ಎಷ್ಟರ ಹಚ್ಗೊಂಡಿಯ ತುಟಿಗೆ ಕೆಂಪಾನ ಬಣ್ಣ
ರೆಪ್ಪಿ ಬಡಿಲಾರ್ದಂಗ ನೋಡಾಕ್ಹತ್ತಾವು ನಿನ್ನ ನನ್ನೆರಡು ಕಣ್ಣ
ನೀಟಾಗಿ ತಿಡ್ಕೊಂಡ ನಿಂತಿಯಲ್ಲ ಕಣ್ಣಿನ ಕಾಡ್ಗಿ...
ರೊಕ್ಕ ಎಷ್ಟಾದ್ರೇನ, ಸ್ವಲ್ಪ ದಿವ್ಸಕ್ಕಾದ್ರೂ ಕೊಡು ಮನಸನ್ನ ಬಾಡ್ಗಿ
ಎಷ್ಟೊತ್ತು ನೋಡ್ಕೊಂತ ನಿಂದ್ರತಿದಿ ಹಳೆ ಕನ್ನಡಿ
ಹೊಸ ಹುಡ್ಗ ಬಂದಾನಿಲ್ಲೆ ಒಮ್ಮೇರ ಕಣ್ಣಹೊಡಿ
ಮೂಗ ಮೂರಕೊಂತ ತೋರ್ಸಬ್ಯಾಡ ಗತ್ತ್sss
ಚುಚ್ಚ್ಸತೀನಿ ಆ ಮೂಗಿಗೊಂದು ಕೆಂಪ ಹರ್ಳಿನ ನತ್ತsss
ಲಕ್ಷ ರೂಪಾಯ ಕೊಟ್ಟ ತಂದಿನ ಬುಲೆಟ್ ಗಾಡಿ
ಹತ್ಗೊಂಡ ಹೊಂಟ್ರ ಬಜಾರದಾಗ ಈ ಜೋಡಿ
ನಿಂತ ಮಂದಿ ಎಲ್ಲ ಬಿಡ್ಬೇಕ ಬಾಯ್ ಬಾಯ್ ನಮ್ಮನ್ನ ನೋಡಿ
ಟಾಕೀಜ್ಗ ಹೋಗಾಕ ಹೊತ್ತಾತು ಸಿಂಗರಿಸ್ಗೊಂಡು ಬಾ ನಿನ್ನ ಬಾಡಿ
ನೋಡೊಣ ಹುಡ್ಗಿ ಅಣ್ಣಾವ್ರ ಸಿನಿಮಾ ಹಾಲುಜೇನು
ಬಳ್ಳಿ ನೀನು...ಗಿಡ ನಾನು ಅಗಲಿ ಕೂಂತ್ರ ಚೆಂದೇನು
ಸೇರಿಬಿಡು ನನ್ನೆದಿಯಾಗ ಹೂವ್ನೊಳ್ಗಿಂನ ಗಂಧದಂಗ ನೀನು
ಬಚ್ಚಿಟ್ಕೊಂಡಬಿಡ್ತೀನ ನಿನ್ನ.. ಕಪ್ಪೆ ಚಿಪ್ನೆಂಗ ಕೊನೆ ತನ್ಕ ನಾನು
No comments:
Post a Comment