ಕನಸುಗಳನ್ನೆ ತುಂಬಿಕೊಂಡ ಈ
ತುಂಬು ಕಂಗಳಲಿ... ಮಣ್ಣನ್ನೆ
ಸುರಿದು ನಡೆದಳಲ್ಲ ಸಾಕಿ....
ಅಳುವುದಕ್ಕೆ ಉಳಿಸದೆ ಹೋದಳಲ್ಲ
ಏನನ್ನೂ... ಬಾಕಿ
ನನಗೆ ಗೋರಿಯ ಹಾದಿ
ತೋರಿಸಿದ ಹಾಗೆ, ನೆನಪುಗಳಿಗೆ
ಗುಂಡಿಯನ್ನು ತೋಡಿಬಿಡೆಂದು
ನೀ ಹೇಳಿಬಿಡು ಸಾಕಿ...
ನೆನಪುಗಳು ನನ್ನೊಂದಿಗೆ ಹೂತು
ಹೋದರೆ....ನೆಮ್ಮದಿ ಸಿಗುವುದೇನು
ಮಣ್ಣಲ್ಲಿ!!!
ನೋವಿಗೆ ಅಮೃತವನ್ನೆ ಸುರಿಯುವವಳೆ
ನೀನಲ್ಲವೆ ಸಾಕಿ...
ಈ ಸಂಜೆಗೆ ಚೂರು ವಿಷವನ್ನಾದರೂ
ಸುರಿದುಬಿಡು, ಅರ್ಧ ಜೀವವಾಗಿ
ನರಳಾಡುತಿರುವ ಸಂಜೆಗಳೊಂದಿಗೆ
ನಾ ಹೇಗೆ ಬದುಕಲಿ.... ಈ ನೋವು
ಈ ಸಂಜೆಗೆ ಕೊನೆಯಾಗಿಬಿಡಲಿ.
No comments:
Post a Comment