Friday, June 9, 2017

ನಯನಾ..

ನಯನಾ...
ಕಣ್ಣನ್ಯಾಗ ಹೊಡಿಬ್ಯಾಡ ನೀ..ಕಾಮನ ಬಾಣ
ನಿನ್ನ ಪ್ರೀತಿ ಹುಚ್ಚಿಗೆ ಮನಸಾಗೈತಿದು.. ಹಿಡ್ತಕ್ಕ
ಸಿಗಲಾರ್ದ ಕೋಣ..
ಸುಮ್ ನ್ಯಾಕ ನಿಂತಿ ಹಿಂಗ.. ಎದ್ರಿಗ್ ಬಂದ
ಆ ಹಾರಾಡೊ ಕೂದ್ಲ ಕಟ್ಟಿ ಮುಡಿಸ್ಲೇನ..
ಮುಡಿಗೆ ಮೊಳ ಮಲ್ಗಿ ಹೂವಾ ತಂದ

ಚಲೋ ಅಲ್ನೋಡಿದು ಹಿಂಗ ಹುಬ್ಬ ಹಾರ್ಸೊದು
ಏನು ಹೇಳ್ದ ಕಾಲನ ಹೆಬ್ಬರಳ್ಲೆ ನೆಲ ಗೀಚೊದು
ಸೀರಿ ಸೆರಗ ಹಿಡ್ದ ಕೈ ಬೆಳ್ಗೆ ಉಂಗುರ ಸುತ್ತೊದು
ಮೆಲ್ಲಗ ಉಸಿರುಬಿಡು ಈ ಕಿವಿಯಾಗ ಗಾಳಿಗೂ
ಗೊತ್ತಾಗ್ದಂಗ ಆ ನಿನ್ನ ಮನಸಿನ ಮಾತ..
ಸಾಯೋ ತನಕ ನಿನ್ನ ಹಿಂದಿಂದ ಅಲಿತೀನಿ‌..
ನಿನ್ನ ಬೆಣ್ಣಿ ಮಾತಿಗ ಸೋತ

ಕಟ್ಕೊಬಾರ ನನ್ನ.. ಜೋಡು ಜಡಿಯಾಗ
ಕೆಂಪ ರಿಬ್ಬನ್ ಹೂವಾ  ಕಟ್ಕೊಂಡಾಂಗ
ಹಚ್ಕೋರ ನನ್ನ ಮನಸ್ಸಿಗಿಷ್ಟು... ಈ ದುಂಡು
ಮೊಖಕ್ಕ ಪೌಂಡ್ಸ ಪೌಡರ್ ಹಚ್ಗೊಂಡಂಗ
ರುಚಿಯರ ನೋಡ ನನ್ನ ಪ್ರೀತಿದು.. ಅಮೀನಗಡ
ಕರದಂಟ ತಿಂದ ಮರುಳಾಗುವಂಗ..

ಮಾತ ಕೊಡ್ತೇನ ಹುಡ್ಗಿ ನಿನ್ಗ... ನೀ ಹ್ಞೂಂ ಅಂದ್ರ
ಕುದರಿ ಮ್ಯಾಲ ಕುಂದ್ರಸ್ಗೊಂಡು ಚೆನ್ನಮ್ಮನ
ಸರ್ಕಲ್ ಸುತ್ತಸ್ತಿನಿ.. ನಮ್ಮೂರ ಗುಡ್ಡದ ಕೋಟಿಗೆ
ನಿನ್ನ ರಾಣಿ ಮಾಡ್ತೀನಿ... ಬರೋ ಕಳಕಪ್ಪನ
ಜಾತ್ರ್ಯಾಗ ಕೈ ತುಂಬಾ ಬಳಿ ತೊಡಸ್ತೀನಿ...
ಜೇನ ತುಂಬಿದ ನಿನ್ನ ಬಾಯಿಗೆ... ಬೆಲ್ಲದ
ಪಾಕದಾಗ ಎದ್ದಿದ ಜಿಲೆಬಿನ ತಿನ್ನಸ್ತೇನ

ನಯನಾ...
ನೋಡ್ಕೊತ ನಿಂದ್ರಬ್ಯಾಡ ನೀ.. ಹಿಂಗ ಸುಮ್ನ

No comments:

Post a Comment