Sunday, April 30, 2017

ವಿರಹ

ಹೊದ್ದು ಮಲಗದಿರು ಗೆಳತಿ
ಆ ಲವಣದ ನೀರಿನ ಹೊದಿಕೆಯನು
ಮೊದಲೆ ದೇಹವದು ವಿರಹದ
ಬೆಂಕಿಯಲಿ ಬೆಂದಿದೆ..

ಉರಿವ ಗಾಯಕ್ಕೆ ಮತ್ತೆ ಮತ್ತೆ
ಅವನ ನೆನಪುಗಳ ಹೊದಿಕೆಯನು
ಹೊದ್ದುಕೊಳ್ಳಬೇಡ...
ಹೇಗಾದಿತದು... ಉರಿವ ಗಾಯದ
ಮೇಲೆ ಉಪ್ಪನು ಸವರಿದಾಗ...

ಉರಿದು... ಬೆಂದ ಮನದ ಮೇಲೆ
ಏಕೆ? ಅವನುಪ್ಪಿನ ನೆನಪುಗಳ
ಸವರಿಕೊಳ್ಳುವೆ...
ತಡೆದಿತೆ.. ಆ ನೋವ...
ಸಹಿಸಬಲ್ಲೆಯಾ... ಈ ವಿರಹ

ವಿರಹ

ಹೊದ್ದು ಮಲಗದಿರು ಗೆಳತಿ
ಆ ಲವಣದ ನೀರಿನ ಹೊದಿಕೆಯನು
ಮೊದಲೆ ದೇಹವದು ವಿರಹದ
ಬೆಂಕಿಯಲಿ ಬೆಂದಿದೆ..

ಉರಿವ ಗಾಯಕ್ಕೆ ಮತ್ತೆ ಮತ್ತೆ
ಅವನ ನೆನಪುಗಳ ಹೊದಿಕೆಯನು
ಹೊದ್ದುಕೊಳ್ಳಬೇಡ...
ಹೇಗಾದಿತದು... ಉರಿವ ಗಾಯದ
ಮೇಲೆ ಉಪ್ಪನು ಸವರಿದಾಗ...

ಉರಿದು... ಬೆಂದ ಮನದ ಮೇಲೆ
ಏಕೆ? ಅವನುಪ್ಪಿನ ನೆನಪುಗಳ
ಸವರಿಕೊಳ್ಳುವೆ...
ತಡೆದಿತೆ.. ಆ ನೋವ...
ಸಹಿಸಬಲ್ಲೆಯಾ... ಈ ವಿರಹ

ಅವಶೇಷ


ನಾ ಬಿಟ್ಟು ಹೋಗಿರುವ
ನೆನಪುಗಳು ಕೇವಲ ಅವಶೇಷಗಳು

ನಾ ಬಂದು ನಿನ್ನೊಡನೆ
ಬಾಳುವ ದಿನಗಳು ವಿಶೇಷಗಳು

ಮತ್ತೆ ನಿನ್ನ ನಾ ತೊರೆದು
ಹೋದರೆ ಬದುಕಿನ ಕ್ಷಣ
ಕ್ಷಣಗಳು ಕಾರ್ಕೊಟಕ ವಿಷಗಳು

ಈ ಸಲ... ಮರಳಿ
ಬರದೆ ಹೋದರೆ.. ಆ
ನೆನಪುಗಳೆಲ್ಲ....... ಬರೀ..
ಶೇಷಗಳು

ನೀರಾಗಿ ನಿಂತಾಗ..

ಸುಳ್ಳು ಹೇಳಬೇಡ ಹೀಗೆ
ಎಲ್ಲರೆದುರು ಓದಿದವರು
ಏನೆಂದುಕೊಂಡಾರು...

ನಿನ್ನ ತಪ್ಪಿಲ್ಲವೆ ಇಲ್ಲಿ....
ನೋಡು ನಿನ್ನ ಕಣ್ಣೋಟದ
ಬಾಣಗಳು
ನನ್ನೆದೆಯ ಸೀಳಿ ಎದೆ
ಬಡಿತವನೆ ಹೆಚ್ಚಿಸಿವೆ
ನಿನ್ನ ತುಂಟಿಯಂಚಿನ
ಮಿಂಚು
ಮಾತಿಗೆ ಮುತ್ತಿಗೆ ಹಾಕಿಬಿಟ್ಟಿದೆ
ಇನ್ನೇನು ಹೇಳಲಿ ನನ್ನೆದುರು ನೀ
ಹೀಗೆ ನಾಚಿ ನೀರಾಗಿ ನಿಂತಾಗ

ರಂಗೋಲಿ


ನಿನ್ನೊಲವಿನ ರಂಗೋಲಿ
ಬಿಡಿಸುತಿರುವೆ ಮನದಲಿ

ಆಡಿದ..ಕಾಡಿದ.. ಹಾಡಿದ
ಪದಗಳ ಚುಕ್ಕಿಯ ಸೇರಿಸಿ

ನಕ್ಕು ನಲಿದ ಗೆರೆಗಳ
ಸೇರಿಸಿ.

ಕಂಡ ಕಾಣುತ್ತಿರುವ ಕಾಣಬೇಕಾದ
ಕನಸಿನ ಬಣ್ಣವ ತುಂಬಿ

ಕೂಡಿದ ಕೂಡಿ ಬಾಳಬೇಕಾಗಿರುವ
ಬಾಳಿನ ರಂಗೋಲಿಯನು

ಬಿಡಿಸುತಿರುವೆ ನಿನ್ನ ಹೆಸರಲೆ.

ಕಾಗದಕ್ಕೂ ನಾಚಿಕೆ


ಮನಸಿನಲ್ಲಿ ಅವಳಿಗೆಂದೆ..
ಕನಸು ಮೂಡಿತು..
ಒಪ್ಪಿಸಿಬಿಟ್ಟೆ ಕಾಗದಕ್ಕೆ
ಕಾಗದವು ಆ ಕನಸಿನ
ಸಾಲುಗಳ ಓದಿ..
ಅವಳಿಗಿಂತಲೂ... ಹೆಚ್ಚು
ನಾಚಿ ನೀರಾಯಿತು..

ಕಲ್ಲಾಗಲಿಲ್ಲ

ನಿನ್ನ ನೆನೆದಾಗಲೆಲ್ಲ...
ಮನಸ್ಸು ಮೆತ್ತಗಾಗುತ್ತಿತ್ತು..
ನಿನ್ನ ನೆನೆದಾಗಲೆಲ್ಲ
ಮನಸ್ಸು ಮೆತ್ತಗಾಗುತ್ತಿತ್ತು..
ನೀ.. ಬಿಟ್ಟು ಹೋದ ಮೇಲೆಕೆ
ಈ... ಮನಸ್ಸು ಕಲ್ಲಾಗಲಿಲ್ಲ

ಪ್ರೀತಿಗೆ ಮುಪ್ಪು


ಮುಪ್ಪು ಬಂದಿದೆ ಗೆಳಯ ನಿಜ...
ಪ್ರೀತಿ ಮುಪ್ಪಾಗಿರಬಹುದು
ಅದರೊಳಗಿನ ಹುರುಪಿನ್ನೂ..
ಕುಂದಿಲ್ಲ..

ಎದೆಯುಸಿರು ಕಟ್ಟುತಿದೆ
ನಿನ್ನೊಲವಿನ, ಬಲವಿನ
ಉಸಿರಿಲ್ಲದೆ

ಹುಡುಕುತಿರುವೆ ಏಕೆ ಅಲ್ಲಿ ಇಲ್ಲಿ
ನಿನ್ನ ಎದೆಯ ಮೇಲೊಂದು
ಕೈಯನಿಟ್ಟುಕೊಂಡು ಕೇಳು
ನನ್ನಳುವಿನ ಬಿಸಿಯ ತಾಪ
ತಟ್ಟದೆ ಇರುವುದಿಲ್ಲ

Saturday, April 29, 2017

ಅ ನಾ

ಅವರು

ವಿರಹವಿದು
ಕೊನೆಯಾಗಬೇಕಿದೆ
ಮಿಲನಕಾಗಿ ಹೃದಯ
ಕಾತರಿಸುತಿದೆ

ಅವನ ನೋಟದಲಿ
ನನ್ನ ಕಳೆದುಕೊಳ್ಳಬೇಕಿದೆ
ಅವನ ಭಾವದಲಿ
ನನ್ನ ಹುಡುಕಬೇಕಿದೆ

ನನ್ನ ಮೌನಕೆ ಅವನ
ಮಾತಿನ ಸ್ಪರ್ಶ ಬೇಕಿದೆ
ಅವನು ಜೊತೆಯಿಲ್ಲದ ಕ್ಷಣಗಳ
ಹೂಮಾಲೆಯಂತೆ ಪೋಣಿಸಬೇಕಿದೆ

ಇರುಳೆಲ್ಲ ಅವನ
ಮಾತುಗಳ ಆಲಿಸಬೇಕಿದೆ
ಹಗಲಲ್ಲಿ ಅದ ನೆನೆದು
ಮುದಗೊಳ್ಳಬೇಕಿದೆ

ಅವನ ತುಟಿಯಂಚಿನ
ನಗುವಿನಲಿ ಕರಗಬೇಕಿದೆ
ಹುಸಿಮುನಿಸ ತೋರಿ
ಅವನ ತೋಳ ಬಳಸಬೇಕಿದೆ

ಅವನೆದೆಯ ಹರವಿನಲಿ
ಹೊಳೆಯಾಗಿ ಹರಿಯಬೇಕಿದೆ
ಸಾಗರ ಸೇರುವ ನದಿಯ ತವಕ
ನನ್ನ ಕಣ್ಣಲಿ ತುಳುಕುತಿದೆ

ಈ ಹುಚ್ಚು ಆಸೆಗಳ
ಅವನಲ್ಲಿ ಹೇಳಬೇಕಿದೆ
ಮೊದಲು ವಿರಹವಿದು
ಕೊನೆಯಾಗಬೇಕಿದೆ

# ಗೀತಾ ಶ್ರೀ.

ನಿನ್ನ ಕಣ್ಣ ಕೊಳಗಳಲ್ಲೊಮ್ಮೆ
ಜಿಗಿಯಬೇಕಿದೆ....
ಪ್ರೇಮ ಭಾವಗಳೊಡಗೂಡಿ
ಈಜಬೇಕಿದೆ...

ಮಾತಿನ ಮಲ್ಲಿಗೆಯ ತಂದು..
ಮೌನದ ನಿನ್ನಂಗಳಕೆ ಸುರಿಯಬೇಕಿದೆ..
ನೀನಿಲ್ಲದೆ..... ಕಳೆದ ದಿನಗಳನು
ಮೂಟೆಕಟ್ಟಿ ಒಗೆಯಬೇಕಿದೆ..

ನಿನ್ನ ಮನಕೊಂದು...
ಪ್ರೇಮ ಸೇತುವೆಯ ಕಟ್ಟಬೇಕಿದೆ
ಕಂಡ ಕನಸುಗಳ...
ಹೊಳೆಯನ್ನೆ ಹರಿಸಬೇಕಿದೆ

ಹೃದಯದ ಕಾಯಿಯದು
ಕಾದು... ಕಾದು.. ಹಣ್ಣಾಗಿದೆ...
ವಿರಹದ ಹುಳುಗಳು ಹೊಕ್ಕು..
ಹುಳುಕು ಮನಸಿನ ಜನರೆದುರು
ಕೊಳೆತು ನಾರುತಿದೆ..

ಮರಳಿ ಉತ್ತಿ, ಬಿತ್ತಬೇಕಿದೆ..
ನಮ್ಮ ಪ್ರೇಮ ಬೀಜವನು
ಕತ್ತರಿಸಿ..... ನಮ್ಮ ಪ್ರೀತಿಗೆ
ಬೇಲಿಯಾಗಿಸಬೇಕಿದೆ...
ವಿರಹವನು..

ಕದನ ೨

ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ,
ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ,.......
ನಿನ್ನ ಒಮ್ಮೆ ನೆನೆದು ನನ್ನ ಮನಸ್ಸು ಮೆತ್ತಗಾಯಿತಲ್ಲ............!!

ನಿನ್ನ ನೆನೆದಾಗಲೆಲ್ಲ...
ಮನಸ್ಸು ಮೆತ್ತಗಾಗುತ್ತಿತ್ತು..
ನಿನ್ನ ನೆನೆದಾಗಲೆಲ್ಲ
ಮನಸ್ಸು ಮೆತ್ತಗಾಗುತ್ತಿತ್ತು..
ನೀ.. ಬಿಟ್ಟು ಹೋದ ಮೇಲೆಕೆ
ಈ... ಮನಸ್ಸು ಕಲ್ಲಾಗಲಿಲ್ಲ

Friday, April 28, 2017

ಮಳೆ

ನಿನ್ನೆ ಸಂಜೆಗೆ... ನಮ್ಮೂರಲ್ಲಿ
ಮಳೆ ಇಳಿಯುತ್ತಿತ್ತು...ಇಳೆಗೆ
ನಾಚಿ... ನಾಚಿ....

ಸುರಿದ ಪುಣ್ಯದ ಹನಿಗಳಿಷ್ಟೇ..
ಎಂದು ಭೂತಾಯಿ ಪಡೆದಳು
ಹನಿಗಳ ಬಾಚಿ... ಬಾಚಿ...

ಮಳೆ

ನಿನ್ನೆ ಸಂಜೆಗೆ... ನಮ್ಮೂರಲ್ಲಿ
ಮಳೆ ಇಳಿಯುತ್ತಿತ್ತು...ಇಳೆಗೆ
ನಾಚಿ... ನಾಚಿ....

ಸುರಿದ ಪುಣ್ಯದ ಹನಿಗಳಿಷ್ಟೇ..
ಎಂದು ಭೂತಾಯಿ ಪಡೆದಳು
ಹನಿಗಳ ಬಾಚಿ... ಬಾಚಿ...

ಕದನ೧


ಕಾಯುತ್ತಿರು ಗೆಳತಿ
ನಾ ಬರುವೆ ನಿನ್ನಲಿಗೆ
ಹೊತ್ತು ತರುವೆ ಬಾಡದ
ಕವನವೆಂಬ ಮಲ್ಲಿಗೆ...

ಇರಲಿಬಿಡು ಗೆಳೆಯ..
ನೀ ಬರುವ ಹೊತ್ತಿಗೆ
ಬಾಡಿ ಹೋಗುತ್ತದೆ
ನನ್ನ ಮನದ ಮಲ್ಲಿಗೆ..


ಅವಳು ಬಹಳ ಸಂತೋಷದಿಂದ
ಇದಾಳೆ ನನ್ನನ್ನು ಹಾಳು ಮಾಡಿ
ಆದರೆ ನಾನು ಅಳುತಿದ್ದೇನೆ.
ಅವಳ ನೆನಪು ಕಾಡಿ...!

ಅವನು ಬಹಳ ಸಂತೋಷದಿಂದ
ಇದ್ದಾನೆ, ನನಗೆ ನೋವು ನೀಡಿ
ಆದರೆ ನಾನು ನರಳುತ್ತಿದ್ದೇನೆ
ಅವನ ಹುಸಿ ಮಾತುಗಳ ನಂಬಿ

ಕಳೆದು ಹೋಗದಿರು..

ಕಳೆದು ಹೋಗದಿರು ಚೆಲುವೆ
ನೆನಪುಗಳ ಸುಳಿಯಲ್ಲಿ..
ಉರುಳಿದ ಕಾಲವನ್ನಾರೂ...
ತರಲಾರರು ಮರಳಿ...
ಬರುವೇನು ನಿನಗಾಗಿ
ಓಡೋಡಿ ಕಂಗಳ
ಕಾಂತಿಯ ತುಂಬಲು..
ಇರಲಿಬಿಡು...ಒಂದಿಷ್ಟು ಕಳೆ
ನಮ್ಮ ಪ್ರೀತಿ ತೋಟದಲಿ..
ನಾ ತಂದು ತುಂಬಲಾರೆನೆ..
ನಿನ್ನ ಮನಕೆ ಜೀವಕಳೆ..

ನಿನ್ನ ನೆನೆಯುತ್ತ

ಬೆರಸದಿರು ನೋಟಕ್ಕೆ
ನೋಟ...
ಅವೇಷ್ಟು ಮಾತನಾಡುತ್ತವೆ
ನಿನಗೆ ಗೊತ್ತಾ...?
ಬಿಡುವುದೆ ಇಲ್ಲ ರಾತ್ರಿಗೆ
ನಿದ್ರಿಸಲು...
ಎದ್ದು ಕುಳಿತು ಬಿಡುತ್ತವೆ
ನನ್ನ ನಯನಗಳು
ನಿನ್ನನೆ ನೆನೆಯುತ್ತಾ...

ಎಲ್ಲ ಮರೆತು ಕಣ್ಣು ಮುಚ್ಚಿ
ಮಲಗಬೇಕು
ಹಗಲು ಅನುಭವಿಸಿದ
ಮಧುರ ಕ್ಷಣಗಳನು
ಮತ್ತೆ ಕನಸಲಿ ಅನುಭವಿಸಬೇಕು

ಎಲ್ಲ ಮರೆಯಲೆಂದೆ...
ಮಲಗುವೆ ಕಣ್ಣು ಮುಚ್ಚಿ
ಮತ್ತೆ ಎಚ್ಚರಿಸುವವು
ಮಾತಿನ ಬಾಣಗಳು
ಚುಚ್ಚಿ ಚುಚ್ಚಿ
ಎದ್ದು ಕುಳಿತರೆ..
ಕನಸುಗಳ ಅನುಭವಿಸುವ
ಮಾತಾದರೂ ಇನ್ನೇಲ್ಲಿ..

ಗೆಳತಿ ಉಡುಗೊರೆ

ಗೆಳತಿ...
ಇಗೋ.. ನೀ ಕೊಟ್ಟ ಕಾಣಿಕೆಗೆ
ತುಂಬಿದೆ ಇಂದು ಇಪ್ಪತ್ತು ವರ್ಷ !!!
ಸದಾ... ನನ್ನೆದೆಯ ಮೇಲೆ ಯಾವಾಗಲೂ...
ಬೆಚ್ಚಗೆ ಮಲಗಿರುವ...
ನೀ ಕೊಟ್ಟಂತ ಲೇಖನಿ....
ನೀನು ಕೊಟ್ಟಿದ್ದು ಪ್ರೇಮದ ಕಾಣಿಕೆಯಾಗಿ
ನಾನು ಪಡೆದದ್ದು ಸ್ನೇಹದ ಕೊಡುಗೆಯಾಗಿ..

ಆ ದಿನವಿನ್ನೂ... ಚೆನ್ನಾಗಿ ನೆನಪಿದೆ ನನಗೆ
ಕಾಲೇಜಿನ ವಿದಾಯದ ದಿನಗಳಲ್ಲಿ
ನಿನ್ನ ಪುಸ್ತಕಕ್ಕೆ ನಾ ಬರೆದು ಕೊಟ್ಟ
ಎರಡು ಸಾಲುಗಳು....
ನಿನ್ನನು ಎರಡು ಗಂಟೆಯಲಿ
ನನ್ನನು ಪ್ರೇಮಿಸುವಂತೆ ಮಾಡಿದ್ದು...

ನಿನ್ನ ಮೊಗವು ಕಮಲಕ್ಕಿಂತಲೂ
ಸೊಗಸಾಗಿ ಅರಳಿತ್ತು
ನಗವು... ಶಶಿಗೆ ಅಸೂಯೆಯನೆ ತರಿಸುವಂತಿತ್ತು
ನಡಿಗೆಗೆ ಹಂಸವೆ ಸೋತು ಶರಣಾಗಿತ್ತು
ಮಾತನಾಡೆ...ಮಲ್ಲಿಗೆಯ ಎಸಳುಗಳೆ ಉದುರುತ್ತಿದ್ದವು
ಅಳುಕುತ ಬಳುಕುತ ಬಳಿ ಬಂದು, ನಿಂತು...
ಎದೆಗೆ ಅವುಚಿ, ಕರ ವಸ್ತ್ರದಲಿ ಬಚ್ಚಿಟ್ಟುಕೊಂಡು
ಬಂದಂಥ... ಆ ಲೇಖನಿಯನ್ನು ನನಗೆ ಕೊಡುತ್ತಾ....
ಕೇಳಿದ ಒಂದು ಮಾತು.......
ನೀವು ನನ್ನನ್ನು ಪ್ರೀತಿಸ್ತಿರಾ ?  ಅಂತಾ....

ಆಗ ನನ್ನ ಸ್ಥಿತಿ ಹೇಗಿತ್ತು ಗೊತ್ತಾ ನಿನಗೆ
ಕಿವಿಯ ಪಕ್ಕದಲ್ಲಿ ದೊಡ್ಡದೊಂದು
ಸಿಡಿಮದ್ದು ಸಿಡಿದು.... ಕಿವಿಯು ಕೆಪ್ಪಾದಂತೆ
ಎದೆಯ ಬಡಿತವು....ನಾಲ್ಕು ಕುದುರೆಗಳ
ಸಾರೋಟವು ವೇಗದಲ್ಲೊಡಿದ ಹಾಗೆ
ನಿಂತ ಜಾಗವು ಗಡಗಡನೆ ಕಂಪಿಸತೊಡಗಿದಂತೆ....
ಗಂಟಲ ಪಸೆಯೆ...... ಬರಡಾದ ಕೆರೆಯಂತೆ ಒಣಗಿ
ಮೈಯಲ್ಲಿನ ಬೆವರು... ಗಿರಿಯ ಝರಿಯಂತೆ
ಸರಸರನೆ ಇಳಿಯುತಿರಲು ....
ನನ್ನ ಪರಿಸ್ಥಿತಿಯ ಕಂಡು ನನ್ನ ಸ್ನೇಹಿತನಿಗೆ.......
ವಾರವಾದರೂ...... ಸಾಲಲಿಲ್ಲ ಅವನಿಗೆ
ನಗೆಯ ತಡೆಹಿಡಿಯಲು

ಆದರೆ....
ನಾನು ಬಯಸಿದ್ದು ನಿನ್ನ ನಿರ್ಮಲ ಸ್ನೇಹವನ್ನು  ಅದನ್ನೂ....ಬರಹ ರೂಪದಲ್ಲಿಯೆ... ತಿಳಿಸಿದ್ದೇನು
ನಿನ್ನ ಪ್ರೇಮ ನಿರಾಕರಣೆಯ ನಂತರ.......
ನಿನ್ನ ಮೊಗವನೊಮ್ಮೆಯು ನೋಡದಂತಾಯಿತು...

ಬೆಂಕಿಯ ಕಾವಿಗೆ... ಕಮರಿದ ಕುಸುಮದಂತೆ
ಮೊಗವು ಬಾಡಿತ್ತು....
ಹುಣ್ಣಿಮೆಗೆ ಹಿಡಿದ ಗೃಹಣದಂತೆ ನಗುವಿಗೂ....
ಗೃಹಣ ತಾಕಿತ್ತು..
ಹರಿದ ಸರದಿಂದ ಮುತ್ತುಗಳು ಚೆಲ್ಲುವಂತೆ
ಆ ಬಟ್ಟಲು ಕಂಗಳಿಂದ ನಾಲ್ಕು ಹನಿಗಳು
ದಳದಳನೆ ಜಾರಿಬಿಟ್ಟವು..
ಮಾತುಗಳೆಲ್ಲವು....... ಮೌನಕೆ ಶರಣಾದವು....
ನನ್ನ ನಿನ್ನ ನಡುವೆ ಸುಳಿವ ಸುಳಿಗಾಳಿಯ
ನೊಂದು ಹೊರತುಪಡಿಸಿ....
ಮತ್ತಾವ ಶಬ್ದಗಳಿಗೂ..... ಜೀವ ಬರಲಿಲ್ಲ

ಆದರೂ...
ಮನಸ್ಸಿಲ್ಲದ ಮನಸ್ಸಿನಿಂದ... ನನ್ನ ಸ್ನೇಹವನ್ನು
ಒಪ್ಪಿಕೊಂಡು.... ಆ ಲೇಖನಿಯನ್ನು ಕೊಟ್ಟೆ..
ಹೋಗುವಾಗ ಎರಡೆರಡು ಬಾರಿ ಹಿಂತಿರುಗಿ
ನೋಡಿ...ನೋಡಿ ... ನಡೆದೆ ನೀನು......
ಭಾರವಾದ ಹೆಜ್ಜೆಗಳೊಂದಿಗೆ
ಬರುವಾಗ ಇದ್ದ ಕಾಲ್ಗೆಜ್ಜೆಯ ನಾದ...
ಹೋಗುವಾಗ ಘಲ್ಲೆನಿಸದೆ... ಹೋದವು..

ಅಬ್ಭಾ....!
ನೆನೆದರೆ ಮೈ ರೋಮಾಂಚನವಾಗಿಬಿಡುತ್ತದೆ
ಇಪ್ಪತ್ತು ವರ್ಷಗಳೆ.... ಕಳೆದು ಹೋದವು
ಗೆಳತಿ...
ಇಗೇಲ್ಲಿರುವಿಯೊ.... ನಾನರೀಯೆ...
ನಿಮ್ಮ ಸ್ನೇಹದ (ಪ್ರೀತಿ ?) ಗುರುತು ಇನ್ನೂ
ನನ್ನೆದೆಯ ಮೇಲೆ ಹಾಗೆ ಮಲಗಿಯೆ....
ಇದೆ ಬೆಚ್ಚಗೆ...

Thursday, April 27, 2017

ಜಾರಿದ ಕಾಲು

ಹರೆಯದ ಹೊಸ್ತಿಲಲಿ
ಎಡವಿಲ್ಲ ಎಷ್ಟು ಮಂದಿ
ನಿನ್ನದೇನೂ....
ಹೊಸತಲ್ಲ ಬಿಡು ತಂಗಿ

ಪ್ರೇಮದ ಮೋಹದಲಿ
ಬಿದ್ದು, ಹರೆಯದ ಹೊಳೆಯಲಿ
ಜಿಗಿದು, ಕಾಮದ ವಾಂಛೆಯಲಿ
ಈಜಾಡಿ ಎದ್ದು ಹೋಗುವ ಗಂಡಸರದೇಷ್ಟಿಲ್ಲ
ಹುಡುಗಿ...

ಕಂಡು, ಕೇಳಿ, ಓದಿ ಉನ್ನತ ಸಮಾಜದಲ್ಲಿದ್ದು
ಕೊಂಡು, ಕಾಲು ಜಾರುವ ನಿಮ್ಮಂಥ ಹುಡುಗಿಯರು
ಇರುವುದರಿಂದಲ್ಲವೆ.. ಕಾಲೇಳೆಯಲು
ಬೀದಿಯ ಮೂಲೆ ಮೂಲೆಯಲು ನಿಂತಿರುವರು
ನಿಮಗಾಗಿಯೇ ಕಾಯುತ್ತ...

ಆದದ್ದು ಆಯಿತು ಮರಳಿ ಮರಳಿ
ಜಾರಂದತೆ ಮುಂದಿನ ಹೆಜ್ಜೆಗಳನ್ನಾದರು
ಎಚ್ಚರಿಕೆಯಿಂದ ಇಡು ತಂಗಿ..

Wednesday, April 26, 2017

ಮನ

ಅವಳದೊಂದು ಕವನ
ಗೆದ್ದಿತೆಲ್ಲ..... ಓದುಗರ
ಮನ
ನನ್ನದೊಂದು ಕವನ...
ಕದ್ದಿತವಳ ಮನ...

ವಿಧವೆ

ನನಗೇನು.. ಆಸೆಯಿಲ್ಲವೆ ಅಕ್ಕ..
ಸುಂದರ ಸ್ವಪ್ನಗಳ ಹೊತ್ತ ಬಂದ
ಬದುಕಿಗೆ, ಅವನಿಲ್ಲದೆ.......
ವಿಧವೆ ಬರೆ

ಬಣ್ಣ ಬಣ್ಣದ ಹಣೆಯ ಸಿಂಧೂರ
ಕೈ ತುಂಬಾ ಝಣ ಝಣಿಸುವ ಗಾಜಿನ ಬಳೆಗಳು
ಚೆಲುವ ಚಿತ್ತಾರದ ಸೀರೆಗಳು
ಘಮಘಮಿಸುವ ಮುಡಿಯ ಹೂವುಗಳು
ರವಿಯ ಕಿರಣಕೆ ಫಳ್ಳನೆ ಮಿಂಚುವ  ನತ್ತು
ಇಳಿ ಸಂಜೆಯಲಿ ಅವನ ಕೈ ಹಿಡಿದು
ಸಾಗುವ ಹಾದಿ..

ಇವೆಲ್ಲವ ಕಳೆದುಕೊಂಡು
ಹೇಗಿರಲಿ ಹೇಳು ಅಕ್ಕ...
ಆದರೆ ನೀ ಹೇಳಿದ ಹಾಗೆ ಮರು
ಮದುವೆಗೆ ಗಂಡನನ್ನು ಹುಡುಕುವುದು
ಸಾಧ್ಯವೆ..

ಗಂಡಿಗಾದರೆ... ಅವನ ವಯಸ್ಸು
ಅವನ ಮಕ್ಕಳು, ಅವನ ಹಿನ್ನಲೆ
ಇದಾವುದನ್ನು ವಿಚಾರಿಸದೆ ಅವನಿಗೆ
ತರುವುದು ನನ್ನಂತ ವಿಧವೆಯನ್ನಲ್ಲ
ಕನ್ಯೆಯನ್ನ..

ಯಾಕೆ.. ಗೊತ್ತಾ ಅಕ್ಕಾ ನಿನಗೆ ?
ಈ ಸಮಾಜ ನನ್ನನ್ನು ವಿಧವೆಯಂತಷ್ಟೇ
ಅಲ್ಲ, ಗಂಡನನ್ನು ನುಂಗಿದ ಮಾರಿ
ಎಂತಲೇ ನೋಡುತ್ತಾರೆ, ಹೆದರುತ್ತಾರೆ
ಸನಿಹದ ಮಾತಿರಲಿ ಮಾತನಾಡುವುದಕ್ಕೂ
ಹಿಂಜರಿಯುತ್ತಾರೆ..

ಸಿಗುವ ಗಂಡೋ.....ಅನುಮಾನದ ಹುಳುವಾಗಿದ್ದರೆ
ಮುಗಿದೆ ಹೋಯ್ತು ಕಣೇ ಅಕ್ಕ..
ಮೊದಲ ಗಂಡ ಏನು ತರುತ್ತಿದ್ದ, ಏನು
ಕೊಡಿಸುತ್ತಿದ್ದ, ಎಲ್ಲೆಲ್ಲಿ ಹೋಗಿ ಬಂದೀರಿ.
ನನ್ನ ಹಾಗೆ ಅವನು ನಿನ್ನನ್ನ ಸಾಕ್ತಿದ್ನಾ?

ಹೀಗೆ ಹಲವು ಅನುಮಾನಗಳ ಸಹಿಸಿ
ನೋವ ನುಂಗಿಕೊಂಡು, ಸ್ವಾಭಿಮಾನವ
ಬಿಟ್ಟುಕೊಟ್ಟು ಬಾಳುವುದಾದರೂ ಹೇಗೆ
ಹೇಳೆ ಅಕ್ಕ..

ನಾನು ನಿನ್ನಷ್ಟು ಓದಿಲ್ಲ ಅಕ್ಕ...
ಆದರೆ ಈ ಸಮಾಜದ ಎದುರೆಂದೂ..
ಮಂಡಿಯೂರಲ್ಲ, ನನಗಿದ್ದ ಕಸುವಿನಲ್ಲೆ
ಕಾಮದ ಕಣ್ಣುಗಳಿಗೆ ಖಾರವ ತುಂಬಿ
ಹಸಿವಿನ ಹೊಟ್ಟೆಗೆ ಹಿಟ್ಟನು ದುಡಿಯುವೆ.

ನಿನ್ನಂತಃಕರಣದ ಮನಕೆ..
ನನ್ನದೊಂದು ಸಲಾಂ ಕಣೇ ಅಕ್ಕ

Sunday, April 23, 2017

ಅವಳಿಲ್ಲದೆ

ಅವಳಿಲ್ಲದೆ....
ನಾನಿಲ್ಲ...

ನಾನಿಲ್ಲದೆ...
ಪದಗಳಿಲ್ಲ...

ನಾನು ಮತ್ತು
ಪದಗಳಿಲ್ಲದೆ....
ಅವಳಿಲ್ಲ...

ಅವಳಿಲ್ಲದ ಮೇಲೆ
ಪದಗಳು ಇಲ್ಲ..
ನಾನೂ....ಇಲ್ಲ

Friday, April 21, 2017

ಕದನ

ಬಿಸಿಲ ಹಾದಿಯಲಿ
ಅಲೆದು
ಹೂಮಾರುವ
ಆ ಹುಡುಗಿಯ
ಕೆನ್ನೆಯ ಬೆವರ ಹನಿ
ಹೂಗಳಿಗಿಂತಲೂ
ಹೆಚ್ಚಿನ ತೂಕವಿತ್ತು......

                      -ಶ್ರೀಧರ್ ಕೃಷ್ಣ

ವ್ಹಾ..ವ್ಹಾ..ವ್ಹಾ.ವ್ಹಾ..

ಆ ಬೆವರ ಹನಿಯ
ತೂಕದಲಿ ಮೈಮರೆತ
ಜನರು....
ಪುಟ್ಟಿಯೊಳಗಿನ ನಗು
ಮಲ್ಲಿಗೆಯ ಮಾಲೆಯ
ಕೊಳ್ಳಲಿಲ್ಲ...
ಆ ಕೊಳ್ಳದೆ ಒಣಗಿ
ಉಳಿದ ಮಾಲೆಯ ಕಂಡು
ನನ್ನ ಹೃದಯ ಭಾರವಾಗಿತ್ತು

Tuesday, April 18, 2017

ಸಂಭಾಷಣೆ ೩ ಜಯಾ ಅವರು

ಇನಿಯಾ ನಿನಗೆ ತಿಳಿದಿದೆಯಾ
ನಾವಿಬ್ಬರೂ ಹೃದಯ
ಬದಲಾಯಿಸಿಕೊಂಡಿದ್ದು

ಅದಕ್ಕೇ ನೀನು ಸತ್ತಿದ್ದೀಯ
ನಾನು ಬದುಕಿದ್ದೇನೆ

ನೀನು ನನ್ನ ಹೃದಯವ
ಕೊಂದೆಯಲ್ಲಾ...

ಆದರೆ ನಿನ್ನ ಹೃದಯವಿನ್ನೂ
ಮಿಡಿಯುತಿದೆ ನನ್ನೆದೆಯೊಳಗೆ

ಜಯಾ   ೧೭/೦೪/೨೦೧೭

ಇಂದಾದರೂ ನಿನಗೆ
ಗೊತ್ತಾಯಿತಲ್ಲ ಈ ಎದೆಯ
ಪ್ರೀತಿ....

ನಿನ್ನ ಹೃದಯದಷ್ಟು ಬಲಹೀನವಲ್ಲ
ನನ್ನ ಹೃದಯ, ನೀನು ಅರಿತಿರಬಹುದು
ನಾನು ನಿನ್ನ ಹೃದಯವ ಕೊಂದೆನೆಂದು

ಬದಲಾಯಿಸುವ ಮುನ್ನ ಒಮ್ಮೆಯಾದರೂ
ನೋಡಿಕೊಳ್ಳಬೇಕಿತ್ತು ನಿನ್ನ ಹೃದಯದಲ್ಲಿದ್ದ
ಪ್ರೀತಿಯ ಉಸಿರನ್ನ ...

ನನ್ನ ಹೃದಯದಷ್ಟು ಉಸಿರು
ನಿನ್ನ ಹೃದಯ ಹೊಂದಿರದ ಕಾರಣ
ನಾನು ಸತ್ತೆನೇ ಹೊರತು
ನಾನಾಗೀಯೆ ಸಾವನ್ನು
ತಂದುಕೊಂಡವನಲ್ಲ

ಅದು ಈ ಕಲ್ಲೆದೆಗಳ
ಲೋಕದಲಿ ನೀನ್ನೊಬ್ಬಳನೆ
ಬಿಟ್ಟು...

ಅವರು

ನೀನು ಬಳಿಯಲಿರಲು
ಬಾಳು ಪಂಚಮವೇದ

ಮುನಿದು ದೂರ ಸರಿಯಲು
ಬದುಕೆಲ್ಲ ಖಿನ್ನ ಖೇದ

ಜಯಾ    ೨೦/೦೪/೨೦೧೭

ನಿನ್ನ ನಗುವಿರಲು
ಮೂಡುವುದು ಮನದಲಿ
ಹೊಸಕಾವ್ಯ

ನಿನ್ನ ಅಳುವಿರಲು
ಬರೆಯಲಾಗದು ಬೇಡನಂಥಹ
ಮಹಾಕಾವ್ಯ

ಪಯಣ ಮಸಣ

ಅವಳಿದ್ದು....
ನಡೆಯುವ ನನ್ನ
ಬಾಳು ನೋವಿಲ್ಲದ
ಪಯಣ....

ಅವಳಿಲ್ಲದೆ..
ಸಾಗುವ ನನ್ನ
ಬದುಕು ಶವವಿಲ್ಲದ
ಮಸಣ...

ಸ್ವಾದರ ಸೊಸಿ

ಸ್ವಾದರ ಸೊಸಿ
ಮಾಡಿದೆಲ್ಲ ನಮ್ಮಿಬ್ಬರ
ಪ್ರೀತಿಯ ಹುಸಿ

ಬಂದಿದ್ದೆನಲ್ಲ.....
ಮನೆಯವರೆಲ್ಲರನೂ ಎದುರಿಸಿ

ಕೊಳ್ಳಿಗೆ ಕಟ್ಗೊಂಡ ತಾಳಿ
ಹೊಂಟ ನಿಂತಿಯಲ್ಲ...
ನನ್ನ ಕಣ್ಣಾಗ ಕಣ್ಣೀರ ತರಿಸಿ

ಕರಕೊಂಡು ಹೊಂಟಾರ ನಿನ್ನ...
ಊರ ಬಜಾರದಾಗ ಮೆರೀಸಿ

ಒಮ್ಯಾರ ಇತ್ಲಾಗ ನೋಡೆರ ನೋಡ..
ಆ ಸೀರಿ ಸೆರಗನ್ನ ಸರಿಸಿ

ಉಡಿಯಾಗ ಉಡಿಯಕ್ಕಿ ಹಾಕ್ಕೊಂಡ
ದಾಟಿ ನಡದಿದಿ......ಊರಾನ ಅಗಸಿ

ತಾಳಲಾದೀತೇನ ಈ ಅಗಲಿಕೆಯ ಬಿಸಿ
ಎದೆಗೆ ಮಾಡ್ಹೊಂಟೆಲ್ಲ ಅದೆಂಥ ಘಾಸಿ

ಯಾವ ವೈದ್ಯನ ಸೂಜಿ ಮಾತ್ರೆಗಳು
ಮಾಡುತ್ತಿಲ್ಲ ವಾಸಿ
ಗುಣಪಡಿಸುವ ವೈದ್ಯರು ಯಾರಾದರೂ
ಇದ್ದರೆ.....ನಮ್ಮೂರಿಗೆ ಕಳಿಸಿ

ನಾನು ಗಜೇಂದ್ರಗಡದ ನಿವಾಸಿ

Monday, April 17, 2017

ನಲ್ಲನಿಗೆ

ನನಗೆ ಗೊತ್ತು ರಸಿಕ
ಮುಂಗುರುಳ ಸರಿಸುವ ನೆಪದಲ್ಲಿ
ನನ್ನ ಕೆನ್ನೆಯ ಸವರಿ ಕೆಂಪಗಾಗಿಸಿದ್ದು
ಕಸ ಊದುವ ನೆಪದಲ್ಲಿ ಕಂಗಳಲಿ
ನಿನ್ನ ರೂಪವೆ ತುಂಬಿ ರಾತ್ರಿಯ ನಿದ್ದೆಗಳ
ಬರವಾಗುವಂತೆ ಮಾಡಿದ್ದು
ನೆರಿಗೆಗಳ ಸರಿ ಮಾಡುತ್ತ ನನ್ನ ನಡುವನು
ಬಳಸಿದ್ದು
ತೂಗು ತೊಟ್ಟಿಲ ಕಂದನಿಗಿಂತಲೂ ನಿನ್ನ
ಮಡಿಲಲಿ ನನ್ನ ಮಗುವಾಗಿಸಿದ್ದು
ಬಿಸಿಲಿಗುರಿಯುವ ಅಂಗಾಲುಗಳ ಊದಿ
ಊದಿ ಆರೈಸಿದ್ದು
ನನ್ನ ಮದುವೆ ದಿನ ನಿನ್ನದೊಂದು
ಮಾತಾದರೂ ಸಾಕಿತ್ತು
ಸನ್ನೆಯಾದರು ನೀಡಬೇಕಿತ್ತು
ನಿನ್ನ ಪ್ರೇಮ ಸಿರಿಯ ಮುಂದೆ
ಆ ವೈಭೋಗದ ಸಿರಿ ಎಷ್ಟು ತೂಕ
ಕರೆಯದೆ ಹೋದೆಯಲ್ಲ
ಇದು ನಿನಗೆ ಸರಿಯೆ?

ನಷ್ಟ

ನನಗಿಂದರಿವಾಯಿತು....
ಕಾಯುವ ಶಬರಿಯ ಕಷ್ಟ

ನೀನಂದು ಬರಲಾರದಿದ್ದದ್ದು
ನನ್ನ ಬಾಳಿಗೆ ತುಂಬಲಾರದ
ನಷ್ಟ

ಸಕ್ಕರೆ

ಅವಳು ನಕ್ಕರೆ
ಸಕ್ಕರೆ

ಬದುಕಿನ ಮಧುಬನಕೆ
ತುಂಬುವಳು ಅವಳೆ
ಅಕ್ಕರೆ

ಅವಳೊಂದು ಮೇಣ

ಅವಳೊಂದು ಮೇಣ
ಉರಿದುರಿದು ತೋರುವಳು
ಬಾಳಿನ ಪಯಣ

ಸಂಭಾಷಣೆ ೨

ನಾನು
ತುಟಿಯಂಚಲಿ
ನಗುವಿನ ಬುಗ್ಗೆ ....
ನೋವುಗಳೂ ವಿಚಾರಿಸುತ್ತಿವೆ
ಅಲ್ಲಲ್ಲಿ ನಿಮ್ಮ ಬಗ್ಗೆ...

ನೋವುಗಳು ಮಾಡುವವು
ಎಲ್ಲರ ಹೃದಯ ಭಾರ ಭಾರ
ಅದಕ್ಕಾಗಿಯೇ ನಾನಾಗಿರುವೆ
ಅವುಗಳಿಂದ ದೂರ ದೂರ

ಎಲ್ಲ ನೋವುಗಳು ಮಾಡುವುದಿಲ್ಲ
ಎಲ್ಲರೆದೆಯ ಭಾರ ಭಾರ
ಬೆಸೆಯುವವು ಆಗಾಗ ನೊಂದ
ಹೃದಯಗಳನು
ಮಾಡುವವು ಮನಸಿನ ಭಾರಗಳನು
ಹಗುರ ಹಗುರ

ನಿಮ್ಮ ಅನಿಸಿಕೆ ಇರಬಹುದು ಸರಿ
ನೋವುಗಳು ಮಾಡಿದವು
ನನ್ನ ಮನಸಿಗೆ ಕಿರಿಕಿರಿ

ನೋವುಗಳು ಮಾಡುವುದೆ
ಮನಸ್ಸಿಗೆ ಕಿರಿಕಿರಿ
ಆ ಕಹಿಯ ಬಲ್ಲವರಲ್ಲಿ
ಹಂಚಿಕೊಂಡರೆ ಅದರನುಭವ
ಬಲು ಸಿಹಿಸಿಹಿ

ಖಂಡಿತ....
ಯಾವಾಗಲಾದರೊಂದು
ಸಲ ಬರೆಯುವೆ.
ಈಗಂತೂ ತವರಿನ ಸುಖದಲಿ ಮೈಮರೆತಿರುವೆ....😊

ಅದೇ ತವರೂರ ಸಿರಿ
ಬಾಳ ಕಹಿಗಳನೆಲ್ಲವ
ತೊಡಿಕೊಳ್ಳುವ ಗುಡಿ

ಕಹಿಗಿಲ್ಲ ಜಾಗ ನನ್ನ ಬಾಳಲ್ಲಿ
ಕಹಿಯ ಸಿಹಿ ಮಾಡಲು
ಅವನಿರುವನಲ್ಲ

ಅದು ನಿಮ್ಮ ಬಾಳಿನ ಭಾಗ್ಯಸಿರಿ
ಕಳೆದುಕೊಳ್ಳದೆ ಭದ್ರವಾಗಿರಿಸಿಕೊಳ್ಳಿ
ಎಲ್ಲರಂಥವನಲ್ಲ ಅವ.....ನಲ್ಲ

ಸಂಭಾಷಣೆ ೧

ಅವರು

ನೀ ನನ್ನ ಪ್ರೇಮದ ಬಲೆಗೆ
ಸಿಲುಕಿದ್ದು ನಾನೇನು ಬಲ್ಲೆ
ನೀನಾದರೂ ಒಮ್ಮೆ
ನನಗೆ ಹೇಳಲೊಲ್ಲೆ
ಮನದಲ್ಲೇ ಮಂಡಿಗೆ
ತಿನ್ನದಿರು ಗೆಳೆಯಾ
ಪ್ರೇಮ ನಿವೇದನೆ
ನನ್ನೆದುರು ಮಾಡಲಾರೆಯಾ?

ನಾನು

ಮಾಡಿದೆ ನಾನು ಅದೇಷ್ಟೊ
ನೀವೆದನೆ....
ಒಮ್ಮೆಯಾದರೂ ಕಣ್ತೆರದು
ನೋಡಲಿಲ್ಲ ನನ್ನ ವೇದನೆ
ಸರಿಯಲ್ಲ ನೋಡು ನಿನಗಿದು
ನಿನಗೆ ನೀನೆ ಮಾಡಿಕೊಳ್ಳುತ್ತಿರುವ
ಆತ್ಮವಂಚನೆ

Sunday, April 16, 2017

ತರುಣ

ಅವನೀನ್ನೂ.... ತರುಣ
ನನ್ನ ಬಾಳ ಬಾಗಿಲಿಗೆ
ಅವನೇ ತೋರಣ
ಈ ಕೆಂಪು ಅಂಗೈಯೊಳಗಿನ
ಚಿತ್ತಾರಕ್ಕೆ ಅವನೇ
ಕಾರಣ

ಮನಸಿನ ಬಲೆ

ಯಾಕೋ.... ಏನೋ....
ಮನವು ಜೇಡ ಕಟ್ಟಿದ
ಬಲೆಗೆ ಸಿಕ್ಕ ಬೇಟೆಯಂತಾಗಿದೆ
ಅಲ್ಲಿಯೇ ಸಾಯಲು ತಯಾರಿಲ್ಲ
ಹೊರಬರಲು ಬಲೆ ಬಿಡುತ್ತಿಲ್ಲ

ಏಕೋ...ಏಂತೋ...
ಭರವಸೆಯ ಕನಸುಗಳು
ಕೇಸರಿನಲ್ಲಿ ಬಿದ್ದ ಆಕಳ
ಕರುವಿನಂತಾಗಿದೆ
ಹೆಜ್ಜೆಗಳ ಕಿತ್ತಿಟ್ಟರೂ
ಎದ್ದು ಬರಲಾಗುತ್ತಿಲ್ಲ

ಕಣ್ಮುಂದೆ....

ನಿನ್ನ ಕಣ್ಣಂಚಿನ ಕಾಡಿಗೆ
ಸಿಲುಕಿಸಿಬಿಟ್ಟಿದೆ ನಿನ್ನ ಪ್ರೇಮ ಬಲೆಗೆ
ಬಿಡಿಸಿಕೊಳ್ಳಲೇ....ಬಿಡುತ್ತಿಲ್ಲ ನಿನ್ನ ನಗೆ
ಮನವೋ...ಮೆತ್ತಗಾಗಿ ಬಿಟ್ಟಿದೆ ಆ ಪೆಟ್ಟಿಗೆ

ತಾಳಲಾರೆನು ಎದೆಯುರಿಯ ಬೇಗೆ
ನೀನೇದುರು ಬಂದು ನಿಂತರೆ ಹೀಗೆ
ಕೋರಿಕೆಯ ಅರಿಕೆ ಮಾಡಿಕೊಳ್ಳಲಿ ಹೇಗೆ
ನನ್ನ ನೋಡಿ....ನಕ್ಕು ನಡೆದುಬಿಟ್ಟರೆ ಹಾಗೆ

ಎಷ್ಟೇಂದು ನಡೆದು ಬರಲಿ ನಿನ್ನ ಹಿಂದೆ
ಪ್ರೀತಿಯಲಿ ನನಗಾರೂ ಇಲ್ಲವಿಲ್ಲಿ ಹಿಂದುಮುಂದೆ
ನೀನಿಲ್ಲದೆ...ನಾನೊಬ್ಬನೇ ಎಷ್ಟಿಲ್ಲಿ ಬೆಂದೆ
ದಯತೋರಿ ಬರಬಾರದೆ ಒಮ್ಮೆಯಾದರೂ
ಕಣ್ಮುಂದೆ

Thursday, April 13, 2017

ಅಳದಿರಿ ಹಾಳೆಗಳೆ
ಅದೇಷ್ಟು ನನ್ನೆದೆಯ ನೋವುಗಳನು
ನಿಮ್ಮೆದೆಯ ಮೇಲೆ ಗೀಚಿಲ್ಲ
ನನ್ನೆದೆಯ ದುಃಖಕೆ ಕಿವಿಯಾದಿರೆ ಹೊರತು
ಅವರಿವರ ಹಾಗೆ ನಗಲಿಲ್ಲ, ಅಳಲಿಲ್ಲ
ಬೈಯಲಿಲ್ಲ, 

ಅದಕೆ ನಾನು ಅಂತರಂಗದ ನುಡಿಯನು
ನೀನಗಲ್ಲದೆ ನಾನಾರಿಗೂ ನುಡಿಯುವುದಿಲ್ಲ
ನೀನಾದರು, ನಿನ್ನ ದೇಹದ ತುಂಬಾ ಬರೆಸಿಕೊಂಡರು
ಮತ್ತೆ ನನ್ನತ್ತ ನೋಡುವೆ
ಇನ್ನೂ ಏನಾದರೂ ಇದ್ದರೆ ಬರೆ ಎಂದು

ಸರಳ ಸಜ್ಜನಿಕೆಯ ಅಸ್ತಂಗತ


ದಿ.ಜ್ಞಾನದೇವ ದೊಡ್ಡಮೇಟಿಯವರು

ಸರಳ ಸಜ್ಜನಿಕೆಯ ಅಸ್ತಂಗತ

ಏನು ಬರೆಯಲಿ ಈ ಸಮಯದಲಿ
ಪದಗಳೇ ಅಸ್ತವ್ಯಸ್ತವಾಗಿರುವಾಗ
ಮಾತುಗಳೆ ತೊದಲುತಿರುವಾಗ
ಕಂಗಳೆ ಕೊಳ ತುಂಬಿ ನಿಂತ
ನೀರಾಗಿರುವಾಗ

ಸರಳ ಸಜ್ಜನಿಕೆಯ ಗಾಂಧಿವಾದಿ
ನಿರ್ಮಲ ಮನಸ್ಸಿನ ಮುತ್ಸದ್ಧಿ
ಸಾವಿರಾರು ಕೆರೆಗಳ ಭಗೀರಥ
ನಡೆ ನುಡಿಯಲಿ ನಿಷ್ಠುರವಾದರೂ
ಕವಿ ಮನಸಿನ ರಾಜಕಾರಣಿ

ಅಧಿಕಾರಕ್ಕೆ ಬಂದವರು ಮಾಡುತ್ತಿರುವರು
ಸಾಕಷ್ಟು ಆಸ್ತಿ ಪಾಸ್ತಿ
ಇಂತಹ ವಿಷಯಕ್ಕಿವರೂ ನಾಸ್ತಿ
ಜನಸೇವೆ ಮಾಡಲೆಂದೆ ಇದ್ದ ಹೊಲವನ್ನು
ಮಾರಿ ರಾಜಕೀಯಕ್ಕೆ ಬಂದವರು
ಅನ್ಯರ ಪುಡಿಗಾಸು ಮುಟ್ಟದ ಸ್ವಾಭಿಮಾನಿ

ಆಗೀನ ಕಾಲದಲ್ಲೇ ಚಿತ್ರಿಸಿದ್ದರು
ತೈಲ ವರ್ಣದಲ್ಲಿ ತಾಯಿ
ಭುವನೇಶ್ವರಿಯ ಪಟವ
ಈಗಲೂ ಇಹುದವರ ಮನೆಯಲ್ಲಿ
ನೋಡಲೆರಡು ಕಣ್ಣು ಸಾಲದು
ಬಣ್ಣಿಸಲು ಪದಗಳೆ ನಿಲುಕವು

ಇಂತಹ ಸರಳ ಅಜ್ಜನಿಕೆಯ ಆಗರ
ವಾಗಿದ್ದಂತಹ ಧೀಮಂತ ನಾಯಕರ
ಬದುಕು ಇಂದು ಅಸ್ತಂಗತಗೊಂಡಿದೆ
ಯಾವುದಕ್ಕೂ ಜಗ್ಗದ ಜಕ್ಕಲಿ ಗ್ರಾಮವಿಂದು
ದುಃಖ ಸಾಗರದಲಿ ಮುಳುಗಿ ಹೋಗಿದೆ

ರೋಣ ತಾಲೂಕಿನ, ಗದಗ ಜಿಲ್ಲೆಯ,
ಇಡೀ ರಾಜ್ಯದ ಸಾಹಿತ್ಯ ಪ್ರೇಮಿಗಳಿಂದ
ಆ ಜೀವಾತ್ಮನು ಅವರ ಆತ್ಮಕ್ಕೆ ಚಿರಶಾಂತಿಯ
ನೀಡಲೆಂದು ಬೇಡಿಕೊಳ್ಳುತ್ತೇವೆ.

ಹೊತ್ತು ಮುತ್ತು

ನಾನಿನ್ನೂ ಮರೆತಿಲ್ಲ ಇನಿಯ
ಆ ಸಂಜೆ ಮಳೆ ಸುರಿದ ಹೊತ್ತು
ಈ ಕೆನ್ನೆಗೆ ನೀ.. ನೀಡಿದ ಸಿಹಿ ಮುತ್ತು
ನೋಡಲ್ಲಿ....
ಚಿಗುರೆಲೆಗಳ ಮೇಲೆ ಮಳೆ ಹನಿಗಳ
ಮುತ್ತಿನ ಸಾಲು....
ನೋಡಿಲ್ಲಿ....
ಈ ಕೆಂಪು ಕೆನ್ನೆಯ ಮೇಲೆ ನೀ ಕೊಟ್ಟ
ಮುತ್ತುಗಳ ಸಾಲು ಸಾಲು...

Wednesday, April 12, 2017

ಸರಳ ಸಜ್ಜನಿಕೆಯ ಅಸ್ತಂಗತ

ಏನು ಬರೆಯಲಿ ಈ ಸಮಯದಲಿ
ಪದಗಳೇ ಅಸ್ತವ್ಯಸ್ತವಾಗಿರುವಾಗ
ಮಾತುಗಳೆ ತೊದಲುತಿರುವಾಗ
ಕಂಗಳೆ ಕೊಳ ತುಂಬಿ ನಿಂತ
ನೀರಾಗಿರುವಾಗ

ಸರಳ ಸಜ್ಜನಿಕೆಯ ಗಾಂಧಿವಾದಿ
ನಿರ್ಮಲ ಮನಸ್ಸಿನ ಮುತ್ಸದ್ಧಿ
ಸಾವಿರಾರು ಕೆರೆಗಳ ಭಗೀರಥ
ನಡೆ ನುಡಿಯಲಿ ನಿಷ್ಠುರವಾದರೂ
ಕವಿ ಮನಸಿನ ರಾಜಕಾರಣಿ

ಅಧಿಕಾರಕ್ಕೆ ಬಂದವರು ಮಾಡುತ್ತಿರುವರು
ಸಾಕಷ್ಟು ಆಸ್ತಿ ಪಾಸ್ತಿ
ಇಂತಹ ವಿಷಯಕ್ಕಿವರೂ ನಾಸ್ತಿ
ಜನಸೇವೆ ಮಾಡಲೆಂದೆ ಇದ್ದ ಹೊಲವನ್ನು
ಮಾರಿ ರಾಜಕೀಯಕ್ಕೆ ಬಂದವರು
ಅನ್ಯರ ಪುಡಿಗಾಸು ಮುಟ್ಟದ ಸ್ವಾಭಿಮಾನಿ

ಆಗೀನ ಕಾಲದಲ್ಲೇ ಚಿತ್ರಿಸಿದ್ದರು
ತೈಲ ವರ್ಣದಲ್ಲಿ ತಾಯಿ
ಭುವನೇಶ್ವರಿಯ ಪಟವ
ಈಗಲೂ ಇಹುದವರ ಮನೆಯಲ್ಲಿ
ನೋಡಲೆರಡು ಕಣ್ಣು ಸಾಲದು
ಬಣ್ಣಿಸಲು ಪದಗಳೆ ನಿಲುಕವು

ಇಂತಹ ಸರಳ ಅಜ್ಜನಿಕೆಯ ಆಗರ
ವಾಗಿದ್ದಂತಹ ಧೀಮಂತ ನಾಯಕರ
ಬದುಕು ಇಂದು ಅಸ್ತಂಗತಗೊಂಡಿದೆ
ಯಾವುದಕ್ಕೂ ಜಗ್ಗದ ಜಕ್ಕಲಿ ಗ್ರಾಮವಿಂದು
ದುಃಖ ಸಾಗರದಲಿ ಮುಳುಗಿ ಹೋಗಿದೆ

ರೋಣ ತಾಲೂಕಿನ, ಗದಗ ಜಿಲ್ಲೆಯ,
ಇಡೀ ರಾಜ್ಯದ ಸಾಹಿತ್ಯ ಪ್ರೇಮಿಗಳಿಂದ
ಆ ಜೀವಾತ್ಮನು ಅವರ ಆತ್ಮಕ್ಕೆ ಚಿರಶಾಂತಿಯ
ನೀಡಲೆಂದು ಬೇಡಿಕೊಳ್ಳುತ್ತೇವೆ.

Tuesday, April 11, 2017

ತೇರು

ಬಾನೊಳು ಮೂಡಿರೆ
ಜೋಡಿ ತಾರೆಗಳು
ಭಕ್ತರ ಸಮೂಹವ
ಕುಣಿಸಿಹೆ ಘಂಟೆಗಳು

ಜೈ ಜೈಕಾರವ ಮೊಳಗಿಸುತ
ರಥದ ಹಗ್ಗವ ಹೀಡಿದರು
ಹರುಷದಿ ಎಳೆದರೆಲ್ಲರು
ಮಲ್ಲಯ್ಯನ ತೇರನು

ಬೇಡಿದ ವರಗಳ
ನೀಡುವ ಕಾಲೇಶ
ಭಕ್ತರ ಇಷ್ಟಾರ್ಥಗಳ
ಅನುಗ್ರಹಿಸುವ ಈಶ

ಜಾಲೀಂದ್ರ ಗಿರಿಯ
ಗುಹೆಯಲಿ ನೆಲೆಸಿಹನು
ಬೆಟ್ಟವನೇರಿ ಬರುವವರೆಲ್ಲರಿಗೂ
ನೀಡುವನು ಅಭಯವನು

ಅಂತರಗಂಗೆಯ ಜಿನುಗುತಲಿರಲು
ಮಾಡಿದ ಪಾಪವದಳಿಯುತಿರಲು
ದಕ್ಷಿಣಾಭಿಮುಖವಾಗಿ ಗಿರಿಯಿರಲು
ದಕ್ಷೀಣಕಾಶಿಯೆಂದೆ ಕರೆಯುತಿಹರು

ಏನೀ ಜಾತ್ರೆಯ ಸೊಬಗು
ನೋಡಿದವರೆ ಧನ್ಯ
ಅನುಭವಿಸಿದ ಜನರೆಲ್ಲರೂ
ಪಡೆದರೆಲ್ಲ ಪುಣ್ಯ

ರವಿಯು ಕರಗಿರೆ
ಸೂಸಿ ತಂಪನು
ದವನವು ಮೆರುಗಿರೆ
ಜಾತ್ರೆಯ ಕಂಪನು

ನವ ಜೋಡಿಗಳು
ಕಣ್ತುಂಬಿರೆ ಜಾತ್ರೆಯನು
ಹೂಡಿರೆ ತರುಣ ತರುಣಿಯರು
ನಯನ ಕದನವನು

ಬನ್ನಿ ನೋಡಿರೀ...
ಸುತ್ತ ಹತ್ತೂರಿನ ಜಾತ್ರೆಯನು
ಬರುವಾಗ ತಪ್ಪದೆ ತನ್ನಿ ನಿಮ್ಮ
ಕುಡಿಯುವ ನೀರನ್ನು

ಈ ಐದು ದಿನದ ಜಾತ್ರೆಗೆ
ಬರುವ, ಬಂದಿರುವ
ಬಂದು ಹೋಗುವ ಎಲ್ಲ
ಕಳಕಮಲ್ಲಯ್ಯನ ಭಕ್ತರಿಗೆ
ನಮ್ಮ ಸ್ವಾಗತಗಳು

Monday, April 10, 2017

ಅವಳ ನೆನಪುಗಳು

ಅವಳು ಬಿಟ್ಟು ಹೋದ ನೆನಪುಗಳು
ಕಪಿಗೆಯಾದ ಗಾಯದಂತೆ
ಮಾಸದು, ಕೆರೆಯುವದ ಬಿಡದು

ಅವಳೊಂದಿಗೆ ಕಳೆದ ದಿನಗಳು
ಹರಿದು ಹೋದ ಹಳ್ಳದಂತೆ
ನಿಲ್ಲದು, ಹಿಮ್ಮುಖವಾಗೆಂದೂ
ಹರೆಯದು

ನನ್ನೊಂದಿಗಾಡಿದವಳ ಮಾತುಗಳು
ಇರುಳಲಿ ಚೆಲ್ಲಿದ ತಾರೆಗಳಂತೆ
ಎಣಿಸಲಾಗದು, ಹುಡುಕಿದರೂ
ಹಗಲಲ್ಲಿ ಕಾಣಲಾರವು

ನನ್ನ ಬದುಕಿಗೆ ಅವಳು ನೀಡಿದ ಪ್ರೀತಿ
ಮರಳುಗಾಡಿನ ಮರಳು ದಿನ್ನೆಯಂತೆ
ಗಟ್ಟಿಯಲ್ಲದು, ಬಿಸುವ ಬಿರುಗಾಳಿಗೆ
ಕರಗಿ ಹಾರುವದು
ಇನ್ನೊಬ್ಬನ ಮನಕೆ ಪ್ರೀತಿಯ
ದಿನ್ನೆಯಾಗುವುದು

Saturday, April 8, 2017

ಬರ-ಸತಿ

ನಿಜ...
ಬಡತನದ ಬೇಗೆಗೆ ಬೇಸತ್ತು
ನನ್ನೆರಡು ಎತ್ತುಗಳ ಮಾರಿ
ಬಂದಿರುವೆ
ಬಾಳಿನ ಬಂಡಿಗೆಂದು ಕರೆತಂದ
ನಿನ್ನನು ಬದುಕಿನ ನೊಗಲನ್ನು
ನಿನ್ನ ಹೆಗಲಿಗೆರಿಸಿರುವೆ

ಹೂವ ಹಾಸಲಿ ನಡೆಸುವೆನೆಂದವನು
ಕಾದ ಹಂಚಾದ ಈ ಮಣ್ಣ ಧೂಳಲಿ
ನಿನ್ನ ನಡೆಸುತಿಹನು, ನನ್ನೊಂದಿಗೆ
ಸಪ್ತಪದಿ ತುಳಿದ ತಪ್ಪಿಗೆ ನಿನಗೀ...
ಗತಿ ಬಂದಿತೇನೊ?

ಆ ಶಶಿಯ ಬೆಳ್ಳಿಯ ಕಿರಣಗಳೂ
ನಿನ್ನ ಮುಟ್ಟದಂತೆ ಕಾಯುವೆನೆಂದಿದ್ದೆ
ಈ ಹಾಳು ಹೊಟ್ಟೆಗಾಗಿ ಸುಡುವ ಸೂರ್ಯನ
ರಶ್ಮಿಗೆ ನಿನ್ನನೊಡ್ಡಿರುವೆ

ಹರನು ಬೀಸಿದ ಈ ಬರದ ಬಲೆಗೆ ಸಿಕ್ಕ
ಮೀನುಗಳು ನಾವು
ಹಸಿವೆಂಬ ಗಾಳಕೆ ಸಿಲುಕಿಸಿ ನನ್ನ ನಿನ್ನನೂ
ವಿಲವಿಲಿಸುತಿಹನು

ಬರಲಿ ಒಡತಿ ಬರವು ಇನ್ನೂ ಹೆಚ್ಚಿಗೆ
ಸುಡಲಿ ಗೆಳತಿ ಸೂರ್ಯನೂ ಹೊತ್ತು ಹೊತ್ತಿಗೆ
ಸುರಿಸಲಿ ಸಾಕು ನಾಕು ಹನಿಯ ಧರಣಿಗೆ
ಬಿತ್ತಿ ತೋರಿಸೊಣ ಆ ಶಿವನಿಗೆ
ಬಂದ ಬಂಗಾರದ ಫಸಲನು
ಒಯ್ಯೋಣ ನಮ್ಮ ಮನೆಗೆ

Friday, April 7, 2017

ಸಮರಸ

ಯಾವುದು ಸವಿಯೋ...
ಯಾವುದು ಕಹಿಯೋ...
ಸಮರಸದಲಿ ಜೀವನ
ಸಾಗಿಸುತಿರುವಾಗ

ಸವಿಯು ಕಣ್ಣಿಗೆ ಪೊರೆಯ
ಕಟ್ಟಿ ಬಾಳಲಿ ಎಡವುವಂತೆ
ಮಾಡಿದರೆ

ಕಹಿಯು ಪೊರೆಯ ಹರಿದು
ನಡೆಯುವ ಹಾದಿಯನ್ನು
ಕಣ್ತೆರೆದು ನೋಡುವಂತೆ ಮಾಡುತ್ತದೆ

ಸವಿಕಹಿಗಳ ಮಿಶ್ರಣದ ಬದುಕಿರುವುದು
ನಮ್ಮ ಕೈಗಳಲ್ಲೆ, ಬದುಕಲ್ಲೆ, ನಡೆಯಲ್ಲೆ
ಸಮರಸವಾಗಿ ಬದುಕಿ ಬಾಳುವುದೆ
ಬಾಳಿಗೆ ಬೆಳಕು

Thursday, April 6, 2017

ಅವಳೆಂದರೆ

ಅವಳೆಂದರೆ ಹಾಗೆ....
ವಸಂತ ಮಾಸದ ಕೋಗಿಲೆಯ ಹಾಗೆ...
ವಿರಹ ವೇದನೆ ಗೀತೆಯ ಮರೆಸಿ
ಪ್ರೇಮಗೀತೆಯ ಹಾಡುವಾಕೆ...

ಅವಳೆಂದರೆ ಹಾಗೆ.....
ಶ್ರಾವಣ ಮಾಸದ ಜೋಕಾಲಿಯ ಹಾಗೆ...
ತನ್ನೆಲ್ಲ ನೋವುಗಳ ಹಿಂದಕ್ಕೆ ತಳ್ಳಿ
ನನ್ನ ನಲಿವುಗಳಿಗೆ ಮುಂದಕ್ಕೆ ಜೀಕುವಾಕೆ..

ಅವಳೆಂದರೆ ಹಾಗೆ...
ಆಷಾಡ ಮಾಸದ ದಿನಗಳಿದ್ದ ಹಾಗೆ...
ಕರಗಲಾರದ ಹಗಲುಗಳ ಬಿಟ್ಟು
ನಿದ್ರಿಸಲಾರದ ರಾತ್ರಿಗಳ ನೀಡುವಾಕೆ...

ಅವಳೆಂದರೆ ಹಾಗೆ.....
ಕಾರ್ತಿಕ ಮಾಸದ ಹುಣ್ಣಿಮೆಯ ಹಾಗೆ
ತಮ ತುಂಬಿದ ಮನಕೆ, ತಮ ಹೊದ್ದೀಹ
ಬಾಳ ಹಾದಿಗೆ ಹೊಂಬೆಳಕ ಚೆಲ್ಲುವಾಕೆ