Tuesday, April 30, 2019

ಶಾಯರಿ ೭೭೭

ಬಳ್ಳಿಯನವಳು
ಕಿರು ಬೆರಳಿನಲ್ಲಿಯೆ
ಚಿವುಟಿದ್ದರು ಸಾಕಿತ್ತು...
ಕೊಡಲಿಯ ಏಟು
ಬೇಕಿರಲಿಲ್ಲ
ಸಾಕಿ....
ವಿರಹದ ತುಕ್ಕಿನ
ನಂಜಿಗೆ, ನಲುಗುತಿದೆ
ಬಳ್ಳಿಯ ಬೇರು..
ಗುಣಪಡಿಸುವರಾರು

ಶಾಯರಿ ೭೭೬

ಅವಳಿಗಿಂದೂ...
ಅರ್ಥವಾಗುತ್ತಲೆ
ಇಲ್ಲ, ಮನಸ್ಸಿನ
ಮಾತು
ಸಾಕಿ...
ನಿನ್ನರಮನೆಯ
ಅಂಗಳದಲ್ಲೂ...
ಯಾರು ನಂಬುತ್ತಿಲ್ಲ
ಈ ಕುಡುಕನ
ಮಾತು...

ಶಾಯರಿ ೭೭೫

ಹೊಸ್ತಿಲನ್ನೆ
ಎಡವಿ ಬಿದ್ದವನು
ನಾನು, ಅಂತಃಪುರದ
ಮಾತೆಲ್ಲಿ
ಸಾಕಿ...
ಕಣ್ಣೊಳಗೆ
ಕಾಣದವನು...
ಮನಸ್ಸಿನೊಳಗೆ
ಮೂಡುವೆನೇನು?

ಶಾಯರಿ ೭೭೪

ಅವಳನ್ನು
ಹೇಗೆ
ಪರೀಕ್ಷಿಸಲಿ!!!
ನಾನೇನು
ರಾಮನೆ? ಅಗ್ನಿಗೆ
ದೂಡಲು
ಸಾಕಿ...
ಒಡೆದ ಮಡಿಕೆಯಾದರು
ಸರಿ...
ನಾನೇತ್ತಿಕೊಳ್ಳುವೆ,
ಮೊದಲಿಗೆ
ನಾನೆ ಇಲ್ಲಿ
ಭಿಕ್ಷುಕ

ಶಾಯರಿ ೭೭೩

ಎದೆಯಲ್ಲಿ
ಪ್ರೀತಿ
ತುಂಬಿರುವವರೆಗೂ
ನಾನಾಗಲ್ಲ
ಭೀಕಾರಿ
ಸಾಕಿ....
ಆದ ದಿನವೆ
ಗೋರಿಯನ್ನು
ತೋಡಿಸಲು,
ನಿನಾಗಿಬಿಡು
ತಯಾರಿ..

ಶಾಯರಿ ೭೭೪

ಗೆದ್ದವರೇನು!!!
ಪಡೆದೆ...
ಪಡೆಯುವರು
ಪಾರಿತೋಷಕ
ಸಾಕಿ...
ಸೋತವರೇನು!!!
ಕುಡಿಯಲೇ....
ಬೇಕಾ?
ಕೀಟನಾಶಕ

ಶಾಯರಿ ೭೭೩

ಎದೆಯಲ್ಲಿ
ಪ್ರೀತಿ
ತುಂಬಿರುವವರೆಗೂ
ನಾನಾಗಲ್ಲ
ಭೀಕಾರಿ
ಸಾಕಿ....
ಆದ ದಿನವೆ
ಗೋರಿಯನ್ನು
ತೋಡಿಸಲು,
ನಿನಾಗಿಬಿಡು
ತಯಾರಿ..

ಶಾಯರಿ ೭೭೨

ಕುಡಿದು...
ಕುಡಿದು ನನಗೂ
ಸಾಕಾಯ್ತು...
ಸಾಕಿ....
ಕಥೆ ಹೇಳುವೆ
ಚೂರಾದರು
ಮಾಡಿಕೋ ನೀ....
ಪುರಸೊತ್ತು...

Monday, April 29, 2019

ಚುಟುಕು ೭೭೧

ಮನಸಿನಲ್ಲಿ ಅವಳಿಗೆಂದೆ..
ಕನಸೊಂದು ಮೂಡಿತು..
ಒಪ್ಪಿಸಿಬಿಟ್ಟೆ ಕಾಗದಕ್ಕೆ
ಕಾಗದವು ಆ ಕನಸಿನ
ಸಾಲುಗಳನೊದಿ..
ಅವಳಿಗಿಂತಲೂ...
ಹೆಚ್ಚು, ಇದೆ
ನಾಚಿ ಮುದುಡಿಕೊಂಡಿತು

ಚುಟುಕು ೭೭೦

ನಿನ್ನ ನೆನೆದಾಗಲೆಲ್ಲ...
ಮನಸ್ಸು ಮೆತ್ತಗಾಗುತ್ತಿತ್ತು..
ನಿನ್ನ ನೆನೆದಾಗಲೆಲ್ಲ
ಮನಸ್ಸು ಮೆತ್ತಗಾಗುತ್ತಿತ್ತು..
ನೀ.. ಬಿಟ್ಟು ಹೋದ ಮೇಲೆಕೆ
ಈ... ಮನಸ್ಸು ಕಲ್ಲಾಗಲಿಲ್ಲ

Saturday, April 27, 2019

ಶಾಯರಿ ೭೬೯

ಸಂಜೆಯೇನೊ
ಎಂದಿನಂತೆ
ತಂಪಾಯಿತು
ಕೊನೆಗೆ
ಕೆಂಪೂ....ಅಯಿತು
ಅವಳು ಮಾತ್ರ
ಬರಲೇ ಇಲ್ಲ
ಸಾಕಿ....
ಮಡಿಕೆಯೊಳಗಿನ
ತಣ್ಣಗಿನ
ಮದ್ಯವನ್ನೆ
ಕುಡಿದರೂ....
ಹಾಳಾದ್ದು ಈ
ಎದೆಯುರಿಯೆ
ಕಡಿಮೆಯಾಗುತ್ತಿಲ್ಲವಲ್ಲ!!!

ಚುಟುಕು ೭೬೮

ಬೆರಸದಿರು ನೋಟಕ್ಕೆ
ನೋಟವ...
ಕಣ್ಣುಗಳವೇಷ್ಟು
ಮಾತನಾಡಿಕೊಳ್ಳುತ್ತವೆ,
ನಿನಗೆ ಗೊತ್ತಾ...?
ಬಿಡುವುದೆ ಇಲ್ಲ ರಾತ್ರಿಗೆ
ನಿದ್ರಿಸಲು...
ಎಚ್ಚರವಾಗಿಯೆ ಇರುತ್ತವೆ
ನನ್ನ ನಯನಗಳು
ನಿನ್ನನೆ ನೆನೆಯುತ್ತಾ...

Friday, April 26, 2019

ಶಾಯರಿ ೫೪೩

ಬಿಟ್ಟು
ಹೋಗುವುದು
ಇದ್ದೆ ಇದೆ
ಸಾಕಿ...
ಮಸಣಕ್ಕೆ

ಉಸಿರು
ಇರುವವರೆಗೆ
ಮದ್ಯವನ್ನಾದರೂ
ಸುರಿಯುತ್ತಿರು
ಈ...
ದೇಹಕ್ಕೆ

Thursday, April 25, 2019

ನಮ್ಮನು ಬಿಡುವುದೇನು?

ಮುಳುಗಿಯೇ... ಹೋಗುತ್ತಿರುವ ತೆಪ್ಪಕ್ಕೆ
ಹುಟ್ಟಿನ ಹಂಗೇತಕೆ?
ಉಸಿರೆ ಭಾರವಾಗಿರುವ ಬದುಕಿಗೆ
ಊರುಗೋಲಿನ ಆಸೆಯೇತಕೆ?
ಬಂದಂತೆ ನಡೆದು ಬಂದಿದ್ದೇವೆ...ಬೇಸರಿಸದೆ
ಬಾಳು ಇಂದಿಲ್ಲಿಗೆ ತಂದು ನಿಲ್ಲಿಸಿದೆ ವಿಷವನುಣಿಸದೆ.

ಇರುವುದಾದರು ಇನ್ನೇಷ್ಟು ಹೊತ್ತು....
ಬೇಕಿರುವುದು ಒಡಲಿಗೆ ಒಂದೆ ತುತ್ತು...
ಹಿಡಿಗಾಗಿ ಕೈ ಚಾಚಲೆ ಇಂದು ಅತ್ತು...
ಹತ್ತು ಜನರಿಗೆ ಅನ್ನವಿತ್ತ ಕೈ, ಚಾಚುವುದಿಲ್ಲ ಯಾವತ್ತು..

ಜೊತೆಗೂಡಿ ಹಾಕಿದ ಹೆಜ್ಜೆಗಳೇನಿರಲಿಲ್ಲ ಸಸ್ತಾ...
ನೋವಿನೊಳಗೂ ಅರಳುತ್ತಿದ್ದೇವು ನಕ್ಕು ನಗಿಸುತ್ತಾ...
ವಿಧಿಯು ಆಗಾಗ್ಗೆ ವಸೂಲಿ ಮಾಡಿಕೊಂಡೆ ಬರುತ್ತಿದೆ ಹಫ್ತಾ...
ಉಳಿದಿರುವುದೊಂದೆ, ಅವನೇದುರಿಗೆ ಆಗಬೇಕಿದೆ
ಎಲ್ಲಾ ಚುಕ್ತಾ..

ನಾವಾರತ್ತ ಬೊಟ್ಟು ಮಾಡೋಣ
ನಾವೇ.. ಬದುಕಿ ಬಾಳಿದ ಸಮಾಜವಿದು..
ಯಾರಲ್ಲಿ ಏನಂತ ಕೇಳೊಣ
ಹಿಡಿಯಾಗಿ ಹೋಗುವ ನಮಗೆ, ಹುಡಿಯಾಗುವವುಗಳ
ಮೇಲೆ ಮೋಹವಿಲ್ಲ!!
ಹೋಗಿ ಬರುವವರೆಲ್ಲ, 'ಅಯ್ಯೋ..ಪಾಪ'ವೆಂದಾಗಲೆಲ್ಲ
ಸತ್ತು ಬದುಕಿದಂತಾಗುವುದಲ್ಲ!!!

ನಡೆಸಿಕೊಂಡವರ ಬಗ್ಗೆ ಮಾತಿಲ್ಲ...
ಅವರವರ ಕರ್ಮ ಅವರನ್ನು ಬಿಡುವುದಿಲ್ಲ,
ಇಂದು ನಮಗೆ.. ನಾಳೆ ಅವರಿಗೆಲ್ಲ....
ದಶರಥನು ಬಿಟ್ಟ ಬಾಣ ಅವನಿಗೆ ನಾಟಿದ್ದು
ಅರಿವಿಲ್ಲವೇನು?
ಅರಮನೆಯನ್ನೆ ಬಿಡದದ್ದು ನಮ್ಮನ್ನು ಬಿಟ್ಟಿತೇನು?

ಶಾಯರಿ ೫೪೪

ಮನಸ್ಸೀಗ...
ಕುದುರೆಯಂತಿಲ್ಲ!
ಮದವೇರಿದ
ಮದಗಜವಾಗಿದೆ
ಸಾಕಿ...
ಬಟ್ಟಲೊಳಗಿನ
ಮಧುವಲ್ಲದೆ...
ಬೇರಾವುದು ಇದರ
ಮದವನ್ನು
ಮರ್ದಿಸುವುದಿಲ್ಲ!!

ಶಾಯರಿ ೫೪೫

ಕವಿತೆಗಳು!!!
ಪಾಪ...ಬರುವಾಗ
ಹಾಳು ಮಂಟಪದಲ್ಲಿ
ಎಲ್ಲವನ್ನು ಎಸೆದು
ಬಂದುಬಿಟ್ಟೆ
ಸಾಕಿ...
ಇದ್ದಿದ್ದರೆ!!!
ನಿನ್ನ ಮಧು
ಬಟ್ಟಲಿನಲ್ಲೂ
ಪಾಲನ್ನು
ಕೇಳುತ್ತಿದ್ದವೇನೊ?

ಶಾಯರಿ ೫೪೬

ಹುಡುಕಿಕೊಳ್ಳಲು
ನನ್ನಲೇನಿದೆ,
ಕಳೆದುಕೊಂಡ
ಶೀಲವೆ?
ಸಾಕಿ...
ನಾನೆ....
ಕಳೆದುಹೋಗಿರುವಾಗ
ನನ್ನತನದ
ಮಾತೆಲ್ಲಿ!!!
ಎಲ್ಲ ಮೌನವೆ
ಈಗಿಲ್ಲಿ...

ಶಾಯರಿ ೫೪೭

ನಾನೀರುವಿಕೆಯ
ವಿಳಾಸವೊಂದು
ಬೇಕೆನವಳಿಗೆ
ಸಾಕಿ...
ಲೋಕಕ್ಕೆ
ತಿಳಿದದ್ದು..
ಅವಳಿಗೆ ತಿಳಿಯದೇನು?
ಅವಳಿಗೆ ತಿಳಿದದ್ದು
ಲೋಕಕ್ಕೆ ತಿಳಿದಿದೆ
ಏನು?

ಶಾಯರಿ ೫೪೮

ನಾ ಕುಡಿದು
ಬಿಟ್ಟಷ್ಟು
ಬರಿದಾಗದ
ಮಧುವಿನೊಡಲು
ನಿನ್ನದು
ಸಾಕಿ....
ಮರೆಯಲೆಂದು
ಮುಳುಗಿದರೂ...
ತೇಲಿಸುವ ಕಡಲು
ಅವಳ
ನೆನಪುಗಳದ್ದು...

ಶಾಯರಿ ೫೪೯

ಅವಳನ್ನು
ಬಿಡು...
ನಿನ್ನರಮನೆಯಲ್ಲಿ
ಸದಾ ಮಧುವನ್ನೆ
ಕುಡಿದುಕೊಂಡು
ಬಿದ್ದುಕೊಂಡಿರಬೇಕೆಂದಿರುವೆ
ಸಾಕಿ....
ಇಟ್ಟುಕೊಳ್ಳುವೇಯಾ?
ಹಣವಿಲ್ಲದೆ!!!!

Tuesday, April 23, 2019

ಚುಟುಕು ೫೫೧

ಈ ಸಲದ
ಜಾತ್ರೆಯಲ್ಲಿ
ನೂರು ರೂಪಾಯಿಯು
ಖರ್ಚಾಗಲಿಲ್ಲ!!!
ಜಾತ್ರೆಯಲ್ಲಿ ಸಿಕ್ಕ
ಹುಡುಗಿ,
ಜೇಬನ್ನು ಕತ್ತರಿಸಿ
ಮಾಯವಾಗಿದ್ದಳಲ್ಲ!!

Monday, April 22, 2019

ಚುಟುಕು ೫೫೨

ತವರಿಗೆ
ಹೋದವಳು
ಹೇಳಿದ್ದಳು ಬರುತ್ತೇನೆ
ಇಂದು ಸಂಜೆ!
ಬರದಿದ್ದರೆ!!!!!!
ಎಲ್ಲ ಪಾತ್ರೆಗಳನ್ನು
ನಾನೆ ತಿಕ್ಕಬೇಕಲ್ಲ
ಎಂತಹ
ಸಜೆ!!

ಚುಟುಕು ೫೫೩

ಕೈಯ ಮೇಲೆ
ಕೈಯಿಟ್ಟು
ಆಣೆ
ಮಾಡಿದ್ದವಳು
ಕಾಣೆಯಾಗಿದ್ದಾಳೆ!
ಹುಡುಕಿ
ಹೊರಟಾಗ,
ಅವಳೀಗ
ಮದುವೆ ಮಂಟಪದಲ್ಲಿದ್ದಾಳೆ!!!

ಚುಟುಕು ೫೫೪

ನಾನೂ...
ಸಾಯಬಹುದು
ಇಂದೊ...ನಾಳೆಯೊ
ಈಗಲೊ..
ದಿನಗಳನ್ನು
ಲೆಕ್ಕವಿಟ್ಟಿಲ್ಲ
ಇಟ್ಟವರು
ಎಣಿಸಿಕೊಳ್ಳಲು
ಈ ಭೂಮಿ
ಮೇಲೆ
ಉಳಿದಿಲ್ಲ

ಚುಟುಕು ೫೫೫

ಅವಳು
ಕವಿತೆಯಾಗಲೆಂದೆ
ಬಂದವಳು...
ಕಥೆಯಾದಳು!!!
ನಾನು
ಕಾದಂಬರಿಕಾರನಾದೆ.

Sunday, April 21, 2019

ಚುಟುಕು ೫೫೬

ಮನೆಯ
ಬಾಗಿಲಿಗೆ
ಹಾಕಿದೆ ಬೀಗ
ಮನಸ್ಸಿಗಲ್ಲ!
ಕೂಗಿ ಬಿಡು
ಒಮ್ಮೆ
ಕರೆಗಂಟೆಯ
ಹಾಗೆ, ಬಂದು
ಬಿಡುವನು ಈ
ನಲ್ಲ!!

ಚುಟುಕು

ಮನೆಯ
ಬಾಗಿಲಿಗೆ
ಹಾಕಿದೆ ಬೀಗ
ಮನಸ್ಸಿಗಲ್ಲ!
ಕೂಗಿ ಬಿಡು
ಒಮ್ಮೆ
ಕರೆಗಂಟೆಯ
ಹಾಗೆ, ಬಂದು
ಬಿಡುವನು ಈ
ನಲ್ಲ!!

ಚುಟುಕು ೫೫೭

ಬ್ಯಾಟರಿಯು
ತಣ್ಣಗಾದರೆ?
ಗಡಿಯಾರದ
ಮುಳ್ಳೂ...
ನಿಂತು
ಹೋಗುವುದಿಲ್ಲವೇನು?
ನೀನು
ಸುಮ್ಮನಾದರೆ?
ನನ್ನೆದೆಯ ಬಡಿತವು
ನಿಲ್ಲುವುದಿಲ್ಲವೇನು?

ಚುಟುಕು ೫೫೮

ಸಮಾಜ
ಅರ್ಧದಷ್ಟೆ
ಬೆಂದಿದೆ!!!
ಅದಕ್ಕೆ
ಇವಳನ್ನು
ಅರೆಬರೆ
ಸುಟ್ಟಿದೆ!!!

Saturday, April 20, 2019

ಚುಟುಕು ೫೫೯

ಗಾಲಿ
ಹೋಳಾಗಿ
ಬಿದ್ದಿದೆ...
ಯಾರಿಗಿಲ್ಲ
ಇದರ ಚಿಂತನೆ!
ಬಹುಶಃ...
ಇದು ಅನುಭವಿಸುತ್ತಿರುವುದೇನೊ?
ನನ್ನ ಹಾಗೆ
ಮೂಕ ವೇದನೆ!

ಚುಟುಕು ೫೬೦

ಈ ವರುಷ...
ಮಲ್ಲಯ್ಯನ
ತೇರು...
ಪಥವನ್ನು
ತಪ್ಪಿ ನಿಂತಿದೆ.
ನೀನೂ...
ಹಾದಿಯನ್ನು
ತಪ್ಪಬೇಡ!!!
ನಿನ್ಹೆಸರಲಿ
ಉಸಿರೊಂದು
ಜಪ ಮಾಡುತಿದೆ
ತಡ ಮಾಡಬೇಡ!

ಚುಟುಕು

ಈ ವರುಷ...
ಮಲ್ಲಯ್ಯನ
ತೇರು...
ಪಥವನ್ನು
ತಪ್ಪಿ ನಿಂತಿದೆ.
ನೀನೂ...
ಹಾದಿಯನ್ನು
ತಪ್ಪಬೇಡ!!!
ನಿನ್ಹೆಸರಲಿ
ಉಸಿರೊಂದು
ಜಪ ಮಾಡುತಿದೆ
ತಡ ಮಾಡಬೇಡ!

Wednesday, April 17, 2019

ಶಾಯರಿ ೫೭೯

ಪ್ರೀತಿಯ
ಆಟವೇ....
ಹೀಗೆ
ಕೊನೆಯೆಂಬುದೆ
ಇಲ್ಲವಲ್ಲ
ಸಾಕಿ...
ಗೆಲ್ಲುವ
ಸೂತ್ರ ಯಾವುದಾದರು
ಇದೆಯಾ?
ಹೇಳೊಮ್ಮೆ....
ಅಮಲಿನಲ್ಲಿರುವೆ,
ಕಲಿತುಬಿಡುವೆ.

Tuesday, April 16, 2019

ಶಾಯರಿ ೫೮೦

ನನ್ನೊಳಗೇನಿದೆ?
ಬರೆಸುತ್ತಾಳೆ
ಅವಳೇ...
ಎಲ್ಲಾ!!
ಸಾಕಿ...
ನೆನಪಾದಾಗಲೆಲ್ಲ
ಮರೆಸಲು
ನೀನೆ
ಇರುವೆಯಲ್ಲ!!

ಶಾಯರಿ ೫೮೧

ಅವಳಿಂದು
ಹೇಳಿ.. ಕಳುಹಿಸುವಳೇನೊ?
ಯಾರಾದರೂ
ಬಂದರೆ,
ನನ್ನನೆಚ್ಚರಿಸು
ಸಾಕಿ....
ಚಿಂತಿಸಬೇಡ,
ತೊರೆದು
ಹೋಗುವುದಿಲ್ಲ.
ನಾನಿನ್ನರಮನೆಯ
ಖಾಯಂ
ಗಿರಾಕಿ

Monday, April 15, 2019

ಶಾಯರಿ ೫೮೨

ನನ್ನ ಹೆಣವನ್ನು....
ನಿನ್ನರಮನೆಯ
ಮಧು ದಾಸರ
ಹೆಗಲಿಗೆ ಹೊರಿಸಬೇಡ
ಸಾಕಿ....
ಮತ್ತಿನಲ್ಲಿ...ಮತ್ತೆ
ರಂಗೀಯ
ಮನೆಯ ಮುಂದೆ
ಮೆರವಣಿಗೆ
ಹೋದಾರು!!!!

ಚುಟುಕು ೫೬೧

ಜಾತ್ರೆಯ
ತಯಾರಿಗಾಗಿ
ಗೋಡೆಗಳಿಗೆಲ್ಲ
ಬಳಿದಿದ್ದಾರೆ
ಸುಣ್ಣ...
ತುಸು ಹೆಚ್ಚಾದ್ರೂ
ಪರ್ವಾಗಿಲ್ಲ...
ಜಾತ್ರೆಗೆ, ಹಚ್ಗೊಂಡ
ಬಾ ಮುಖಕ್ಕ
ಬಣ್ಣ...

ಶಾಯರಿ ೫೮೩

ನನ್ನ ಕಥೆಗೆ
ರಂಗೀಯೇ
ಅಂತ್ಯವನ್ನು
ಬರೆದುಬಿಟ್ಟಿದ್ದಳಲ್ಲ
ಸಾಕಿ....
ಮುನ್ನುಡಿಯೇ...
ಇರಲಿಲ್ಲ!!! ಇನ್ನೂ
ಬೆನ್ನುಡಿಯ ಆಸೆ
ಎಲ್ಲಿ?
ಇರುಳ ದೀಪದೇದುರು
ಸುಮ್ಮನೇ....
ಕುಳಿತುಬಿಟ್ಟಿರುವೆ,
ಭರವಸೆಯನ್ನು
ಕೈ ಚೆಲ್ಲಿ...

ಚುಟುಕು ೫೬೨

ತುಳಿದು ಹೋದವರ
ಹೆಜ್ಜೆ ಗುರುತೊಂದೊ....
ಮೆಟ್ಟಿಲುಗಳ ಮೇಲೆ
ಮೂಡಿಲ್ಲ...!!!
ತುಳಿಯಿಸಿಕೊಂಡು,
ಎಲ್ಲರನೂ ಮೇಲಕ್ಕೆ
ಕಳುಹಿಸಿದೆನೆಂಬ
ಜಂಭ... ಯಾವ
ಮೆಟ್ಟಿಲುಗಳಲ್ಲೂ
ಇಲ್ಲ..!!

ಹಿಂದಿ ಶಾಯರಿ

ಸಬ್ ಕುಛ್
ಬಿಖ್ ರಹಾ ಹೈ
ಬಜಾರ್ ಮೆಂ...
ಪತ್ತರೊಂಕಿ
ಬಾತ್ ಚೋಡೊ...
ದಿಲೊಂಕಿ ಹಾಲ್
ಬತಾವೊ.

ಚುಟುಕು ೫೬೩

ತಲೆಯ ಮೇಲೆ
ಹೂವಿನ
ಚಪ್ಪರವಿಲ್ಲ!!!
ಕಲ್ಲು ಚಪ್ಪಡಿಯಿದೆ.
ನೋಡಿದವರೆಲ್ಲ
ಏನು ಅಂದಾರು.
ನಮ್ಮಿಬ್ಬರ ಕುರಿತು
ಏನೆಲ್ಲ ಸುದ್ದಿಯ
ಬಿತ್ತಾರು...

ಚುಟುಕು ೫೬೪

ಹೌದು...
ಇಂದು ಕಣ್ಣಿಗೆ
ಬಣ್ಣದ ಕನ್ನಡಕವನ್ನೆ
ಹಾಕಿಕೊಂಡಿರುವೆ,
ಚೆಂದ ಕಾಣುತ್ತೆನಂತಂದಲ್ಲ!!!
ಕಣ್ಣೊಳಗಿನ
ನೋವು....ನಿನ್ನನು
ನೋಯಿಸದಿರಲೆಂದು.

ಚುಟುಕು ೫೬೫

ಪುಣ್ಯಕ್ಕೆ....
ನೀನಿಲ್ಲದ
ಹೊತ್ತಿಗೆ,
ಕಲ್ಲುಗಂಭಗಳ
ನಡುವೆ ನಿಂತಿರುವೆ
ಬದುಕಿರುವೆ.
ನಾಲ್ಕು ಜನರ
ಮದ್ಯವಿದ್ದಿದ್ದರೆ?

ಚುಟುಕು ೫೬೬

ನೀನು....
ಬಿಟ್ಟು ಹೋದ
ಘಳಿಗೆ...ನೋಡು,
ನಿತ್ಯ ಹರಿದ್ವರ್ಣದಲ್ಲೆಲ್ಲೂ...
ಚಿಗುರಿಲ್ಲ.
ಚಿಗರಿ ಇಲ್ಲದ
ಕಾಡಿನಲ್ಲಿ...
ಸಾರಂಗವು
ಒಂಟಿಯಾಗಿಯೇ
ಅಲೆಯುತ್ತಿದೆ, ದಿಕ್ಕಿಲ್ಲದಂತೆ
ಇದರರಿವು
ನಿನಗಿಲ್ಲ!!!

ಚುಟುಕು ೫೬೭

ನಿನ್ನನೂ...
ಬೇವಿನಮರಕ್ಕೆ
ಜಡಿದುಬಿಟ್ಟರಾ?
ತುಕ್ಕು ಹಿಡಿದರೇನಾಯಿತು
ಪತ್ರಗಳು
ಬರುವುದಿಲ್ಲವಾ?
ನನಗೂ...
ವಯಸ್ಸಾದರೇನಾಯ್ತು?
ಎದೆಯಲ್ಲಿ ಪ್ರೀತಿ
ಉಕ್ಕುವುದಿಲ್ಲವಾ?

ಚುಟುಕು ೫೬೮

ಮೊನ್ನೆತಾನೆಯಷ್ಟೆ
ಬೇವಿನ ಕಹಿಯನುಂಡು
ಇಂದು...
ಮಾವಿನ ನೆರಳಿನಲ್ಲಿ
ಕುಳಿತಿರುವೆ.
ನೀ ಬರುವ ಹಾದಿಗೆ
ಹೂ ಹಾಸುವಷ್ಟು
ನಾನು ಸಾಹುಕಾರನಲ್ಲ.
ಪದಗಳಲ್ಲಿ ನಿನ್ನಂದವ
ಕಟ್ಟಿಕೊಡಲಾರದಷ್ಟು
ಬಡವನು ಅಲ್ಲ.

ಚುಟುಕು ೫೬೯

ಕಲ್ಯಾಣಿಯೇನೊ
ಬತ್ತಿ ಹೋಗಿದೆ
ನಮ್ಮೆಲ್ಲರ ದುರಾಸೆಯಿಂದ.
ಚಿಂತೆಯಿಲ್ಲ !!! ಯಾರಿಗೂ....
ಜೀವ ಜಲವೇ...
ಇಂಗಿ ಹೋದ ಮೇಲೆ,
ನಾವಿನ್ನು ವರ್ಷಗಳನ್ನೇಣಿಸುವದರಲ್ಲಿ
ಅರ್ಥವಿಲ್ಲ.
ಏನು ಮಾಡುವುದು?
ಸ್ವಾರ್ಥವೆ ತುಂಬಿ ಬಿಟ್ಟಿದೆ
ಜಗದಲೆಲ್ಲ..

ಚುಟುಕು ೫೭೦

ಕಾಯಿಸುವುದು
ನಿನಗೆ
ಹೊಸತಲ್ಲ...
ಕಾಯುವುದು...
ಬೇಯುವುದು ನನಗೂ
ಹೊಸತೇನಲ್ಲ...
ಬಿಸಿಲು...!!!
ನಿನ್ನೆಯ ಹಾಗಿಲ್ಲ,
ಅಳಿದುಳಿದ ತಾಳ್ಮೆಯು
ಉರಿದು ಹೋಗುವ
ಮುನ್ನ... ನೀ ಬಂದು
ಸೇರು ನನ್ನನ್ನ.

ಚುಟುಕು ೫೭೧

ಅದ್ಹೇಗೆ...
ಭೂದೇವಿಯನ್ನು
ಹೊತ್ತು ನಿಂತಿರುವೇಯೊ!!!
ತುಸು ತಾಳ್ಮೆಯನ್ನಾದರು
ಅನುಗ್ರಹಿಸು
ವರಹಾ....
ಸ್ವಾಮಿ.
ನನ್ನ ರಮೆಯು
ಬಾರದೆ....
ಉರಿದು
ಹೋಗುತ್ತಿರುವನಿಲ್ಲಿ
ವಿರಹಿ ಪ್ರೇಮಿ.

ಶಾಯರಿ ೫೮೮

ತಲೆಯಲ್ಲಿ ನೆರೆತ
ಕೂದಲುಗಳನೇಣಿಸುತ
ನೀ...ಕೂರಬೇಡ.
ನಿನ್ನೊಲವ ಬೇರು
ಎದೆಯಾಳಕೆ
ಇಳಿದು...
ಹಣ್ಣನ್ನು ಬಿಟ್ಟಿದೆ.
ತಡಮಾಡದೆ,
ಓಡೋಡಿ ಬಾ
ಹಣ್ಣು ಮಣ್ಣ
ಸೇರುವ ಮುನ್ನ.

ಚುಟುಕು ೫೭೨

ಹೆತ್ತ ಮಕ್ಕಳಿಗಿವಳು
ಹಡದವ್ವ...
ನಮ್ಮಂಥ ಹೊತ್ತು
ಗೊತ್ತಿಲ್ಲದೆ...
ಊರೂರು ಅಲೆವ,
ಅಲೆಮಾರಿಗಳಿಗೆ
ಕೈ ತುತ್ತನಿಟ್ಟು,
ತನ್ನೊಡಲ ಹಸಿವ,
ಇಂಗಿಸಿಕೊಳ್ಳುವ
ಕಾಯಕವ್ವ

ಚುಟುಕು ೫೭೩

ಸಾಲು ಕಂಬಗಳ
ಹಿಂದೆ....
ಸಾಲಲಾರದಷ್ಟು
ಕಥೆಗಳಿವೆ.
ನಾನೂ....
ಕಥೆಯಾಗಲೆಂದೆ
ಬಂದವನೇನಲ್ಲ.
ರಂಗೀಯು ಬರದಿದ್ದರೆ?
ನನ್ನ ಕಥೆಯನ್ನು
ಕಂಭಗಳೆ
ಹೇಳುವವಲ್ಲ!!!

ಚುಟುಕು ೫೭೪

ಕೆತ್ತಿರುವ
ಶಿಲೆಗಾರನಿಲ್ಲ,
ಸ್ತಂಭವಿದೆ.
ಕುಂಬಾರನಿಲ್ಲ,
ಮಾಡಿಟ್ಟ
ಹಣತೆಯಿದೆ.
ಎಣ್ಣೆ, ಬತ್ತಿಯ
ಹಾಕಿ, ಕಾಯುವ
ಪ್ರೇಮಿಯಿದ್ದೇನೆ.
ದೀಪ ಬೆಳಗಿಸುವ
ಜೀವ ಮಾತ್ರ....
ಸನಿಹದಲ್ಲಿಲ್ಲ.

ಶಾಯರಿ ೫೯೦

ಹಿಡಿ ತುಂಬಾ
ಒಂದಿಷ್ಟು ಮಲ್ಗಿ
ಹೂವಾ ತಂದೀನಿ...
ನಾಚ್ಗೊಂತ ನಿಂದ್ರಬ್ಯಾಡ
ನೀ... ಮನಿ ಬಾಗ್ಲ
ಸಂದ್ಯಾಗ...
ಹೊತ್ತು ಮೀರಿ ಹೊಕ್ಕೈತಿ..
ಹೊತ್ತ ಮೀರ್ತಂದ್ರ
ಹೂ ಬಾಡಿ
ಹೊಕ್ಕೈತಿ....
ಹೂ ಬಾಡಿ ಹೋದ್ವಂದ್ರ
ನಾ ಸತ್ತ್....
ಹೊಕ್ಕೇನಿ..

ಚುಟುಕು ೫೭೫

ವರುಣ ಕೊನೆಗೂ
ಭೂರಮೆಯನ್ನು
ಚುಂಬಿಸಿಬಿಟ್ಟ...
ಎಲೆಗಳೆಲ್ಲ ನಾಚಿ
ರಂಗೇರಿಬಿಟ್ಟಿವೆ
ಸಾಕ್ಷಿಗೆ

ಶಾಯರಿ ೫೮೭

ಅವಳಿಗೊಮ್ಮೆ
ಮುತ್ತಿಕ್ಕಿದ ಮೇಲೆ
ಸ್ವರ್ಗಕ್ಕಿಂತ...
ನರಕ ದಕ್ಕಿದರೂ
ಚಿಂತೆಯಿಲ್ಲ
ಸಾಕಿ....
ಉಸಿರಿರುವುದೆ
ಅವಳ
ಹೆಸರಿನಲ್ಲಿ....
ಹೋಗಲಿ ಬಿಡು,
ಚುಂಬಿಸಿದ
ಮರು
ಘಳಿಗೆಯಲ್ಲಿ.

ಶಾಯರಿ ೫೯೧

ಯಾವ ದಾರಿಯಲ್ಲವಳು
ಬಿಟ್ಟು ಹೋದರು...
ಮರಳಿ ಗೂಡು
ಸೇರುವ ಕಲೆ
ನನಗೆ ಗೊತ್ತು
ಸಾಕಿ....
ಹೇಗೆ ಹೋಗಲಿ?
ಮಸಿ ಬಳಸಿಕೊಂಡ
ಈ ಹಾಳು
ಮುಖವನ್ನು
ಹೊತ್ತು...

ಶಾಯರಿ ೫೯೩

ನೆಲೆ ಇದ್ದವನನ್ನು
ನೆಲೆಯಿರದಂತಾಗಿಸಿದವಳು
ಅವಳೆ ಅಲ್ಲವೆ
ಸಾಕಿ....
ಜೋಳಿಗೆಯೇನೊ
ದೊಡ್ಡದಿದೆ....
ಒಲವಿಲ್ಲದೆ,
ಬರದಾಗಿಯೇ....
ಇದೆ.

ಶಾಯರಿ ೫೯೨

ಅವಳ
ಮೌನದ ಕೋಟೆ
ಎಷ್ಟೊಂದು
ಗಟ್ಟಿಯಾಗಿದೆ
ಸಾಕಿ...
ದಂಡೆತ್ತಿ
ಹೋದಾಗಲೆಲ್ಲ
ಸೋತು ಹಿಂದಿರುಗುತ್ತೇನೆ,
ನಿನ್ನ ಮದ್ಯಕ್ಕೆ
ಶರಣಾಗುತ್ತೇನೆ.

ಶಾಯರಿ ೫೯೪

ರಂಗೀಯ
ನೆನಪಿನಲ್ಲಿ ಕಳೆದು
ಹೋಗಲು...
ಹಗಲೇನು ಈರುಳೆನು
ಸಾಕಿ....
ಕಳೆದು ಹೋಗಲು
ಕಾಯಬೇಕಾದದ್ದು
ನಿನ್ನ ಮಧು
ಬಟ್ಟಲಿಗಾಗಿ
ಮಾತ್ರ...
ಕತ್ತಲಾಗುವವರೆಗೂ..

ಶಾಯರಿ ೫೯೫

ಕಲ್ಪನೆಯಲ್ಲೇನು?
ಅರಮನೆಯನ್ನು
ಬೇಕಿದ್ದರೂ
ಕಟ್ಟಿಬಿಡಬಹುದು
ಸಾಕಿ....
ವಾಸ್ತವದಲ್ಲಿ?
ನಿನ್ನ ಮಧು
ಬಟ್ಟಲಿಗೆ ನಾ,
ತೆರಿಗೆಯನ್ನು
ಕಟ್ಟಲೆಬೇಕು.

ಶಾಯರಿ ೫೯೬

ಜಗತ್ತಿನ್ನೂ....
ಬದಲಾಗಿಲ್ಲ!!!
ನಾನೀಗಾಗಲೆ
ಬಲಿಯಾಗಿಬಿಟ್ಟಿರುವೆ
ರಂಗೀಯ
ಕಣ್ಣೋಟಕ್ಕೆ
ಸಾಕಿ...
ಪ್ರೀತಿಯಿನ್ನೂ....
ಉಸಿರಾಡುತ್ತಿದೆ
ಜಗದಲ್ಲಿ!!!
ನಂಬಿರುವೆ.
ಹೇಗಿದ್ದರೂ...
ಮಧು ಬಟ್ಟಲು
ತುಂಬಿಯೆ ಇದೆಯಲ್ಲ
ನಿನ್ನರಮನೆಯಲ್ಲಿ..

ಶಾಯರಿ ೫೯೮

ನನ್ನ, ರಂಗೀಯ
ನಡುವೀಗ
ಯಾರಿಲ್ಲವಲ್ಲ
ಸಾಕಿ
ರಾಯಭಾರಿ...

ಇದ್ದದ್ದು...
ಒಂದೇ...ಒಂದು
ಗುಲಾಬಿ.
ಅದೂ...ಮದ್ಯದ
ಬಟ್ಟಲಿನಲ್ಲಿ
ಮುಳುಗೆದ್ದಿದೆಯಲ್ಲ!!!!

Tuesday, April 9, 2019

ಶಾಯರಿ ೫೮೯

ಈ ಜಿಂಕಿ
ಕಣ್ಣಾಗsss
ಎಷ್ಟರ ನಶೆ
ತುಂಬೈತಿsss
ಮಂದಿ ಹೇಳೊದ
ಖರೆ ಐತಿss
ಕಣ್ಣಾಗ ಕಣ್ಣೀಟ್ಟsss
ಈಕೀನ
ಗೆಲ್ಲೋದsss
ಬಲು ತ್ರಾಸ
ಐತಿ...

ಶಾಯರಿ ೫೯೯

ಬಿಟ್ಟು
ಹೋದವಳ
ಮರೆಯಲು
ನಿನ್ನ ಮದ್ಯವೇ...
ಮದ್ದು
ಸಾಕಿ....
ಬದುಕಬೇಕಲ್ಲ!!!
ಅದಕ್ಕಾಗಿಯೇ...
ಮಲಗಿಬಿಡುತ್ತೇನೆ,
ಮತ್ತೇಯವಳ
ನೆನಪುಗಳನ್ನೆ
ಹೊದ್ದು

ಶಾಯರಿ ೬೧೧

ಇಂದಿನ
ಬಿಕ್ಕಳಿಕೆ
ಎಂದಿನಂತಿಲ್ಲವಲ್ಲ!!!!
ಸಾಕಿ...
ಬಹುಶಃ
ನಾ ನೆಟ್ಟ ಗಿಡಕ್ಕೆ
ರಂಗೀಯು
ಇಂದು
ನೀರುಣಿಸುತ್ತಿರಬೇಕೆನೊ?

Monday, April 8, 2019

ಶಾಯರಿ ೬೦೮

ಚಂದ್ರ
ನೆತ್ತಿಗೇರಿದಾಗಲೆಲ್ಲ...
ನನ್ನ ದೇಹವು
ಬಿಸಿಯೇರುವುದು
ಸಾಕಿ.....
ಉರಿದು
ಹೋಗಲಿ ಬಿಡು.
ತಣ್ಣಗಾಗಿಸಿಕೊಳ್ಳಲು
ಇನ್ನೇನುಳಿದಿದೆ?
ವಿರಹದಲ್ಲಿ ಮೊದಲೆ
ಬೆಂದು ಹೋಗಿದೆ.

ಶಾಯರಿ ೬೦೩

ರಂಗೀಯ
ಮುಡಿಗೆ ಮುಡಿಸಿದ
ಹೂಗಳ
ಲೆಕ್ಕವನ್ನೆ....
ನಾನಿಟ್ಟಿಲ್ಲ
ಸಾಕಿ...
ಇನ್ನೂ ಉರಿದು
ಬೂದಿಯಾದವಗಳು
ಯಾವ ಲೆಕ್ಕ !!!
ಇವುಗಳ ಲೆಕ್ಕ,
ಹೂವಾಡಗಿತ್ತಿ
ಹೇಳುತ್ತಾಳೆ ಪಕ್ಕಾ...

ಶಾಯರಿ ೬೧೪

ಮೋಸ
ಮಾಡುವ
ರಂಗೀಯ
ಕೆಂದುಟಿಯ
ಬಣ್ಣಕ್ಕಿಂತ...

ಕಹಿಯಾದರೂ...
ಮತ್ತೇರಿಸುವ
ನಿನ್ನ ಮದ್ಯದ
ಬಣ್ಣವೆ ಲೇಸು
ಸಾಕಿ...

ಶಾಯರಿ ೬೦೯

ವಿರಹದ
ಉರಿಯಲ್ಲಿ
ಕುಳ್ಳರಿಸಿ ಹೋದವಳಿಗಿಂದು
ನೀರಿನ ಶಾಸ್ತ್ರ
ನಡೆಯುತ್ತಿದೆ
ಸಾಕಿ...
ತುಂಬಿಟ್ಟ
ಬಿಂದಿಗೆಗಳಲ್ಲಿ
ನನ್ನ ಕಣ್ಣೀರ
ಹನಿಗಳಿವೆ....
ರಂಗೀಯ
ದೇಹವನ್ನು
ಉರಿಸುವವೇನೊ?

ಶಾಯರಿ ೬೧೩

ಅವಳೊಂದಿಗೆ
ಕಳೆದುಹೋಗುವ
ಇರಾದೆಯೊಂದಿಗೆ
ಅದೇಷ್ಟೊ...
ರಾತ್ರಿಗಳನ್ನು
ಕಳೆದುಬಿಟ್ಟೆ
ಸಾಕಿ...
ಕಳೆದುಕೊಂಡದ್ದನ್ನು
ಹುಡುಕಿಕೊಳ್ಳುವಷ್ಟು
ತಾಳ್ಮೆ, ಈಗ
ನನ್ನೊಳಗಿಲ್ಲ.
ನಿನ್ನ ಮದ್ಯವಿದೆ...
ಕುಡಿದು
ಮರೆತುಬಿಡುವೆ
ಕಳೆದುಕೊಂಡದ್ದನ್ನೇಲ್ಲ

Sunday, April 7, 2019

ಶಾಯರಿ ೬೧೫

ಮದ್ಯ
ಕೆಟ್ಟದ್ದೆಂದು
ನೀ...
ದೂರಬೇಡ
ಗೆಳೆಯ.
ದೂರಾದವಳ
ಮರೆಯಲು
ನನಗೀದೆ
ಔಷಧಿಯಾಗಿದೆಯಲ್ಲ!!!

ಶಾಯರಿ ೬೦೫

ಅವಳು
ಕಟ್ಟಿಕೊಟ್ಟ
ಕನಸಿನರಮನೆಯಲ್ಲಿ
ನಾನೀಗ
ಏಕಾಂಗಿ
ಸಾಕಿ...
ನನಸಾಗುವವೇನೊ?
ಎಂಬ ಹುಸಿ
ಭರವಸೆಯೊಂದಿಗೆ
ಬದುಕುತ್ತಿರುವ
ನಾನೊಬ್ಬ
ಕುರುಡು ಪ್ರೇಮಿ..

ಶಾಯರಿ ೬೧೬

ಕುಡಿದುಬಿಟ್ಟ
ಮದ್ಯದ
ಬಾಟಲಿಗಳನ್ನು
ಎತ್ತಿಟ್ಟುಬಿಡು
ಸಾಕಿ...
ಸದ್ದಾಗದಂತೆ!!!!

ಈ ಹುಣ್ಣಿಮೆಯ
ರಾತ್ರಿಯಲ್ಲಿ...
ರಂಗೀಯು ದಾರಿ
ತಪ್ಪಿ...
ನಿನ್ನರಮನೆಗೆ
ಬಂದಿರುವಳಂತೆ

ಶಾಯರಿ ೬೦೪

ಎದೆಯಂಗಳದಲ್ಲಿ
ಕಹಿಯ ಬೀಜಗಳನ್ನು
ಬಿತ್ತಿ ಹೋದವಳು
ಅವಳೆ...
ಅಲ್ಲವೆ ಸಾಕಿ...
ವಿರಹದ ಮರವೀಗ
ಹೂಬಿಟ್ಟಿದೆ...
ಕೀಳಲಾದರು
ಬರುವಳೇನೊ?

ಶಾಯರಿ ೬೧೦

ನಿರೀಕ್ಷೆಯು
ಸಿಹಿಯಾಗುವುದೆಂದು
ನಾನೇನು
ಊಹಿಸಿಲ್ಲ
ಸಾಕಿ...
ಅದು ಸಹ
ಕಹಿಯಾಗದಿರಲೆಂದು
ಆಪೇಕ್ಷಿಸುತ್ತಿರುವೆ.

ಶಾಯರಿ ೬೧೭

ಅವಳಿಗಾಗಿ
ಕಾಯುವುದು
ತಪ್ಪೇನಲ್ಲ
ಸಾಕಿ...
ಬರುವವರೆಗಾದರೂ...
ನಿನ್ನ ಮದ್ಯವನ್ನು
ಕುಡಿಯುವುದರಲ್ಲಿ
ತಪ್ಪೇನೂ....
ಇಲ್ಲ.

ಶಾಯರಿ ೬೦೦

ಅವಳು
ಬರುವಳೆಂಬ
ನಿರೀಕ್ಷೆಯಲ್ಲಿ
ಕಾಯುವುದು
ತಪ್ಪೇನಿದೆ?
ಸಾಕಿ....
ನೋಡು...
ಬೇವಿನಮರದಲ್ಲೂ...
ಇಂದು
ಹೂಗಳು
ಅರಳಿವೆ.....