ಏನ ಹುಡ್ಗಿ..
ಉಟ್ಕೊಂಡ ನಿಂತಿಯಲ್ಲ.. ಒಂಬತ್ತ
ಮೊಳ್ದ ಇಳಕಲ್ ಸೀರಿ..
ಕೆಂಪ ಬಣ್ಣದ ಜಂಪರ ತೊಟ್ಟು
ಹಿಂಗ್ಯಾಕ ನೋಡ್ಲಾಕ ಹತ್ತಿ ನನ್ನ ಮಾರಿ..
ಆ ನೋಟಕ್ಕ ಸೋತ ಬರಬೇಕಾದಿತೇನ
ನಿನ್ನ ಹಿಂದಿಂದ... ನಾಲ್ಕ ಎಕರೆ ಎರಿ ಹೊಲ ಮಾರಿ
ಯಾಕೀಷ್ಟ ನಿನ್ನ ಕೈ ಬಳಿ ಸೊರಗಿಬಿಟ್ಟಾವು
ನಾ ಕೊಟ್ಟ ಗಾಜಿನ ಬಳಿ ಸಾಕಾಗಿಲ್ಲ ಅಂತೇನರ
ಕೈಗಳೇರಡು ಏನರ ಸೆಟಗೊಂಡ ಕುಂತಾವನು
ಕೊಳ್ಳಾಗಿನ ಸರ ಯಾಕೀಷ್ಟು ಮಬ್ಬಾಗೈತದು
ನಾ ಕೊಟ್ಟದ್ದು ನಕಲಿಯಂತ ಗೊತ್ತಾಗಿ
ಏನರ ಬ್ಯಾಸ್ರ ಮಾಡ್ಕೊಂಡಾವನವು
ಹಂಗ ಯಾಕ ನಿಂತಿ ನೀನು.. ನಾ ಕೊಟ್ಟ
ಕಳ್ಸಿದ ಮಲ್ಗಿ ದಂಡ್ಯಾಗ ಪ್ರೀತಿ ವಾಸ್ನಿ ಏನಾರ
ಕಮ್ಮಿಯಾಗೈತನು....
ನನ್ನ ಜೊತಿಗಿ ಮಾತಾಡಿಲ್ಲಂತ ಆ ತುಟಿಗೆ
ಹಚ್ಚಿದ ಬಣ್ಣ ಎಷ್ಟರ ಕಳೆಗುಂದೈತದು
ನಿನ್ನ ಮುಖದಾಗ ಕಳೆ ಇಲ್ಲದ್ದ ನೋಡಿ..
ಆ ಕತ್ಲುನು.. ಮತ್ತಷ್ಟು ಕತ್ಲಾಗೈತದು..
ನೀ... ಕತ್ಲಾಗ ನಿಂತ ಅತ್ರ... ನಿನ್ನ ಕಣ್ಣೀರ..
ಕಾಣ್ಸೊದಿಲ್ಲ ನನ್ಗ.. ಆದ್ರ ಅತ್ತು... ಅತ್ತು..
ಕೆಂಪಗಾದ ಕಣ್ಣಿನ ಕೊಳ... ನಿನ್ನ ಮನದಾಗಿನ
ನೋವು ಎಷ್ಟಂತ ಹೇಳಾಕ ಹತ್ತಾವು...
ಬರ್ತೀನ ಗೌಡ್ತಿ.. ನಿನ್ನ ಅಂಗಳಕ್ಕ..
ಕಾಮತ ಹೊಟ್ಲ್ ಮಸಾಲಿ ದ್ವಾಸಿ ತಗೊಂಡ
ಸಾವಜಿ ಅಂಗಡ್ಯಾನ ಶರಬತ್ ಬಾಟ್ಲಿ ತುಂಬ
ತುಂಬ್ಸಗೊಂಡ... ಕುಂಡ್ರೊಣ ಹುಡುಗಿ..
ಆ ಕೆರಿ ದಂಡಿ ಮ್ಯಾಲ..ನಿನಗ ತುತ್ತ ತಿನಿಸಿ..
ಮುನಿಸ ಮರೆಸಿ.. ಮಲಗ್ತೇನ ಹುಡುಗಿ ನಿನ್ನ
ಮಡಿಲಾಗ.. ಎದೆಹಾಲ ಕುಡ್ದ ಸಂಪಾಗಿ..
ತೊಟ್ಲದಾಗಿನ ಕೂಸು ಮಲ್ಗದಂಗ...
No comments:
Post a Comment