ಅಳದಿರು ಹೀಗೆ ಒಂಟಿ ಕಣ್ಣಿನಲಿ
ಹೊತ್ತುವುದು ಬೆಂಕಿ ನನ್ನೊಂಟಿ ಎದೆಯಲಿ
ನೋಡದಿರು ಹೀಗೆ ನನ್ನನೆ ದುರುಗುಟ್ಟಿ
ತಪ್ಪಿನ ಅರಿವಾಗಿ ಸೋತಿಹನು ನಿನಗೀ.. ಜಟ್ಟಿ
ಕಣ್ಣ ಕಾಂತಿಯಲಿ ತೋರುತಿದೆ ನನ್ನ ತಪ್ಪು
ಮಾಡನಿನ್ನೆಂದೆಂದು ನಂಬಿ ಈಗಲಾದರೂ ಒಪ್ಪು
ಕಣ್ಣೀರಲೆ.... ತೊಯಿಸದಿರು ಮನವನ್ನು
ಒರೆಸುವೆ... ಅಪ್ಪುವೆಯಾ ತನುವನ್ನು
ಮನದ ಮಾತುಗಳ ಹೇಳುವುದಿದೆ ಬಹಳಷ್ಟು
ನೊಂದು ನೀ... ನನ್ನನು ನೋಯಿಸಬೇಡ ಇನ್ನಷ್ಟು
ಮೂಡಿದೆ ಬಾನಲಿ ಮಳೆ ಬಿಸಿಲಿನ ಮಿಲನಕೆ ಕಾಮನಬಿಲ್ಲು
ನಮ್ಮಿಬ್ಬರ ಮಿಲನಕೆ ಕಾಮನು ಹೂಡಲಿ ಬಿಲ್ಲು
ಬಾರೆ.. ಪ್ರೀಯೆ ಕ್ಷಮಿಸಿ ತೋರು ನಿನ್ನ ದಯೆ
ಕಾಡುತಿದೆ ನನ್ನನು ಹಗಲಿರುಳು ನಿನ್ನದೆ ಮಾಯೆ
ವಿರಹದ ಬೇಲಿಯನು ಸುಟ್ಟು ಹಾಕೋಣ
ಮನಗಳೆರಡಲೂ ಒಲವಿನ ಹಣತೆಯ ಹಚ್ಚೋಣ
No comments:
Post a Comment