Sunday, July 16, 2017

ದೇವರ ಮಕ್ಕಳು

ಅನಾಥರೆ.. ನಾವು ಅನಾಥರು
ಹುಟ್ಟಿಸಿ ಮರೆತಿರುವ ಈ
ಸಮಾಜದ ಕಣ್ಣಿಗೆ ನಾವು
ಅನಾಥರು..
ಮಾಂಸದ ಮುದ್ದೆಗೆ ಜ್ಯೋತಿಯ
ಹೊತ್ತಿಸಿ... ದುಡಿಯಲು ಬಲವಿಲ್ಲದ
ರೆಟ್ಟೆಗಳಿಗೆ ಹಸಿವೆಂಬ ಜೋಳಿಗೆಯ
ಕಟ್ಟಿ..ಸಾವನ್ನು ನಮ್ಮ ಪಾಲಿಗೆ ನಿಲುಕದ
ನಕ್ಷತ್ರವನ್ನಾಗಿಸಿ... ನಮ್ಮಳುವ ತಾ ಕೇಳಿ
ನಗುವಂತವವನ ದೇವರು ಮಕ್ಕಳು ನಾವು

ನಮಗೆಂದು ಹಾಕಿಲ್ಲ ಅವನು ಚೌಕಟ್ಟು..
ಓಡಾಡಲು.. ಮಲಗಲು..ಜಿಗಿಯಲು
ಹಾರಲು..ಮನೆ ಮನೆಗೆ ಹೋಗಿ.. ತರ
ತರದ ಹಳಸಿದ್ದೊ.. ನಿನ್ನೆಯದ್ದೊ ಭಕ್ಷ
ಭೋಜನವ ಸವಿಯುವ ಅನ್ನ ಸಂಪತ್ತಿಗೆಂದೂ... ಕೊರತೆಯನ್ನಿ...ಟ್ಟಿಲ್ಲ
ಅದು ತಿಂದರೆ ಹೊಟ್ಟರ ನೋಯುತ್ತದೆ...
ಇದನ್ನು ತಿಂದರೆ ಹಲ್ಲುನೋವು ಬರುತ್ತದೆ...
ಎಂದು ಬೈಯ್ಯುವ ತಾಯನ್ನು ಕೊಡದಿರಬಹುದು..
ಅವೆಲ್ಲವ ತಿಂದರೂ ರೋಗವ ಬರದ ಶಕ್ತಿಯನ್ನು ನೀಡಿರುವನಲ್ಲ.... ಇನ್ನೇನು ಬೇಕು

ನಮಗಿಲ್ಲವಲ್ಲ ನಾಳೆಯ ಚಿಂತೆ..
ಶಾಲೆಯ ಚಿಂತೆ.. ಹೊರೆ ಹೊರೆ ಪುಸ್ತಕಗಳ ಹೊತ್ತು
ನೂರು..ಸಾವಿರ.. ಲಕ್ಷ ಲಕ್ಷಗಟ್ಟಲೆ ಹಣವ
ಸುರಿದು..ಇಪ್ಪತ್ತಕ್ಕೂ ಹೆಚ್ಚು ವರುಷವ ನಾಲ್ಕು
ಗೋಡೆಗಳ ಮಧ್ಯೆ ಕುಳಿತು.. ಬದುಕಿಗೆ ದಾರಿಯ
ಹುಡುಕುವ ವಿದ್ಯೆಯ ಭಾಗ್ಯವ ನೀಡದಿದ್ದರೂ... ಹುಟ್ಟಿಸಿದಾರು ವರುಷದಲ್ಲೆ ಈ... ವಿಶಾಲ ವಿಶ್ವದಲ್ಲಿ ಹೊಟ್ಟೆಗೊಂದಿಷ್ಟು ಹಿಟ್ಟನು.. ಯಾವ ಜನರ ಜೊತೆ
ಯಾವ ರೀತಿಯಾಗಿ ಬದುಕಬೇಕೆಂಬುದ ಕಲೆಯನು..
ಹುಟ್ಟಿಸಿದ ಬೆನ್ನಲ್ಲೆ.... ಸಾವಿನ ಜೊತೆಗೆ ಕಟ್ಟಿಕೊಟ್ಟದ್ದಕ್ಕೆ
ನಾವಾ...ವ ಬೆಲೆಯ ತೆರಬಲ್ಲೇವು

ಲಕ್ಷ...ಲಕ್ಷಗಳ ಕೊಟ್ಟು ಮನೆಯ ಕಟ್ಟಿಸಿ..
ಸುತ್ತಲೂ ಕಬ್ಬಿಣದ ಸರಳುಗಳ ಹಾಕಿಸಿ.. ಕಳ್ಳ
ಕಾಕರೂ ಬರುವರೆಂಬ ಭಯದಿಂದ ಸಾವಿರಾರು
ರೂಪಾಯಿಗಳ ಕೊಟ್ಟು ನಾಯಿಯ ತಂದು...
ಹಗಲಲ್ಲೂ ಮನೆಯೆಲ್ಲ ಬಾಗಿಲುಗಳ ಹಾಕಿಕೊಂಡು
ಬದುಕುವ ದೌರ್ಭಾಗ್ಯವ ಕೊಡದಿದ್ದರು..
ವಿಶಾಲ ಅಂಗಳದಲ್ಲಿ.. ಎರಡು ಕೌದಿಯ ಹೋದಿಕೆಯ
ಗುಡಿಸಲಿನಲ್ಲಿ ಯಾರ ಭಯವಿಲ್ಲದೆ..ನನ್ನ
ಅಗುಳಿನಲ್ಲಿಯೆ ಒಂದು ಅಗುಳನುಂಡು ನನ್ನ ಗುಡಿಸಲು
ಕಾಯುವ ಬೀದಿ ನಾಯಿಯು...ಹುಣ್ಣಿಮೆಗೆ ಬೆಳದಿಂಗಳೂಟ
ಅಮವಾಸೆಗೆ ತಾರೆಗಳ ತೋಟದೊಳಗಿಂದ ಚೆಲ್ಲಿದ
ಬಿಂಬದೂಟ..ದಿನವು ನನ್ನ ಮಡದಿಯೊಂದಿಗೆ
ಉಪ್ಪು ಖಾರವಿಲ್ಲದಲೆ ಬರೀ ಅವಳ ಪ್ರೀತಿ ತುಂಬಿ
ಬಡಿಸುವ ಮೇಣಬತ್ತಿಯ ಊಟ..ಅವಳ ಮಡಿಲಲಿ
ಮಗುವಾಗಿ ಮಲಗುವ ನೀಡಿದ ಭಾಗ್ಯವ ನೆನೆದು
ನಾವೆಲ್ಲ ಕರೆದುಕೊಳ್ಳುವುದದಕ್ಕೆ
ನಾವು ದೇವರ ಮಕ್ಕಳು...
ನಾವು ದೇವರ ಮಕ್ಕಳು...

No comments:

Post a Comment