Tuesday, June 13, 2017

ಬಾಳೆನೆ

ಗೆಳತಿ..
ನಿನ್ನ ನಗು ಮೊಗವ
ಹೊತ್ತು ನಿಂತಿರಲು ಹೀಗೆ
ಎದುರಿಗೆ ವೈದ್ಯನು ಚುಚ್ಚಿದ
ಸೂಜಿಗಳ ನೋವು ಒಂದಿನಿತು
ಅರಿವಾಗಲಿಲ್ಲ...
ದೇಹದೊಳಡಗಿ ಕುಳಿತ ಭಾದೆಯು
ಸೂಜಿಯ ಮೊನೆಯಷ್ಟು
ಭಾದಿಸಲಿಲ್ಲ

ನಿನ್ನ ಆರೈಕೆಯಿಂದ..
ಹೊಸ ಹುಮ್ಮಸು ಬಂದಿತಲ್ಲ
ದೇಹದಲ್ಲೆಲ್ಲ ಮಿಂಚಿನ ಸಂಚಾರ
ವಾಗುತಿದೆಯಲ್ಲ..
ಬಾಡಿದ ಮೊಗದಲ್ಲೂ ಹುಣ್ಣಿಮೆ
ಕಾಂತೀಯ ತುಂಬಿ...
ಒಣಗಿದ ಅಧರಗಳಿಗೆ ನಿನ್ನಧರದಿಂದ
ಸವಿಜೇನ ಸವರಿಬಿಟ್ಟೆಯಲ್ಲ..

ನಗುವಿರಲಿ ಚೆಲುವೆ ಸದಾ ಹೀಗೆ
ನಿನ್ನ ತುಟಿಯ ಮೇಲೆ
ಒಲವ ಸುಧೆಯ ಸುರಿಸುತಿರು
ಮರೆಯದೆ ನನ್ನ ಮೇಲೆ
ನಿನ್ನ ನಗುವ ಮದ್ದಿಗಿಂತ
ಬೇರೆ ಮದ್ದು ಬೇಕೆನೆ..?
ನೀನಿಲ್ಲದೆ ಬದುಕುವ
ಬಾಳು.. ಬಾಳೆನೆ..?

No comments:

Post a Comment