Wednesday, June 28, 2017

ಗೆಳೆಯ

ಗೆಳೆಯ
ನಿನ್ನ ನೆನಪುಗಳಲಿ ನನ್ನ
ದೇಹವಿದು ಮಿಂದೆದ್ದಿದೆ
ಕಾಯುತಿದೆ ತನುವಿದು
ನಿನ್ನ ಅಪ್ಪುವಿಕೆಯ ಬಿಸಿಗೆ

ಹಗಲೊಳು ನೆನಪುಗಳ
ಕಾಡಾಟದ ಸಂತೆ..
ಇರುಳೊಳು ನಿದಿರೆ ಹತ್ತಿಗೊಡದ
ನಿನ್ನ ಕನಸುಗಳದ್ದೆ ಚಿಂತೆ

ಬದುಕಿನ ತೋಟವಿದು
ಬರವಾಗಿದೆ ನೀನಿಲ್ಲದೆ
ಕಾದಿದೆ ನೀ ಸುರಿಸುವ
ಒಲವ ಸುಧೆಯ ಹನಿಗಳಿಗೆ

No comments:

Post a Comment