Wednesday, April 12, 2017

ಸರಳ ಸಜ್ಜನಿಕೆಯ ಅಸ್ತಂಗತ

ಏನು ಬರೆಯಲಿ ಈ ಸಮಯದಲಿ
ಪದಗಳೇ ಅಸ್ತವ್ಯಸ್ತವಾಗಿರುವಾಗ
ಮಾತುಗಳೆ ತೊದಲುತಿರುವಾಗ
ಕಂಗಳೆ ಕೊಳ ತುಂಬಿ ನಿಂತ
ನೀರಾಗಿರುವಾಗ

ಸರಳ ಸಜ್ಜನಿಕೆಯ ಗಾಂಧಿವಾದಿ
ನಿರ್ಮಲ ಮನಸ್ಸಿನ ಮುತ್ಸದ್ಧಿ
ಸಾವಿರಾರು ಕೆರೆಗಳ ಭಗೀರಥ
ನಡೆ ನುಡಿಯಲಿ ನಿಷ್ಠುರವಾದರೂ
ಕವಿ ಮನಸಿನ ರಾಜಕಾರಣಿ

ಅಧಿಕಾರಕ್ಕೆ ಬಂದವರು ಮಾಡುತ್ತಿರುವರು
ಸಾಕಷ್ಟು ಆಸ್ತಿ ಪಾಸ್ತಿ
ಇಂತಹ ವಿಷಯಕ್ಕಿವರೂ ನಾಸ್ತಿ
ಜನಸೇವೆ ಮಾಡಲೆಂದೆ ಇದ್ದ ಹೊಲವನ್ನು
ಮಾರಿ ರಾಜಕೀಯಕ್ಕೆ ಬಂದವರು
ಅನ್ಯರ ಪುಡಿಗಾಸು ಮುಟ್ಟದ ಸ್ವಾಭಿಮಾನಿ

ಆಗೀನ ಕಾಲದಲ್ಲೇ ಚಿತ್ರಿಸಿದ್ದರು
ತೈಲ ವರ್ಣದಲ್ಲಿ ತಾಯಿ
ಭುವನೇಶ್ವರಿಯ ಪಟವ
ಈಗಲೂ ಇಹುದವರ ಮನೆಯಲ್ಲಿ
ನೋಡಲೆರಡು ಕಣ್ಣು ಸಾಲದು
ಬಣ್ಣಿಸಲು ಪದಗಳೆ ನಿಲುಕವು

ಇಂತಹ ಸರಳ ಅಜ್ಜನಿಕೆಯ ಆಗರ
ವಾಗಿದ್ದಂತಹ ಧೀಮಂತ ನಾಯಕರ
ಬದುಕು ಇಂದು ಅಸ್ತಂಗತಗೊಂಡಿದೆ
ಯಾವುದಕ್ಕೂ ಜಗ್ಗದ ಜಕ್ಕಲಿ ಗ್ರಾಮವಿಂದು
ದುಃಖ ಸಾಗರದಲಿ ಮುಳುಗಿ ಹೋಗಿದೆ

ರೋಣ ತಾಲೂಕಿನ, ಗದಗ ಜಿಲ್ಲೆಯ,
ಇಡೀ ರಾಜ್ಯದ ಸಾಹಿತ್ಯ ಪ್ರೇಮಿಗಳಿಂದ
ಆ ಜೀವಾತ್ಮನು ಅವರ ಆತ್ಮಕ್ಕೆ ಚಿರಶಾಂತಿಯ
ನೀಡಲೆಂದು ಬೇಡಿಕೊಳ್ಳುತ್ತೇವೆ.

No comments:

Post a Comment