಿವೆ ಕಾಳಿನಷ್ಟಾದರು ಸರಿ
ಎರಡು ಹೆಜ್ಜೆ ಗುರುತನು ಮೂಡಿಸಬೇಕಲ್ಲ
ಕಟ್ಟಿಕೊಂಡು ಹೋಗುವುದಕ್ಕೇನಿದೆ? ಸತ್ತಾಗ...
ನಮ್ಮನೆ ನಾಲ್ಕು ಹೆಗಲುಗಳು ಹೊತ್ತೊಯ್ಯುವಾಗ
ಸಾಕಿ....
ದಿನಗಳಿಗೇನು...ಹೊಸತು ಹಳತುಗಳ ಭೇದವಿಲ್ಲ
ಹರೆಯದ ಹೊಳೆ ಹರಿದ್ಹೊದ ಮೇಲೆ...ನೆರೆಗಳ
ಬಿರುಕು ಬಿಡಬೇಕಲ್ಲ...
ಆಗು ಹೋಗುಗಳು ನಿನ್ನ ಕೈಲಿಲ್ಲ...ಚಿಂತಿಸಬೇಡ
ಬರೆದು ಕಳಿಸಿದವನು... ಯಾವುದನ್ನೂ... ಅಳಿಸುವುದಿಲ್ಲ
ನಿನ್ನ ಪಾಲಿನದು ನಿನಗೆ...ನನ್ನ ಪಾಲಿನದು ನನಗೆ...
ಕಸಿದುಕೊಳ್ಳಲು... ಕಾಲ ಬಿಡುವುದೇ....ಇಲ್ಲ
ನಿಜ...
ಖುಷಿಯೆ ನಿನಗೆ
ಸಾಕಿ..
ಖಾಲಿ ಮಾಡಿದ್ದು
ಕೇವಲ ಬಟ್ಟಲುಗಳಲ್ಲ
ನೋಡು..
ಹೂಜಿಗಳನ್ನೆ...
ಗಲ್ಲಾ ಪೆಟ್ಟಿಗೆ
ತುಂಬಿರಬೇಕಲ್ಲವೆ
ಅರಿವಿಲ್ಲದೆ,
ಹರೆಯದ ಹೊಳೆಯ
ಈಜಾಟದಲ್ಲಿ...ಈ
ಬಟ್ಟೆಗೆ ಮೆತ್ತಿದವಳ
ತುಟಿಯ ರಂಗೇ...
ಇನ್ನೂ ಮಾಸಿಲ್ಲ
ಸಾಕಿ...
ಅರಿವಿದ್ದು ಮಾಡಿದ
ಬಿಟ್ಟು ಹೋದ
ಗಾಯವು...
ಮಾಸಿಸುವುದಾದರು
ಎಂದು?
ಈ ಹರೆಯಕ್ಕೆ
ವಿರಹದ
ಹೊರೆಯನ್ನು
ಹೊರಿಸಿ ಹೋದವಳು
ಅವಳು
ಸಾಕಿ...
ಬಟ್ಟಲು...ಬಟ್ಟಲು
ಮದಿರೆಯನ್ನು
ಕುಡಿಸಿ... ನೋವನ್ನು
ಕೊಲ್ಲುತ್ತಿರುವವಳು
ನೀನು
ನಿನ್ನ ಮಧು ಬಟ್ಟಲು
ಎಷ್ಟೊಂದು
ನಶೆಯನೇರಿಸುವುದು
ಸಾಕಿ...
ಬಹುಶಃ ಇದು
ಅವಳ ತುಟಿಗೆ
ಮುತ್ತಿಕ್ಕಿರಬಹುದೇನೊ?
ನಾ...ಕುಡಿದುಬಿಟ್ಟ
ಮದಿರೆ ಬಟ್ಟಲನ್ನು
ತೊಳೆದಿಟ್ಟುಬಿಡು
ಸಾಕಿ...
ನಿನ್ನ ತುಟಿಗೇನಾದರದು
ಸೋಕಿದರೆ...
ನನ್ನೆದೆಯ ವಿರಹದ
ಬಿಸಿ, ನಿನ್ನ ಕೆಂದುಟಿಯನ್ನೆ
ಸುಟ್ಟುಬಿಟ್ಟಾತು..
ಆ ಜಾರು ಬಂಡೆಯ
ಬೆನ್ನಿಗೊಂಚೂರು
ಬಟ್ಟೆಯನ್ನಾದರೂ
ಧರಿಸು ಸಾಕಿ...
ಅರ್ಧ ಉಸಿರು
ಅವಳ ಹೆಸರಿನಲ್ಲಿ
ನಿಂತಿದೆ...
ಇನ್ನರ್ಧ..!!! ನಿನ್ನ
ತೆರೆದ ಬೆನ್ನಿಗೆ
ಬಲಿಯಾಗಬಾರದಲ್ಲ
ಎದಿಯ್ಯಾಗ ಕಿಚ್ಚ ಐತೆಂದು
ಕಂಡ...ಕಂಡಲ್ಲಿ ಉಪ್ವಾಸ ಧರ್ಣಿ
ಕುಂದ್ರಬ್ಯಾಡೊ ತಮ್ಮಾ...
ಮುಂದ ಕುಂತೋರು.. ಕೆಂಪ
ಪೆಂಡಾಲ್ದ ಹಿಂದ ಎಷ್ಟೋ ಹುಂಜ್ಗಳ
ತುಪ್ಳಾ ಕಿತ್ತ ಹಾಕೀರ್ತಾರೋ ತಿಮ್ಮಾ..
ಹೊತ್ತ...ಹೊತ್ತಿಗೂ
ಹೊಟ್ಟಿ ಸಲುವಾಗಿ...
ಪಾಲಿಸ್ಟರ್ ಸೀರಿ
ಸೆರ್ಗ ಹಾಸೊ..
ಹೆಣ್ಣನ್ನರ
ನಂಬುಬೋದು
ಕೇಳವ್ವ...
ಮಾತ...ಮಾತನ್ಯಾಗ
ಮೂರ್ದ ಬೀಳೊ
ಖಾದಿ ತೊಟ್ಟೊರ
ಸಹವಾಸರ ಹ್ಯಾಂಗ
ಮಾಡ್ಬೇಕೊ
ನಮ್ಮವ್ವ
ಅಳೋ ಗಂಡ್ಸರ್ನ
ನಂಬಬಾರ್ದಂತ, ನಗೋ
ಹೆಣ್ಮಕ್ಳನ್ನ್ ನಂಬಬಾರ್ದಂತ
ಹಿರಿಯೊರ ಹೇಳ್ಯಾರಲ್ಲೊ
ನಮ್ಮವ್ವ...
ರಾಜ್ಯ ಆಳೋ ಯಜಮಾನಾನ
ದಿನಕ್ಕ..ವಾರಕ್ಕ..ತಿಂಗ್ಳಿಗೊಮ್ಮೊಮ್ಮೆ
ಅತ್ಗೊಂತ ಕುಂತ್ರ, ನಮ್ಮನ್ನ
ಕಾಯೋರ ಯಾರೊ
ಹಡದವ್ವ...
ಹೆಣ್ಣಿಗೆ ಮರ್ಯಾದಿ
ಕೊಡ್ತಿವಂತದ್,
ಆಕಿ ತಲಿಮ್ಯಾಲೊಂದ
ಹೊರಿ ಹೊರ್ಸಿ
ನಿಲ್ಲಿಸ್ಬಿಟ್ಟಾರು
ನೋಡವ್ವ....
ಒಂದ್...ಒಂದ್ ಹೆಣ್ಣನ್ನ
ತುಳಿಯಾಕ...
ಸಾವ್ರ ಮಂದಿ ತೊಡಿ
ತಟ್ಟಿ ನಿಂತಾರ ನೋಡೊ
ನಮ್ಮವ್ವ...
ಅವಳು ಹೂವೆಂದು
ನಾನು ಕಣ್ಮುಚ್ಚಿಯೆ
ಪ್ರೀತಿಸಿದ್ದೆ
ಸಾಕಿ...
ನಿಜ,
ಅವಳು ಹೂವೇ...
ಮನಸ್ಸು ಮಾತ್ರ
ಬಂಡೆಗಲ್ಲು...
ಅವಳ
ನೆನಪುಗಳ ಮೊರೆತಕ್ಕಿಂತ,
ಸಾಮೀಪ್ಯವೇ....ಚೆನ್ನ
ಸಾಕಿ...
ರುಚಿಯ ಚಪ್ಪರಿಸಿ
ನೆನೆಯುವುದಕ್ಕಿಂತ,
ನಿನ್ನ ಮಧು ಬಟ್ಟಲು
ಕೈಯೊಳಗಿದ್ದರೆ ಚೆನ್ನ
ಸಾಕಿ..
ಅವಳು ಕಟ್ಟಿಕೊಟ್ಟ
ನೆನಪಿನ
ಬುತ್ತಿಯನ್ನು
ಬಿಚ್ಚಬೇಡ ಸಾಕಿ...
ಬಟ್ಟಲೊಳಗಿನ
ಮದ್ಯಕ್ಕಿಂತ ಎಷ್ಟೋ...
ಕಹಿಯಾದ
ವಿಷಯಗಳಿವೆ ಅದರಲ್ಲಿ
ಮಧು ಬಟ್ಟಲೊಳಗಿನ
ಮದ್ಯವು ಎಷ್ಟೊಂದು
ತಣ್ಣಗಿದೆ....
ಸಾಕಿ...
ಕುಡಿದ ಮೇಲೆಕೆ
ಅದೇಷ್ಟು ಮೈತುಂಬ
ಬಿಸಿಯನ್ನೆ
ಏರಿಸುವುದು
ಅವಳೆಲ್ಲ....
ನೆನಪುಗಳನ್ನು
ಗೋರಿಯ ಹೊರಗೆ
ಚೆಲ್ಲಿ ಬಂದಿರುವೆ
ಸಾಕಿ...
ಅವುಗಳನ್ನು
ಗೋರಿಯ ಪಕ್ಕದಲ್ಲಿಯೆ
ಹುಗಿದು ಬಿಡಬೇಡ.
ಊರ ಹೊರಗಿನ
ಹಳ್ಳದೊಳಗೆ
ಹರಿಬಿಟ್ಟುಬಿಡು
ಅವಳು ಮೌನದಲ್ಲೆ
ಸಾವಿರಾರು
ಮಾತುಗಳನ್ನಾಡುತ್ತಿದ್ದಳು
ಸಾಕಿ...
ಆಡಿದ ಮಾತುಗಳನ್ನೇ
ಅರ್ಥೈಸಿಕೊಳ್ಳಲಾಗದಷ್ಟು
ದಡ್ಡ ನಾನು...ಇನ್ನೂ
ಮೌನದ ಮಾತುಗಳನ್ನು
ಅರಿತುಕೊಳ್ಳುವುದಾದರು
ಹೇಗೆ?
ಬೊಗಸೆ ತುಂಬ....
ತುಂಬಿಕೊಟ್ಟ ಪ್ರೀತಿಯನ್ನು
ನಡು ಬೀದಿಯಲ್ಲಿಯೇ...
ಚೆಲ್ಲಿ, ನಡೆದಳಲ್ಲ
ಸಾಕಿ...
ಬೇಡಿಕೊಳ್ಳಲಾದರು
ಹೇಗೆ? ಅವಳಲ್ಲಿ..!!
ಕೊಟ್ಟು ಪಡೆಯುವ
ಮನಸ್ಸು...
ಅವಳಿಗಿಲ್ಲದಿರುವಾಗ
ಕಲ್ಲು...ಕಲ್ಲೆಂದು
ನೀನು ಕಲ್ಲು
ಮನಸ್ಸಿನವಳಾಗಬೇಡ
ಸಾಕಿ...
ದೈತ್ಯ ಬಂಡೆಯನ್ನು....
ಶಿಲೆಯಾಗಿಸುವುದು
ಒಂದು ಚಿಕ್ಕ
ಲೋಹದಿಂದಲೆ
ಮರೆತುಹೋಗಲಿ
ಅವಳು
ಬೇಕಿದ್ದರೆ...
ನನ್ನ ಸಮಾಧಿಗೆ
ಮಣ್ಣನ್ನು ಹಾಕಿ
ಸಾಕಿ...
ಹೇಳಿಬಿಡವಳಿಗೆ
ಅತ್ತು...
ಸತ್ತುಹೋದ
ನನ್ನ ಕನಸುಗಳಿಗೆ
ಜೀವವ
ತುಂಬದಿರೆಂದು
ನೂರಾರು ಜನರಿದ್ದ
ಬೀದಿಯಲ್ಲೇ...
ನನ್ನ ಪ್ರೀತಿಯು
ಅರಳಲಿಲ್ಲ
ಸಾಕಿ...
ಕೇವಲ ಹತ್ತಾರೆ
ಜನರಿರುವ
ನಿನ್ನರಮನೆಯಲ್ಲಿ
ಮರೆಯಲಾದಿತೆ?
ಅವಳು ನೀಡಿದ
ನೋವನು
ಕನಸು ಕಾಣುವ ಕಂಗಳಲಿ
ಕತ್ತಲ ಕವಿಸುತಿದೆ ವ್ಯಾಧಿಯ ಕಾರ್ಮೋಡ
ಬಲೆಗೆ ಸಿಕ್ಕ ಹುಳುವಿನಂತವಳ ಹೋರಾಟ
ಹೇಗೆ ಸಹಿಸಿಕೊಳ್ಳಲಿ...ಒಡಲೊಳಗಿನ ಸಂಕಟವ
ಹಾದಿ ತಪ್ಪಿ ಬಂದಿಹುದೇನೊ, ನಮ್ಮನೆಗೆ ಈ ಮಾರಿ
ಕುಳಿತುಬಿಟ್ಟಿರುವೆವಲ್ಲ ಸೂರು, ಹೊಲಗದ್ದೆಗಳ ಮಾರಿ
ತೌರ ಮನೆಯಲ್ಲಿ ತವಡು ಹಿಟ್ಟಿಗೂ ಗತಿಯಿಲ್ಲ
ಸೇರಗೊಡ್ಡಿ ನಾನೇನ ಬೇಡಿ ತರಲಿ...
ಅಪಘಾತಕೆ ಸಿಕ್ಕ ಗಂಡನ ನಡುವಲ್ಲಿ ಶಕ್ತಿಯೇ...ಇಲ್ಲ
ಹೊಂದಿಸುವುದಾದರು ಹೇಗೆ? ನೋವಿಗೆ ಮದ್ದನು..
ಎರಡ್ಹೊತ್ತು ತೊಳೆದ ಮೂಸರೆ ಮನೆಯ ಹಣವೆ...
ಗಂಜಿಗಾಗುತಿಲ್ಲ... ಇನ್ನೂ... ಏರಿರುವ ನಂಜನು
ಇಳಿಸಿಕೊಳ್ಳುವುದಾದರು ಎಲ್ಲಿ...
ಕಾಲಕ್ಕಿಲ್ಲ ಚೂರು ಅನುಕಂಪ...
ಕ್ಷಣಕ್ಷಣಕೂ ಹೆಚ್ಚಿಸುತಿದೆ, ತಡೆಯಲಾರದಷ್ಟು ನೋವ
ಮುಷ್ಟಿಯ ಚಾಚಿ ಎಷ್ಟು ದೂರವೆಂದು ನಡೆಯಲಿ?
ಕೈಯಲಿ ಬಿದ್ದದ್ದು ಬರೀ...ಬಿಡಿಗಾಸುಗಳೆ, ಭಕಾಸುರನ
ಹೊಟ್ಟೆಗೆ ಅರಿ ಕಾಸಿನ ಮಜ್ಜಿಗೆಯಂತೆ
ಸಿರಿವಂತರೆ...ಉಣ್ಣಲಾಗದೆ ತಿಪ್ಪೆಗೆ ಚೆಲ್ಲುವ ಮುನ್ನ...
ಕೂಡಿಟ್ಟು...ಕೂಡಿಟ್ಟು...ಸರಳುಗಳ ಎಣಿಸುವ ಮುನ್ನ...
ಬೊಗಸೆ ತುಂಬ ಧನವನಿತ್ತು...ಉಸಿರನ್ನುಳಿಸಿರಿ...
ನಮಗೊ...ದುಡಿದುಣ್ಣಲೇ.... ಗತಿಯಿಲ್ಲದಿರುವಾಗ,
ಸಿರಿವಂತರ ವ್ಯಾಧಿಯೊಂದು ಬೆಯಿಸುತಿಹುದಲ್ಲ..!!
ನಿಜ...ನಿಜ...ಸಾವು ನೋವಿಗೆ, ಬಡವ ಬಲ್ಲಿದನೆಂಬ
ಭೇದವೆಲ್ಲಿ?..
ಉಸಿರಾಡುತ್ತಿರುವ... ಹೌದು ಅಲ್ಲಗಳನರಿತಿರುವ,
ನೋವೆಂಬುದೇನೆಂದು ಅರಿತವರೂ.... ಕಣ್ಮುಚ್ಚಿ
ಕುಳಿತುಕೊಂಡಿರುವಾಗ, ನಮ್ಮಂಥವರ ಭಾದೆಯು
ಅರಿವಾಗುವುದಾದರು ಯಾರಿಗೆ ?
ಕೈ ಚಾಚುತ್ತಿದ್ದೇವೆ... ಕೈಲಾಗದವರೆಂದಲ್ಲ,
ಅಸಹಾಯಕತೆಯ ಉರುಳು ನಮ್ಮ ಉಸಿರನ್ನು
ಕಟ್ಟಿಸುತ್ತಿದೆ..
ಸ್ವಾಭಿಮಾನವ ಬಿಟ್ಟು ಬಂದವರಲ್ಲ...
ಕರುಳಬಳ್ಳಿ.... ಕಣ್ಮುಂದೆಯೆ ಕಮರುತಿಹುದಲ್ಲ...
ಸುಳ್ಳು ಹೇಳಿ ಸೌಧವ ಕಟ್ಟಿಸಿಕೊಳ್ಳಾವಸೆ ನಮಗಿಲ್ಲ.
ನಿಮ್ಮಂಥ ದಾನಿಗಳಾಸರೆ ಇಲ್ಲದೆ ಹೋದರೆ......
ಹಣವಿಲ್ಲದೆ, ಹೆಣವಾಗುವ ಮಗಳ ಕಟ್ಟೆಗೆ ನಾವೆ
ಕಲ್ಲನು ಹೊರಬೇಕಾಗುವುದಲ್ಲ..!!!
ಹರೆಯ ಹರಿದು
ಹೋಗುತ್ತಿರುವುದಕ್ಕೆ
ಚಿಂತೆಯೇನು
ಇಲ್ಲ ಸಾಕಿ.....
ಬಟ್ಟಲೊಳಗಿನ
ಮಧುವು
ಖಾಲಿಯಾಗುತಿಹುದಲ್ಲ
ಎಂಬ ಚಿಂತೆಯೊಂದೆ
ಕಾಡುತಿದೆ, ಎದೆಯನ್ನು
ತಾಕಿ
ಉಳಿಸಿಟ್ಟುಕೊಳ್ಳಲು
ನನ್ನಲೇನಿದೆ
ಈಗ
ಸಾಕಿ....
ಅವಳೆ ಇಲ್ಲದಿರುವಾಗ,
ಪಡೆದಿಟ್ಟುಕೊಳ್ಳಲು
ನಾನೇನು
ಗಳಿಸಿಕೊಳ್ಳಬೇಕಿದೀಗ
ಈ ಮಧು
ಬಟ್ಟಲಿಗೊಂದಿಷ್ಟು
ಮಧವನ್ನು ಸುರಿದು
ನಿನ್ನರಮನೆಯ
ಬಾಗಿಲನ್ನು
ತೆರೆದಿರಿಸು
ಸಾಕಿ....
ಮೈ ಕೊರೆವ
ಚಳಿಯಿದೆ,
ಅವಳಿಂದು
ಬರಬಹುದೇನೊ?
ಬಾಗಿಲ ಬಳಿ
ನಿ ನೀರಿಕ್ಷಿಸು
ಕಾಡ್ಗಿ ಕಣ್ಣಿಲೆ ಬಿಟ್ಟು ಬಿಡ್ದಂಗ
ಹೊಡಿಬ್ಯಾಡ ನೀ ಕಾಮದ ಬಾಣ
ಬೆಂಕಿನ ಮೈಗ ಹಚ್ಕೊಂಡ್ರೂ ಕಡ್ಮಿ
ಯಾಗಲಾರ್ದಂತ ತಂಡಿ ಐತಿದು.
ನಿನ್ನ ಬಟ್ಟಲೊಳಗಿನ
ಮದ್ಯವನ್ನು
ಕುಡಿದಷ್ಟು
ಸುಲಭವಲ್ಲ
ಸಾಕಿ...
ಅವಳ
ನೆನಪುಗಳ
ಬಾಗಿಲಿಗೆ ಬೀಗವನ್ನು
ಜಡೆಯುವುದು.
ದೇಹದಲ್ಲಿ
ಉಸಿರಿರುವವರೆಗೆ
ಮಾತ್ರ...
ಪ್ರಶಸ್ತಿ ಫಲಕಗಳಿಗೂ
ಉಸಿರು
ಸಾಕಿ...
ಉಸಿರು
ನಿಂತ ಮೇಲೆ
ಹೆಣ ಮಸಣಕ್ಕೆ,
ಫಲಕಗಳು....
ನೀರೊಲೆಗೊ?
ಗುಜರಿಗೊ?
ಸೋಲಲೆಂದೆ
ಅವಳನ್ನು
ಪ್ರೀತಿಸಲಿಲ್ಲ.
ಸೋತೆ,
ಸೋಲುತ್ತಲೆ
ಇರುವೆ
ಸಾಕಿ...
ಕುಡಿಯಬೇಕೆಂದೆ
ನಿನ್ನ ಮಧು
ಬಟ್ಟಲನನ್ನೇನು ಎತ್ತಿಕೊಳ್ಳಲಿಲ್ಲ.
ಏನು ಮಾಡಲಿ?
ಇದನ್ನು ಬಿಟ್ಟರೆ, ನನಗೆ
ಬೇರೆ ಗತಿಯೆ
ಇಲ್ಲ
ಊರೊಳಗಿನ
ಜನರೆಲ್ಲ...
ನನ್ನ ಪ್ರೀತಿಯ
ಪಾತ್ರೆಗೆ, ಹುಳಿಯನ್ನೆ
ಹಿಂಡಿಬಿಟ್ಟರು
ಸಾಕಿ....
ಸತ್ತು.. ಗೋರಿಯ
ಸೇರಿದ ಮೇಲೆ
ಅಯ್ಯೋ.. ಎಂದೆಲ್ಲ
ಲೊಚಗುಟ್ಟುವದನ್ನು
ನೋಡಿ... ನನ್ನಾತ್ಮವು
ನಗತೊಡಗಿತು..
ಲೇಖನಿಯ
ನಿಬ್ಬಿಗೂ ಭಯವಾಗುತ್ತಿದೆ
ಅವಳ ಹೆಸರನ್ನೆತ್ತಿದರೆ
ಸಾಕಿ...
ಮನಸ್ಸು
ಹಗುರುಗೊಳ್ಳುವುದಾದರು
ಹೇಗೆ?
ವಿರಹದ ವೇದನೆಯನ್ನು
ಅದು ಬರೆಯದಿದ್ದರೆ
ಕೂಡಿದ್ದಷ್ಟು ದಿನ
ಅವಳ ಕಣ್ಣಲ್ಲಿ ಒಂದೆ
ಒಂದು ಮುತ್ತುದರದಂತೆ
ನೋಡಿಕೊಂಡಿದ್ದೆ
ಸಾಕಿ....
ಹನಿಯೇನು...?
ಕಣ್ಣೀರ ಕಡಲನ್ನೆ
ತುಂಬಿಹೋಗಿರುವಳಿಗಾಕಿ
ಮತ್ತೆ...ಮತ್ತೆ...
ಅದೇ ದಾರಿಯನ್ನು
ತೋರಿಸಬೇಡ
ಸಾಕಿ...
ಮರೆಯಲೆಂದೆ
ಬಂದವನು ನಾನು.
ಮರೆಸಲಾಗದಿದ್ದರೆ...
ಮಸಣದ ಹಾದಿಯನ್ನಾದರೂ
ತೋರಿಸಿಬಿಡು.
ನಿನ್ನ ಮಧು
ಬಟ್ಟಲೊಳಗಿನ
ಆಳವನ್ನೆ...
ಅರಿಯದ ಅಮಾಯಕನು
ನಾನು ಸಾಕಿ...
ಇನ್ನೂ...
ಅವಳ ಮನಸಿನ
ಆಳವನ್ನು
ಅಳೆಯುವುದಾದರು
ಹೇಗೆ ?
ಕೊಲ್ಲುವ ನೆನಪುಗಳಿಗೆ
ಇಡಬೇಕಿದೆ, ಪೂರ್ಣ
ವಿರಾಮ
ಸಾಕಿ....
ನಿಶ್ಚಿಂತೆಯಿಂದಲೆ
ಮಲಗಬೇಕಿದೆ...
ಗುಟುಕು... ಗುಟುಕು
ಕುಡಿಯುವ ಮದ್ಯಕ್ಕೆ
ನೀಡದೆ ವಿರಾಮ
ಈಗಲೂ...
ಚಿಂತಿಸುತ್ತಿರುವೆ
ಸಾಕಿ...
ಅವಳು ಬಿಟ್ಟು
ಹೋದಳೆಂದಲ್ಲ,
ನನಗೆ ದಕ್ಕದ್ದು...
ಇವನಿಗೆ ಹೇಗೆ
ದಕ್ಕಿತೆಂದು
ಬಿಚ್ಚಿಡಲೇನಿದೆ
ನನ್ನದೆಯಲ್ಲಿ...?
ನೋವೊಂದನು
ಹೊರತುಪಡಿಸಿ
ಸಾಕಿ...
ಬಚ್ಚಿಟ್ಟುಕೊಳ್ಳಲೇನಿದೆ
ಗುಟ್ಟೊಂದು...
ನಿನ್ನ ಮಧು ಬಟ್ಟಲನ್ನು
ಹೊರತುಪಡಿಸಿ.
ಮುತ್ತು ಕೊಡವಳೇನೊ
ಎಂದು, ಅವಳ ಬೆನ್ನ
ಹಿಂದೆ ಬಿದ್ದು
ದಡ್ಡನಾದೆನಲ್ಲ
ಸಾಕಿ...
ಜಾಣೆ...
ಮುತ್ತಿಕ್ಕಲು ನಿನ್ನ
ಮಧು ಬಟ್ಟಲನ್ನು
ಕೈಗಿಟ್ಟು
ಹೋದಳಲ್ಲ..!!!
ಪ್ರೀತಿಯೆಂದರೆ
ಏನೆಂದು ಅರಿಯುವ
ಮೊದಲೆ....
ಎದೆಯ ಮೇಲೆ
ವಿರಹದ ಭಾರವ
ಹೊರಿಸಿ
ನಡೆದುಬಿಟ್ಟಳಲ್ಲ
ಸಾಕಿ...
ಜೊತೆಯಲ್ಲೆ
ಇರಬೇಕಾದವಳು..
ಬೆನ್ನಿಗೆ ಚೂರಿಯನಿರಿದು
ನಡೆದುಬಿಟ್ಟಳಲ್ಲ
ನಿದಿರಯೆ
ಇಲ್ಲವೆಂದ ಮೇಲೆ
ಇನ್ನೂ...
ಕನಸುಗಳ
ಮಾತೆಲ್ಲಿ
ಸಾಕಿ....
ಹಗಲಿನಲ್ಲಿಯೆ
ಕೈಗೆ ಸಿಗದವಳು...
ಇರುಳಿನಲ್ಲಿ...?
ಆ ಸಂಜೆಗೆ
ನನ್ನೆದೆಯ ಮೇಲೆ
ಅವಳು ಗೀರಿ
ಹೋದ ಗಾಯಗಳಿಗೆ
ಮಧುವನ್ನು
ಸುರಿದುಕೊಳ್ಳಬೇಕಿದೆ
ಸಾಕಿ....
ಗೀರಿದ ಗಾಯವನ್ನು
ಮಾಸಿಸಿಕೊಳ್ಳಬೇಕೆಂದಲ್ಲ,
ಹೆಚ್ಚಾಗದಿರಲೆಂದು...
ಮನಸು ಮುರಿದು
ಹೋದವಳ.. ಕನಸುಗಳನ್ನು
ಕಟ್ಟಿಕೊಂಡು ನಾನೇನು
ಮಾಡಲಿ
ಸಾಕಿ....
ಪ್ರೀತಿಯ ಸೇತುವೆಯನ್ನೆ
ಮುರಿದು ಹೋದವಳ
ನೆನಸಿ...ಕುಡಿಯುವುದರಲ್ಲಿ
ತರವೇನಿದೆ?. ಆದರೂ ಮಧುವನ್ನು
ಹಿಗ್ಗುವುದರಲ್ಲಿ ಒಂಥರಾ....
ಮಜವಿದೆ
ಹೂಮನಸಿನವಳ
ಮುಡಿಗೆ ಮಲ್ಲಿಗೆಯನ್ನು
ಮುಡಿಸಿದ್ದೆ
ಸಾಕಿ....
ಒಲವಿನ ಸುಗಂಧವ
ಸವಿದು.. ಕೊನೆಗೆ
ವಿರಹದ ವಿಷವನ್ನೆ
ಕಕ್ಕಿ ಹೋಯಿತಲ್ಲ..!!!
ಕತ್ತಲಾಯಿತೆಂದು
ಬೀಗವ ಹಾಕದಿರು
ನಿನ್ನರಮನೆಗೆ
ಸಾಕಿ...
ನಾನಿಲ್ಲಿರುವುದು
ಅವಳಿಗೆ ಗೊತ್ತಿಲ್ಲ !!!!
ಇಂದು ಹುಣ್ಣಿಮೆ.
ಹುಡುಕಿಕೊಂಡು ಇಲ್ಲಿಗೆ
ಬರಬಹುದೇನೊ?
ಮತ್ತೆ...ಮತ್ತೆ...
ಅವಳ ಪಡೆಯಬೇಕೆಂಬ
ಆಸೆಯು...
ಎಡೆಬಿಡದೆ
ಕಾಡುತಿಹುದಲ್ಲ
ಸಾಕಿ...
ಹೇಗೆ ದಿನಗಳನೆಣಿಸಲಿ?
ಎಷ್ಟು ಕುಡಿದರು
ಮರೆಸದವಳ.. ನಿನ್ನ
ಮದ್ಯವನ್ನೆ ಕುಡಿದು
ಹಾಲಿನ ಪಾತ್ರೆ
ಎಷ್ಟು ದೊಡ್ಡದಿದ್ದರೇನು ?
ಹನಿ ಹುಳಿಯು
ಸಾಕು ಹಾಲು
ಒಡೆದು ಹೋಗಲು
ಸಾಕಿ...
ನಿನ್ನರಮನೆಯ
ತುಂಬಾ...
ಎಣಿಸಲಾರದಷ್ಟು
ಮಧುವಿದ್ದರೇನು?
ಬಂತು...
ಹೋಳು ಉಪ್ಪಿನಕಾಯಿ
ಇಲ್ಲದಿದ್ದರೆ
ನೆಕ್ಕಲು
ಕುಡಿದುಬಿಟ್ಟ
ಅಷ್ಟೂ... ಮದ್ಯದ
ಬಟ್ಟಲುಗಳನ್ನು
ತೊಟ್ಟಿಗೆ ಎಸೆಯದಿರು
ಸಾಕಿ.....
ಒಂದನ್ನಾದರು
ಉಳಿಸಿಟ್ಟುಕೊ...
ಬರುವ ವಿರಹಿಗಳಿಗೆ
ನನ್ನ ಕಥೆಯ,
ವ್ಯಥೆಯನ್ನು
ತಿಳಿಸಲು
ಕಳೆದುಹೋದವಳ
ಚಿಂತೆ ನನಗಿಲ್ಲ
ಸಾಕಿ...
ಕೈಯೊಳಿರುವ
ನಿನ್ನ ಮಧು
ಬಟ್ಟಲು...
ಜಾರಿ ಬಿಳದಂತೆ
ಹಿಡಿದಿಟ್ಟುಕೊಂಡರೆ
ಸಾಕಲ್ಲ..
ಹಾದಿ ಬೀದಿಯಲಿ
ಓಡಾಡುವವರ ಚಿಂತೆ
ನನಗೇಕಿಗ
ಸಾಕಿ...
ನನ್ನ ಪ್ರೀತಿಗೆ
ಅಡ್ಡಗಾಲನ್ನು
ಹಾಕಿದವರು
ಅವರೆ ಅಲ್ಲವೆ ?
ಇತಿಹಾಸವನ್ನು
ಕೆದಕಬೇಡ
ಸಾಕಿ...
ಹುಚ್ಚು ಹುಡುಗರು..
ಅವಳ ಮೋಸವನರಿತು
ಪ್ರೀತಿಯ ಮೇಲಿನ
ನಂಬಿಕೆಯನ್ನೆ
ಕಳೆದುಕೊಂಡಾರು...!!!
ಇತಿಹಾಸದ
ಪ್ರತಿ ಪುಟದಲ್ಲೂ..
ಗೋರಿ ಸೇರಿದವರ
ಹೆಸರೆ....
ಚಿರಸ್ಥಾಯಿಯಾಗಿದೆ
ಸಾಕಿ..
ಮನಸ್ಸಿಲ್ಲದೆ
ಮಧು ಮಂಚದಲ್ಲಿ
ಹೂಗಳನ್ನು
ಹೊಸಕಿದವರದಲ್ಲ
ನನ್ನೆದೆಯ
ನೋವಿಗೆ... ಅವಳಾವ
ಬೆಲೆಯ ಕಟ್ಟುವಳು
ನಿ ಕೇಳಿಬಿಡು
ಸಾಕಿ...
ಸೋತವರೆ
ಅಮರರಾದ
ವಿಷಯ..
ಅವಳಿಗಿನ್ನೂ...
ಗೊತ್ತಿಲ್ಲ
ಇಷ್ಟು ಬೇಗ
ಬಾಯಲ್ಲಿ ಮಣ್ಣು
ಹಾಕಿಕೊಳ್ಳುವಾಸೆ
ನನಗಿನ್ನು
ಬಂದಿಲ್ಲ
ಸಾಕಿ...
ನಿನ್ನ ಮದ್ಯವು
ಮತ್ತೇರಿಸುವುದನ್ನೆ
ಬಿಟ್ಟರು...ಸರಿ
ನಾನು ಮಾತ್ರ
ಕುಡಿಯುವುದನ್ನು
ಬಿಡುವುದಿಲ್ಲ
ತೊಡೆ ತಟ್ಟಿದವರೆಲ್ಲ
ಜಗಜ್ಜಟ್ಟಿಗಳಲ್ಲ
ಸಾಕಿ....
ಮಣ್ಣು ಮುಕ್ಕಿದವರು
ಇದ್ದಾರೆ...
ಗುಲಾಬಿಯ ಹಿಡಿದವರೆಲ್ಲ,
ಪ್ರೀತಿಯನ್ನು
ಗೆದ್ದವರೆನಲ್ಲ...
ಸೋತವರಲ್ಲಿ....
ಮಧು ಬಟ್ಟಲಿಗೆ
ಮುತ್ತಿಕ್ಕುವವರು
ಇದ್ದಾರೆ..
ಬೆಲೆಯ ಕಟ್ಟಿ
ಏನನ್ನಾದರೂ...
ಕೊಂಡು ತರಬಹುದೆಂಬುದು
ನಿನ್ನದು ಹುಚ್ಚು
ಭ್ರಮೆ
ಸಾಕಿ...
ಹಣ ಕೊಟ್ಟು
ನಿನ್ನ ಮಧ್ಯವನ್ನು
ಖರೀದಿಸಬಹುದು...
ಅವಳ
ಪ್ರೀತಿಯನ್ನೇನಲ್ಲ
ಎಷ್ಟೆಂದು
ಹೊರಳಾಡಲಿ
ಅವಳಿಲ್ಲದ ಈ
ಹಾಸಿಗೆಯ ಮೇಲೆ
ಸಾಕಿ...
ಸಹಿಸಿಕೊಳ್ಳಲಾಗದ
ವಿರಹದ ಉರಿಯನ್ನು
ಹೊತ್ತಿಸಿದ್ದೆ ಈ...
ರಾತ್ರಿಗಳು
ಅವಳ ಮುಡಿಗೆ
ಮುಡಿಸಿದ ಮಲ್ಲಿಗೆಯ
ಹೂಗಳಿಗೆ ನಾನೆಂದು
ಲೆಕ್ಕವನ್ನೆ ಇಟ್ಟಿಲ್ಲ
ಸಾಕಿ...
ಇಂದವಳ ಮಧು
ಮಂಚವ ಶೃಂಗರಿಸಿದ
ಹೂವಾಡಿಗ...ಹೂವಿನ
ಬಾಬತ್ತನ್ನು
ಕೇಳುತ್ತಿರುವನಲ್ಲ
ಪದೆ...ಪದೆ..
ನಿನ್ನ ನೋವ
ಮರೆಸುವವಳು
ನಾನೆ...ಎಂದು
ಬೀಗಬೇಡ
ಸಾಕಿ...
ನನ್ನೆಲ್ಲ ಸ್ವತ್ತಿನ
ಪತ್ರಗಳು...
ನಿನ್ನ ಕಬ್ಬಿಣದ
ಪೆಟ್ಟಿಗೆಯಲ್ಲಿರುವುದನ್ನು
ನೀನು ಮರಿಬೇಡ
ತೆರೆದಿಡುವುದಕ್ಕಾದರು
ಏನುಳಿದಿದೆ
ಸಾಕಿ....
ಭಗ್ನಗೊಂಡ ಒಲವು
ಊರಿಗೆ ಗೊತ್ತು...
ಕುಡಿಯುವುದು
ಅವಳಿಗೂ ಗೊತ್ತು..
ನನ್ನೆದೆಯ ನೋವು
ನಿನಗೆ.... ಗೊತ್ತು
ನಿನ್ನ ಮದ್ಯದ
ಬಟ್ಟಲೊಂದನು
ಹೊರತುಪಡಿಸಿ...
ನನ್ನ ಬಳಿಗೇನು
ಉಳಿದಿಲ್ಲ
ಸಾಕಿ...
ಮರೆಯಬೇಕೆಂದೆ
ಉಳಿದಿರುವ
ನೆನಪುಗಳನ್ನೆ
ಇನ್ನೂ....
ಮರೆಯಲಾಗಿಲ್ಲ
ಮೊದಲು...
ತೀರಿಸು ಬಾರೊ
ಕುಡಿದ ಮದ್ಯದ
ಹಳೆಯ
ಬಾಕಿ!
ತೀರಿಸುವೆನಾಗ
ನಿನ್ನಾಸೆಯ...ತುಟಿಯನ್ನು
ಸೋಕಿ..
ಇಲ್ಲದಿದ್ದರೆ...
ಮುತ್ತಿಕ್ಕಲು ಮುಖವಿರದಂತೆ
ರುಬ್ಬಿಬಿಡುವಳೀ...
ಸಾಕಿ...
ಮುಗಿಲ ಮಳೆಯೊಳಗೆ
ಅತ್ತರೆ...ಏನರ್ಥವಾದಿತು ?
ಎಷ್ಟೊ ಭಾರಗಳ ಹೊತ್ತ
ಹೆಗಲೊಂದಿದೆ..
ಕಣ್ಮುಚ್ಚಿ.. ಮಲಗಿಬಿಡು
ತಲೆಯನಿಟ್ಟು...
ಬಿಟ್ಟು ಹೋದವರ ಚಿಂತೆಯೊಂದನು
ಬಿಟ್ಟು...
ಕನಸುಗಳು ಬೀಳಲೆಂದೆ
ಸಾಕಷ್ಟು ಮಧುವನ್ನು
ಕುಡಿದೆ ಸಾಕಿ...
ಕನಸೇನು ಬೀಳಲಿಲ್ಲ,
ಕಸವನೆತ್ತದ ಮೊರೆಯಲ್ಲಿ
ನಾ ಬೀಳುವುದು
ತಪ್ಪಲಿಲ್ಲ..
ಬಾರದವಳ
ಕಾಯುತ್ತ
ಕುಳಿತುಕೊಳ್ಳುವುದರಲ್ಲಿ
ಏನರ್ಥವಿದೆ
ಸಾಕಿ...
ತುಟಿಯಂಚಲಿ
ಕಾಪಿಟ್ಟುಕೊಂಡ
ಮುತ್ತುಗಳೆಲ್ಲ...
ಬಿಕ್ಕುತಿರುವಾಗ
ಹೆಂಡತಿಯ ಕಾಟಕ್ಕಿಂತ
ಪ್ರೇಯಸಿ ನೀಡಿದ
ನೋವಿಗೆ....
ಹೆಚ್ಚು ಕುಡಿಯುವರು
ಸಾಕಿ...
ಇವಳು ಮುಡಿದ
ಮಲ್ಲಿಗೆಗಿಂತ
ಅವಳು ನಿರಾಕರಿಸಿದ
ಮಲ್ಲಿಗೆಯ
ಘಮಲೇ... ಇನ್ನೂ
ಕಾಡುತಿಹುದು
ನನ್ನೆದೆಯ
ನೋವಿಗೆಲ್ಲ...
ಸಾಕ್ಷಿಯನ್ನು
ಕೇಳುತ್ತಿರುವೆಯಲ್ಲ
ಸಾಕಿ...
ನೋಡು ಮೇಲೊಮ್ಮೆ
ತುಂಬು ಚಂದಿರನ
ಎದೆಯ ಮೇಲೆಲ್ಲ
ಸುಟ್ಟ ಕಲೆಗಳು..!!
ಬೇಕಾ..?
ಇದಕ್ಕಿಂತ ಬೇರೆ
ಸಾಕ್ಷಿ..
ಅವಳಿಗ ಎದುರಿಗೆ
ಬಂದು ನಿಂತರೆ
ಏನು ಮಾಡಲಿ
ಸಾಕಿ...
ಈಗೀಗ ಅವಳ
ಮೋಹಕ್ಕಿಂತ, ನಿನ್ನ
ಮದ್ಯದ ಅಮಲೆ
ನನ್ನನಾವರಿಸಿಕೊಂಡುಬಿಟ್ಟಿದೆಯಲ್ಲ
ಅವಳ
ಪ್ರೀತಿಯನ್ನು
ಪಡೆಯುವ ರಭಸದಲ್ಲಿ
ಯಾರೊಬ್ಬರೂ...
ಹಾದಿಯನ್ನೆ ಬಿಡಲಿಲ್ಲ
ಸಾಕಿ...
ನಿನ್ನ ಮದ್ಯವನ್ನು
ಕುಡಿದ ಮೇಲೆ...
ಇಡಿ ಬೀದಿಯೆ
ಬರಿದಾಗಿಬಿಟ್ಟಿತಲ್ಲ..
ಮರೆಯಬೇಕೆಂದಷ್ಟು
ಅವಳ
ನೆನಪುಗಳ
ಒರತೆಯೆ
ಕಡಿಮೆಯಾಗುತಿಲ್ಲ
ಸಾಕಿ...
ಬಿಟ್ಟು ಬಿಡಬೇಕೆಂದಷ್ಟು
ನಿನ್ನ ಮಧು
ಬಟ್ಟಲಿನ ರುಚಿಯೆ
ನನ್ನ ಕೈಯನ್ನು
ಬಿಡುತಿಲ್ಲ
ಹೀಗೆಕೆ ನಗುತಿರುವೆ ನನ್ನನೆ ನೋಡಿ...
ಸಣ್ಣದೇನು ನನಗೂ..ಎಲ್ಲರಿಗೂ ನಿ ಮಾಡಿರುವ ಮೋಡಿ
ಇದೊಂದು ಹೊತ್ತಿಗೆ ನೀನಾಗಿಬಿಡುವೆ ಅನ್ನದ ಹಿಡಿ
ಕಳೆದುಕೊಂಡ ಕ್ಷಣವೆ ನಾನಾಗಿಬಿಡುವೆನಲ್ಲ ಹುಡಿ
ದುಡಿದುಣ್ಣಲು ಮುಪ್ಪೊಂದು ಹಾಕಿಹುದಲ್ಲ ದೇಹಕ್ಕೆ ಬೇಡಿ
ಬದುಕಲಾದಿತೆ...ತುತ್ತು...ತುತ್ತಿಗು ಜನರನ್ನು ಕಾಡಿ ಬೆಡಿ
ಊರು, ನೆಂಟರು, ಭಂಟರನೆಲ್ಲರ ಬಿಟ್ಟುಬಂದೆ
ನಿನ್ನ ಪಡೆಯಲು... ಬಿಸಿಲೊ.. ಮಳೆಯೊ, ಬೆವರ
ಹರಿಸಿ ಪಡೆದೆ, ಉಸಿರಗಟ್ಟಿಸಿಯು ಇಟ್ಟುಬಿಟ್ಟೆ ನಿನ್ನನು...ಕಬ್ಬಿಣದ ಪೆಟ್ಟಿಗೆಯಲಿ...
ಹುಟ್ಟಿಕೊಂಡವದೆಷ್ಟು ಕುರುಡು ಸಂಬಂಧಗಳಾಗ,
ತೊಡರಿಕೊಂಡ ಬಳ್ಳಿಗಳದೇಷ್ಟೊ ಬಲ ಬಂದಾಗ
ಕೊನೆಯವರೆಗೂ ಜೊತೆಗಿರುವೆನೆಂದವರೆಲ್ಲ, ಬಾಳ
ಮದ್ಯದಲೆ ಹುಟ್ಟಿನ... ದಿಕ್ಕನು ಬದಲಿಸಿಬಿಟ್ಟರಲ್ಲ..!!!
ಹಾದಿಯಲಿ ಎಡವಿ ಬಿದ್ದವರಿಗದೇಷ್ಟೊ ಹೆಗಲಾಗಿದ್ದೆ,
ಜೇಬ ತುಂಬಿಸಿಕೊಂಡವರೊಬ್ಬರಾರು ಹಿಂತಿರುಗಿ ನೋಡಲಿಲ್ಲವಲ್ಲ...!!!
ಮಾತೆತ್ತಿದರೆ ಪ್ರಾಣವನೆ ಕೊಡುತ್ತಿದ್ದೆನೆನ್ನುವರೆಲ್ಲ,
ನಿನ್ನ ಗಾಳಿ ಸೋಕಿದೊಡೆ.. ಬೆಣ್ಣೆಯನು ಇರಿದ
ಹಾಗೆ, ಬೆನ್ನಿನಲಿ ಚೂರಿಯನ್ನಾಡಿಸಿಬಿಟ್ಟರಲ್ಲ,
ನಗುನಗುತ್ತಲೆ...!!!!
ನನಗೇನು ಗೊತ್ತಿತ್ತು..? ಅವರ ಮೊಗದ ಮೇಲೆಲ್ಲ
ನಿನ್ನ ಹಾಗೆಯ ಒಂದು ಮೋಸದ ? ನಗೆಯೊಂದಿತ್ತಲ್ಲ..!!
ಬೀದಿಯಿಂದ ಬಂದವನು...ಮತ್ತೀಗ ಬೀದಿಯಲ್ಲೆ ಬಿದ್ದಿರುವೆ
ನೀನು ಬಂದ ಹೋದ ನಡುವೆ..ಎಂತೆಂತಹ ಪಾತ್ರಗಳ
ಸೃಷ್ಟಿಸಿಬಿಟ್ಟೆ... ಆಡಿಸಿಬಿಟ್ಟೆ... ಕುಣಿಸಿಬಿಟ್ಟೆ.. ಧಗಧಗನೆ ಉರಿಸಿಯೂ ಬಿಟ್ಟೆ..., ಕಣ್ಣೀದ್ದರೂ...ಅವರಾಡುವ ನಾಟಕವ
ಅರಿಯದೆ ಹೋದೆ, ಅದರ ತಪ್ಪಿಗೆ... ಹೆಸರಿಲ್ಲದ ಬೀದಿಗಳಿಗೆ
ನನ್ನನಿಂದು ರಾಜನನ್ನಾಗಿಸಿದೆ
ಬೇಕು...ಬೇಕು ನೀನು.. ಎಲ್ಲದಕ್ಕೂ.. ಹುಟ್ಟಿಗೆ, ಹೊಟ್ಟೆಗೆ,
ಬಟ್ಟೆಗೆ, ಕೊನೆಕೊನೆಯ ಚಟ್ಟಕ್ಕೆ.., ಚಟ್ಟವನೇರಿದ ಮೇಲೆ
ಅವರ ಹಿಂದೆ ನೀನೇನು ಹೋಗುವುದಿಲ್ಲ, ನಿನ್ನನೇಷ್ಟೆ ಗಳಿಸಿಟ್ಟುಕೊಂಡರು...ಹೋದ ಅವರ ಪ್ರಾಣವ ಮರಳಿ
ತರುವುದು ನಿನಗಾಗುವುದಿಲ್ಲ.., ಗೊತ್ತೊ.. ಗೊತ್ತಿಲ್ಲದೆಯೊ
ಆದರೂ... ನಿನ್ನ ಪಡೆಯುವ... ಹುಚ್ಚು ಹಂಬಲ ಮಾತ್ರ, ನರರನ್ನು ಬಿಟ್ಟಿಲ್ಲ...ಬಿಡುವುದೆ ಇಲ್ಲ...
ಚಿತ್ರ ಕೃಪೆ : ಯೋಗಿರಾಜ ಎಸ್ ಎಸ್
ಕಷ್ಟ ಅಂತಂದು
ಎಲ್ಲಾದಕ್ಕು...
ದೇವ್ರ ಮುಂದೋಗಿ
ಕೈ ಮುಕ್ಕೊಂಡ
ನಿಂತ್ಕೊಳ್ತಾರು
ನೋಡವ್ವ...
ಪೂಜೆ ಮಾಡ್ಸಿಕೊಳ್ಳೊ
ಕಲ್ಲು... ಪೆಟ್ಟ
ತಿನ್ನಲಾರ್ದನ ದೇವ್ರಾಗ್ಲಿಲ್ಲ
ಅನ್ನೊ ಸತ್ಯಾನ...
ಎಲ್ರೂ ಮರ್ತ ನಿಂತ್ಗೊಂಡ್ರ
ಹ್ಯಾಂಗವ್ವ
ಮೈಕೈ ತಿಕ್ಕಲಾರ್ದ
ಮೈ ಮ್ಯಾಲಿನ
ಹೋಲ್ಸು...
ಹೋಗೊದಿಲ್ಲ
ಹೌದಲ್ಲವ್ವ...
ಇನ್ನ... ಬರೀ ನೀರಾಗ
ಮುಳುಗೆದ್ರ,
ಮಾಡಿದ ಪಾಪಾ
ತೋಳ್ದಹೊಕ್ಕಾವೇನೊ
ನಮ್ಮವ್ವ
ಅದನ್ನ ಕಡಿಬ್ಯಾಡ..
ಇದನ್ನ ಕೊಯ್ಯಬ್ಯಾಡ ಅನ್ಕೊತ
ಎಷ್ಟೊಂದ ಬಡ್ದಾಡ್ಕೊಂಡ
ಸಾಯ್ತಾರಲ್ಲೊ
ನಮ್ಮವ್ವ...
ಯಾವ ಧರ್ಮ ಹೇಳೈತಿ?
ನಿಮ್ಮ ಹಠಕ್ಕ...
ಹೆತ್ತಾಕಿ ಮಡಿಲಾಗ..
ಸಾವಿನ ಕೆಂಡ
ಸುರೀರಂತ
ಚಳಿ ಹೆಚ್ಚೆಂದು ಯಾರೂ...
ದೇಹಕ್ಕೆ ಬೆಂಕಿಯನ್ನೇನು
ಹಚ್ಚಿಕೊಂಡಿಲ್ಲ
ಸಾಕಿ...
ಹೀಗಿರುವಾಗ..
ಅವಳ ನೆನಪುಗಳ
ನೋವು, ತಾಳಲಾಗದೆಂದು
ಸಾಯಲು..
ನಾನೇನು ಹುಚ್ಚನೇನು
ನನ್ನ ಮನದೊಳಗೆ
ಅವಳದೆ
ಅಚ್ಚಳಿಯದ ಹೆಸರಿದೆ
ಹೇಗೆ ಅಳಿಸಿಕೊಳ್ಳಲಿ
ಸಾಕಿ..
ನಿನ್ನ ಮದ್ಯದ
ಜಗುಲಿಯಲ್ಲಿ ನನ್ನ
ಪ್ರೀತಿಯು ನರಳಾಡುತ್ತಿದೆ
ಉಳಿಸಿಕೊಳ್ಳಲಿ ಹೇಗೆ ?
ಬರೀ ನಿನ್ನ ಮದ್ಯವನ್ನೆ
ಹೀರಿ....
ಹಗಲಿರುಳು ನನಗೆ
ನಿನ್ನದೆ ಧ್ಯಾನ
ಮುರಿದುಬಿಡು ತುಟಿಯಂಚಲಿ
ಕಟ್ಟಿಕೊಂಡಿರುವ ಬಿಗು ಮೌನ
ಬಡವನೆದೆಯ ನಲಿಸಿಬಿಡು
ಹಾಡಿ ಸವಿಗಾನ
ಲೋಕ ಕೈ ಬಿಟ್ಟತು...
ನೀನು ಕೈ
ಬಿಡಲಿಲ್ಲ
ಸಾಕಿ...
ಅವಳು ಕೆಂದುಟಿಯಂಚಿಂದ
ನೀಡಿದ್ದ ಮಧುವು....
ವಿಷವಾಯಿತು.
ಬಟ್ಟಲೊಳಗಿನ ಮಧುವು
ಕಹಿಯಾಗಿದ್ದರು ಸರಿ...
ನನ್ನೆದೆಗೆ ತಂಪನ್ನೆ...
ಎರೆಯಿತು
ಮತ್ತೊಬ್ಬರ ಮತಿಯ
ಮದವೇರಿಸಿ....ಗೊರಲೆ
ತಿನ್ನುವ ಫಲಕಗಳ
ಪಡೆದುಕೊಳ್ಳುವ ಹುಚ್ಚು
ಹಂಬಲ ನನಗೇಕೆ
ಸಾಕಿ...
ಸಾಯುವವರೆಗೂ...
ಕೈ ಬಿಡದ, ಮತ್ತೇರಿಸುವ
ನಿನ್ನ ಮಧು ಬಟ್ಟಲೊಂದು
ಕೈಯಲ್ಲಿರುವಾಗ...
ಎದೆಯಲ್ಲಿ ನೆಟ್ಟ ಪ್ರೀತಿಯ ಬಳ್ಳಿಯ
ಚಿಗುರನು... ಸದ್ದಿಲ್ಲದೆ, ನೋವಾಗದಂತೆ
ಚಿವುಟಿ ಹೋದಳಲ್ಲಳವಳು ಸಾಕಿ...
ಕ್ಯಾ ಪ್ಯಾರ ಕರ್ನೆವಾಲೊಂಕೊ ಇಸಿ...
ತರಹ ಕಿ ಸಜಾ ಕ್ಯೂಂ ಮಿಲ್ತಿ ಹೈ...
ಜಿಂದಾ ರಹ್ತೆ ಹೈಂ ಜರೂರು..
ತಡಪ್ನೆವಾಲೆ ಉನ್ಕಿ ಯಾದೊಂಕಾ
ಕತ್ಲ ಕರ್ನಾ ನಾ ಹೊತೆ ಹುಯೆ...
ಎದೆಯ ಗೂಡಿನಲ್ಲಿ ಕನಸುಗಳ
ಮೊಟ್ಟೆಯನಿಟ್ಟು... ಕಾವು ಕೊಡದೆ
ರೆಕ್ಕೆಬಿಚ್ಚಿ ಹಾರಿ ಹೋಗಿದೆಯಲ್ಲ ಸಾಕಿ
ನನ್ನೆದೆಯ ಹಕ್ಕಿ...
ಜಾಲ ಬಿಚಾಕೆ ಬೈಟ್ನೆಕೆಲಿಯೆ ಮೈ ಕೊಯಿ
ಹತ್ಯಾರ ನಹೀ ಹ್ಞೂಂ...
ಉಸೀನೆ ಬಿಚಡೆ ಹುಯೆ ಜಾಲ್ ಪೆ ಫಸ್ಕರ
ತಡಪ್ತಾ ಹುವಾ ನಾದಾನ ಪ್ರೇಮಿ ಹ್ಞೂಂ..
ಹನಿ..ಹನಿಯಾಗಿಯಾದರೇನು...?
ಬಟ್ಟಲು...ಬಟ್ಟಲುಗಳಾದರೇನು...?
ಲೆಕ್ಕವಿಡದ ಹೂಜಿ...ಹೂಜಿಗಳ ಮದಿರೆಯನ್ನೆ
ಕುಡಿದರೇನು ಬಂತು ಸಾಕಿ...
ಎದೆಯುರಿಯೆ ಆರದಿರುವಾಗ..!!!
ಪಿತಾ ಹ್ಞೂಂ ಜಾನಬೂಜಕರ್..
ಪಿತಾ ಹ್ಞೂಂ ಜಾನಬೂಜಕರ್...
ಕ್ಯಾ ಕರೂಂ...ಜಿನೆ ಮೆ ಕೋಯಿ ಧಮ್ ನಹೀ ಹೈ
ಮರ್ನೆ ಮೆ ಮುಝೆಕೋಯಿ ಘಮ್ ನಹೀ ಹೈ
ಮಾಡಿದ ಪಾಪಾ ಕಳ್ಕೊಳ್ಳಾಕ
ಸಾಕಷ್ಟ ನದಿಗಳದಾವಂದ ಮ್ಯಾಲ
ಪಾಪ ಮಾಡೊದೇನ ತಪ್ಪೊ ತಮ್ಮಾ...
ಮಾಡಿದ ತಪ್ಪನ್ನ ತಿದ್ಕೊಳ್ಳದ ಮಣ್ಣ
ಸೇರಿದ್ರ, ಬದುಕನ್ನ ಯಾವ ತಕ್ಕಡ್ಯಾಗಿಟ್ಟರ
ತೂಗ್ತೀಯೊ ತಿಮ್ಮ...
ತುಳ್ದ...ತುಳ್ದ ಗಳ್ಸಿದ ಕಾಸೆಲ್ಲ
ಕಬ್ಣದ ಪೆಟ್ಗಿ ಹೊಟ್ಟಿ ಸೇರ್ತಲ್ಲೊ ತಮ್ಮಾ..
ಗೊತ್ತಿಲ್ಲದ್ದೇನು ? ಹೊಟ್ಟಿ..ಬಟ್ಟಿ ಕಟ್ಟಿ
ದುಡ್ದ ಜೀವಾ ಅದು, ಸತ್ತ ಮ್ಯಾಲ ಕಟ್ಗಿ
ಕಪಾಟನ್ಯಾಗ ಮುಚ್ಗೊಂಡ ಹೋಗ್ತಾರು ತಿಮ್ಮ
ಮೂಲೋಕ ಗೆದ್ದವಂಗ ಮನ್ಯಾನ ಹೆಂಡ್ತಿನ
ಸಂಭಾಳ್ಸಾಕ ಆಗೋದಿಲ್ಲೊ ತಮ್ಮಾ...
ಎಷ್ಟ ದೇಶದ ಚುಕ್ಕಾಣಿ ಹಿಡದ್ರೇನಾತ, ಗಂಡನ
ಜುಟ್ಟು ಕೊನಿಗೆ ಹೆಂಡ್ತಿ ಕೈಯ್ಯಾಗ ಇರತೈತೊ ತಿಮ್ಮ
ಕಾಲ್ಕೆದರಿ ಕದನಕ್ಕ ಬಂದೊರೆಲ್ಲ ಕಾಲಕಾಲಕ್ಕೂ
ಉಳಿಲಿಲ್ಲ ನೋಡ್ತಮ್ಮಾ....
ಕಾಲನ ಹೊಡ್ತಕ್ಕ ಸಿಕ್ಕವ್ರು ಚರಿತ್ರೆಯೊಳಗಿನ
ಪುಟದಾಗ ಹೇಳ ಹೆಸರಿಲ್ದಂಗ ಅಳಸಿ ಹೋಗ್ಯಾರ
ನೋಡ್ತಿಮ್ಮಾ