Monday, September 2, 2019

ನಿರ್ಭಾವ ೫

ಚೂರು ಮರೆಯುವುದನ್ನಾದರು
ಕಲಿತುಕೊಳ್ಳಬೇಕಿತ್ತು!!
ಅವನಿಲ್ಲದ ಏಕಾಂತದಲ್ಲಿ ಅರಿವೆಯಂತೆ,
ಬಿಗಿಯಾಗಿ ಹಿಂಡುತಿರುವ
ನೆನಪುಗಳನ್ನಾದರು ಮರೆಯಬಹುದಿತ್ತು!!
ಈ ರಾತ್ರಿಗಳೊಂದಿಗೆ ಮಾತನಾಡುವುದನ್ನಾದರೂ...
ರೂಢಿಸಿಕೊಳ್ಳಬೇಕಿತ್ತು!!
ಪೌರ್ಣಿಮೆಯ ಬೆಳಕು, ಹಾಸಿಗೆಯ
ಮೇಲೆಲ್ಲ ಚೆಲ್ಲಿ... ಬೆಚ್ಚನೆಯ ಭಾವವ
ನೆನಪಿಸುವುದನ್ನು ತಣ್ಣಗಾಗಿಸಿಕೊಳ್ಳಲಿಕ್ಕಾದರು!!

No comments:

Post a Comment