Saturday, May 20, 2017

ಬದುಕಿನ ಪ್ರೀತಿ

ಬದುಕಿನೊಳಗಿಲ್ಲದ ಪ್ರೀತಿ..
ಮರದಿಂದ ಕತ್ತರಿಸಿ ಒಗೆದ
ಕೊರಡಂತೆ..
ಬೇರಿಲ್ಲದೆ.. ನೀರಿಲ್ಲದೆ..
ಒಣಗಿ....ಒಣಗಿ...ದಾರಿ
ಹೋಕರ ಮನೆಯ ವಲೆಗೆ
ಉರುವಲಾದಂತೆ....

ಪ್ರೀತಿಯಿಲ್ಲದ ನಮ್ಮ ಬದುಕಲ್ಲಿ..
ಒಲವಿನಾಸೆಯ ತೋರಿಸಿ ತೋರಿಸಿ
ತಮ್ಮ ಇಷ್ಟಾರ್ಥಗಳನೆಲ್ಲವ ಪೊರೈಸಿಕೊಳ್ಳುವವರೆ..
ಜಾಸ್ತಿ..

ನಮ್ಮ ನಾವರಿಯದೆ... ಬದುಕೆಂಥ ಅರಿವೆವು
ನಮ್ಮ ಬಾಳ ನಾವ್ ಪ್ರೀತಿಸದೆ.. ಬದುಕಿನ
ಸವಿಯ ನಾವೆಂಥ ಸವೆಯುವೆವು..
ಬದುಕಬೇಕು... ಬದಕನ್ನು ಪ್ರೀತಿಸಬೇಕು
ಅನುಭವಿಸಬೇಕು.. ಯಾಕೆ ಕೇಳಿ..
ಬದುಕೊಂದು ಪಾಠಶಾಲೆ..

No comments:

Post a Comment