ಗೆಳತಿ
ನಿನ್ನ ಮೌನವ ಮುರಿಯಲೆಂದೆ
ತಂಗಾಳಿಯ ಎದೆಯಲ್ಲಿ ಬರೆದು
ಕಳುಹಿಸಿದ್ದೆ ನನ್ನೊಲವನ್ನ..
ಈ ಮುಂಗಾರು ಗಾಳಿಯ ಸವತಿಗೆ
ಸಹಿಸದಾಯಿತೇನೊ...
ತಂಗಾಳಿಯಿಂದ ಆ ಮಾತುಗಳನ್ನೆಲ್ಲವ
ಕಿತ್ತುಕೊಂಡು ಬಾನಲ್ಲೆಲ್ಲೊ ತೂರಿ ಬಿಟ್ಟಿದ್ದಾಳೆ...
ನಮ್ಮಿಬ್ಬರ ನಡುವಿನ ವಿರಹದುರಿಯ ಹೆಚ್ಚಿಸೊಕೆ..
ಕಾಯುತಿರುವೆ ನಾನೂ....
ಇನ್ನೊಂದು ತಂಗಾಳಿಯ
ಬರುವಿಕೆಗಾಗಿ
No comments:
Post a Comment