ಹದಿನಾರು ಸಾವಿರದೆರಡು
ನಾರಿಯರಿದ್ದರೂ ಸಾಲದ ನಲ್ಲ
ಹದಿನೆಂಟು ಅಕ್ಷೂಹಿಣಿ
ಸೈನ್ಯವನಳಿಸಿದರೂ ಸಮಾಧಾನ
ವಿರದ ಸಾರಥಿ
ಕೇವಲ ದ್ರೌಪದಿಯ ಒಂದಗಳಿಗೆ
ಧೈನ್ಯೆತೆಯನು ಹೊಂದಿದೆ
ಸಾವಿರ ಸಂಪಾದಿಸಿದರೂ
ಕೋಟಿಯ ಕೂಡಿಟ್ಟರೂ
ಭೂಮಂಡಲವನೇ ಗೆದ್ದರೂ
ಒಂದಗುಳಿನ ಮೇಲೆ ಹೆಚ್ಚು
ಉಣ್ಣಲಾಗದು
ದೇವರೆ, ಹೊಟ್ಟೆಯೂ ಸಹ
ಸಾವಿರ, ಕೋಟಿಯ ಹಾಗೆ
ಅಗುಳ ಸಂಗ್ರಹಿಸುವದಾಗಿದ್ದರೆ?
ಬಡವನ ಪಾಡು, ಹೊಟ್ಟೆಯ ಪಾಡು
ಏನಾಗುತ್ತಿತ್ತು ?
No comments:
Post a Comment