Thursday, June 8, 2017

ಪ್ರೀತಿಯ ಕಡಲು

ಪ್ರೀತಿಯ ಕಡಲಲ್ಲಿ ಮುಳುಗಿ
ಪಡೆದುಕೊಂಡೆನದೇಷ್ಟು
ಸಂತಸವ ಉಂಡನದೇಷ್ಟು
ನಕ್ಕು ನಲಿದದ್ದು ಎಷ್ಟೊ..
ಪ್ರೇಮದ ಅಮಲು ಮತ್ತೇರಿಸಿದ್ದು ಅದೇಷ್ಟೊ..
ನೆನಪುಗಳ ರುಚಿಯ ಅನುಭವಿಸಿದನೇಷ್ಟೊ..
ಮರೆಯದಂತಹ ಪ್ರೀತಿಯ ಉಂಡೆನದೇಷ್ಟೊ..
ಬದುಕಲು ಹುಮ್ಮಸ್ಸನಿಯ್ಯುವುದದೇಷ್ಟೊ..
ಹೆತ್ತವರಿಗೆ ಸ್ವಲ್ಪ ನೋವಾಗಬಹುದು.. ಅವರು
ಇದೆ ಹಾದಿಯ ನಡೆದು ಬಂದವರಲ್ಲವೆ..
ಒಪ್ಪಿಕೊಂಡು ಸಂತಸಪಟ್ಟರೇಷ್ಟೊ..
ಪ್ರೀತಿಯ ಲೋಕದಲಿ ಅವಳೆ ದೇವತೆ
ಎಂದು ಪೂಜಿಸುವ ಭಾಗ್ಯ ಎಷ್ಟು ಮಂದಿಗೆ
ಲಭಿಸುವುದುಂಟೊ..
ಅಬ್ಬಬ್ಬಾ ಈ ಪ್ರೀತಿಯ ಕಡಲಲ್ಲಿ ಮುಳುಗಿ
ಒಲವ ಮುತ್ತು ಹೆಕ್ಕು ತಂದವರದೆಷ್ಟೊ..
ಇತರರಿಗೂ ಹಂಚಿದವರೇಷ್ಟೊ..
ಬದುಕು ಈ ಮೂರಕ್ಷರದ ಕಡಲಲ್ಲಿ
ಪ್ರೀತಿಯೊಂದು ತೆಪ್ಪದಂತೆ... ಆ ತೆಪ್ಪದಲಿ
ಅವಳೊಲವೊಂದಿಗೆ ಬೇರೆತು ಪಯಣಿಸುವುದು
ಎಂತಹ ಸುಖವುಂಟೊ...
ಬೀಳಬೇಕು ಒಮ್ಮೆಯಾದರೂ ಈ ಒಲವ ಕಡಲಲಿ..

No comments:

Post a Comment