ಕಲ್ಲಾಗಿಬಿಟ್ಟರೆ!!!
ನಿಟ್ಟುಸಿರು...
ನಿಂತು ಬಿಡಬಹುದಲ್ಲ
ಸಾಕಿ...
ಕಲ್ಲು ದೇವರ
ಮೇಲೂ...
ಹೂವೊಂದನಿಡುವರಲ್ಲ!!!
ಇವರದೆಂತಹ
ಮನಸ್ಸು...
Sunday, March 31, 2019
ಶಾಯರಿ ೬೦೧
ಶಾಯರಿ ೫೯೭
ತಡೆದುಕೊಳ್ಳಲಿ
ಹೇಗೆ?
ರಂಗೀಯ
ನೆನಪುಗಳ
ಅಲೆ
ಸಾಕಿ....
ತೆರುವವರು
ಯಾರೀಗ?
ಕುಡಿದು ಬಿಟ್ಟ
ಮದ್ಯದ
ಬಟ್ಟಲುಗಳಿಗೆ
ಬೆಲೆ
ಶಾಯರಿ ೬೧೨
ಮದುವೆಯಾದ
ವರುಷಕ್ಕೆ
ಕೊಡುತ್ತೇನೆಂದಿದ್ದಳು
ಹೆತ್ತು...
ನನ್ನ ಕೈಗೊಂದು
ಕೂಸು
ಸಾಕಿ...
ಆಡಿದ ಮೂರು
ತಿಂಗಳಿಗೆ...
ಕೊಟ್ಟಿರುವಳು
ಕೈಗೆ ನಿನ್ನ
ಮದ್ಯದ ಗ್ಲಾಸು
ಶಾಯರಿ ೬೧೯
ಎಣ್ಣೆಯಿಲ್ಲದೆ
ಆರಿ ಹೋಗುತಿವುದೀ...
ಒಲವ
ಜ್ಯೋತಿ....
ಸಾಕಿ....
ಹುಗಿದ ಗೋರಿಯ
ಮೇಲೊಂದು ಹೂವನಿಟ್ಟು
ತೋರಿಸದರೇನು
ಬಂತು....
ಪ್ರೀತಿ
ಶಾಯರಿ ೬೩೧
ನಾ ಸತ್ತ
ದಿನಕ್ಕೆ...
ಕಣ್ಣೀರನ್ನು
ಹಾಕಬೇಡ
ಸಾಕಿ......
ನೊಂದು
ಮನೆ
ಬಾಗಿಲಿಗೆ
ಬಂದವನ
ಎದೆಗೆ, ಮಧುವನ್ನು
ಸುರಿಯುವದ ನೀ...
ಮರೆಯಬೇಡ.
ಶಾಯರಿ ೬೨೭
ಇದೊಂದು
ಜನ್ಮಕ್ಕೆ
ನನಗೀ...
ಗತಿ
ಸಾಕಿ...
ಇನ್ನೇಷ್ಟು
ಜನ್ಮಗಳ
ನಂಟಿವುದೊ...
ಅರಿತವನೊಬ್ಬನೆ
ತಿರುಪತಿ
ಶಾಯರಿ ೬೨೧
ಲೆಕ್ಕವಿಲ್ಲದಷ್ಟು
ಕನಸುಗಳನು
ಬಸುರಿಟ್ಟಳವಳು
ಸಾಕಿ...
ನೆನಪಿಸಿಕೊಳ್ಳಲು
ಒಂದಕ್ಕೂ..
ಉಸಿರನ್ನೆ
ನೀಡಲಿಲ್ಲ
ಶಾಯರಿ ೬೧೮
ಗಾಡಾಂಧಕಾರಕ್ಕಿಂತಲೂ
ಖಾಲಿ ಇರುವ
ಮದ್ಯದ ಬಟ್ಟಲು
ನನ್ನನು
ಭಯ
ಭೀತಗೊಳಿಸುವುದು
ಸಾಕಿ...
ಹರಿತ ಖಡ್ಗಕ್ಕೆ
ಸಿಕ್ಕಿದರೂ
ಸಾಕಿತ್ತು...
ಕುಕ್ಕಿ ತಿನ್ನುವ
ರಂಗೀಯ
ನೆನಪುಗಳ
ಬದಲು..
ಶಾಯರಿ ೬೦೨
ತಪ್ಪು
ನಿನ್ನ ಮದ್ಯದ್ದಲ್ಲ
ರಂಗೀಯ
ಕಣ್ಣಿನದ್ದು
ಸಾಕಿ....
ವಿಷಯವೀಗ
ರಾತ್ರಿಗಳದ್ದಲ್ಲ!!!
ಕೊಲ್ಲುತಿರುವ
ಹಗಲುಗಳದ್ದು...
Saturday, March 30, 2019
ಶಾಯರಿ ೬೦೬
ದೇವರು..!!!
ಕಲ್ಲು...
ಅವನಂದಿಗೂ
ಕಣ್ಣನ್ನು
ಮುಚ್ಚಿಕೊಂಡೆ
ಇದ್ದ ಸಾಕಿ...
ಅವನಂದು
ಕಣ್ಣು ಬಿಟ್ಟಿದ್ದರೆ
ನಾನಿಂದು
ನಿನ್ನ ಮದ್ಯದಮಲಿನಲಿ
ಕಣ್ಮುಚ್ಚಿಕೊಂಡು
ಕೂರುವ
ಜರೂರತ್ತು
ಇರುತ್ತಿರಲಿಲ್ಲ...
Thursday, March 28, 2019
ಶಾಯರಿ ೬೩೪
ಕಾಡುವ
ನೆನಪುಗಳನ್ನು
ತಡೆ ಹಿಡಿಯುವಂತಿದ್ದರೆ...
ನಿನ್ನರಮನೆಗೆ
ನಾನೇಕಿಂದು
ಬರುತ್ತಿದ್ದೆ
ಸಾಕಿ....
ಸುಡುವವಳ
ವಿರಹವನ್ನು
ತಣಿಸದಿದ್ದರೆ...
ಬಟ್ಟಲೊಳಗಿನ
ಮಧುವನ್ನು
ಕುಡಿಯುತ್ತಿದ್ದೆನೇನು?
Wednesday, March 27, 2019
ಶಾಯರಿ ೬೨೫
ಒಲವಿನ
ಆಯುಷ್ಯ ಅರ್ಧದಲ್ಲೆ
ಮುಗಿದು
ಹೋಗಿದೆಯಲ್ಲ
ಸಾಕಿ....
ಇನ್ನೂ
ಕೊನೆಯ ತನಕ
ನಡೆದು ಬರುವ
ಅವಳ
ಮಾತೆಲ್ಲಿ?
ಶಾಯರಿ ೬೪೪
ಅವಳ
ಕಣ್ಣ ಕಾಡಿಗೆ
ಸುಮ್ಮನೆ
ಬಿಡಲಿಲ್ಲ
ನನ್ನನು
ನನ್ನ ಪಾಡಿಗೆ
ಸಾಕಿ...
ಕಾಡಿ...
ಕಾಡಿ, ಕೊನೆಗೆ
ಕಳಿಸಿಬಿಟ್ಟಿದೆ
ಇಂದು... ನಿನ್ನ
ಮಧು ಶಾಲೆಯ
ಗೂಡಿಗೆ.
Thursday, March 21, 2019
ಶಾಯರಿ ೬೦೭
ಅವನೇಷ್ಟು
ಅದೃಷ್ಟವಂತ....
ರಾತ್ರಿ ಹೊತ್ತಿಸಿದ
ಕಿಡಿಗೆ, ನಸುಕಿಗೆ
ಹಿಡಿ ಬೂದಿಯಾಗಿ
ಹೋಗಿಬಿಟ್ಟ
ಸಾಕಿ....
ನನ್ನ ಕತ್ತಲೆಂದು
ಸುಡುವುದೊ?
ಬರೀ...
ನಸುಕಿಗಾಗಿ
ಕಾಯುವುದೆ
ಆಯ್ತು...
ಶಾಯರಿ ೨೩೨
ತುಂಬು
ಚಂದಿರನ
ಬೆಳದಿಂಗಳಿನಲ್ಲೂ...
ಕಾಮನಿಗೆ
ಬೆಂಕಿಯನ್ನು
ಹಚ್ಚಿಬಿಟ್ಟರಲ್ಲ
ಸಾಕಿ....
ಮಧುವಿಲ್ಲದೆ
ಕುಳಿತ ನನಗೆ,
ರಂಗೀಯ
ನೆನಪೊಂದು
ಮುತ್ತಿಟ್ಟು ಹೋದ
ಹಾಗೆ
ಶಾಯರಿ ೬೩೩
ಬಾರಿಸಲಿಬಿಡು
ನಿನ್ನರಮನೆಯ
ಮುಂದೆ
ಹಲಿಗೆ
ಸಾಕಿ....
ಹೇಗಿದ್ದರೂ....
ಹಾಕಲು
ಬರುವುದಿಲ್ಲವಲ್ಲ!!!
ಎದೆಯೊಳಗಿನ
ನೋವಿಗೆ
ಹೊಲಿಗೆ
ಶಾಯರಿ ೬೬೩
ಹೌದು....
ನನ್ನ ಕವಿತೆಗಳೆಲ್ಲ
ಬಲು
ದುಬಾರಿ...
ಸಾಕಿ...
ಸಾಲು....
ಸಾಲುಗಳಲಿ
ರಂಗೀಯೆ
ತುಂಬಿರುವಳಲ್ಲ!!!
ಅದಕೆ ನಾ...
ಆಭಾರಿ...
ಶಾಯರಿ ೬೨೩
ನೋಡಲ್ಲಿ!!!!
ಊರ ಬೀದಿಯ
ಮುಖ್ಯ ಚೌಕದಲ್ಲಿ
ಕಾಮನಿಗೆ
ಬೆಂಕಿಯನ್ನು
ಹಚ್ಚಿದ್ದು
ಸಾಕಿ....
ನೆನಪಿದೆಯಾ?
ಅದೇ....
ಚೌಕದಲ್ಲಿ,
ರಂಗೀಯು
ನನಗೆ
ವಿರಹವನ್ನು
ಹೊತ್ತಿಸಿದ್ದು...
ಶಾಯರಿ ೬೨೪
ಜಗಕೆಲ್ಲ
ಏನು ಗೊತ್ತು?
ಕರೆಯುತ್ತದೆ
ನನ್ನನು....
ಕುಡುಕನೆಂದು
ಸಾಕಿ...
ನೀನೊಬ್ಬಳೆ
ಹೆಸರಿಟ್ಟದ್ದು
ನನಗೆ,
ಹುಚ್ಚು ಪ್ರೇಮಿ
ಎಂದು.
Wednesday, March 20, 2019
ನಮ್ಮವ್ವ
ಎದಿಮ್ಯಾಲಿನ ಸೀರಿ
ಸೆರ್ಗ ಜಾರಿದ್ರ
ಹೊದ್ಕೊಬೋದು
ಕೇಳವ್ವ...
ಎದಿಯಾಗಿನ ಮನಸ್ಸ
ಒಮ್ಮೆ ಜಾರ್ತಂದ್ರ...
ಸಂಭಾಳ್ಸೋದು ಭಾಳ
ಕಷ್ಟೈತೊ ನಮ್ಮವ್ವ
ನಮ್ಮವ್ವ
ಕೋಲ ಹಿಡ್ಕೊಂಡ
ಅಡ್ಯಾಡೊ ವಯಸ್ನೊಂಗ
ಕೋಲಾಟ ಆಡೊ
ಹುಡ್ಗಿನ ಕೊಟ್ಟ
ಲಗ್ನ ಮಾಡ್ಯಾರು
ನೋಡವ್ವ....
ಚಟ್ಟ ಏರೊ ವಯಸ್ಸನ್ಯಾಗ,
ಹೂವಿನ ಪಲ್ಲಂಗಾನ
ಹತ್ತತೀನಿ ಅಂತಾನಲ್ಲೊ
ನಮ್ಮವ್ವ
ಇವತ್ತೊ?... ನಾಳ್ಯೊ?...
ಈಗ್ಲೊ? ಎದಿಯುಸಿರು
ಯಾ.. ಹೊತ್ತನ್ಯಾಗ
ನಿಲ್ತೈತೊ ಗೊತ್ತಿಲ್ಲ,
ಕೇಳವ್ವ...
ತಾಸ್ ತಾಸಿಗೆ ಎದುಸಿರು
ತಗೊಂಳ್ಳಾವ, ಬಿಸಿಯುಸಿರ
ಆಟಕ್ಕ ತಯಾರಾಗಿ
ಕುಂತಾನು
ನೋಡವ್ವ...
ಉಪ್ಪು...ಹುಳಿ..ಖಾರ
ತಿಂದ ಬೆಳ್ದ
ಮೈ ಐತಿದು
ಹೌದಿಲ್ಲವ್ವ....
ದಿನಾ ರಾತ್ರಿ...ಮೈಗೆ
ತಣ್ಣೀರ ಸುರ್ಕೊಂಡ
ಮಲ್ಕೊಳ್ಳೊ ಸುಖಾ....
ನನ್ನ ಸವ್ತಿಗೂ...
ಬರ್ಬಾದಂಗಿರ್ಲಿ
ನಮ್ಮವ್ವ
ನಮ್ಮವ್ವ
ಸಾಲಿಗೆ ಹೋಗೊ
ಪುಸ್ತಕದ ಚೀಲಾನ
ಹೊರಲಾರ್ದಂತ
ಎಸಳು ಹೆಗಲುಗಳು
ನನವು,
ಕೇಳವ್ವ....
ಸಂಸಾರ.... ಅನ್ನೊ
ನೊಗದ ಭಾರಾನ,
ಹೊರಿಸಿ ಕೈ
ಬಿಟ್ಟಾರಲ್ಲೊ
ನಮ್ಮವ್ವ....
ಅವ್ವನ ಮಡಿಲಾನ
ಬೆಚ್ಗ ಮಲ್ಗೊ.....
ಸುಖಾನ ನಾನಿನ್ನು
ಸವಿದಿಲ್ಲ
ಗೊತ್ತೆನವ್ವ.....
ಮತ್ತೊಬ್ನ ದೇಹದ
ಬಿಸಿ...ತಣಿಸಾಕ
ಕತ್ಲ...ಕೋಣಿಗೆ
ದೂಡಿಬಿಟ್ಟಾರಲ್ಲೊ
ನಮ್ಮವ್ವ ....
ಕುಂಟೆಬಿಲ್ಲೆ ಆಡೋ
ವಯಸ್ಸನ್ಯಾಗ
ಗಂಡನ ಮನಿ ಹೊಸ್ಲ
ದಾಟ್ಸಿದ್ರಲ್ಲೊ
ನಮ್ಮವ್ವ ....
ಬಿಂದ್ಗಿ ಕೊಡಾನ...
ಹೊರಲಾರ್ದ ನಡುವನ್ಯಾಗ
ಉಸಿರಾಡೊ ಗೊಂಬಿ
ಕೊಟ್ಟಾರಲ್ಲೊ
ನಮ್ಮವ್ವ ...
🐃🐃🐃🐃🐃
ಧರ್ಮದ ಹೆಸರನ್ಯಾಗ
ಹಸಿ ಮಾಂಸಾನ,
ತಿಂದ ತೇಗಿದ್ರಲ್ಲೊ
ನಮ್ಮವ್ವ....
ಶಾಂತಿಯನ್ನೊದು
ಹುಗ್ದ ಮಣ್ಣೊಳ್ಗು
ಸಿಗವಲ್ದಲ್ಲೊ...
ನಮ್ಮವ್ವ
ಕಾಮದ ಕಾವಿಗೆ
ಸುಟ್ಟು...ನಾನೇನೊ
ಬೂದಿಯಾಗ್ಹೋದೆ
ಕೇಳವ್ವ......
ಹೆತ್ತೊಡಲು ದಿನಾನು
ನನ್ನ ನೆಪನ್ಯಾಗ
ಕಣ್ಣೀರಾಗ ಕೈ
ತೊಳೆಯಾಕ್ಹತ್ತಾವು
ಒರೆಸೊರಾದ್ರು
ಯಾರವ್ವ...
ಜಗತ್ತು ಇಷ್ಟು
ಕ್ರೂರಿ ಐತೆಂದು
ಗರ್ಭದಾಗಿದ್ದಾಗ್ಲೆ
ಯಾಕರ ನಿ...ಹೇಳ್ಲಿಲ್ಲೊ
ನಮ್ಮವ್ವ...
ಮೊದ್ಲ ಹೇಳಿದ್ರ,
ಅರಳೊ ಮೊದ್ಲ
ಅಲ್ಲೆ ಕಮರಿಬಿಡ್ತಿದ್ನಲ್ಲೆ
ನಮ್ಮವ್ವ...
🐶🐶🐶🐶🐶🐶
ಮಳಿ..ಮಳಿ..ಅಂದ
ಮುಂಗಾರು ಮಸಣ
ಕಾಣ್ತೋ...
ಕೇಳವ್ವ
ಹಿಂಗಾರಿ ಮಳಿನೂ ಇಲ್ಲ..
ಛಳಿನು ಇಲ್ಲ...
ಬಿತ್ತಿದ ಭಾಳೆ ಹಳಿಸಿ
ಹೊಂಟೈತಲ್ಲೊ
ನಮ್ಮವ್ವ
ಉತ್ತಿ...ಬಿತ್ತಿದ
ಬೆಳೆಗೆಲ್ಲಾ...
ಹುಳಾ ಬಿದ್ದ ಹೊಂಟಾವು
ನೋಡವ್ವ....
ಹೊಟ್ಯಾಗ.. ಹುಟ್ಟಿದ
ಹುಳುಗಳ ಬಾಯಿಗೆ
ಏನ್ ಮಣ್ಣ
ಸುರಿಬೇಕೊ...ಹ್ಯಾಂಗೊ
ನೀನೆ ಹೇಳವ್ವ
ಸಾಲದ ಭಾರಾನ
ಹೊತ್ತ...ಹೊತ್ತು...
ಹೆಗಲನ್ನೊವೊ
ಮೆತ್ತಗಾಗ್ಯಾವು
ಗೊತ್ತೆನವ್ವ...
ಭೂಮಿಗೆ ಭಾರ
ಅನ್ಕೊಂಡ, ಗೋಣಿಗೆ
ಕುಣ್ಕಿ ಹೊಸೆಯೊ
ಮುಂಚಾದ್ರು ಕೈ
ಹಿಡಿದೆತ್ತೊ...
ನಮ್ಮವ್ವ
🐮🐮🐮🐮
ಕಷ್ಟಾಪಟ್ಟ..ದುಡ್ದಿದ್ದೆಲ್ಲಾ..
ಮಳೆ ನೀರಿಗೆ
ಕೊಚ್ಗೊಂಡ
ಹೋತಲ್ಲೆ...
ನೋಡವ್ವ....
ಕ್ವಾಟಿನೂ ಇಲ್ಲ..
ಗುಡ್ಸಲಾನು ಇಲ್ಲ,
ಬದ್ಕು ಹಾದಿಗೆ
ಬಂದ್ಬಿತ್ತಲ್ಲೊ...
ನಮ್ಮವ್ವ..
ಮಡಿ...ಮಡಿಯೆಂದು
ಮಹಡಿ ಮನಿಯೇರಿ
ಕುಂತೋರ ಮನಿಗೆ...
ಊರಾನ ಕೇರಿ ತೊಳ್ದ
ನೀರು.. ಇವ್ರ ಹಟ್ಟಿಗೆ
ಹೊಕ್ಕೈತಿ..
ನೋಡವ್ವ..
ದೇವ್ರ ಕೋಣ್ಯಾನ ಬೆಳ್ಳಿ
ಮೂರ್ತಿ ನೆತ್ತಿನ...
ತೊಯ್ಸತೈಲ್ಲೊ
ನಮ್ಮವ್ವ...
ಶೀಲಾ....ಶೀಲಾ.. ಅಂದ್ಕೊಂಡ,
ಊರಾನ ಮನಿ ಹಾಳ ಮಾಡೋರ
ಬಾಯಿಗೆ ಹಿಡಿ ತುತ್ತಿಲ್ಲ...
ಕೇಳವ್ವ...
ಸೀರಿ ಸೇರ್ಗ ಹಾಸಿ,
ದುಡ್ಡ ಮಾಡ್ದಾಕಿ ಕೊಟ್ಟ
ರೊಕ್ಕದಿಂದ.... ತುತ್ತ ತಿನ್ನೊ
ಗತಿ ಬಂತಲ್ಲೊ
ನಮ್ಮವ್ವ
ಹೊಟ್ಟಿ ಹಸ್ವಿಗೆ
ಮಂದಿ ಮುಂದ
ಕೈ ಚಾಚೊ...ಜೀವಾನ
ಆ ಶಿವ ಇನ್ನು
ಯಾಕಾರ
ಇಟ್ಟಾನೊ...
ನಮ್ಮವ್ವ...
ಸುರ್ದ್ ಮಳಿ...ಕುಸ್ದ್ ಮಣ್ಣು
ಉಸರನ್ನರಾ..
ಕಸ್ಕೊಂಡ ಹೋಗ್ಲಿಲ್ವಲ್ಲೆ...
ನಮ್ಮವ್ವ...
🐽🐽🐽🐽🐽
ಗಲ್ಲಿ.. ಗಲ್ಲಿಯೊಳಗು
ಜಾತಿಯ
ಝೆಂಡಾ ಕಟ್ಯಾರು
ನೋಡವ್ವ..
ಯಾವ ಝೆಂಡಾದ
ನೆರಳಾಗ ಕುಂತ್ರೇನ ಬಂತು..
ಮುಕ್ತಿಯನ್ನೊದ
ಸಿಗುವಲ್ದ ಆಗೈತೆಲ್ಲೊ
ನಮ್ಮವ್ವ
ಮೂಲಿ...ಮೂಲಿಗೊಂದು
ಗುಡಿ ಗುಂಡಾರ ಕಟ್ಟಿ
ದೀಪಾ ಹಚ್ಚ್ಯಾರ
ನೋಡವ್ವ
ಎದ್ಯಾನ ಗುಡಿನ
ಹಾಳ್ಗೇಡವಕೊಂಡ
ತಾವ ಕತ್ಲದಾಗ ಕುಂತಾರಲ್ಲೊ
ನಮ್ಮವ್ವ
ಸುರಿಯೊ ಮಳಿಗೆ
ಜಾತಿಲ್ಲಂತಾರ...
ಹರಿಯೊ ನದಿಗ್ಯಾಕ
ಹೆಸರಿಟ್ಟಾರು
ಹೇಳವ್ವ
ಬಿತ್ತೊ... ಬೆಳಿಗೆ
ಹೆಸರಿಡ್ತಾರು...
ಹಸಿಯೊ ಹೊಟ್ಟಿಗೆ
ಏನಂತ ಹೆಸರಿಡ್ತಾರೊ
ನಮ್ಮವ್ವ
🐰🐰🐰🐰🐰🐰
ಕರಿಕಲ್
ದ್ಯಾವ್ರ ನೆತ್ತಿ
ಮ್ಯಾಲೆ
ಎಣ್ಣಿ ಸುರಿತಾರ
ತಣ್ಣಗಾಗ್ಲೆಂತಂದ
ನೋಡವ್ವ
ಹಸಿದೊಡಲ
ನಾಯಿ...
ಎಣ್ಣಿನೆಲ್ಲ
ನೆಕ್ಕಿ....
ದೇವ್ರನ್ನೆ
ಎಂಜ್ಲಾ ಮಾಡಿತ್ತ
ನೋಡವ್ವ
ಧರ್ಮಕ್ಕೊಂದೊಂದು
ಬಣ್ಣಾ..ಬಣ್ಣದ
ಬಟ್ಟಿ ಕಟ್ಗೊಂಡ
ಬಡ್ದಾಡ್ಕೊಂತ
ಕುತ್ಗೊಂಡಾರು
ನೋಡವ್ವ...
ಬಿತ್ತೊ... ಬೆಳಿಯೊಳ್ಗ
ಬಣ್ಣ ಬಣ್ಣದ
ಅನ್ನ ಐತಿ...
ಆರ್ಸಿಕೊಂಡ
ಉಣ್ತಾರೇನೊ
ನಮ್ಮವ್ವ
ಕೋಳಿಗರ್ದ
ಭಕ್ಷಿ.. ಮನಿಯ್ಯಾನ
ಮಸಾಲಿ ವಾಸ್ನಿ...
ಗಾಳಿಗುಂಟ ನಮ್ಮನಿ
ಪಡಸಾಲಿಗೆ ಬಂದಿತ್ತ
ನೋಡವ್ವ...
ವಾಸ್ನಿ
ಹೊತ್ತ ತಂದ
ಗಾಳಿನ ಬೈಕೊಬೇಕೊ
ಏನ್
ಉಸಿರಾಡೋದನ್ನ
ನಿಲ್ಸಬೇಕೊ ಹ್ಯಾಂಗ
ನೀನರ
ಹೇಳವ್ವ
🐁🐁🐁🐁🐁
ಗಂಗಿಯೊಳಗ
ಮುಳುಗೆದ್ರ ಪಾಪ
ಕಳದ್ಹೊಕ್ಕೈತೇನೊ
ನಮ್ಮವ್ವ
ಅಂಗಿಯೊಳ್ಗಿನ
ಕಿಸೆಯಿಂದ ನಾಕಾಣೆ
ಧರ್ಮ ಮಾಡ್ಲಿಲ್ಲಂದ್ರ
ಪುಣ್ಯಾನರ ಹ್ಯಾಂಗ
ಹುಟ್ತೈತೊ
ನಮ್ಮವ್ವ
ಬಿಸೊ...ಬಿರುಗಾಳಿಗೆ
ಬಿದ್ದ್ಹೋಗ ಮರಕ್ಕ
ಸುತ್ತ ಹಾಕಿದ್ರೇನ
ಬಂತೊ
ನಮ್ಮವ್ವ
ಹೆತ್ತ ಜೀವಕ್ಕ
ಎರ್ಡ ಹೊತ್ತು... ತುತ್ತ
ಹಾಕದಿದ್ರ ಏನ
ಬಂತೊ ನಮ್ಮವ್ವ
ಹೊಟ್ಟೆ...ಬಟ್ಟೆ ಕಟ್ಟಿ
ಕುಡಿನ ಶ್ಯಾಣೆನ
ಮಾಡಿ...ಗೂಟದ
ಕಾರನ್ಯಾಗ ಅಡ್ಡಾಡುವಂಗ
ಮಾಡ್ಯಾರು
ನೋಡವ್ವ...
ಹಡ್ದ...ಬೆಳ್ಸಿದ
ಋಣಕ್ಕ...
ಸಾಕಲಾರ್ದ್ನ
ಆಶ್ರಮಕ್ಕ ಬಿಟ್ಟ
ಬರೊ ಇವ್ರ
ಶ್ಯಾಣೆತನಕ್ಕ
ಏನಂತ ಹೇಳ್ಬೇಕೊ
ನಮ್ಮವ್ವ
🌹🌹🌹🌹🌹🌹🌹
ಕರಿಕಲ್ಲ ದ್ಯಾವ್ತಿಗೆ
ಉಡಿ ತುಂಬಿ..
ಹೆಣ್ಣ ನೋಡಾಕ
ಹೋಗ್ಯಾರು
ನೋಡವ್ವ..
ನೋಡಿದ ಹುಡ್ಗಿ
ಕಪ್ಪಾದಳನ್ಕೊಂಡು..
ಮುಡಿಯಾಕ ಹೂವಾನು
ಕೊಡ್ದ, ಎದ್ದ ಬಂದಾರಲ್ಲೊ
ನಮ್ಮವ್ವ
ಊರಾಗಿನ ಎಲ್ಲಾ
ಹೆಣ್ಣ ದ್ಯಾವ್ರಿಗೆ ಹರ್ಕಿ
ಹೊತ್ಗೊಂಡ ಬರ್ತಾರ
ಸೊಸಿ ಗಂಡ್ಮಗು
ಹಡಿಲೆಂತ
ಕೇಳವ್ವ...
ಸೊಸಿ ಆರಾಮಾಗಿ
ಹೆಣ್ಣ ಹಡದ್ರ...
ಮನೇನ ಜಗ್ಲಿ ಮ್ಯಾಲಿನ
ದೇವ್ರು...ಎರ್ಡ ದಿನ
ದೀಪ ಕಾಣೊದಿಲ್ಲಲ್ಲೊ
ನಮ್ಮವ್ವ
ಹೆಣ್ಣು ಶಕ್ತಿ ದ್ಯಾವ್ತಿ
ಅಂತಂದ ಊರ್ತುಂಬಾ
ಹುಣ್ವಿಗೆ ಪ್ರಾಣಿನ
ಬಲಿ ಕೊಡ್ತಾರು
ನೋಡವ್ವ...
ಹೊಟ್ಟ್ಯಾಗೊಂದು
ಹೆಣ್ ಜೀವಾ ಉಸರೈತಂದ್ರ,
ಪಿಂಡಾ ಬಲಿಯೊ ಮುಂಚೇನ,
ಬಲಿ ತಗೊಂಡ ಬಿಡ್ತಾರಲ್ಲೊ
ನಮ್ಮವ್ವ
🌴🌴🌴🌴🌴🌴🌴
ತುಂಬಿದ ಸೇರ
ಒದ್ದ ಬಂದಾಕಿ
ತುಂಬಿದ ಮನಿನ
ಒಡ್ದಾಳಲ್ಲೊ
ನಮ್ಮವ್ವ
ಹಾಲುಕ್ಕಿಸಿ...
ಸುಖ ತುಂಬ್ತೀನಂದಾಕಿ..
ಮನಿ ಒಡೆಯೊ, ವಿಷದ
ಗಾಳಿನ....ಉಸಿರಾಳಲ್ಲೊ
ನಮ್ಮವ್ವ
ಎಷ್ಟ ಓದಿ..ಡಿಗ್ರಿ
ತಗೊಂಡ್ರೇನಾತ,
ಸಂಜಿತನ್ಕ ....
ಟಿ.ವಿ ಮುಂದ ಕುಂತ್ರ
ಏನ ಬಂತ
ನಮ್ಮವ್ವ...
ಕೈಯ್ಯಾಗ ಬಳಿ
ತೊಟ್ಟಾಕಿ...ಹೊಟ್ಟಿಗೆ
ತಿನ್ನೊ ಅನ್ನಾನ
ರೊಕ್ಕಾ ಕೊಟ್ಟ
ತರ್ಸಿಕೊಂಡ ತಿನ್ನುದ್ರಾಗ
ಏನ ಸುಖ ಐತೊ
ನಮ್ಮವ್ವ
ಪೆಟ್ಗಿ ತುಂಬಾ...
ಬೆಳ್ಳಿ ಬಂಗಾರ ತುಂಬ್ಕೊಂಡ
ಬಂದೀನ ಅನ್ನೊ..
ದೌಲತ್ತು ಛಲೋ ಅಲ್ನೊಡದ
ಹೌದಲ್ಲವ್ವ...
ಹಿಂದ್ಕ ಹಂಡೆ ತುಂಬಾ
ಬಂಗಾರ ತಂದಾಕೀನ, ಇವತ್ತ
ನಿನ್ಮುಂದ.. ಹೊತ್ತ
ಕೂಳಿಗೆ ಕೈ ಚಾಚಿ
ಕೇಳುವಂಗಾಗೈತಿ
ಗೊತ್ತಾಯ್ತೇನವ್ವ
🐎🐎🐎🐎🐎🐎🐎
ಕಷ್ಟ ಅಂತಂದು
ಎಲ್ಲಾದಕ್ಕು...
ದೇವ್ರ ಮುಂದೋಗಿ
ಕೈ ಮುಕ್ಕೊಂಡ
ನಿಂತ್ಕೊಳ್ತಾರು
ನೋಡವ್ವ...
ಪೂಜೆ ಮಾಡ್ಸಿಕೊಳ್ಳೊ
ಕಲ್ಲು... ಪೆಟ್ಟ
ತಿನ್ನಲಾರ್ದನ ದೇವ್ರಾಗ್ಲಿಲ್ಲ
ಅನ್ನೊ ಸತ್ಯಾನ...
ಎಲ್ರೂ ಮರ್ತ ನಿಂತ್ಗೊಂಡ್ರ
ಹ್ಯಾಂಗವ್ವ
ಮೈಕೈ ತಿಕ್ಕಲಾರ್ದ
ಮೈ ಮ್ಯಾಲಿನ
ಹೋಲ್ಸು...
ಹೋಗೊದಿಲ್ಲ
ಹೌದಲ್ಲವ್ವ...
ಇನ್ನ... ಬರೀ ನೀರಾಗ
ಮುಳುಗೆದ್ರ,
ಮಾಡಿದ ಪಾಪಾ
ತೋಳ್ದಹೊಕ್ಕಾವೇನೊ
ನಮ್ಮವ್ವ
ಅದನ್ನ ಕಡಿಬ್ಯಾಡ..
ಇದನ್ನ ಕೊಯ್ಯಬ್ಯಾಡ ಅನ್ಕೊತ
ಎಷ್ಟೊಂದ ಬಡ್ದಾಡ್ಕೊಂಡ
ಸಾಯ್ತಾರಲ್ಲೊ
ನಮ್ಮವ್ವ...
ಯಾವ ಧರ್ಮ ಹೇಳೈತಿ?
ನಿಮ್ಮ ಹಠಕ್ಕ...
ಹೆತ್ತಾಕಿ ಮಡಿಲಾಗ..
ಸಾವಿನ ಕೆಂಡ
ಸುರೀರಂತ
🐯🐯🐯🐯🐯🐯
ಶಾಯರಿ ೬೩೭
ಹಾದಿಯುದ್ದಕೂ
ನಡೆದುಕೊಂಡೇ....
ಬಂದೆ,
ಬುದ್ಧನು
ಸಿಗಲಿಲ್ಲ
ಸಾಕಿ....
ಮಧು ಬಟ್ಟಲನ್ನು
ಹಿಡಿದ ಮೇಲೆ,
ಶಾಂತಿಯನ್ನಲ್ಲದೆ
ಮನಸ್ಸು....
ಮತ್ತೀನ್ನೇನನ್ನು
ಬಯಸುತ್ತಿಲ್ಲ..
ನಮ್ಮವ್ವ
ಕೋಲ ಹಿಡ್ಕೊಂಡ
ಅಡ್ಯಾಡೊ ವಯಸ್ನೊಂಗ
ಕೋಲಾಟ ಆಡೊ
ಹುಡ್ಗಿನ ಕೊಟ್ಟ
ಲಗ್ನ ಮಾಡ್ಯಾರು
ನೋಡವ್ವ....
ಚಟ್ಟ ಏರೊ ವಯಸ್ಸನ್ಯಾಗ,
ಹೂವಿನ ಪಲ್ಲಂಗಾನ
ಹತ್ತತೀನಿ ಅಂತಾನಲ್ಲೊ
ನಮ್ಮವ್ವ
ಶಾಯರಿ ೬೪೧
ಮಾತು...
ಮಾತಲ್ಲೆ
ಹಿಡಿಸಿಬಿಟ್ಟಿದ್ದಳು
ಅವಳು
ಗುಂಗು
ಸಾಕಿ....
ಒಲವಿಗಾಗಿ
ಕಾದವನ
ಮುಖಕ್ಕೆ....
ಹಚ್ಚಿ ಹೋದಳು
ಮಾಸದ
ರಂಗು..
ಶಾಯರಿ ೬೪೫
ಕುಡಿದರೂ....
ಮರೆತು ಹೋಗದ
ರಂಗೀಯ,
ರಂಗು ರಂಗೀನ
ನೆನಪುಗಳ
ಮುಂದೆ...
ತೊಳೆದರೆ
ಹರಿದು ಹೋಗುವ
ರಂಗೊಂದು
ಯಾವ ಲೆಕ್ಕ
ಸಾಕಿ....
ಬಣ್ಣದ ಮಾತಿಗೆ
ಮರುಳಾಗಿ
ಹೋದವನು
ನಾನು...
ಹುಡಿ ಬಣ್ಣಕ್ಕೆ...
ನಾನೇನು
ಹೇಳಲಿ.
ಶಾಯರಿ ೬೨೯
ಅವಳ
ಕಣ್ಣುಗಳಲ್ಲಿ
ನಶೆಯಿದೆ
ಸಾಕಿ...
ನೋಡಿದಾಗಲೆಲ್ಲ
ಅಮಲೇರಿ
ಬಿಡುತ್ತದೆ.
Tuesday, March 19, 2019
ಶಾಯರಿ ೬೨೦
ನಿನ್ನ
ಹೆಸರಿನಲ್ಲಿ
ಹುಟ್ಟಿಕೊಂಡಿವೆ
ನೋಡಿಲ್ಲಿ
ಎಷ್ಟೊಂದು
ಗೋರಿಗಳು
ರಂಗೀ...
ನೀನು ಮಾತ್ರ,
ಅರಿವಿಲ್ಲದಂತೆ
ಆಡುತ್ತಿರುವೇಯಲ್ಲ
ಗೆಳತಿಯರೊಡಗೂಡಿ
ಲಗೋರಿ...
ಶಾಯರಿ ೬೫೩
ನಿನ್ನ
ಮುನಿಸಿಗೆ
ಅರಗಿಣಿಯು
ಸಿಟ್ಟಾಗಿದೆ ನೋಡು
ನನ್ನ ಮೇಲೆ
ರಂಗೀ....
ನನ್ನೆದೆಯ
ಗೂಡಿದು
ಪಂಜರವೇನಲ್ಲ!!!
ಬಂದು ಕೂರೊಮ್ಮೆ
ನಿನಗೆ...
ಗೊತ್ತಾಗುವುದೆಲ್ಲ!!!
ಶಾಯರಿ ೬೫೫
ನಾನು...
ನಾನೆಂಬರೆಲ್ಲ
ನಿನ್ನರಮನೆಯ
ಹಣತೆಗೆ ಸಿಕ್ಕು
ಉರಿದು ಹೋದರಲ್ಲ
ಸಾಕಿ....
ಕಾಲ ಗತಿಸಿದ
ಮೇಲೆ, ಬುದ್ದಿ
ಬಂದರೇನು?
ನನ್ನ ಹಾಗೆ!!!
ಶಾಯರಿ ೬೪೭
ಸಿಹಿ
ಮುತ್ತನಿಟ್ಟು
ಕೊಟ್ಟುಬಿಡೊಮ್ಮೆ
ಮಧು ಪ್ಯಾಲೆಯನು
ಒಳಹೊರಗಿನ
ಉರಿ ಚೂರಾದರು
ಕಡಿಮೆಯಾಗಲಿ
ಸಾಕಿ...
ಮುಖದ ಮೇಲಿನ
ನಖಾಬ್ ನ್ನು
ಸರಿಸಿ...
ನಕ್ಕು ಬಿಡುವೊಮ್ಮೆ
ಗೋರಿ ಸೇರುವ
ಹೊತ್ತು...
ನಾಲ್ಕು ದಿನ
ಮುಂದೂಡಲಿ.
ಶಾಯರಿ ೬೪೦
ಸತ್ತು ಹೋದ
ಕನಸುಗಳ
ಕುರಿತು
ಚಿಂತಿಸಬೇಡ, ನಾಳೆ
ಹೊಸ ಕನಸುಗಳನ್ನು
ಕಟ್ಟಿಕೊಂಡರಾಯಿತು
ಸಾಕಿ...
ಒಡೆದು ಹೋದ
ಹೃದಯಗಳ
ಕುರಿತು ಚಿಂತಿಸು...
ಮತ್ತೆ... ಒಂದು
ಗೂಡುವವೇ?
ಎಂದು
ಶಾಯರಿ ೬೨೨
ಈ ಎದೆಗೆ
ಸಾಂತ್ವಾನಿಸಬೇಡ,
ಇದಕ್ಕಲ್ಲ ಹೊಸತು
ನೋವು
ಸಾಕಿ....
ಬಯಸಿದ್ದು
ಮಾವು...!!!
ದಕ್ಕಿದ್ದು?
ಮಧು ಬಟ್ಟಲ
ಬೇವು...
ನೆನಪುಳಿಯುವುದೆ?
ರಂಗೀಗೆ ನನ್ನ
ಸಾವು..!!!!
ಶಾಯರಿ ೬೨೬
ಅವಳು
ಕೈಯ್ಯಾರೆ
ಕೊಟ್ಟ ವಿಷವು
ಅಮೃತವಾಗಿತ್ತು
ಸಾಕಿ...
ನಿನ್ನ ಮಧು
ಬಟ್ಟಲೊಳಗಿನ
ಅಮೃತವನ್ನೆ
ಕುಡಿಯುತ್ತಿದ್ದರು
ಕಹಿಯೆ ಎನಿಸುತಿಹುದು.
ಶಾಯರಿ ೬೪೨
ರಂಗೀಯಿಲ್ಲದಾ
ಬದುಕು...
ಈಗೀಗ
ಭಾರವೆನಿಸಿಲ್ಲ
ಸಾಕಿ....
ನಿನ್ನ ಮಧು
ಬಟ್ಟಲಿಗೆ
ಮುತ್ತಿಕ್ಕಲೂ...
ಅವಳ ನೆನಪುಗಳ
ಅವಶ್ಯಕತೆ,
ಇದ್ದೇ...ಇದೆ.
Monday, March 18, 2019
ಶಾಯರಿ ೬೬೭
ಎದೆಯ ಗೂಡೆ
ಸುಟ್ಟು ಹೋಗಿದೆ
ಇಲ್ಲಿ...
ಸುಡುವ ಹಾಸು
ಗಲ್ಲಿನ ನೋವು
ಹೂವೆನಲ್ಲ
ಸಾಕಿ....
ಹಾದಿಯುದ್ದದ
ಮರಳಿಗೆ,
ಸುಟ್ಟ ಅಂಗಾಲಿನ
ನೆತ್ತರಂಟಿದೆ...
ಗುರುತಿಸುವರಾರು?
ಶಾಯರಿ ೬೫೪
ವಿರಹ,
ಸಾವಿನ ನಡುವೆ
ನಿನ್ನ ಮಧು
ಬಟ್ಟಲು ಕುಳಿತಿದೆ
ಸಾಕಿ...
ನಿನ್ನರಮನೆಯೊ?
ಗೋರಿಯೊಡಲೊ?
ಎಂದು, ನನ್ನನೆ
ಪ್ರಶ್ನಿಸುತಿದೆ.
ಶಾಯರಿ ೬೪೩
ಸುಡುವ
ವಿರಹದುರಿಯಲ್ಲೂ
ನಿನ್ನ ನಗುವ
ಕಂಡು, ಉಸಿರುತಿರುವೆ
ನಾನು ಸಾಕಿ...
ಪ್ಯಾಲೆಯ ಮೇಲೆ
ಪ್ರಮಾಣಿಸಿ
ಹೇಳುವೇನು
ಇದು ಬರೀ...
ಹೊಗಳಿಕೆಯಲ್ಲ!!!
ಶಾಯರಿ ೬೩೮
ಇಲ್ಲಿನ
ಪ್ರತಿ ಗೋಡೆಯೂ
ನಿನ್ನ ಹೆಸರನ್ನು
ಕೂಗಿದಾಗ
ಪ್ರತಿಧ್ವನಿಸುತ್ತದೆ
ಸಾಕಿ...
ನನ್ನೆದೆಯ
ಗೋಡೆಯಲ್ಲಿ
ಕೂಗಬೇಕಿನಲ್ಲ,
ಕ್ಷಣ...ಕ್ಷಣವು
ರಂಗೀಯ ಹೆಸರನ್ನೆ
ಜಪಿಸುತ್ತಿದೆ.
ಶಾಯರಿ ೬೬೦
ಆಸೆಯೇ....
ದುಃಖಕ್ಕೆ
ಮೂಲವೆಂದಿದ್ದನು
ನಡು
ರಾತ್ರಿಯಲ್ಲಿ
ಎದ್ದು
ಹೊರಟವನು
ಸಾಕಿ...
ಕನಸಿನರಮನೆಗವಳು
ಕೊಳ್ಳಿಯಿಟ್ಟಿದ್ದರಿಂದಲ್ಲವೆ,
ನಾನಿಂದು ನಡು
ರಾತ್ರಿಯಲ್ಲಿ
ಚುಕ್ಕಿಗಳನ್ನೇಣಿಸುತ್ತಿರುವುದು.
ಶಾಯರಿ ೬೩೫
ನನ್ನೆಲ್ಲ
ಆಸೆಗಳು
ಮಣ್ಣುಗೂಡಿ
ಹೋಗಲಿ,
ನೋವೆನಿಲ್ಲ
ಸಾಕಿ....
ಅವಳೊಂದು
ಆಸೆಯು...
ನಿರಾಸೆಯಾಗದಂತೆ
ದುವಾ ಮಾಡು
ಆ ಭಗವಂತನಲ್ಲಿ
ಶಾಯರಿ ೬೪೯
ಮತ್ತೆ...ಮತ್ತೆ...
ನೀನೂ...
ನೆನಪಿಸಬೇಡ
ಆ ರಂಗೀನಾಟವನ್ನು
ಸಾಕಿ...
ರಂಗೀಯ
ನಾಟಕವನ್ನು
ಸಹಿಸಿಕೊಳ್ಳಲಾರದೆ,
ಬಂದವನಲ್ಲವೆ
ನಾನಿಲ್ಲಿ.
Sunday, March 17, 2019
ಶಾಯರಿ ೬೫೦
ಪ್ಯಾಲೆಯ ಅಂಚು
ಹರಿದು,
ತುಟಿಯಂಚಲಿ
ನೆತ್ತರು ಜಿನುಗಿದೆ
ಸಾಕಿ...
ನೋಡೀಗ...
ಬಟ್ಟಲದ ತುಂಬೆಲ್ಲ
ರಂಗೀ ತುಟಿ
ಕಚ್ಚಿದ
ನೆನಪುಗಳೆ.
ಶಾಯರಿ ೬೫೭
ಹಗಲಿರುಳುಗಳ
ಅರಿವಿಲ್ಲದೆ
ಕುಳಿತವನು
ನಾನು....
ಸಾಕಿ,
ಬಣ್ಣ ಹಚ್ಚುವ
ಮಾತೆಲ್ಲಿ....
ಮುಖಕ್ಕೆ ಮಸಿ
ಬಳಸಿಕೊಂಡೆ
ಕುಳಿತಿರುವೆ
ನಾನಿಲ್ಲಿ.
ಶಾಯರಿ ೬೩೯
ನಿನ್ನ
ಪ್ಯಾಲೆಯ
ಅಂಚು
ಎಷ್ಟೊಂದು
ಬಿರಿಸು...
ಕೋಪಿಸಿಕೊಳ್ಳಬೇಡ,
ರಂಗೀಯ
ತುಟಿಯಂಚಿನ
ಮೃದುವನ್ನು
ಮರೆಸು.
ಶಾಯರಿ ೬೫೬
ನಾನೊಂದು
ಉರಿದು ಹೋಗುತ್ತಿರುವ
ಹಣತೆ,
ಉಳಿಸಿಕೊಳ್ಳದಿರು
ಎಣ್ಣೆಯನ್ನು
ಸುರಿದು ಸಾಕಿ...
ಮರೆಸುತ್ತಿರುವ
ಬೇಕಿದ್ದರೆ....
ಉರಿದು ಹೋಗುವ
ನೋವಿಗೆ,
ಮದ್ಯವನ್ನು ಸುರಿದು
ಶಾಯರಿ ೬೪೮
ನಿನ್ನ ಕಣ್ಣಲಿ
ಕಣ್ಣಿಟ್ಟು...
ಒಂದೇ... ಒಂದು
ಪ್ಯಾಲೆಯ ಶರಾಬನ್ನು
ಕುಡಿದೆ ನಶೆಯೆರಿಬಿಟ್ಟಿತು
ಸಾಕಿ....
ರಂಗೀಯನ್ನು
ನೆನೆದು...
ಪ್ಯಾಲೆಯನ್ನು
ಕೆಳಗಿಟ್ಟೆ,
ಮತ್ತೆಲ್ಲ......
ಇಳಿದು ಹೋಯಿತು.
ಶಾಯರಿ ೬೫೧
ನಡು ನೀರಿನಲ್ಲಿ
ಬಿಟ್ಟು ಹೋದದ್ದನ್ನು
ರಂಗೀಯು
ಮರೆತು
ಕುಳಿತಿರುವಳು
ಸಾಕಿ...
ಹುಟ್ಟಿಲ್ಲದ
ನೋವಿನ
ದೋಣಿಯಲ್ಲಿ
ಒಂಟಿ ಪಯಣಿಗ
ನಾನೀಗ.
ಶಾಯರಿ ೬೩೬
ಮುಡಿಗೇರಿಸಿದ
ಹೂವು
ನನ್ನದಲ್ಲ...
ಒಳಗಿಳಿಸಿದ
ಮದ್ಯವು
ನಿನದಲ್ಲ
ಸಾಕಿ....
ಹೀಗಿದ್ದ ಮೇಲೆ,
ನೆನಪುಗಳನ್ನು
ಕೊಂದುಕೊಳ್ಳುವ
ಹಕ್ಕು!!!!!
ನನಗಿದೇಯಾ?
ಶಾಯರಿ ೬೪೬
ಉಸಿರು
ನಿಂತು ಹೋದ
ಗೋರಿಯ ಮೇಲೊಂದು
ಹಣತೆಯ ಹಚ್ಚಿಟ್ಟರೇನು
ಬಂತು ಸಾಕಿ...
ಚಿಗುರನ್ನೆ
ಚಿವುಟಿ
ನಡೆದವಳನ್ನು
ಒಲವ ಬಳ್ಳಿಯ
ಕಾವಲಿಗೆ
ಇರಿಸಬಹುದೇನು?
Saturday, March 16, 2019
ಶಾಯರಿ ೬೬೮
ರಂಗೀಯು
ಕನಸಲಿ ಬರುವ
ಹೊತ್ತಾಯಿತು
ಮಲಗಿಬಿಡಲೆ
ಸಾಕಿ...
ಅರೇ....
ಮರೆಯಲೆಂದೆ
ಬಂದವನು...ನಾನು,
ಮದ್ಯವನ್ನು ಕೈ
ಗೆತ್ತಿಕೊಂಡು ಬಿಡಲೇ.
ಶಾಯರಿ ೫೮೬
ಒಲವ
ಸಂಪತ್ತನ್ನೆಲ್ಲ
ರಂಗೀಯು
ಕಿತ್ತುಕೊಂಡಳು...
ಚರಾಸ್ತಿಯೆಲ್ಲವನ್ನು
ನೀನು ಕಸಿದುಕೊಂಡು
ಬಿಟ್ಟೆ ಸಾಕಿ....
ಉಳಿದಿರುವುದಾದರು
ಏನು?
ನನ್ನ ಕೈಯಲ್ಲಿಗ,
ಖಾಲಿ ಮಧು
ಬಟ್ಟಲು...
ಶಾಯರಿ ೬೨೮
ಅವಳೀಗ...
ಕಾಯುತ್ತಿದ್ದಾಳಂತೆ
ಅದೇ..ಹಳೆ
ಜಾಗದಲ್ಲಿ
ಹೋಗಿ ಬರಲೆ
ಸಾಕಿ....
ನೆನಪಾಗುತ್ತಿಲ್ಲವಲ್ಲ
ಆ ದಾರಿ....
ಪ್ಯಾಲೆಯ ಶರಾಬಿಗೆ
ಎಲ್ಲವೂ...
ಮರೆತು ಹೋದ
ಹಾಗಿದೆ.
ಅವಳೊಬ್ಬಳೆ
ಅಲ್ಲವೆ ಈಗ....
ಮರೆಯುವುದಕ್ಕೆಂದೆ
ಉಳಿದಿರುವುದು.
ಅದು ಬೇಕಲ್ಲ!!!!
ಅದು...ಇರಬೇಕಾಗಿತ್ತು ಎಲ್ಲರಲ್ಲಿ!!!
ಅದಿದ್ದರೆ...? ಹೀಗಾಗುತ್ತಿರಲಿಲ್ಲ ಅಲ್ಲವೆ?
ಹೇಗಾಗಬೇಕಿತ್ತು? ಅದಿದ್ದರೆ...
ನೋಡಬೇಕಲ್ಲ!!! ಅದಿದ್ದವರನ್ನು, ಸಿಗುವರೇನು?
ಇರುವೀರಾ ಯಾರಾದರೂ ಕಂಡವರು...
ಹೇಗೆ ಹುಡುಕುವುದು ಅದನ್ನು? ಪಡೆಯುವುದು ಎಂತು?
ಗಳಿಸಿಟ್ಟಿಕೊಳ್ಳಬಹುದಾ?, ಕರಗುವುದಿಲ್ಲವೆ ?
ಕೊಳೆತು ಮೂಗ ಮುಚ್ಚಿಕೊಳ್ಳುವಷ್ಟು ನಾರುವುದಿಲ್ಲ ತಾನೆ?
ಎಲ್ಲಿಯಾದರೂ ಸಿಗುವುದಾ? ಅಗಿಯಬೇಕಾ? ಬಗಿಯಬೇಕಾ? ಜಗ್ಗಬೇಕಾ? ಬೆಲೆ ಕೊಟ್ಟರೆ
ಸಿಕ್ಕಿಬಿಡುವುದಾ? ತೂಕವೊ, ಚೀಲವೊ, ಲಾರಿಗಟ್ಟಲೆ
ಹೊತ್ತು ತರಬಹುದಾ?
ಅದಕ್ಕೆ ರೂಪವಿದೇಯಾ? ಬಣ್ಣವಿದೇಯಾ?
ನನ್ನ ನೋಡಿ ನಗುವುದೊ? ಅಳುವುದೊ?
ಸಂಭ್ರಮಿಸುವುದೊ? ಭಯ ಭೀತಗೊಳ್ಳುವುದೊ?
ಪರಿಚಯಸ್ಥರು ಬೇಕಾ? ಇಲ್ಲವೆ ವಸೂಲಿಯನ್ನು
ಹಚ್ಚಬೇಕಾ? ಏನು ಮಾಡಬೇಕು ಅದಕ್ಕೆ...
ಅದಿದ್ದರೆ ಎಲ್ಲ ಇದ್ದಂತೆ...ಎನ್ನುವರಲ್ಲ!!!!!
ಅದಿದ್ದವರು ನನಗೊಬ್ಬರು ಕಾಣುತ್ತಿಲ್ಲ, ಸುಳ್ಳು
ಹೇಳುತ್ತಿರುವರಾ?, ಹೇಳಿದರೂ ಅದರಲ್ಲಿ
ಎಷ್ಟೊಂದು ಸುಖವಿದೆಯಲ್ಲ!!! ಸಿಕ್ಕುಬಿಟ್ಟರೆ?
!!!!!!!!!!!!!!! ಹಾ...ಹಾ!!!! ಬೇಕು ನನಗದು
ಬೇಕೆ ಬೇಕು...
ಬೇಕು ಬೇಕೆಂದರೆ ಅದು ಸಿಕ್ಕು ಬಿಡುವುದೆ?
ಅದಿದ್ದರೆ ಅದೂ ಬೇಡ, ಇದು ಬೇಡ
ಎಂದೆನಿಸುವುದಂತೆ!!! ನಿಜವೆ?, ಕೌರವರಿಗೆ
ಸಿಗದದ್ದು, ರಾಜ್ಯ ಗೆದ್ದ ಪಾಂಡವರಿಗೆ ದಕ್ಕದದ್ದು
ಅದಕ್ಕೆಂದೆ ವರ್ಷಗಟ್ಟಲೆ ತಪೋಗೈದವರ
ಕೈಗೆಟಕದ್ದು, ನನ್ನನಪ್ಪಿಕೊಳ್ಳುವುದಾ? ಇಲ್ಲವಾ?
ಅದು ಬೇಕಲ್ಲ.. ನನಗೀಗ, ಅದು ಬೇಕೆ ಬೇಕಲ್ಲ!!!
ನಿಮ್ಮಲ್ಲಿ ಏನಾದರೂ ಚೂರು ಇದೆಯಾ?
ಶಾಯರಿ ೬೭೩
ಮರೆಯುವುದೆಂದರೆ...
ಮತ್ತಿನ್ನೇನು
ಸಾಕಿ...
ಪ್ಯಾಲೆಯ
ಮಧುವನ್ನಲ್ಲವೆ
ಕುಡಿಯುವುದು.
ಶಾಯರಿ ೬೬೫
ಹಿಡಿ ಪ್ರೀತಿಯ
ಬೇಡಿದ ಕೈಗೆ
ಹಾರಿ ಹೋಗುವ
ಹುಡಿಯು
ದಕ್ಕಲಿಲ್ಲ
ಸಾಕಿ....
ಬೇಡಿದ್ದು ಕೇವಲ
ಬಟ್ಟಲು
ಮದಿರೆಯನ್ನು...
ಹನಿಯನ್ನಾದರು
ನೀನು ಕೊಡಲಿಲ್ಲ
ಶಾಯರಿ ೬೫೯
ಮದ್ಯಕ್ಕೆ ಎಷ್ಟೇ
ನೀರನ್ನು ಬೆರಸಿ
ಕುಡಿದರೂ...
ಮತ್ತೇರದೆ
ಇರುವುದೇನು
ಸಾಕಿ...
ಸತ್ಯದ ಮೇಲೆ
ಅದೇಷ್ಟು
ಕಫನ್ನನ್ನು
ಹೊದಿಸಿಟ್ಟರೇನು?
ಎದ್ದು
ಬರಲಾರದೇನು?
Friday, March 15, 2019
ಶಾಯರಿ ೬೭೮
ಅವಳೆದೆ...
ಹೂವಾಗಿತ್ತೊ?
ಇಲ್ಲವೋ?
ಗೊತ್ತಾಗಲಿಲ್ಲ
ಸಾಕಿ....
ಮೂಸಿದಾಗ,
ಒಲವ
ಮಕರಂದವು
ಸಿಗಲಿಲ್ಲ!!!
ಶಾಯರಿ ೫೮೪
ರಂಗೀಯ
ನಗು ಮೊಗವ
ಕಂಡು....
ಸಾವಿರ
ಪದ್ಯಗಳೆ
ಹುಟ್ಟಿಕೊಂಡವು
ಎದೆಯಲ್ಲಿ
ಸಾಕಿ....
ಆ ಮುಖವಾಡದ
ಹಿಂದಿನ ಮಸಲತ್ತನ್ನು
ತಿಳಿಸಲು....
ಪದಗಳೊಂದೆರಡು
ಉಳಿದುಕೊಂಡಿಲ್ಲ
ಜೋಳಿಗೆಯಲ್ಲಿ.
ಶಾಯರಿ ೬೮೦
ಮಧುರಸದಲ್ಲಿ
ಮಿಂದೇಳುವ ಆಸೆ
ನನಗೂ ಬಹಳಷ್ಟಿದೆ
ಸಾಕಿ...
ಏನು ಮಾಡಲಿ?
ಜೇಬಿನಲ್ಲಿ ಕಾಸಿಲ್ಲ!!!
ಲಕ್ಷ್ಮೀಯಿಲ್ಲವೆಂದರೆ
ನೀನೂ....
ಕಣ್ತೆರೆಯುವುದಿಲ್ಲ!!!
ಶಾಯರಿ ೬೩೦
ಮಾತನಾಡುವರು
ಮಾತನಾಡಿಕೊಳ್ಳಲಿ
ಬಿಡು, ನನ್ನನ್ನು
ಬಿಟ್ಟರೆ....
ಅವರಿಗೆ ಬೇರೆ
ವಿಷಯವೆ...
ಇಲ್ಲ ಸಾಕಿ...
ನಿನ್ನ ಬಟ್ಟಲೊಳಗಿನ
ಮಧುವನ್ನು
ಸವಿಯಲೆ.....
ಸಮಯವಿಲ್ಲ!!!
ಅವರ ಮಾತುಗಳಿಗೆ
ನಾನೇಕೆ ಕಿವಿಯಾಗಲಿ.
ಶಾಯರಿ ೬೬೬
ಧ್ಯಾನಿಸುತ
ಕುಳಿತು
ಕೊಳ್ಳಲೇಕೆ?
ಕಾವಿಯ
ತೊಟ್ಟು
ಸಾಕಿ...
ಕುಡಿಯುತ್ತಾ
ನಿನ್ನ ಮದ್ಯವನ್ನು
ಕುಳಿತುಬಿಡುವೆ,
ಈ ಕುಹಕ
ಜಗದ ಚಿಂತೆ
ಬಿಟ್ಟು...
ಶಾಯರಿ ೬೮೨
ಒಲವ ಎಣ್ಣೆಯನ್ನೆ
ನಾನು ಬಯಸಿಕೊಂಡು
ಹೋದದ್ದು
ಸಾಕಿ....
ಹಣತೆಯ
ಕಿತ್ತುಕೊಂಡು,
ಕೈಯಲ್ಲಿ ಮಧು
ಪ್ಯಾಲೆಯನಿತ್ತು...
ಮರೆಯಾದಳಲ್ಲ!!!
ಎದೆಯಲ್ಲಿ ವಿರಹದ
ಗಂಗೆಯನೆ....
ಉಕ್ಕಿಸಿ...
Thursday, March 14, 2019
ಶಾಯರಿ ೬೭೧
ಹಚ್ಚಿಡುವ
ಹಣತೆಗೆ,
ಎಣ್ಣೆಯ
ಸುರಿಯುವವರೊಬ್ಬರು
ಬೇಕಲ್ಲವೆ
ಸಾಕಿ....
ಬೆಳಗುವ
ದೀಪವನ್ನೇ....
ನಂದಿಸಿ ಹೋದವಳವಳು
ಇನ್ನೂ...
ಹೊಸದೊಂದನ್ನು
ಬೆಳಗಿಸುವಳೇನು?
ಶಾಯರಿ ೬೮೫
ಕತ್ತಲೆಯಲ್ಲಿ
ಮುಳುಗಿದ ಬದುಕಿನೊಂದಿಗೆ
ಇರುಳಿನಲ್ಲಿ
ಕುಳಿತು ಕುಡಿಯುವ
ಫಕೀರ ನಾನು
ಸಾಕಿ...
ಬೆಳಕಿನಲ್ಲಿ!!!
ನೋವಿಗೆಲ್ಲ,
ತೀಲಾಂಜನಿಯನ್ನೇನು
ಇಡಬೇಡ. ಬೇಕಿದ್ದರೆ
ಮುಕ್ತಿಯನ್ನಾದರು
ನೀಡಿಬಿಡು ಈ
ಬದುಕಿಗೆ.
ಶಾಯರಿ ೫೮೫
ನಿರೀಕ್ಷಿಸದೆ...
ನನ್ನ ಕೈಯಲ್ಲಿ
ಬಂದು ಕೂತಿದೆ
ಮಧು ಬಟ್ಟಲು
ಸಾಕಿ...
ಪ್ರಶ್ನಿಸಬೇಡ,
ಸುರಿಯುತ್ತಿರು
ಶರಾಬನ್ನು...
ಹಚ್ಚಿಟ್ಟ ದೀಪ
ಆರಲೇ.... ಬೇಕು.
ಶಾಯರಿ ೬೭೦
ಹುಚ್ಚಿ....
ರಂಗೀಯು ಮಣ್ಣಿನಲ್ಲಿ
ಒಂದಾಗೋಣ
ಎನ್ನುತ್ತಿದ್ದಾಳಲ್ಲ
ಸಾಕಿ....
ಬದುಕಿದ್ದಾಗಲೆ
ಬಾಯಿಗೆ ಮಣ್ಣನ್ನು
ಸುರಿದವಳು...
ಮಣ್ಣಿನಲ್ಲಿ!!!!!
ಇನ್ನೇನು ಮಾಡುವಳೊ?
ಶಾಯರಿ ೬೭೯
ಉಸಿರಿನೊಂದಿಗೆ
ನೆನಪುಗಳು
ಸಮಾಧಿಯಾಗುವವು
ಸಾಕಿ...
ಬರೆಯಿಸಿಕೊಳ್ಳುವುದಾದರು
ಏನು?
ಗೋರಿಯ ಮೇಲೆ,
ನತದೃಷ್ಟನೆಂದೆ...
ಶಾಯರಿ ೬೭೭
ಮುಡಿಗೇರಿಸಲೆಂದು
ತಂದದ್ದು...
ಗೋರಿಯ ಮೇಲೆ
ಚಾದರವ ಹೊದಿಸಲೆಂದು
ತಂದ ಮಲ್ಲಿಗೆಯ
ಮೊಗದಲ್ಲಿ....
ಅಳಿಸಲಾಗದ
ನಗುವೆ ಇದೆ
ಸಾಕಿ...
ಮುಡಿಗೇರಿಸುವ
ಅವಕಾಶವಂತೂ...
ದಕ್ಕಲಿಲ್ಲ...
ಕಫನ್ನಿನ ಮೇಲೆ
ಹೊದ್ದಿಸಿಕೊಳ್ಳುವ
ಕರ್ಮ...
ತಪ್ಪಲಿಲ್ಲ!!!
ಶಾಯರಿ ೬೮೮
ಇಂದೇನು
ಮೋಡಿ
ಮಾಡಿದೆಯೋ?
ನಿನ್ನ ಮದ್ಯವು
ಸಾಕಿ...
ಇಷ್ಟು ದಿನ
ಕಣ್ಣಲ್ಲಿ, ಒಬ್ಬಳೆ
ಕಾಣುತ್ತಿದ್ದವಳು...
ಇಂದು ಎರಡಾಗಿರುವಳಲ್ಲ!!!
ಶಾಯರಿ ೬೮೩
ಹುಗಿದ ಸ್ಮಶಾನದ
ತುಂಬೆಲ್ಲಾ....
ಅವಳದೆ
ಮಾತು ಸಾಕಿ....
ನೆಮ್ಮದಿ ಸಿಗುವುದೆಂದು
ಮಣ್ಣೊಳಗೆ
ಬಂದೆ,
ಇಲ್ಲಿಯೂ....
ಭಗ್ನಾತ್ಮಗಳು
ಅವಳ ನೆನಪಗಳ
ನೆನಪಿಸಿ...ನೆನಪಿಸಿ...
ಮತ್ತೆ ಕೊಲ್ಲುತಿವೆಯಲ್ಲ!!!
ಶಾಯರಿ ೫೭೭
ಅರಮನೆಯ
ಗೋಡೆಗಳು ಎಷ್ಟು
ಗಟ್ಟಿಯಾಗಿವೆಯೆಂದು
ಪರೀಕ್ಷಿಸದಿರು
ಗಾಲಿಬ್....
ನೀನಾಡಿದ
ಒಂದೊಂದು
ಮಾತುಗಳೂ...
ಹೊರಗಿನ ಕಿವಿಗಳ
ಪಾಲಾಗಲಾರವು.
Wednesday, March 13, 2019
ಶಾಯರಿ ೬೭೬
ಹಣತೆ ಆರಿಸಿ
ಹೋದವಳ
ಕುರಿತು
ಚಿಂತಿಸದಿರು
ಗೆಳೆಯಾ...
ಸಾಕಿಯರಮನೆಗೊಮ್ಮೆ
ಬಾ...
ಹಣತೆ ಆರದಂತೆ,
ಬೆಳಗುವ ಕಲೆ
ಇವಳೊಬ್ಬಳಿಗೆ
ಗೊತ್ತು...
ಶಾಯರಿ ೬೯೨
ಮತ್ತೆ...ಮತ್ತೆ...
ಬದುಕುವುದಕ್ಕೆ
ಏನುಳಿದಿದೆ
ಸಾಕಿ...
ಈಗಾಗಲೇ...
ರಂಗೀಯು ನಡೆದು
ಹೋಗಿರುವಳಲ್ಲ
ನೋವಿನ ಕಂದಕಕ್ಕೆ
ನನ್ನನು ನೂಕಿ
ಶಾಯರಿ ೬೬೨
ನನ್ನೆದೆಯ
ದುಃಖವನ್ನು
ಹೇಳಿಕೊಳ್ಳಲಿ
ಏನಂತ
ಸಾಕಿ...
ಎದೆಯುರಿಯನ್ನು
ಹೆಚ್ಚಿಸಲೆಂದೆ...
ಕೇಳುತ್ತಿರುವೆಯೇನೊ?
ಬೇಕು....ಬೇಕಂತ!!!!
ಶಾಯರಿ ೬೮೧
ಇಷ್ಟಪಟ್ಟ
ಹೂವೆ....
ಕೈಗೆ ಸಿಗಲಿಲ್ಲ
ಸಾಕಿ....
ಕಫನ್ನಿನ
ಮೇಲೆ,
ಹೂ ಹಾರವನ್ನೆ
ಹೊದಿಸಿದರೇನು?
ಉಸಿರು....
ಮರಳುವುದೇನು?
ಶಾಯರಿ ೬೬೯
ಸತ್ತು ಹೋದವನ
ಎದೆಯ
ಮೇಲೊಂದು
ಕಂಪ ಬೀರುವ
ಹೂವೊಂದನಿಟ್ಟರೇನು
ಬಂತು
ಸಾಕಿ....
ಗೋರಿಯೊಳಗಿನ
ನಾನು...
ಮೇಲೆ ಬಿದ್ದ ಮಣ್ಣು
ಸುಗಂಧವನ್ನು
ಆಸ್ವಾದಿಸುವೆವೇನು?
ಸಾಕಿ
ಕನಸುಗಳನ್ನೆ ತುಂಬಿಕೊಂಡ ಈ
ತುಂಬು ಕಂಗಳಲಿ... ಮಣ್ಣನ್ನೆ
ಸುರಿದು ನಡೆದಳಲ್ಲ ಸಾಕಿ....
ಅಳುವುದಕ್ಕೆ ಉಳಿಸದೆ ಹೋದಳಲ್ಲ
ಏನನ್ನೂ... ಬಾಕಿ
ನನಗೆ ಗೋರಿಯ ಹಾದಿ
ತೋರಿಸಿದ ಹಾಗೆ, ನೆನಪುಗಳಿಗೆ
ಗುಂಡಿಯನ್ನು ತೋಡಿಬಿಡೆಂದು
ನೀ ಹೇಳಿಬಿಡು ಸಾಕಿ...
ನೆನಪುಗಳು ನನ್ನೊಂದಿಗೆ ಹೂತು
ಹೋದರೆ....ನೆಮ್ಮದಿ ಸಿಗುವುದೇನು
ಮಣ್ಣಲ್ಲಿ!!!
ನೋವಿಗೆ ಅಮೃತವನ್ನೆ ಸುರಿಯುವವಳೆ
ನೀನಲ್ಲವೆ ಸಾಕಿ...
ಈ ಸಂಜೆಗೆ ಚೂರು ವಿಷವನ್ನಾದರೂ
ಸುರಿದುಬಿಡು, ಅರ್ಧ ಜೀವವಾಗಿ
ನರಳಾಡುತಿರುವ ಸಂಜೆಗಳೊಂದಿಗೆ
ನಾ ಹೇಗೆ ಬದುಕಲಿ.... ಈ ನೋವು
ಈ ಸಂಜೆಗೆ ಕೊನೆಯಾಗಿಬಿಡಲಿ.
ಶಾಯರಿ ೬೯೦
ಚಂದ್ರನಿಗೇನು
ಕೆಲಸ..
ಇರುಳಿಡಿ
ಎದ್ದೆ ಕುಳಿತಿರುವನು
ಸಾಕಿ...
ರಂಗೀಯ ಬಗ್ಗೆ
ಹೇಗೆ ಬರೆಯಲಿ
ನಾನೀಗ,
ಅವನು ಪದೆ...
ಪದೆ... ಇಣುಕಿ
ಹಾಕುತ್ತಿದ್ದರೆ
ಸಾಲುಗಳಲ್ಲಿ
ಶಾಯರಿ ೬೫೮
ಪ್ರೀತಿಯ ಆಳ
ನಿನಗೇನು
ಗೊತ್ತು?
ಪ್ಯಾಲೆಗೆ ಮಧುವನ್ನು
ಅಳೆದು
ಸುರಿಯುವವಳು
ನೀನು...ಸಾಕಿ
ಮುಳುಗೇಳು
ನೀನೊಮ್ಮೆ, ಒಲವ
ಕಡಲಲ್ಲಿ....
ಎದ್ದು ಬರುವ
ಮನಸಾದರೆ
ನನಗೆ ಹೇಳು
ಶಾಯರಿ ೬೮೯
ನಾನುಳಿಯಬೇಕೆಂದರೆ
ಮೊದಲು,
ರಂಗೀಯ
ನೆನಪುಗಳನ್ನು
ಕೊಂದುಬಿಡು
ಸಾಕಿ....
ನಿಲ್ಲು...ನಿಲ್ಲು...
ನೆನಪುಗಳೇ...
ಇಲ್ಲವೆಂದ ಮೇಲೆ
ಬದುಕಲಿಕ್ಕೆ,
ಉಳಿಯುವುದೇನು
ಬಾಕಿ