Thursday, August 3, 2017

ಮನದ ವಿಷ

ಮನೆಯಂಗಳದ ತೋಟಕೆ
ನೀರುಣುಸಿದಷ್ಟು ಸರಳವಲ್ಲ
ಮನದಲ್ಲಿ ಸದ್ಗುಣಗಳ ಬಿತ್ತಿ
ಪೋಷಿಸಿ ಪಾಲಿಸಿಕೊಳ್ಳುವುದು

ನೀರು ಗೊಬ್ಬರ ಹಾಕಿ ಮನೆಯಂಗಳದ
ಗಿಡಗಳನ್ನು ಪೋಷಿಸದಿದ್ದರೂ... ಇನ್ನೊಬ್ಬರ
ಮನೆಯಂಗಳದ.. ಅವರ ಬೇವರಿನ ಫಲದ
ಹಣ್ಣನ್ನು ಕದ್ದು ತಂದು ತಿನ್ನುವೆವು..

ಇಲ್ಲಿ ನಾಲಿಗೆ ಚಪಲವು ತೀರಿತು
ಮನದ ಮೂಲೆಯಲೊಂದು ಹುಳುಕು
ಮನೆ ಮಾಡಿತು

ಓಣಿ.. ಓಣಿ ಅಲೆದಾಡಿ ಮನೆ ಮನೆಯ
ಬಾಗಿಲು ತಟ್ಟಿ.. ಕೆದಕಿ ಕೆದಕಿ ಅವರು
ಮರೆತು ಕುಳಿತಿರುವ ವಿಷಯಗಳಿಗೆ
ಮತ್ತೆ ಜೀವತುಂಬಿ.. ಬಣ್ಣ ಬಣ್ಣದ ರೆಕ್ಕೆಗಳ
ಕಟ್ಟಿ.. ನಿಂತ ಕೊಳವಾದ ಅವರ
ಮನದಲಿ ಶಂಕೆಯೆಂಬ ಅಲೆಗಳನ್ನೆಬ್ಬಿಸಿ
ಮರಳಿ ನಮ್ಮನೆಯ ಅಂಗಳದಲ್ಲಿ
ಕಾಲಿಡುವುದರೊಳಗೆ.. ಮತ್ತಾರೊ
ನಮ್ಮ ಕೊಳದಲ್ಲಿ ಕಾಲಾಡಿಸಿ ಹೋಗಿರುವದನ್ನು
ಮರೆತು ಬಿಡುತ್ತೇವೆ

ನಾಲ್ಕು ಜನರೊಡಗೂಡಿ ಬಾಳುವುದ
ಮರೆತು.. ಮನೆ ಮನೆಗಳ ಮನ ಮನಗಳಲ್ಲಿ
ವೀಷವ ಬಿತ್ತಿ ನಾವೂ.. ವೀಷವನುಣ್ಣುತಿಹೆವು..
ಪಕ್ಕದ ಮನೆ ಬೆಕ್ಕು ಕಣ್ಮುಚ್ಚಿ ಕದ್ದು ಹಾಲು ಕುಡಿದಂತೆ

No comments:

Post a Comment