Friday, May 31, 2019

ಆಲಿಸೊ ಗಾಲಿಬ್

ಆಲಿಸು... ಗಾಲಿಬ್!!!

ಅದೇಷ್ಟೋ....ಸುಕೋಮಲ
ಹೂಗಳ ಎದೆಗಳನ್ನು ತುಳಿದು ಹಾಕಿದ
ಪಾಪದ ಫಲವಲ್ಲೇನಿದು ಗಾಲಿಬ್..!!!
ಭಗ್ನ ಎದೆಗಳ ಮಾತುಗಳನಾಲಿಸಿದವಳ,
ಒಡೆದ ಹಿಂಬಡಿಗಳ ನೋವನ್ನೆ...
ಆಲಿಸುವರು ಯಾರಿಲ್ಲ ಈಗಿಲ್ಲಿ....

ನಿನಗೆ ನೆನಪಿದೆಯಾ...? ಮಧುವಧಿಪತಿ
ಪಾನಮತ್ತಿನಲಿ... ಭಾವೋನ್ಮತ್ತದಿ...
ಈ ಪಾದಗಳ ಮೇಲೆ ತಲೆಯನಿಟ್ಟು,
ದುಃಖವನೆಲ್ಲವ ತೋಡುಕೊಳ್ಳುತ್ತಿದ್ದ ಪರಿ...
ಅರೆಘಳಿಗೆಯಲ್ಲಿ ಎಷ್ಟು ಹಗುರವಾಗಿಬಿಡುತ್ತಿದ್ದೆ
ನೀನು....ಅಲ್ಲವೆ ಗಾಲಿಬ್..
ಕಣ್ಣೀರಿನಿಂದಲೆ ತೊಳೆಯಿಸಿಕೊಂಡ ಪಾದಗಳಲ್ಲವೆ?
ಅದಕ್ಕೆ ನೋಡು ಉಪ್ಪನುಂಡುಂಡು ಹೇಗೆ
ಬಾಯ್ತೆರೆದಿವೆ!!!

ಅಂಗಾಲಿನೊಳು ಚುಚ್ಚುವ ನೋವನ್ನು ನಿನ್ನ
ಮುಂದೆ ಹೇಗೆ ತೊಡಿಕೊಳ್ಳಲಿ ಗಾಲಿಬ್...
ಕುಡಿದು ಬಿಸುಡಿದ, ಒಡೆದು ಬಿದ್ದ ಬಟ್ಟಲುಗಳ
ಗಾಜಿನ ಚೂರುಗಳ ತುಳಿದ ಪಾದಗಳಲ್ಲಿ....
ಗಾಯದ ಗುರುತುಗಳು ಒಂದೂ...ಇಲ್ಲ, ಅಡಿಯಿಂದ...
ಮುಡಿಯವರೆಗೂ ಚುಚ್ಚುತಿರುವ ನೋವು ಮಾತ್ರ,
ಯಾರಿಗೂ ಕಾಣಿಸುತ್ತಿಲ್ಲ...

ಸೀಳುಬಿಟ್ಟ ಹಿಂಬಡಿಯ ಈ ಕಾಲುಗಳಲಿ
ಕಾಲ್ಗೆಜ್ಜೆಗಳು ತುಂಬಿಕೊಂಡಿದ್ದಾಗ...ಎಲ್ಲರೂ..
ಶರಣಾಗಿದ್ದರಲ್ಲವೆ ಗಾಲಿಬ್....
ಘಲ್...ಘಲ್...ಕಾಲ್ಗೆಜ್ಜೆಯ ನಾದಕ್ಕೆ, ಹಣದ
ಸುರಿಮಳೆಯನ್ನೇ... ಸುರಿಸುತ್ತಿದ್ದವರು...
ಇಂದೊಬ್ಬರು ಇಲ್ಲವಲ್ಲ!! ದಣಿದ ಪಾದಗಳಿಗೆ
ಎಂಟಾಣೆಯ ಮದ್ದು ಬೇಕಿದೆ, ಎಲ್ಲ ಎದ್ದು
ಹೋಗಿರುವರಲ್ಲ!!!

ಮೆಹಂದಿಯೇನೊ ಹಚ್ಚಿಕೊಂಡೆ, ರಂಗೇರಿತು..
ಗೆಜ್ಜೆಯನ್ನೇನೊ ಕಟ್ಟಿಕೊಂಡೆ..............
ನರ್ತಿಸುವ ಶಕ್ತಿಯು ಬೇಕಲ್ಲ ಗಾಲಿಬ್...
ಕಾಲಲ್ಲಿ ಬಲವಿದ್ದರಷ್ಟೆ ಈ ರಂಗಮಂಚ!!!
ಇಲ್ಲದಿದ್ದರೆ...? ಕಣ್ಣೆತ್ತಿಯು ನೋಡದು ಈ ಪ್ರಪಂಚ
ಈಗೀಗ ಸಾವನ್ನು ಪ್ರೀತಿಸುವಾಸೆ ಚಿಗುರಿ,   ಹೆಮ್ಮರವಾಗುತಿಹುದು....ಸತ್ತಮೇಲೆ? ಹುಗಿದ
ಗೋರಿಗೂ ಭಾರವಾಗುವೆನೇನೊ...?

ಬೆನ್ನು ತೋರಿಸಿದವಳ ಹೆಸರಿನಲ್ಲಿ ಕಟ್ಟುವ
ಕಲ್ಲು ಕಟ್ಟಡಗಳಲ್ಲಿ, ಗೆದ್ದಲುಗಳು ಮನೆ ಮಾಡಿ,
ಪುಡಿ...ಪುಡಿಯಾಗಿ...ಹೋಗುವ ಹಾಳೆಗಳ ಮೂಲೆಯಲ್ಲಿ
ನನ್ನದೊಂದು ಹೆಸರನ್ನಾದರು ಸೇರಿಸಿಬಿಡು ಗಾಲಿಬ್....
ಇತಿಹಾಸವ ಓದುವವರಿಗೆಲ್ಲ ಅರಿವಾಗಬೇಕಲ್ಲವೆ?
ನೊಂದವರ ಮನಕೆ ಮದ್ದಾದ ಮನವೊಂದು...
ಮದ್ದಿಲ್ಲದೆ... ಸದ್ದಿಲ್ಲದೆ....ಮಸಣದ ಹೂವಾಗಿ
ಮಣ್ಣು ಸೇರಿ ಹೋದದ್ದನ್ನು!!!!

Wednesday, May 29, 2019

ಚುಟುಕು

ಧ್ಯಾನಿಸುತ
ಇರಬೇಡ ಹೀಗೆ,
ಹಳಿಯ ಸಣ್ಣ
ಬಿರುಕು ಬಂಡಿಯನ್ನು
ಮಲಗಿಸಿಬಿಡುತ್ತದೆ...!!
ಮುರಿದೆ ಬಿದ್ದಿದೆ
ಎಂದ ಮೇಲೆ, ಕಣ್ಮುಚ್ಚಿ
ಕೂರುವುದೇಕೆ?
ಕಣ್ತೇರೆದು ನೋಡು
ಹೊಸದೊಂದು ದಾರಿ
ನಿನಗಾಗಿಯೆ ಕಾಯುತ್ತಿದೆ..!!

Tuesday, May 28, 2019

ಚುಟುಕು

ಹಾಲು...
ಹಾವಿಗೂ ಅನಿವಾರ್ಯ
ಬೇಟೆಯಾಡಿ ತಿನ್ನುವುದೆ
ಅದರ ಧರ್ಮ!!
ವಿಷವನ್ನೆ ಕಕ್ಕುವೆ
ಎಂದರಿತಿದ್ದರೂ... ಭರವಸೆಯ
ಹಾಲನೇರೆಯುತ್ತಿರುವೆ...
ತಿದ್ದಿಕೊಳ್ಳದಿದ್ದರೆ? ಅದು...
ನಿನ್ನ ಕರ್ಮ!!!

🙏🙏🙏

ಚುಟುಕು

ಮಾಡ್ಕೊಂಡ
ಬಿಟ್ರ.. ಬದುಕನ್ಯಾಗ
ಲೆಕ್ಕಿಲ್ಲದಷ್ಟ
ತಪ್ಪ...
ಮುಳುಗೆ
ಹೋಗ್ತದ ನೋಡೊ
ತಮ್ಮಾ...
ಬಾಳಿನ ತೆಪ್ಪ...

ಅಣ್ಣವ್ರೆ ಮಸ್ತ್

ಚುಟುಕು

ಕಣ್ಣಲ್ಲೆ....
ಕೊಲ್ಲುವ
ಕಲೆಯನ್ನು ಅವಳಿಗೆ
ಹೇಳಿಕೊಡಬೇಕಿಲ್ಲ!!
ನೋಡಿಬಿಡಿ ಒಮ್ಮೆ.....
ಎದೆ ಬಡಿತ ನಿಂತು
ಹೋದರೆ....‌‌‌
ನಾವು ಜವಾಬ್ದಾರರಲ್ಲ

Sunday, May 26, 2019

ಚುಟುಕು

ಸುಂದರಿ ಸಿಕ್ಕ
ಮೇಲೂ...
ಮದಿರೆಯ
ಸಹವಾಸವೇತಕೊ
ಸಖ....!!
ಅನುಭವಿಸಿಲ್ಲವೇನು?
ನನ್ನಧರಗಳಲ್ಲಿ
ಜಗದೊಳದೆಲ್ಲದರ
ಸುಖ...!!!

Saturday, May 25, 2019

ನಕ್ಕುಬಿಡು ಗೆಳತಿ

ಹುಸಿಯಾಗಿಯಾದರೊಮ್ಮೆ
ನಕ್ಕುಬಿಡು ಗೆಳತಿ...
ಪ್ರೀತಿಯ ಹೂವು ಅರಳುವುದಿಲ್ಲ
ಎಂದರಿತಿದ್ದರೂ...ಕಾಯುತ್ತಿರುವೆ.

ಹುಚ್ಚನೆಂದಾದರೂ ನಾಲ್ಕು
ಮಾತುಗಳನ್ನಾಡಿಬಿಡು ಒಡತಿ...
ಹಚ್ಚೆ ಹಾಕಿಸಿಕೊಂಡ ಎದೆಯೊಳಗಿನ
ಬಡಿತ ನಿಂತುಹೋಗುವುದೆನ್ನುವ ಮಿಡಿತಕ್ಕೆ

ನಿನ್ನ ಸೌಂದರ್ಯದ ಭಿಕ್ಷುಕನೆಂದಾದರು
ಕಣ್ಣೇತ್ತಿ ನೋಡಿಬಿಡು ಒಮ್ಮೆ....
ಕಣ್ಣಲ್ಲೆ ಕಟ್ಟಿಕೊಂಡ ಸಾವಿರ ಕನಸುಗಳಿವೆ
ನಿನ್ನ ನೋಟಕ್ಕೆ ಸಿಕ್ಕು ಸುಟ್ಟು ಹೋಗಿಬಿಡಲಿ!!!

Friday, May 24, 2019

ಚುಟುಕು

ತಟ್ಟೆಯಲ್ಲಿಟ್ಟು
ಮಾತನಾಡೆಂದರೆ
ಹೇಗೆ ಚೆಲುವೆ!!!?
ಮುಡಿಗೇರಿಸಿಕೊಳ್ಳು....
ಎಲ್ಲ ಮಾತನ್ನು
ಕಿವಿಯಲ್ಲೇ..... ಹೇಳುವೆ!!!

Thursday, May 23, 2019

ಚುಟುಕು

ಇವರ ಪಕ್ಷದ ಗುರುತು
ತೆನೆ ಹೊತ್ತ ಮಹಿಳೆ!
ಇವರು ತಲೆ ಮೇಲೆ ಕೈ
ಹೊತ್ತು ಕೂರುವಂತೆ ಮಾಡಿದ್ದು
ಒಬ್ಬ ಸ್ವಾಭಿಮಾನಿ ಮಹಿಳೆ!!

Tuesday, May 21, 2019

ಶಾಯರಿ

ಮಾತಿರದೆ
ರಾತ್ರಿಯಿಡೀ....
ಸುಖಿಸುವುದೆಂದರೇನು
ಸಾಕಿ....
ಎಲ್ಲರ ಹಾಗೆ
ನಾನು....ಕರುಣೆಯಿಲ್ಲದೆ
ಕುಕ್ಕಿ ತಿನ್ನುವ
ಹದ್ದಾಗಿಬಿಡಲೇನು?

ಶಾಯರಿ

ಕನಸುಗಳು
ಜೋಗುಳವ
ಹಾಡುವಂತಿದ್ದರೆ
ನಿನ್ನ ಮದ್ಯದ
ಅವಶ್ಯಕತೆ,
ನನಗಿರುತ್ತಿರಲಿಲ್ಲ
ಸಾಕಿ....
ರಂಗೀಯ ನೆನಪುಗಳು
ತಂಪೆರೆಯುವಂತಿದ್ದಿದ್ದರೆ...
ಚಂದ್ರನಿಗೆ ವಿದಾಯವನ್ನು
ಹೇಳಿಬಿಡುತ್ತಿದ್ದೆನಲ್ಲವೆ?

ಚುಟುಕು

ಕಾಯಿಸುವ
ಹುಡುಗಿಯರ
ಯಾರು ಪ್ರೀತಿಸಬಾರದು
ಎಂದರು ಹಂಸಲೇಖ!
ಬಾರದೆ...ಸತಾಯಿಸುತ
ಕಾಯಿಸಿ...ಕಾಯಿಸಿ
ಬೇಯಿಸುವವಳ
ಕಾಯುತ್ತಿರುವನು
ಈ ಮೂರ್ಖ!!!

ಶಾಯರಿ

ಗೋರಿಗೆಂದೆ
ಖರೀದಿಸಿದ
ಜಾಗದಲ್ಲಿ
ನೆಮ್ಮದಿಯುಂಟೇನು
ಸಾಕಿ....
ಹುಗಿದುಬಿಡು
ಸ್ಮಶಾನದಲ್ಲಿ...
ನಾಲ್ಕು ಹೆಣಗಳ ಜೊತೆ
ಮಾತನಾಡುತ್ತಾ
ಕೊಳೆತುಬಿಡುವೆ.

ಶಾಯರಿ

ರಂಗೀಯ
ನೆನಪುಗಳ ಬಳ್ಳಿ
ನನ್ನ ಭವಿಷ್ಯತ್ತಿನ
ಕಾಲೆಳೆದಿದೆ
ಸಾಕಿ....
ಬಿದ್ದದ್ದು.....!!!!
ನಿನ್ನರಮನೆಯೊಳಗೆ
ತಪ್ಪಿದ್ದರೆ?
ಗೋರಿಯೊಳಗೆ!!

ಶಾಯರಿ

ಕತ್ತಲಿಗೂ
ಕನಸಿಗೂ
ನಂಟಿದೆ!!!
ನಿಜ ಸಾಕಿ....
ಅದಕೆ ನನಗೂ
ನಿನ್ನ ಮದ್ಯದ
ಬಟ್ಟಲಿಗೂ...
ಬಿಡಿಸಲಾರದ
ಅಂಟಿದೆ!!

ಚುಟುಕು

ನೆನಪಿಸಬೇಡ
ಮೂರಿದು ಬಿದ್ದ
ಹಳೆಯ
ಮಾತು!!
ಸಂಬಂಧವೆ
ಹಳಸಿದ ಮೇಲೆ
ಬೇಕೆ? ಹೊಸ
ಮಾತು!!!

ಚುಟುಕು

ಅವಳು
ಆಡುತ್ತಾಳೆ
ಎಷ್ಟೊಂದು
ನಾಟಕ!!!
ಮೊದಲೆ
ವಿಚಾರಿಸಿ
ನೋಡಲಿಲ್ಲ
ಅವಳ
ಜಾತಕ!!

ಚುಟುಕು

ಹೂವೆ.....
ಇಂದವಳು ಬರುವುದು
ತಡವಾಗಬಹುದು
ಬಾಡಬೇಡ!!
ಒಪ್ಪಿದರೆ ಸರಿ,
ನಿರಾಕರಿಸಿದರೆ
ನೊಂದುಕೊಳ್ಳಬೇಡ!!!

ಚುಟುಕು

ನಿನ್ನನೆ ಹುಡುಕಿಕೊಂಡು
ಬರುವುದು ನನಗೆ
ಕಷ್ಟವೇನಲ್ಲ!!!
ಆದರೂ...ನಿನ್ನ
ಬರುವಿಕೆಯ
ಎದುರು ನೋಡುವುದರಲ್ಲಿ
ಸಿಗುವ‌ ಸುಖ
ಮತ್ತೊಂದರಿಲ್ಲ!!

ಚುಟುಕು

ಏಳೂರ
ನೀರನ್ನು ಹುಡುಕಬೇಡ
ಕೆರೆಗಳೆಲ್ಲ
ಬತ್ತಿ ಹೋಗಿವೆ!!!
ಚಿಂತಿಸಬೇಡ
ತೊಟ್ಟು ವಿಷವನ್ನು
ಕೊಟ್ಟುಬಿಡು
ಕುಡಿದು....ಸತ್ತು
ಹೋಗುವೆ!!!

Sunday, May 19, 2019

ಅತಿ ಮುಖ್ಯ

ನಿಮ್ಮ ಜಮೀನಿನಲ್ಲಿ ಈ ನಾಲ್ಕು ಗಿಡಮರಗಳು ಇರಲಿ
**********************************************

ಅಧಿಕ ಇಳುವರಿ ಪಡೆಯಲು, ಹೆಚ್ಚು ಲಾಭ ಗಳಿಸಲು ನಾವು ಏನೆಲ್ಲ ಸರ್ಕಸ್ ಮಾಡುತ್ತೇವೆ. ಮೂಟೆಗಟ್ಟಲೇ ರಾಸಾಯನಿಕ ಗೊಬ್ಬರ ಸುರಿಯುತ್ತೇವೆ, ಲೀಟರ್ ಗಟ್ಟಲೇ ಕ್ರಿಮಿನಾಶಕ-ಟಾನಿಕ್ ಸಿಂಪಡಿಸುತ್ತೇವೆ. ಇಂಥ ವಿಪರೀತ ಹಾಗೂ ವಿನಾಶಕಾರಿ ಖರ್ಚು ಕಡಿಮೆಗೊಳಿಸಲು ಮತ್ತು ಉಪ ಆದಾಯದ ಜೊತೆಗೆ ಮುಖ್ಯ ಆದಾಯವನ್ನು ಹೆಚ್ಚಿಸಲು ನಿಮ್ಮ ಜಮೀನಿನಲ್ಲಿ ಕೆಳಗೆ ತಿಳಿಸಿದ ಐದು ಗಿಡಮರಗಳು ಇರಲಿ. ನಿಮ್ಮದು ನೀರಾವರಿ ಜಮೀನಾಗಿದ್ದರಂತೂ ಇವು ಕಡ್ಡಾಯವೆಂಬಂತೆ ಇರಲಿ.

1) ಗ್ಲೀರಿಸಿಡಿಯಾ (Gliricidia) :
ಗ್ಲಿರಿಸಿಡಿಯಾ ಎಂಬುದು ಪ್ರೋಟೀನ್-ಸಮೃದ್ಧ ಮೇವು ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯದಿಂದಾಗಿ ಪ್ರಮುಖ ಉಷ್ಣವಲಯದ ಮೇವು ಮರಗಳಲ್ಲಿ ಒಂದಾಗಿದೆ. ಕತ್ತರಿಸಿದ ದಂಟು ಮತ್ತು ಎಲೆಗಳಿಂದ ರಾಸುಗಳಿಗೆ ಮೇವು ತಯಾರಿಸಲು ಸಹ ಸಾಧ್ಯವಿದೆ, ಇದನ್ನು ಹುಲ್ಲು ಅಥವಾ ಮೆಕ್ಕೆ ಜೋಳದೊಂದಿಗೆ ಬೆರೆಸಬಹುದು.
ಹಸಿರು ಬೇಲಿಗೆ ಇದನ್ನು ಬಳಸಬಹುದು. ಖಾಲಿ ಜಾಗ, ಕಲ್ಲು ಬಂಡಗಳಿರುವ ಪ್ರದೇಶಗಳಲ್ಲಿ, ರಸ್ತೆಯ ಅಂಚಿನಲ್ಲಿಯೂ ಇದನ್ನು ಬೆಳೆಸಬಹುದು. ಇದು ಬಹಳಷ್ಟು ಹಸಿರು ಸೊಪ್ಪನ್ನು ವೇಗವಾಗಿ ಉತ್ಪಾದಿಸುತ್ತದೆ. ಎಲೆಯು ಬೇಗನೆ ಕೊಳೆಯುತ್ತದೆ. ಅದಕ್ಕಾಗೇ ಇದನ್ನು 'ಗೊಬ್ಬರದ ಮರ' ಎಂದು ಕರೆಯುತ್ತಾರೆ.
ಇದನ್ನು ಹಸಿರು ಗೊಬ್ಬರವಾಗಿ ಬಳಸಬಹುದು. ಒಂದು ಎಕರೆಯ ಬೇಲಿಯಲ್ಲಿ ಬೆಳೆದರೆ, 2 ಎಕರೆ ಭೂಮಿಗೆ ಬೇಕಾದಷ್ಟು ಹಸಿರೆಲೆಗೊಬ್ಬರವನ್ನು ಪೂರೈಸುತ್ತದೆ. ಇದನ್ನು ಎರೆಹುಳದ ಗೊಬ್ಬರ ತಯಾರಿಕೆಗಾಗಿಯೂ ಸಹ ಬಳಸಬಹುದು. ಹೆಚ್ಚಿನ ಪ್ರೋಟೀನ್ ಅಂಶದ ಕಾರಣ ಗ್ಲಿರಿಸಿಡಿಯಾವನ್ನು ಮೇವಾಗಿ ಬಳಸಿದಾಗ ಹಾಲು ಮತ್ತು ಮಾಂಸ ಉತ್ಪಾದನೆಯು ಹೆಚ್ಚುವುದು ಸಾಬೀತಾಗಿದೆ.

2) ಚೆಂಡು ಹೂವು (Marigold) :
ನೀವು ಯಾವುದೇ ಬೆಳೆ ಬೆಳೆಯಿರಿ, ಆದರೆ ಅದರಲ್ಲಿ ಅಲ್ಲಲ್ಲಿ ಚೆಂಡು ಹೂ ಬೆಳೆಯಬೇಕು. ಇವು ಜೇನುಹುಳುಗಳನ್ನು ಆಕರ್ಷಿಸುತ್ತದೆ. ಪರಾಗ ಸ್ಪರ್ಶಕ್ರಿಯೆಗೆ ದುಂಬಿಗಳನ್ನು ಆಕರ್ಷಿಸಲು ಬೆಳೆಯ ಸುತ್ತಲೂ ಚೆಂಡು ಹೂವಿನ ಗಿಡ ಹಾಕಿದರೆ, ಪರಾಗ ಕ್ರಿಯೆ ನಡೆದು ಹೆಚ್ಚು ಇಳುವರಿ ಪಡೆಯಬಹುದು. ಇದರ ಬೇರುಗಳಲ್ಲಿ ಸಾರಜನಕ ಸ್ಥಿರೀಕರಿಸುವ ರೈಜೋಬಿಯಂ ಗಂಟುಗಳು ಇರುತ್ತವೆ. ಇದರಿಂದ ಮಣ್ಣಿನಲ್ಲಿ ಸಾರಜನಕ ಅಂಶ ಹೆಚ್ಚಾಗುತ್ತದೆ. ಪ್ರತಿ ಎರಡು ಸಾಲುಗಳ ಮಧ್ಯೆ ಈ ಹೂವಿನ ಒಂದು ಸಾಲು ಇರುವಂತೆ ಮಾಡಿದರೆ, ಕೀಟಗಳ ಮತ್ತು ರೋಗಗಳ ಭಾಧೆಯನ್ನು ಕೂಡ ತಡೆಗಟ್ಟಬಹುದು. ಯಾವುದೇ ಹಣ್ಣಿನ ತೋಟದಿಂದ ಹಿಡಿದು ಕಬ್ಬು ಬೆಳೆಯವರೆಗೆ ಅಲ್ಲಲ್ಲಿ ಮಧ್ಯೆ ಅಥವಾ ಬದುವಿಗೂಂಟ ಚೆಂಡು ಹೂವಿನ ಗಿಡ ಇರುವಂತೆ ನೋಡಿಕೊಳ್ಳಿ. ಆವಾಗಾವಾಗ ಹೂವು ಮಾರಿ ಗಳಿಸುವ ಆದಾಯಕ್ಕಿಂತ ಇದು ನಿಮ್ಮ ಮುಖ್ಯ ಬೆಳೆಗೆಮಾಡುವ ಸಹಾಯ ದೊಡ್ಡದು.

3) ಬೇವು (Neem) :
ಬೇವಿನ ಪ್ರತಿಯೊಂದು ಭಾಗವೂ ಉಪಯುಕ್ತವೆಂದು ಕಂಡುಬಂದಿದೆ. ಬೇವಿನ ಮರವು ವಾತಾವರಣದಲ್ಲಿನ ಕಲುಷಿತ ಹವೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುವುದರಿಂದ ಬೇವು ಪರಿಸರ ಶುದ್ಧೀಕರಣದಲ್ಲಿಯೂ ಮಹತ್ವದ ಪಾತ್ರವಹಿಸುತ್ತದೆ.
ಕೃಷಿಯಲ್ಲಿ ಬೇವಿನ ಉಪಯೋಗ ಹೊಸದೇನಲ್ಲ. ಕೃಷಿಯಲ್ಲಿ ಗೊಬ್ಬರದ ಬಳಕೆ ಪ್ರಾರಂಭವಾದಾಗಿನಿಂದ ಒಂದಲ್ಲ ಒಂದು ವಿಧದಲ್ಲಿ ಬೇವನ್ನು ಬಳಸಲಾಗುತ್ತಿದೆ. ಬೇವಿನಹಿಂಡಿಯು ಸಸ್ಯಜನ್ಯವಾಗಿರುವುದರಿಂದ ಮಣ್ಣಿನ ಕಣರಚನೆ ಸುಧಾರಿಸುವಲ್ಲಿ ಹಾಗೂ ಜೈವಿಕ ಕ್ರಿಯೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಬೇವಿನ ಹಿಂಡಿಯು ಶೇ.4.5 ಸಾರಜನ, ಶೇ 1.1 ರಂಜಕ ಹಾಗೂ ಶೇ 1.5 ಪೊಟ್ಯಾಷ್ ಅಂಶಗಳನ್ನು ಹೊಂದಿದೆ. ಬೇವಿನ ಎಲೆ, ಮತ್ತು ಬೀಜಗಳನ್ನು ಸಾವಯವ ಗೊಬ್ಬರ ಅಥವಾ ಕೀಟನಾಶಕ ವಾಗಿ ಉಪಯೋಗಿಸುತ್ತಾರೆ. ಒಂದು ಬೇವಿನ ಮರ ವರ್ಷಕ್ಕೆ ಸುಮಾರು 50 ಕೆ.ಜಿ.ಯಷ್ಟು ಹಣ್ಣು ಕೊಡುತ್ತದೆ. ಇವುಗಳನ್ನು ಗೊಬ್ಬರದ ಜೊತೆ ಬೆರೆಸಬಹುದು, ಇಲ್ಲವೇ ಜಜ್ಜಿ ನೀರಲ್ಲಿ ನೆನೆಸಿ ಕೀಟನಾಶಕವಾಗಿ ಬಳಸಬಹುದು. ಬೇವು ಲೇಪಿತ ಯೂರಿಯಾಗೂ ಇದು ಬೇಕು, ಹಲವಾರು ಕೀಟನಾಶಕ ತಯಾರಿಸಲು, ಪೇಸ್ಟು – ಸೋಪ್ ತಯಾರಿಸಲು ಬೇವು ಅಗತ್ಯ, ವರ್ಷಕ್ಕೊಮ್ಮೆ ಇದರ ಬೀಜ ಶೇಖರಣೆ ಮಾಡಿ ಮಾರಿದರೂ ಸಾಕಷ್ಟು ಉಪ ಆದಾಯ ಸಿಗುತ್ತದೆ. ಆದ್ದರಿಂದ ಜಮೀನಿನ ಸುತ್ತಲೂ ಬೇವು ಬೆಳೆಯುವದು ಸೂಕ್ತ.

4) ನುಗ್ಗೆ (Drumstick) :
ನೀವು ನಿಮ್ಮ ಜಮೀನಿನಲ್ಲಿ ಭಾಗ್ಯ ತಳಿಯ ನುಗ್ಗೆ ನಾಟಿ ಮಾಡಿದ್ದೇ ಆದಲ್ಲಿ ಇದು ವರ್ಷದ ಹನ್ನೆರಡೂ ತಿಂಗಳು ಕಾಯಿ ಬಿಡುತ್ತದೆ. ನಿರಂತರವಾಗಿ ಮನೆಬಳಕೆಗೆ ಹಾಗೂ ಕಾಯಿಗಳನ್ನು ಮಾರಿದರೆ ನಿರಂತರ ಉಪ ಆದಾಯ ಕೂಡ ಸಿಗುತ್ತದೆ. ನುಗ್ಗೆ ಎಲೆಗಳನ್ನು ಪಲ್ಯ ಮಾಡಲು ಬಳಸಬಹುದು ಜೊತೆಗೆ ದನಗಳಿಗೆ ಮೇವಾಗಿ ಬಳಸಬಹುದು. ಹಸು ಅಥವಾ ಮೇಕೆಗಳು ಇದನ್ನು ಇಷ್ಟಪಟ್ಟು ತಿನ್ನುತ್ತವೆ. ಜಾನುವಾರುಗಳ ಜೀರ್ಣಶಕ್ತಿ ಹೆಚ್ಚಾಗಿ, ಹಾಲಿನ ಪ್ರಮಾಣ ಹೆಚ್ಚಿಸಲು ನುಗ್ಗೆ ಸಹಕಾರಿ.

-ಎಸ್ ಕೆ ಪಾಟೀಲ್
(ಕೃಷಿ, ಪಶು ಸಂಗೋಪನೆ ಹಾಗೂ ಇನ್ನಿತರ ಮಾಹಿತಿಗೆ ನಮ್ಮ ಮಾಧ್ಯಮ ಪೇಜ್ ಲೈಕ್ ಮಾಡಿ)

ಚುಟುಕು

ಅವನು
ದೀಪವನ್ನು
ಹಚ್ಚಿಟ್ಟಿದ್ದಾನೆ!
ನಾವೆ...
ಕಣ್ಮುಚ್ಚಿಕೊಂಡು
ನಡೆಯುತ್ತಿದ್ದೇವೆ.

ಚುಟುಕು

ನಮ್ಮೊಳಗೆ
ಬದ್ಧತೆಯಿಲ್ಲವೆಂದ
ಮೇಲೆ
ಬುದ್ಧನು
ಬೇಕೆ?
ಎದೆಯೊಳಗೆ
ಶಾಂತಿವಿಲ್ಲವೆಂದರೆ
ಕ್ರಾಂತಿಯ
ಹುಚ್ಚೇಕೆ

ಚುಟುಕು

ನಿದಿರೆಯಿಂದ
ಎದ್ದವರು
ಜ್ಞಾನಿಗಳಾದರು
ಎಳದೆ ಇದ್ದವರು
ಜೀವಂತ
ಶವವಾದರು

ಚುಟುಕು

ಸಾವು
ನಡೆದಾಡುವ
ದೇವರನ್ನು
ಬಿಡಲಿಲ್ಲ!!
ಹುಲು
ಮಾನವರು
ನಾವು...
ಒಣ ಅಹಮಿಕೆ
ತರವಲ್ಲ!!

ಚುಟುಕು

ಹತ್ತಿಸಿದವರನ್ನು
ಮರೆತು ಕೂರಬೇಡಿ
ಹತ್ತಿಸಿದವರಿಗೆ...
ಕೆಳಗಿಳಿಸುವುದು
ಗೊತ್ತಿರುತ್ತದೆ.
ಈ ಮಾತನ್ನು
ಮೇಲಿದ್ದವರು
ಮರೆಯಬೇಡಿ.

ಚುಟುಕು

ಬೆರಳಿಗೆ
ಮಸಿಯನ್ನು
ಬಳಸಿಕೊಂಡು
ನಿಮ್ಮನ್ನಾರಿಸುವಲ್ಲಿ
ನನ್ನ ಅಮೂಲ್ಯ
ಮತವೊಂದನ್ನು
ಹಾಕಿದ್ದೇನೆ....
ನಮ್ಮೆಲ್ಲರ ಆಶೋತ್ತರಗಳಿಗೆ
ಮಣ್ಣು ಸುರಿದು
ವಿರೋಧಿಗಳು ನಂ
ಮುಖಕ್ಕೆ ಮಸಿಯನ್ನು
ಬಳಿಯುವಂತೆ
ನಡೆದುಕೊಳ್ಳಬೇಡಿ.

Saturday, May 18, 2019

ಶಾಯರಿ

ಹಿಡಿದಿದ್ದ
ಕೈಯನ್ನು
ಕೊಸರಿಕೊಂಡು
ಹೋದದ್ದು
ಹೆಣ್ಣು
ಸಾಕಿ....
ನೋವದೆಷ್ಟೆಯಿದ್ದರು
ಎದೆಯಲ್ಲಿ
ಶಾಂತಿಯನು
ತುಂಬುವೇನು ಬಾ
ಎಂದು ಕರೆಯುತ್ತಿದೆ
ಮಣ್ಣು...

Friday, May 17, 2019

ಶಾಯರಿ

ಕುಡಿಯಲಿಕ್ಕೆಂದೆ
ಸಾಲು...ಸಾಲಾಗಿ
ಇಟ್ಟುಬಿಡು
ಮಧು ಬಟ್ಟಲುಗಳನ್ನು
ಸಾಕಿ...
ಒಂದರ ಹಿಂದೊಂದರಂತೆ
ಕುಡಿದು ಬಿಡುವೆ
ಮಧು ಬಟ್ಟಲುಗಳನ್ನು
ಉರಿದು ಹೋಗಲಿ
ಎದೆಯೊಳಗಿನ
ಅವಳ ಎಲ್ಲ
ನೆನಪುಗಳು

ಶಾಯರಿ ೮೬೩

ಆತ್ಮೀಯರೆಲ್ಲರೂ
ಅಳುತ್ತಿದ್ದಾರೆ...ನನ್ನ
ಪ್ರೇಮದ ಅವನತಿಯ
ನೋಡಿ
ಸಾಕಿ....
ನಾನು ಮಾತ್ರ
ಮನಸ್ಸಿನಲ್ಲೆ
ನಗುತ್ತಿರುವೆ...
ಬಟ್ಟಲಿಗೆ ಮದ್ಯವನ್ನು
ನೀನು ಅಳೆದು
ಹಾಕುತ್ತಿರುವುದನ್ನು
ನೋಡಿ....

ಶಾಯರಿ ೮೬೨

ಲೋಕವೆಲ್ಲ
ಷಂಡನೆಂದು
ಕೂಗುತ್ತಿದೆ
ಇವತ್ತು...
ಸಾಕಿ...
ಕತ್ತಲ
ರಾತ್ರಿಗಳಲ್ಲಿ
ಸಹಕರಿಸದ
ಅವಳ ರೀತಿ
ಯಾರಿಗೆ ತಾನೆ
ಗೊತ್ತು...

ಶಾಯರಿ ೮೬೧

ದೂರುವ
ಮಾತುಗಳಿಗೆಲ್ಲ
ವಿರಾಮ
ಬಿದ್ದಿದೆ ಸಾಕಿ....
ಹಾಕಬೇಕಿರುವುದೊಂದೆ...
ದೂರವಿದ್ದು
ಹತ್ತಿರದಂತಿರುವ
ಮನಸ್ಸುಗಳ
ಬಾಗಿಲಿಗೆ ಬೀಗ

ಶಾಯರಿ ೮೬೦

ನೀನು
ದೂರವಾದೆಯೆಂದು
ನಾನು ಸತ್ತು
ಹೋದರೆ....
ಪ್ರೀತಿಗೆಲ್ಲಿ ಬಂತು
ಬೆಲೆ
ಸಾಕಿ...
ಬೇಕಿದ್ದರೆ
ಮಾಡಿಬಿಡು...
ಈ ಸಂಜೆಗೆ
ನಿನ್ನ ಕೈಯ್ಯಾರೆ
ನನ್ನ ಕಗ್ಗೊಲೆ....

ಶಾಯರಿ ೮೫೯

ಸಿರಿವಂತರ ಗೋರಿಯ
ಪಕ್ಕದಲ್ಲಿಯೇ....
ನನ್ನನು ದಫನ್
ಮಾಡದಿರು
ಸಾಕಿ...
ಅವರ ಹಣದ
ದಾಹ... ನನಗೆ
ಮಣ್ಣಲ್ಲೂ
ಕಾಡೀತು...

ಶಾಯರಿ ೮೫೮

ಹೊರಗಿನ
ಗೆಳೆಯರು ಒಳ್ಳೆಯವರೆ...
ಒಳ್ಳೆಯ ಹುಡುಗಿಯನ್ನು
ಜೊತೆಗೂಡಿಸಲಿಲ್ಲ
ಅಷ್ಟೇ...
ಸಾಕಿ....
ಇಲ್ಲಿನ ಗೆಳೆಯರು
ಕೆಟ್ಟವರೇನಲ್ಲ...
ಒಳ್ಳೆಯ ಮದ್ಯವನ್ನೆ
ಕುಡಿಸುತ್ತಿರುವವರು
ಇಷ್ಟೇ...

ಶಾಯರಿ ೮೫೭

ರಂಗೀಯು ನನ್ನನು
ಹುಡುಕಿಕೊಂಡು
ಬಂದಿದ್ದಳಂತಲ್ಲ
ನಿನ್ನೆ
ಸಾಕಿ...
ಹೇಳಲಿಲ್ಲವೇಕೆ?
ಗೊತ್ತಿಲ್ಲವೇನು ನಿನಗೆ,
ಅವಳಿಲ್ಲದ ಬದುಕಿದು
ಬರೀ....ಸೊನ್ನೆ

ಶಾಯರಿ ೮೫೬

ಇತಿಹಾಸದಲ್ಲಿ
ಅವಳು ಹೂಡಿದ
ಬಾಣಕ್ಕೆ, ಸೋಲದೆ
ಇರುವವರು
ಯಾರೊಬ್ಬರು ಇಲ್ಲ
ಸಾಕಿ....
ಗೆದ್ದವರು
ವಿರಳ....
ಗೋರಿ ಸೇರಿದವರೆ
ಬಹಳ...

ಶಾಯರಿ ೮೫೫

ಇಷ್ಟು ವರ್ಷಗಳ
ನಂತರ...
ಮನೆ ಬಾಗಿಲಿಗೆ
ಅಂಚೆಯವನು
ಬಂದಿದ್ದನು
ಸಾಕಿ...
ಹೊತ್ತು ತಂದಿದ್ದು
ಪ್ರೇಮ ಪತ್ರವನಲ್ಲ!!!
ರಂಗೀಯ ಮದುವೆ
ಆಮಂತ್ರಣದ
ಪತ್ರವನ್ನು

ಶಾಯರಿ ೮೫೪

ನಿಜ.....
ನಾನಾಡುವ
ಮಾತುಗಳಲ್ಲಿ
ಯಾವ ಅರ್ಥಗಳು
ಇರುವುದಿಲ್ಲ!!!
ಸಾಕಿ...
ಅರ್ಥ ಮಾಡಿಕೊಂಡ
ಒಬ್ಬರೂ...ರಂಗೀ
ಮನೆಯ
ಹಾದಿಯನ್ನೇ
ತುಳಿಯುವುದಿಲ್ಲ!!

Thursday, May 16, 2019

ಶಾಯರಿ ೮೪೮

ಹುಡುಕುತ್ತ ಕೂರಲು
ಅವಳೇನು ಕಳೆದುಕೊಂಡ
ವಸ್ತುವೇನು?
ಸಾಕಿ...
ಹೋದದ್ದು
ಹೋಗಲಿ ಬಿಡೆಂದು
ಮತ್ತೊಂದನ್ನು
ಕೊಂಡು ತರಲಿಕ್ಕೆ
ಅವಳು
ಆಭರಣವೇನು?

ಶಾಯರಿ ೮೫೨

ಚಿಂತಿಸಬೇಡ,
ಬಿಟ್ಟು
ಹೋಗುವುದಿಲ್ಲವಿನ್ನು
ನಿನ್ನರಮನೆಯನ್ನು
ಸಾಕಿ...
ಸೆರೆಮನೆಯೊ
ನೆರೆಮನೆಯೊ
ಎಲ್ಲವೂ ಒಂದೆ
ನಿನ್ನಂಗಳದಲ್ಲೀಗ

ಶಾಯರಿ ೮೫೦

ಮತ್ತೆ...ಮತ್ತೆ...
ಕೊಲ್ಲುವುದಕ್ಕೆ
ನಾನು
ಬದುಕಿರುವೆನೇನು?
ಸಾಕಿ...
ಉಸಿರಾಡುತ್ತಿರುವೆನಷ್ಟೆ
ನಾನೆಂದೊ
ಸತ್ತು
ಹೋಗಿಲ್ಲವೇನು?

ಶಾಯರಿ ೮೫೧

ಪದೆ...ಪದೆ...
ಹಾಡದಿರು
ಅದೆ ಹಳೆಯ
ಗೀತೆ!!!
ಸಾಕಿ...
ನೆನಪಾಗುವುದು
ನನಗೆ, ಅವಳಿಗೆಂದೆ
ಬರೆದ ಹಳೆ
ಕವಿತೆ...

ಶಾಯರಿ ೮೫೩

ರಂಗೀ....ಕೊಟ್ಟಿರುವುದು
ಜೀವಾವಧಿ ಶಿಕ್ಷೆ...
ಇದಕ್ಕಿಲ್ಲ
ರಾಷ್ಟ್ರಪತಿಯದ್ದು
ಕ್ಷಮೆ
ಸಾಕಿ...
ನನಗೂ... ಬೇಕಿಲ್ಲವೀಗ
ಬಿಡುಗಡೆಯ
ಭಾಗ್ಯ!
ಅವಳು ಮತ್ತೆ
ಬರುವಳೆಂಬುದು
ಬರೀ... ಭ್ರಮೆ!!!

ಶಾಯರಿ ೮೪೯

ಇರಲಿಬಿಡು...
ನನ್ನದೊಂದಿಷ್ಟು
ನಿನ್ನ ಬಳಿ
ಹಳೆಯ ಲೆಕ್ಕ
ಸಾಕಿ...
ನೀನೂ...
ನೆನಪಿಸಿಕೊಳ್ಳುತ್ತಿರಬೇಕಲ್ಲ
ನನ್ನನು...
ಎಣಿಸುತ್ತ ನನ್ನೆಲ್ಲ
ಹಳೆಯ ಬಾಕಿ..

ಶಾಯರಿ ೮೪೭

ತ್ಯಾಗಿಯಂತೇನಿಸಿಕೊಳ್ಳಲು
ನಾನೇನು...
ಕರ್ಣನೆ?
ಸಾಕಿ...
ಇರುವುದೊಂದೆ,
ಎದೆಯಲ್ಲಿ ರಂಗೀಯ
ನೋವು....
ಅದನ್ನು ಮತ್ತೊಬ್ಬನಿಗೆ
ಹೇಗೆ ದಾನ
ಮಾಡಿಬಿಡಲಿ..

ಚುಟುಕು ೮೪೫

ಖಾದಿ ತೊಟ್ಟವರೆಲ್ಲ
ಹೇಳುತ್ತಾರೆ...
ಮುಖ್ಯಮಂತ್ರಿ ಖುರ್ಚಿ
ಮುಳ್ಳುಗಳೆ
ತುಂಬಿದಂತಹ
ಸೀಟು!!!
ಮುಳ್ಳಿನ ಮೇಲೆ
ಕುಳಿತುಕೊಳ್ಳಲಿಕ್ಕೆಂದೆ
ಹಾತೊರೆಯುತ್ತಾರೆಲ್ಲ
ನಾಯಕರು...
ಹಂಚುತ್ತಾ
ನೋಟು!!!

ಶಾಯರಿ ೮೪೬

ನಾನು ಸೋತೆನೆಂದು
ಪ್ರೀತಿಯನ್ನು
ದೋಷಿಸಲಾರೆ
ಸಾಕಿ...
ಯಾರಾರ ಪಾಲಲ್ಲಿ
ಎಷ್ಟಿದೇಯೊ...?
ಬಂದದ್ದನ್ನು
ಅನುಭವಿಸಲೆಬೇಕಲ್ಲವೆ!!

ಶಾಯರಿ ೮೪೧

ರಂಗೀ...
ಮೋಸ ಮಾಡಿದ
ಕಾರಣಕ್ಕೆ,
ಸ್ತ್ರೀ ಕುಲವನ್ನೆ
ನಾನೇಕೆ
ಜರಿಯಲಿ...
ಸಾಕಿ....
ಎದೆ ಹಾಲು
ಕೊಟ್ಟವಳನ್ನು...
ಕೈಗೆ ಮಧು
ಬಟ್ಟಲವನ್ನಿಟ್ಟವಳನ್ನು
ನಾ ಹೇಗೆ ತಾನೆ
ಮರೆಯಲಿ..

ಚುಟುಕು ೮೪೪

ಪರರರನ್ನು ತುಳಿದು
ಬದುಕವ ಕಲೆಯನ್ನು
ಈಗ ಯಾರಿಗೂ
ಹೇಳಿ ಕೊಡುವ
ಹಾಗಿಲ್ಲ!!!
ನಮ್ಮನ್ನು ತುಳಿದರು
ಸರಿ...
ಮತ್ತೊಬ್ಬರನು ಜೊತೆಯಲ್ಲಿ
ಏಳ್ಗೆಯತ್ತ ಕರೆದುಕೊಂಡೆ
ನಡೆಯೋಣ!!

ಶಾಯರಿ ೮೪೦

ಅವಳು ಕೊನೆಗೂ...
ಪ್ರಶ್ನೆಯಾಗಿಯೇ
ಉಳಿದುಬಿಟ್ಟಳು
ಸಾಕಿ...
ನಾನೊಬ್ಬ ದಡ್ಡ
ವಿದ್ಯಾರ್ಥಿ, ಪ್ರೀತಿಯಲ್ಲಿ
ಉತ್ತರವನ್ನೆ...
ಕಂಡುಕೊಳ್ಳಲಾಗಲಿಲ್ಲ
ನನ್ನ ಕೈಯಲ್ಲಿ

ಚುಟುಕು ೮೪೩

ಸತ್ತ್ ಮ್ಯಾಲ
ನನ್ನ ಹಣಿಮ್ಯಾಗೊಂದು
ಹೂಮುತ್ತ ಕೊಟ್ರೇನ
ಬಂತ...ಹುಡುಗಿ
ಬಾಯಾಗ ಮಣ್ಣ ಹಾಕಿ
ಮುಚ್ಚಿದ ಕುಣಿ ಮ್ಯಾಲ
ಗುಲಾಬಿ ಹೂವಾ
ಇಟ್ಟಂಗಾತ್ ನೋಡ

Wednesday, May 15, 2019

ಶಾಯರಿ ೮೩೯

ರಂಗೀಯು
ಬಿಟ್ಟು ಹೋದದಷ್ಟೆ
ನನಗೆ
ಗೊತ್ತಾಯಿತು
ಸಾಕಿ...
ಆಮೇಲಲ್ಲವೆ
ನನಗೆ ತಿಳಿದದ್ದು
ನಿನ್ನ ಮತ್ತಿನ
ಗಮ್ಮತ್ತು

ಚುಟುಕು ೮೪೨

ನಿಮ್ಮೂರ ಹಾದಿಯಲ್ಲಿ
ಹಾದು ಹೋಗುತ್ತಿದ್ದಾಗ,
ನಿನ್ನ ನೆನಪುಗಳು ಮರುಕಳಿಸಿದವು
ಗೆಳತಿ....
ಹೃದಯ ಸಂಕಟಗೊಂಡಿತು..
ಕಣ್ಣುಗಳು ಮಾತ್ರ,
ಕಣ್ಣೀರನ್ನು ಹಾಕಲಿಲ್ಲ!!!
ಹಳೆಯ ನೋವಿಗೆ ಮತ್ತೇಕೆ
ದುಃಖಿಸುವೆ ? ಎಂದು
ನನ್ನನೆ ಪ್ರಶ್ನಿಸಿತು.

ಶಾಯರಿ ೮೩೮

ನಾನು
ಸುಸ್ತಾಗಲು
ರಂಗೀಯ
ನೆನಪುಗಳು
ಬಿಡುವುದೇ...ಇಲ್ಲ
ಸಾಕಿ....
ಸುಮ್ಮನೆ
ಮಲಗಿಬಿಡುತ್ತೇನೆ
ನಾನೇ...
ಎದೆಗೆ ಬಟ್ಟಲು
ಗುಟುಕನ್ನು
ಹಾಕಿ..

ಶಾಯರಿ ೮೩೭

ಸಾಕಿಯ
ಮಡಿಲಲ್ಲಿ
ಯಾರಲ್ಲ
ತಿರುಬೋಕಿ...
ಕುಡಿದು ನೋಡೊಮ್ಮೆ
ಅವಳು ಕೊಟ್ಟ
ಅಮೃತವನ್ನು...
ಚಿಂತೆಗಳನ್ನೆಲ್ಲ
ಚಿತೆಗೆ ಹಾಕಿ..

ಶಾಯರಿ ೮೩೬

ಪ್ರೀತಿಸುವ
ನಾಟಕವನ್ನಾಡಿದ್ದರು
ಸಾಕಿತ್ತು
ಸಾಕಿ....
ನಾಟಕದ ನಟನೆಯನ್ನೆ
ನಂಬಿ, ನಡೆದುಬಿಡುತ್ತಿದ್ದೆ
ಗೋರಿಯೊಳಗೆ...
ಅದು ಕೂಡಾ
ಸಾಧ್ಯವಾಗಲಿಲ್ಲ
ಅವಳ ಕೈಯಿಂದ...

ಶಾಯರಿ ೮೩೫

ನಾನು
ಮೋಸ
ಹೋದವನಲ್ಲ
ಅವಳ
ಮಾತಿಗೆ
ಸಾಕಿ....
ಸೋತು
ಹೋದದ್ದು
ಮಾತ್ರ...ಆ
ಜಿಂಕೆ ಕಣ್ಣಿಗೆ

ಶಾಯರಿ ೮೩೪

ನಿನ್ನರಮನೆಯ
ಪ್ರತಿಯೊಂದು ಮಧು
ಬಟ್ಟಲಿಗೂ ಗೊತ್ತು
ನನ್ನೆದೆಯ‌ ಮಾತು
ಸಾಕಿ...
ಅವುಗಳು ಮೌನವಾಗಿವೆ
ನನ್ನ ಹಾಗೆಯೆ...
ಕೇಳುವವರು
ಯಾರಿಲ್ಲದೆ.

ಶಾಯರಿ ೮೩೩

ಪ್ರೀತಿಗೂ....
ಧರ್ಮದ ನಂಟಿದ್ದಿದ್ದರೆ
ಈ ಭೂಮಿ
ಎಂದೂ ಕೊನೆಗಾಣುತ್ತಿತ್ತು
ಸಾಕಿ....
ಎದೆಯ ಬೇನೆಗೆ
ಮದ್ದೊಂದಿದ್ದರೆ...
ನೋವಿಗೆಲ್ಲಿ
ಬೆಲೆ ಇರುತ್ತಿತ್ತು!!!

ಶಾಯರಿ ೮೩೨

ಕಾಮದ
ಕಾವಿಗೆ ಸಿಕ್ಕು
ಸುಟ್ಟು ಹೋಗುವ
ಮದನನಾನಲ್ಲ
ಸಾಕಿ...
ಹಾದಿ ತಪ್ಪಿ
ಹೋದವಳ
ಮರಳಿ ಬರುವಿಕೆಗಾಗಿ
ಕಾಯುತ್ತಿರುವ
ಬಿಕ್ಷುಕ ನಾನು.

ಶಾಯರಿ ೮೩೨

ಈ ಜೋಳಿಗೆಯ
ತುಂಬಾ ಏನಿದೆ?
ಮೋಹ ತುಂಬಿದ
ಪ್ರೇಮ ‌ಪತ್ರಗಳ
ಹೊರತುಪಡಿಸಿ
ಸಾಕಿ...
ಸುಟ್ಟು ಹಾಕಬೇಕೆಂದೆ..
ಕಡೆದುಕೊಳ್ಳಲೇ.....
ಆಗುತ್ತಿಲ್ಲ,
ಇವುಗಳ ಮೇಲಿನ
ವ್ಯಾಮೋಹವ

ಶಾಯರಿ ೮೩೧

ಹೂಗಳಿವೇಷ್ಟು
ಕೋಮಲ!!!
ನರ್ತಿಸದಿರು
ಇವುಗಳೆದೆಯ
ಮೇಲೆ
ಸಾಕಿ.....
ತುಳಿಸಿಕೊಂಡ
ನೋವು...
ತುಳಿಸಿಕೊಂಡವರಿಗಷ್ಟೇ...
ಗೊತ್ತು..

ಶಾಯರಿ ೮೩೦

ಪ್ರೀತಿ!!!!
ಕೇಕೆ ಹಾಕಿ
ನಗುತ್ತಿತ್ತು
ಸ್ಮಶಾನದಲ್ಲೂ...
ನನ್ನ ಸಾವನ್ನು
ನೋಡಿ
ಸಾಕಿ...
ಅಮರವಾಗುವುದು
ಪ್ರೇಮವೆಂದು
ಮಣ್ಣು ಸೇರಿದೆ,
ಮೋಸ ಹೋದೆಯಲ್ಲೊ
ಎಂದು, ಗೋರಿ ಮೇಲಿನ
ಗುಲಾಬಿ ಕಣ್ಣೀರಿಡುತ್ತಿದೆ
ಇಂದು....

ಶಾಯರಿ ೮೨೮

ಎಲ್ಲ, ಎಲ್ಲವನ್ನು,
ಎಲ್ಲರನ್ನು ಬಿಟ್ಟು
ನಿನ್ನರಮನೆಗೆ ಬಂದು
ಬುದ್ಧನಾದೆ
ಸಾಕಿ....
ಮನಸಿನ ಶಾಂತಿ
ಮಧ್ಯದ
ಬಟ್ಟಲೊಳಗಿದೆಯೆಂಬುದನರಿತು
ನಿನ್ನ ಮದ್ಯಕ್ಕೆ
ನಾನು ಬದ್ಧನಾದೆ

ಶಾಯರಿ ೮೨೯

ಅವಳ ಕಣ್ಣ
ರೆಪ್ಪೆಯಲ್ಲಿ ನಾ
ಬಂಧಿಯಾಗಿದ್ದು
ಒಂದೇ.... ಒಂದು ಸಾರಿ
ಸಾಕಿ...
ಜಾಮೀನು
ಕೊಡುವವರು ಯಾರಿಲ್ಲ!!!
ಉಳಿದಿರುವುದು
ಗೋರಿ ಕಟ್ಟಿಸಲೆಂದೆ
ಕಾಯ್ದಿಟ್ಟ ಜಮೀನು..

ಶಾಯರಿ ೮೨೭

ಅವಳಂತರಂಗದ
ಅರಮನೆಯನ್ನು
ಪ್ರವೇಶಿಸಿಲು ಒಂದೂ...
ಅವಕಾಶವನ್ನೆ ಕೊಡಲಿಲ್ಲವಲ್ಲ
ಸಾಕಿ...
ಎದೆಯಲ್ಲಿ ಬಿಕ್ಕುತಿರುವ
ಪದಗಳಿಗೆ ನೀರನ್ನು
ಹಾಕುವರಾರೀಗ?
ಅವಳಿನ್ನೂ
ಬಾಗಿಲನ್ನೇ....
ತೆರೆದಿಲ್ಲ!!

ಶಾಯರಿ ೮೨೬

ಚಂದ್ರನನ್ನು
ಉರಿಸಲೆಂದೆ ತಾನೆ
ನಾನೂ....
ಚಂದ್ರಿಕೆಯ
ಹಿಂದೆ ಬಿದ್ದದ್ದು!!
ಸಾಕಿ....
ನೋಡಿಗ!!! ಉರಿದು
ಹೋಗುತ್ತಿರುವುದು
ನಾನು...
ಯಾರು ನೋಡಿಲ್ಲ,
ಚಂದ್ರಮ ನನ್ನನು
ನೋಡಿ... ಮುಸು
ಮುಸು ನಕ್ಕಿದ್ದು!!

ಶಾಯರಿ ೮೨೫

ಅದೇಷ್ಟೊ ರಾತ್ರಿಗಳು
ರಂಗೀಯ ನೆನಪುಗಳಲ್ಲಿ
ಬಸುರಾಗದೆ.....
ಬಂಜೆಯಾಗಿಯೆ
ಉಳಿದದ್ದುಂಟು
ಸಾಕಿ....
ತುಂಬು ಹುಣ್ಣಿಮೆಯಲ್ಲೂ
ಸುಳಿದು ಬರುತಿಹುದಲ್ಲ
ಬಿಸಿ ಗಾಳಿ....
ಅದು ಚಂದ್ರನು
ಬಿಟ್ಟ ನಿಟ್ಟುಸಿರು...

Tuesday, May 14, 2019

ಶಾಯರಿ ೮೨೪

ಏನನ್ನೂ....
ಹೇಳದೆ ನಡೆದಬಿಟ್ಟಳು
ರಂಗೀ...
ಸಾಕಿ...
ಎಷ್ಟು ದಿನವಂತ
ಹೀಗೆ ಕುಳಿತಿರಲಿ
ಸೇದುತ್ತ
ಭಂಗಿ....

ಶಾಯರಿ ೮೨೩

ರಂಗೀಯ
ಬರುವಿಕೆಗಾಗಿ
ಇದೊಂದೆ ಜನ್ಮವೇನು?
ಏಳೇಳು ಜನ್ಮಕ್ಕಾದರೂ
ನಾ ಕಾಯುತ್ತಿರುವೆ
ಸಾಕಿ....
ಇಂದು ಬರದಿದ್ದರೂ
ವ್ಯಥೆಯೇನಿಲ್ಲ!!!!
ಕೊನೆಯ ಜನ್ಮದಲ್ಲಾದರೂ
ಬಂದೆ....ಬರುವಳೆಂಬ
ಭರವಸೆಯೊಂದು
ನನ್ನೊಳಗಿದೆಯಲ್ಲ!!!

ಶಾಯರಿ ೮೨೨

ಮನಸ್ಸಿಗೇನು?
ಚೆನ್ನಾಗಿಯೆ
ಇದೆಯಲ್ಲ, ರಂಗೀಯನ್ನು
ನೆನೆಯುತ್ತಾ..
ಸಾಕಿ....
ನಾನು ಚೆನ್ನಾಗಿಯೇ...?
ಇದ್ದೇನೆ!!!
ಬಟ್ಟಲೊಳಗಿನ
ಮಧುವನ್ನು
ಹಿಗ್ಗುತ್ತಾ....

ಶಾಯರಿ ೮೨೧

ಕುಡಿದು ಬಿಸುಡಿ...
ಒಡೆದು ಬಿದ್ದ
ಮಧು ಬಟ್ಟಲ
ಗಾಜುಗಳ ತುಂಬಾ
ಅವಳದೆ ಪ್ರತಿಬಿಂಬ
ಸಾಕಿ....
ಕುಡಿದ ಕಣ್ಣುಗಳೆರಡು
ಅಮಲೇರಿದ್ದರೂ...
ಅವಳೆ ತುಂಬಿರುವಳು
ಕಣ್ತುಂಬ...

Sunday, May 12, 2019

ಶಾಯರಿ ೮೨೦

ಮುಗಿದೆ....
ಬಿಟ್ಟಿತೆಂದು
ನಾನೂ
ಮಲಗಿಬಿಡುತ್ತೇನೆ
ನಿಶ್ಚಿಂತೆಯಿಂದ
ಸಾಕಿ.....
ಮತ್ತೆ ಚಿಂತೆಯಾಗುವುದು!!!
ಕಣ್ಬಿಟ್ಟಾಗ... ತುಂಬಿದ
ನಿನ್ನ ಮಧು ಬಟ್ಟಲನ್ನು
ನೋಡಿದಾಗ...
ರಂಗೀಯ ನೆನಪುಗಳ
ಅಲೆಗಳು ಉಕ್ಕೇರಿದಾಗ

Thursday, May 9, 2019

ತಲಾಖ್ ನಾಟಕ

ತಲಾಖ್

ಹಸೀನಾಳ ತುರುಬನ್ನು ಹಿಡಿದು ದರದರನೆ ಆಸ್ಪತ್ರೆಯ ವಾರ್ಡಿನಿಂದಾಚೆ ಎಳೆದುಕೊಂಡು ಬರುತ್ತಾ, ಆಸ್ಪತ್ರೆಯ ಅವರಣದ ಕಂಪೌಂಡಗೆ ಹತ್ತಿಕೊಂಡು ಬೆಳೆದು ನಿಂತಿದ್ದ ಬೇವಿನ ಮರದ ಕೆಳಗಡೆ  ಬಂದು ಹಸೀನಾಳನ್ನು ತುರುಬನ್ನು ಹಿಡಿದು ಜಗ್ಗಿ, ಬಗ್ಗಿಸಿ, ನಾಲಿಗೆಯನ್ನು ಕಚ್ಚಿಕೊಂಡು, ದ್ಯಾಮವ್ವನ ಕೋಣವನ್ನು ಕಡೆಯುವಾಗ ಕಟುಕನ ಕಣ್ಣುಗಳು ಯಾವ ರೀತಿಯಲ್ಲಿ ರೌದ್ರವಾಗಿರುತ್ತವೊ ಅದೆ ರೀತಿಯಲ್ಲಿ ಕಣ್ಣುಗಳನ್ನು ಹಿಗ್ಗಿಸಿಕೊಂಡು, ಬಲಗೈಯಿಂದ ಹಸೀನಾಳ ಬೆನ್ನಿನ ಮೇಲೆ ಒಂದು ಗುದ್ದನ್ನು ಗುದ್ದಿದನು. ಹೊಡೆತಕ್ಕೆ 'ಡಬ್' ಎಂಬ ಶಬ್ದವು ಬಂದರೆ, 'ಅಮ್ಮೀ...' ಎನ್ನುತ್ತಾ ಹಸೀನಾಳು ಬಿದ್ದ ಹೊಡೆತಕ್ಕೆ ನೆಲಕ್ಕೆ ಮಂಡಿಯೂರಿ ಕುಳಿತಾಗ, ಉಸಿರೆ ನಿಂತು ಹೋದಂತಾಗಿತ್ತು ಅವಳಿಗೆ, ಕಣ್ಣುಗಳೆರಡು ಮಂಜುಗಟ್ಟಿದಂತಾಗಿಬಿಟ್ಟವು, ಆದರೂ ಸಾವರಿಸಿಕೊಂಡು, ಈ ಸಲ ತಾನೆ ಮುನ್ನುಗ್ಗಿ ಮುನ್ನಾನ ಎಡಗಾಲನ್ನು ಹಿಡಿದೆಳೆದು ಅವನ ತೊಡೆಯನ್ನು ತನ್ನ ಬಾಯಿಂದ ಜೋರಾಗಿ ಕಚ್ಚಿಬಿಟ್ಟಳು. ಹಸೀನಾ ಯಾವ ರೀತಿ ಕಚ್ಚಿದಳೆಂದರೆ ಅವನ ಪ್ಯಾಂಟು ಹರಿದು ಇವಳ ಹಲ್ಲುಗಳು ಅವನ ತೊಡೆಯ ಚರ್ಮವನ್ನು ಸೀಳಿ ರಕ್ತವನ್ನು ಹರಿಸಿಬಿಟ್ಟವು, ಚಿಮ್ಮಿದ ರಕ್ತವು ಪ್ಯಾಂಟನ್ನು ತೊಯಿಸುತ್ತಾ, ಹಸೀನಾಳ ಬಾಯಿ ನಾಲಿಗೆಯನ್ನು ತೊಯಿಸಿಬಿಟ್ಟಿತು, ಮುನ್ನಾನ ಅರ್ಧ ನಿಶೆಯು ಇಳಿದು ಹೋದಂತಾಗಿ, ಹಸೀನಾಳ ತುರುಬನ್ನು ಬಿಟ್ಟು, ಎರಡು ಕೈಯಿಂದ ಅವಳನ್ನು ದೂರಕ್ಕೆ ತಳ್ಳಿ , ತನ್ನ ಎಡಗಾಲನ್ನು ಹಿಡಿದುಕೊಂಡು ನೆಲದ ಮೇಲೆ ಬಿದ್ದು ಹೊರಳಾಡುತ್ತಾ, ' ನನ್ನ ತೊಡೆಯನ್ನೆ ಕಡೆದುಬಿಟ್ಟೆಯಲ್ಲೆ ನಾಯಿ ಜಾತಿಯವಳೆ,' ಎಂದು ಬೈಯ್ಯುತ್ತಾ ನರಳಾಡತೊಡಗಿದನು. ಹಸೀನಾಳು ಈಗ, ತನ್ನ ಮರಿಗಳನ್ನು ಬೇಟೆಯಾಡಲು ಬಂದ ಪ್ರಾಣಿಯನ್ನು ಹಿಮ್ಮಟ್ಟಿಸಲು ಸಿಂಹಿಣಿಯು ಯಾವ ರೀತಿಯಲ್ಲಿ ರೋಷಗೊಳ್ಳುತ್ತದೇಯೊ ಅದೇ ರೀತಿಯಲ್ಲಿ ಕೋಪ, ಆಕ್ರೋಶವನ್ನು ಹೊತ್ತು ನಿಂತಿದ್ದಳು, ಕಣ್ಣುಗಳೆರಡು ಈಗಾಗಲೆ ರೋಷದಿಂದ ಕೆಂಪೆರಿದ್ದವು, ಬಾಯಿಗೆ ಹತ್ತಿದ್ದ ರಕ್ತವನ್ನು ಎಡಗೈಯಿಂದ ವರಿಸಿಕೊಳ್ಳುತ್ತಾ, ಸೀರೆಯ ಸೆರಗನ್ನು ನಡುವಲ್ಲಿ ಸಿಕ್ಕಿಸಿಕೊಂಡು, ಕೆದರಿದ ಕೂದಲನ್ನು ಒಟ್ಟುಮಾಡಿ ತುರುಬನ್ನು ಬಿಗಿದುಕೊಂಡು, ಅತ್ತಿತ್ತ ನೋಡುತ್ತಲೆ, ದಿನವೂ ತನ್ನ ಮೈ ಮೇಲೆ ನೃತ್ಯ ಮಾಡುತ್ತಿದ್ದ ಬೇವಿನ ಮರದ ಕೊಂಬೆಯೊಂದು ಕಂಡಿತು, ತಕ್ಷಣವೆ ಕೈ ಚಾಚಿ ರಂಬೆಯನ್ನು ಹಿಡಿದು ಜಗ್ಗಿ ಮುರಿದುಕೊಂಡವಳೆ, ತಾಳಿ ಕಟ್ಟಿದ ಗಂಡ ಅಂತಾ ಮುಖಾ ಮೂತಿನು ನೋಡದೆ, ಚೆನ್ನಾಗಿ ಬಾರಿಸತೊಡಗಿದಳು ಗಂಡನನ್ನು, ಹೊಡೆದು ರೂಢಿಯಾಗಿದ್ದ ಮುನ್ನಾನಿಗೆ ಹೊಡೆಸಿಕೊಂಡ ರೂಢಿಯಿದ್ದಿಲ್ಲ. ಹಸೀನಾಳು ಕೊಡುವ ಒಂದೊಂದು ಏಟಿಗೆ, ಹಾವನ್ನು ಹೊಡೆದಾಗ ಅದು ಯಾವ ರೀತಿಯಲ್ಲಿ ಹೊರಳಾಡುವುದೊ ಅದೆ ರೀತಿಯಾಗಿ ಆಸ್ಪತ್ರಯೆ ಅಂಗಳದ ತುಂಬೆಲ್ಲಾ ಹೊರಳಾಡತೊಡಗಿದನು. ಹಸೀನಾಳ ಸಿಟ್ಟು ಮತ್ತಷ್ಟು ಹೆಚ್ಚಾಗುತ್ತಲೆ ಹೋಯಿತು, ಉರಿಯುವ ಮೇದಿಗೆ ಗಾಳಿಯು ಸೇರಿಕೊಂಡ ಹಾಗೆ, ಕೈಯಲ್ಲಿದ್ದ ರಂಬೆಯು ಮುರಿದು ಹೋಯಿತು, ಅದನ್ನು ಬಿಸಾಡಿ, ಎದುಸಿರನ್ನು ಬಿಡುತ್ತಾ ಅತ್ತಿತ್ತ ನೋಡುತ್ತಿದ್ದ ಹಾಗೆಯೆ, ಕಾರ್ ಪಾರ್ಕಿಂಗ ಮಾಡಿ ಅದರ ಗಾಲಿಗೆ ಒಂದು ಕಲ್ಲನ್ನು ಇಡಲು ಉಪಯೋಗಿಸುತ್ತಿದ್ದರು, ಅದು ಇವಳ ಕಣ್ಣಿಗೆ ಬಿದ್ದಿತು. ತಡಮಾಡದೆ ಹೋಗಿ ಕಲ್ಲನ್ನೆತ್ತಿಕೊಂಡು ಬಂದು ಅನಾಮತ್ತಾಗಿ ಎತ್ತಿ ಅವನ ತಲೆಯನ್ನು ಕುಂಬಳಕಾಯಿ ಒಡೆದ ಹಾಗೆ ಒಡೆದು ಹಾಕಬೇಕು, ನಾನು ಗಂಡಸು ಎಂದು ನೋಡುವವರ ಎಲ್ಲ ರಂಧ್ರಗಳಲ್ಲಿ ನೀರು ಬಂದು ಬಿಟ್ಟಿದ್ದವು ಆ ದೃಶ್ಯವನ್ನು ನೋಡಿ. ಇನ್ನೇನು ಮುನ್ನಾನ ತಲೆ ಅಲ್ಲಾನ ಪಾಲಾಯಿತು ಅನ್ನುವಾಗಲೆ, 'ಅಮ್ಮೀ' ಅಂತಾ ಜೋರಾಗಿ ಕೂಗಿ ಅಳುತ್ತಾ ಓಡಿ ಬಂದ ಆರು ವರ್ಷದ ಮಗಳು ರುಬೀನಾ ಹಸೀನಾಳ ಬಲಗಾಲನ್ನು ಹಿಡಿದುಕೊಂಡು ಜೋರಾಗಿ ಅಳತೊಡಗಿದಳು. ಹೊತ್ತಿಲ್ಲದ ಹೊತ್ತಿನಲ್ಲಿ ಧೋ ಎಂದು ಬಿರುಗಾಳಿ, ಆಣೆಕಲ್ಲುಗಳ ಸಹಿತ ಬಿದ್ದ ಮಳೆಯು ಕ್ಷಣಾರ್ಧದಲ್ಲಿ ಸುರಿದು ತಣ್ಣಗಾಗುವಂತೆ, ಮಗಳ ಮುಖವನ್ನು ನೋಡಿದ ಹಸೀನಾ, ಎತ್ತಿದ ಕಲ್ಲನ್ನು ಆಚೆಗೆಸೆದು, ಮಗಳನ್ನು ಎತ್ತಿಕೊಂಡು ' ಇವತ್ತು ಉಳ್ಕೊಂಡುಬಿಟ್ಟೆ ನೀನು, ಇನ್ನೊಂದು ಸಾರಿ ಏನಾದ್ರೂ ಇ ಕಡೆ ತಲೆ ಹಾಕಿದಿ ಅಂದ್ರೆ, ನಡ್ಕೊಂತ ಹೋಗೊದಿಲ್ಲ, ನಾಕ್ಮಂದಿ ಹೆಗಲ ಮ್ಯಾಲ ಹೊಗ್ತಿದಿ, ಥೂ' ಎಂದು ಮುನ್ನಾನ ಕಡೆಗೆ ಉಗಿದು, ಆಸ್ಪತ್ರೆಯ ಒಳಗಡೆ ಹೊರಟು ಹೋದಳು ಹಸೀನಾ.