ಅದು...ಇರಬೇಕಾಗಿತ್ತು ಎಲ್ಲರಲ್ಲಿ!!!
ಅದಿದ್ದರೆ...? ಹೀಗಾಗುತ್ತಿರಲಿಲ್ಲ ಅಲ್ಲವೆ?
ಹೇಗಾಗಬೇಕಿತ್ತು? ಅದಿದ್ದರೆ...
ನೋಡಬೇಕಲ್ಲ!!! ಅದಿದ್ದವರನ್ನು, ಸಿಗುವರೇನು?
ಇರುವೀರಾ ಯಾರಾದರೂ ಕಂಡವರು...
ಹೇಗೆ ಹುಡುಕುವುದು ಅದನ್ನು? ಪಡೆಯುವುದು ಎಂತು?
ಗಳಿಸಿಟ್ಟಿಕೊಳ್ಳಬಹುದಾ?, ಕರಗುವುದಿಲ್ಲವೆ ?
ಕೊಳೆತು ಮೂಗ ಮುಚ್ಚಿಕೊಳ್ಳುವಷ್ಟು ನಾರುವುದಿಲ್ಲ ತಾನೆ?
ಎಲ್ಲಿಯಾದರೂ ಸಿಗುವುದಾ? ಅಗಿಯಬೇಕಾ? ಬಗಿಯಬೇಕಾ? ಜಗ್ಗಬೇಕಾ? ಬೆಲೆ ಕೊಟ್ಟರೆ
ಸಿಕ್ಕಿಬಿಡುವುದಾ? ತೂಕವೊ, ಚೀಲವೊ, ಲಾರಿಗಟ್ಟಲೆ
ಹೊತ್ತು ತರಬಹುದಾ?
ಅದಕ್ಕೆ ರೂಪವಿದೇಯಾ? ಬಣ್ಣವಿದೇಯಾ?
ನನ್ನ ನೋಡಿ ನಗುವುದೊ? ಅಳುವುದೊ?
ಸಂಭ್ರಮಿಸುವುದೊ? ಭಯ ಭೀತಗೊಳ್ಳುವುದೊ?
ಪರಿಚಯಸ್ಥರು ಬೇಕಾ? ಇಲ್ಲವೆ ವಸೂಲಿಯನ್ನು
ಹಚ್ಚಬೇಕಾ? ಏನು ಮಾಡಬೇಕು ಅದಕ್ಕೆ...
ಅದಿದ್ದರೆ ಎಲ್ಲ ಇದ್ದಂತೆ...ಎನ್ನುವರಲ್ಲ!!!!!
ಅದಿದ್ದವರು ನನಗೊಬ್ಬರು ಕಾಣುತ್ತಿಲ್ಲ, ಸುಳ್ಳು
ಹೇಳುತ್ತಿರುವರಾ?, ಹೇಳಿದರೂ ಅದರಲ್ಲಿ
ಎಷ್ಟೊಂದು ಸುಖವಿದೆಯಲ್ಲ!!! ಸಿಕ್ಕುಬಿಟ್ಟರೆ?
!!!!!!!!!!!!!!! ಹಾ...ಹಾ!!!! ಬೇಕು ನನಗದು
ಬೇಕೆ ಬೇಕು...
ಬೇಕು ಬೇಕೆಂದರೆ ಅದು ಸಿಕ್ಕು ಬಿಡುವುದೆ?
ಅದಿದ್ದರೆ ಅದೂ ಬೇಡ, ಇದು ಬೇಡ
ಎಂದೆನಿಸುವುದಂತೆ!!! ನಿಜವೆ?, ಕೌರವರಿಗೆ
ಸಿಗದದ್ದು, ರಾಜ್ಯ ಗೆದ್ದ ಪಾಂಡವರಿಗೆ ದಕ್ಕದದ್ದು
ಅದಕ್ಕೆಂದೆ ವರ್ಷಗಟ್ಟಲೆ ತಪೋಗೈದವರ
ಕೈಗೆಟಕದ್ದು, ನನ್ನನಪ್ಪಿಕೊಳ್ಳುವುದಾ? ಇಲ್ಲವಾ?
ಅದು ಬೇಕಲ್ಲ.. ನನಗೀಗ, ಅದು ಬೇಕೆ ಬೇಕಲ್ಲ!!!
ನಿಮ್ಮಲ್ಲಿ ಏನಾದರೂ ಚೂರು ಇದೆಯಾ?
No comments:
Post a Comment