Sunday, May 7, 2017

ಮದುವೆಗೆ ಶುಭಾಶಯ

ಆ...ಕೈಯೊಳಗಿನ
ಸುಮಗಳ ಮಾಲೆ
ಬಾಡಿದರೂ...
ಬಾಡಬಹುದು...
ನಿಮ್ಮಿಬ್ಬರ ತುಂಟಿಯಂಚಿನ
ನಗು ಮಲ್ಲಿಗೆ ಎಂದೂ...
ಬಾಡದಿರಲಿ..

ಈ... ದಿನದ ಸಂತೋಷ
ಸಂಜೆ ವೇಳೆಗೆ ಕರಗಿಯು...
ಕರಗಬಹುದು..
ಮುಂಬರುವ ದಿನಗಳಲಿ
ಸಂತಸದ ಹೆಪ್ಪು ಎಂದೆಂದೂ
ಕರಗದಿರಲೆಂದು ಆ ದೇವರಲ್ಲಿ
ಪ್ರಾರ್ಥಿಸಿಕೊಳ್ಳುವೆ.

No comments:

Post a Comment