Friday, March 16, 2018

ಶಾಯರಿ ೪೮

ತುಂತುರು
ಮಳೆಗೆ ಅವಳು
ಮೈಯೊಡ್ಡಿ ಹುಚ್ಚೆದ್ದು
ಕುಣಿಯುತ್ತಿದ್ದಳು
ಸಾಕಿ....
ಸೋಕಿದ ಹನಿ
ಹನಿಗಳೆಲ್ಲವು
ನಾಟ್ಯವಾಡುತ್ತಿದ್ದವು
ಅವಳ ಮೈ ಮಾಟದ
ಮೇಲೆ..

ತೊರೆದು ಹೋದವಳ
ಮರೆಯಲು.. ಅದೆ
ಮಳೆಗೆ ನಾನು...
ಮೈಯೊಡ್ಡಿ ನಿಂತೆ
ಕಣ್ಣಿಂದ ಜಾರಿದ
ಹನಿಯ ಉಪ್ಪು
ಮಳೆಗೆ ತಬ್ಬಿತೇನೊ...?
ಮಳೆಯೆ...
ನಿಂತು ಬಿಟ್ಟಿತು...!!!!!

No comments:

Post a Comment