ನೀನು ಮಂಜಿನ ಹನಿಯೆಂದೆ
ಮರುಳಾಗಿದ್ದು ನಾನು ನನ್ನ
ದೇಹದಲಿ ಬೇರೆಯಲೆಂದು
ಕದ್ದು ಬಿಡುವರು ಚೆಲುವೆ
ಆ ನಿನ್ನ ತಾರೆಯ ರೂಪವನು
ನೀನು ಬೇರಾರ ಕಣ್ಣಿಗೂ.. ಕಾಣದಂತೆ
ಪ್ರಕರ ಕಿರಣ ಸೂಸುವ ರವಿಯಾಗಿ
ಮರೆಮಾಚಿದೆ ನಿನ್ನನು.. ಜನರ
ನುಂಗುಕಂಗಳಿಂದ
ಎಷ್ಟು ಜನರಿಲ್ಲ ಗೆಳತಿ ಹೆಕ್ಕಿದ
ಮುತ್ತನು ಕದ್ದೊಯ್ಯುವರು..
ನೀ ನನ್ನನುರಾಗದ ಮುತ್ತು ಅದಕೆಂದೆ
ಕಡಲಾಳೊಡಲ ನನ್ನ ಪ್ರೀತಿಯ
ಚಿಪ್ಪಲಿ ಮುಚ್ವಿಟ್ಟಿರುವೆ ನಾನು
ಈ ಕಲಿಯುಗದಲ್ಲಿ ತಂಪನ್ನು
ಬಿಡು.. ಸುಡುವುದನ್ನು ಆರಿಸಿ
ಎತ್ತೊಯ್ವ ಜನರಿಹರು... ನಾನಿಲ್ಲದ
ಸಮಯದಲಿ ರಾವಣನ ಹಾಗೆ
ಯಾರಾದರೂ... ಬಂದರೆ.. ಇದಕ್ಕೆ
ನಿನ್ನನು ನಮ್ಮ ಪ್ರೀತಿಯಲಿ ನಿಗಿನಿಗಿ
ಕೆಂಡವನ್ನಾಗಿಸಿದ್ದು
ಅಷ್ಟು ಸುಲಭವಾಗಿ ತಂಪಗೈವ ಮಂಜನು
ಸುಂದರ ತಾರೆಯನು.. ಮನದ ಮುತ್ತನು
ಇನ್ನೊಬ್ಬರ ಕಿತ್ತೊಯ್ಯಲು ನಾ ಬಿಡುವೇನೆ
ಪ್ರೀತಿಯಲಿ ಕಣ್ಣ ರೆಪ್ಪೆಗಳಂತೆ ಕಾಯುವುದು
ನನ್ನ ಧರ್ಮವಲ್ಲವೆ ನಳಿನಾಕ್ಷಿ..
No comments:
Post a Comment