Friday, November 4, 2016

ನೀನಿಲ್ಲದ ಮೊದಲ ಸಂಜೆ

ಮದುವೆಯ ನಂತರ
ನೀನಿಲ್ಲದ ಮೊದಲ ಸಂಜೆ
ಬೇಸರದಿಂದಲೇ ಕುಳಿತಿರುವೆ
ಚಡಪಡಿಸುತಲೆ ನಿಂತಿರುವೆ

ಮಲ್ಲಿಗೆ ಕಟ್ಟುವಳಿಲ್ಲವೆ ?
ಮಾವು ಮಾರುವನಿಲ್ಲವೆ ?
ಖೇದಿಗೆ ನೀಡುವನಿಲ್ಲವೆ?
ಜಿಲೆಬಿಯ ಕೊಡುವನಿಲ್ಲವೆ?

ಏಕೇ ನಿಧಾನಿಸುತ್ತಿರುವಿರಿ ನನ್ನ
ಮನದ ವಿರಹ ವೇದನೆಯನೇಕೆ
ಪರೀಕ್ಷಿಸುತ್ತಿರುವಿರಿ, ಬೇಕಂದೆ
ನನ್ನ ಕಾಯಿಸುತ್ತಿರುವೀರೊ

ಬಲೆಯಲ್ಲಿ ಸಿಕ್ಕ ಹುಳುವಿನಂತೆ
ಗಾಳಕ್ಕೆ ಸಿಕ್ಕ ಮೀನಿನಂತೆ
ದಾರಿ ಕಾಣದ ಕರುವಂತೆ
ರೆಕ್ಕೆಯಿರದ ಹಕ್ಕಿಯಂತೆ

ಕಾಯುತಿದೆ ತನುಮನವು
ಅನುಕ್ಷಣವು ನೀನಗಾಗಿ
ನೀನಿಲ್ಲದ ಮನ ಮನೆಯೂ
ದೀಗಿಯಿಲ್ಲದ ಜಗುಲಿಯಂತಾಗಿದೆ

ಬಂದುಬಿಡಿ ಸೂರ್ಯ ಕರಗುವ
ಮೊದಲೆ, ಶಶಿಯೂ ಮೂಡವ
ಮೊದಲೆ, ಕಾದ ಕಣ್ಣಲಿ ಹನಿ
ಕಣ್ಣೀರು ಜಾರುವ ಮೊದಲೆ

No comments:

Post a Comment