ತಾಯಿಯ ದುರಾಸೆಗಾಗಿ
ಕಾಡಿಗೆ ನಡೆದನವನು ರಾಮ
ತಾಯಿಯ ಮಹದಾಸೆಗಾಗಿ
ಆತ್ಮಲಿಂಗವನೇ ತಂದನವನು ರಾವಣ
ಮಡದಿಯ ಪ್ರೀತಿಗಾಗಿ ಜಿಂಕೆಯ
ಬೆನ್ನು ಬಿದ್ದನವನು ರಾಮ
ಸೋದರಿಯ ಅಕ್ಕರೆಗಾಗಿ
ಸೀತೆಯ ಹಿಂದೆ ಬಿದ್ದನವನು ರಾವಣ
ಜನರ ಮಾತಿಗಂಜಿ ಬಸುರಿಯನು
ಕಾಡಿಗಟ್ಟಿದನವನು ರಾಮ
ನಿನ್ನಪ್ಪಣೆಯಿಲ್ಲದೆ ಮೈಯ ಮುಟ್ಟುವುದಿಲ್ಲ
ನೆಂದನವನು ರಾವಣ
ಹೆಣ್ಣಿನ ಆಸೆ, ಜನರ ಮಾತು
ರಾಮನನ್ನ ಕಾಡಿದರೆ
ಹೆಣ್ಣಿನ ಮೋಹ, ಕಾಮದ
ವಾಂಛೆ ರಾವಣನನ್ನು ಕೊಂದು
ಹಾಕಿತು
No comments:
Post a Comment