Thursday, December 27, 2018

ನಮ್ಮವ್ವ

ಹೊತ್ತ...ಹೊತ್ತಿಗೂ
ಹೊಟ್ಟಿ ಸಲುವಾಗಿ...
ಪಾಲಿಸ್ಟರ್ ಸೀರಿ
ಸೆರ್ಗ ಹಾಸೊ..
ಹೆಣ್ಣನ್ನರ
ನಂಬುಬೋದು
ಕೇಳವ್ವ...
ಮಾತ...ಮಾತನ್ಯಾಗ
ಮೂರ್ದ ಬೀಳೊ
ಖಾದಿ ತೊಟ್ಟೊರ
ಸಹವಾಸರ ಹ್ಯಾಂಗ
ಮಾಡ್ಬೇಕೊ
ನಮ್ಮವ್ವ

ಅಳೋ ಗಂಡ್ಸರ್ನ
ನಂಬಬಾರ್ದಂತ, ನಗೋ
ಹೆಣ್ಮಕ್ಳನ್ನ್ ನಂಬಬಾರ್ದಂತ
ಹಿರಿಯೊರ ಹೇಳ್ಯಾರಲ್ಲೊ
ನಮ್ಮವ್ವ...
ರಾಜ್ಯ ಆಳೋ ಯಜಮಾನಾನ
ದಿನಕ್ಕ..ವಾರಕ್ಕ..ತಿಂಗ್ಳಿಗೊಮ್ಮೊಮ್ಮೆ
ಅತ್ಗೊಂತ ಕುಂತ್ರ, ನಮ್ಮನ್ನ
ಕಾಯೋರ ಯಾರೊ
ಹಡದವ್ವ...

ಹೆಣ್ಣಿಗೆ ಮರ್ಯಾದಿ
ಕೊಡ್ತಿವಂತದ್,
ಆಕಿ ತಲಿಮ್ಯಾಲೊಂದ
ಹೊರಿ ಹೊರ್ಸಿ
ನಿಲ್ಲಿಸ್ಬಿಟ್ಟಾರು
ನೋಡವ್ವ....
ಒಂದ್...ಒಂದ್ ಹೆಣ್ಣನ್ನ
ತುಳಿಯಾಕ...
ಸಾವ್ರ ಮಂದಿ ತೊಡಿ
ತಟ್ಟಿ ನಿಂತಾರ ನೋಡೊ
ನಮ್ಮವ್ವ...

No comments:

Post a Comment