Thursday, May 11, 2017

ನಿನ್ನ ಕಳೆದುಕೊಂಡು

ಬಂದರೆ... ಬಂದು ಬಿಡು
ನನ್ನನು ಬಿಟ್ಟು ಹೋಗದಂತೆ..
ಇದೇ ಮಾತನ್ನು ನನ್ನೆದುರು
ಹೇಳಿದ್ದರೆ... ಹೇಗಿರುತ್ತಿತ್ತು..

ಹೀಗೆ... ನನಗೆ ಬೆನ್ನು ತೋರಿ..
ಹಸಿರುಸಿಲ್ಲದೆ.. ಒಣಗಿ ನಿಂತ
ಮರದ ಕೆಳಗೆ....ಅದಕೊರಗಿ ನಿಂತು..
ಹಾಗೆ ಕೇಳಿದರೆ... ನಾನೇನ ಹೇಳಲಿ....

ಒಮ್ಮೆ ನೋಡಿರುವೆಯಾ ? ನನ್ನೆದೆಯ
ಬಿಳಿಹಾಳೆಯಲಿ ನೀ ಬರೆದ
ಪತ್ರವ... ಎಷ್ಟು ದ್ವಂದ್ವಗಳಲ್ಲಿ..
ಎಷ್ಟೊಂದು ಚಿತ್ಕಾಟಗಳಿಲ್ಲವಲ್ಲಿ..

ಹೇಳುವ ಮಾತನಾದರೂ.. ಸರಿಯಾಗಿ
ಬರೆಯದಿದ್ದರೆ.. ನನಗೆ ಹೇಗೆ
ಅರಿವಾಗುವುದು.. ಈ ಮೊದಲು
ಬರೆದ ಕಾಗದಗಳನ್ನದೇಷ್ಟು .... ನಾ
ಓದಿಲ್ಲ.. ನಿನಗೆ ಉತ್ತರಿಸಿಲ್ಲ..

ನಿನ್ನ ಕಂಗಳು ನಾನು...
ನೀನೆ ಕಣ್ಮುಚ್ಚಿದರೆ...ಈ ಪ್ರೀತಿ
ಬೀದಿಯಲಿ... ನಾನಾಗುವುದಿಲ್ಲವೆ
ಕುರುಡು ಪ್ರೇಮಿ... ಪ್ರೀತಿ ಕಣ್ಣಿಲ್ಲದೆ
ಇನ್ನಾರಲ್ಲಿ ಪ್ರೇಮ ಭಿಕ್ಷೆಗೆ ಅಲೆಯಲಿ

ನಿನ್ನ ಕಳೆದುಕೊಂಡು...

No comments:

Post a Comment