ಬಾರೆ ಬಾರೆ ಇಳೆಗೆ ಮಳೆಯೆ
ಹಸಿರರಳುವುದು ನೀ ಸುರಿಯೆ
ಕಾದ ಕಾದ ಕೆರೆಗಳ ತಣಿಸೆ
ಹೊಲಗದ್ದೆಗಳಿಗೆಲ್ಲ ತಂಪನುಣಿಸೆ
ಬಿತ್ತಿದ ಕಾಳುಗಳಿಗೆ ಜೀವವ ತುಂಬೆ
ಮಣ್ಣ ಮಗನು ಬಾಳುತಿರುವನು ನಿನ್ನನೆ ನಂಬೆ
ಬೆಟ್ಟಗುಡ್ಡಗಳಲಿ ಹಸಿರ ಹೊದ್ದು ಮಲಗಿಸು
ಮೂಕ ಪ್ರಾಣಿಗಳ ಹಸಿವ ಇಂಗಿಸು
ಬರಗಾಲದ ನಾಡಿಗೆ ಚಿನ್ನದ ಹನಿಯಾಗು
ಉತ್ತು ಬಿತ್ತುವ ಭೂಮಿಗೆ ಹನಿ ಮುತ್ತಾಗು
ಮಲಗದಿರು ಕರಿಮೋಡದಲೆ ಚಿಂತೆಯಿಲ್ಲದೆ
ಬದುಕುವದಾದರೂ ಹೇಗೆ ಹಗಲಿರುಳು ನಿನ್ನ ನಂಬದೆ
ಕಾಯಿಸಬೇಡ ಜಾರಿಬಿಡು ಹೊತ್ತು ಮೀರುವ ಮೊದಲೆ
ಕಾದು ಕಾದ ಕತ್ತದು ಹಗ್ಗಕ್ಕೆ ನೇತಾಡುವ ಮೊದಲೆ
No comments:
Post a Comment