ಮಾತು ಮಾತಿಗೂ..
ಮೌನದ ಗಂಟು ಕಟ್ಟುವವಳೆ..
ಮಾತನಾಡೆ ಮನದಿ..
ಮುತ್ತುಗಳ ಮಾತೆ ಸುರಿಯಲಿ
ಮುನಿಸಿದು ನಿನ್ನಂದಕೆ ತರವಲ್ಲ
ಮುಂಗೋಪವಿದು ನಿನ್ನ ಮೂಗಿಗೆ ಒಪ್ಪೊಲ್ಲ
ಮನಸ್ಸಿಲ್ಲೇನೆ ನನ್ನ ಮೇಲೆ
ಮುಳ್ಳಾಯಿತೇನೆ ನನ್ನ ಪ್ರೀತಿ ನಿನಗೆ
ಮಸುಕಾಯಿತೆನೆ ನನ್ನೊಲವು ನಿನ್ನಲಿ
ಮಂದಹಾಸವಾದರೂ ಮೂಡದೆ ತುಟಿಯಲಿ
ಮೆಲ್ಲಗಾದರೂ ಉಸುರು ಕಿವಿಯಲಿ
ಮೆತ್ತಗಾದರೂ ಆಗಲಿ ಮನಸು ನಿನ್ನ ಮಾತಲಿ
ಮೇಣದಂತಹ ಮನಸಿದು... ನಿನ್ನ
ಮುಸಿಮುಸಿ ನಗುವಿಗೆ ಕರಗದೇನು...
ಮರಳಾಗಲಾರೆಯಾ? ಚೆಲುವೆ ಮಾತಿಗೆ
ಮನ್ಮಥ ಬಾಣವ ಹೂಡಲೆ ಮನಸಿಗೆ..
ಮುರಿದು ಬಾರೆಯಾ ಮೌನದ ಬಂಧನವ
ಮರೆತು ಬೇಸೆಯಲಾರೆಯ ಈ ಹೃದಯವ..
No comments:
Post a Comment