Saturday, May 6, 2017

ಮನೆಯೊಡತಿ

ನೀನೊಳ್ಳೆ ಮನೆಯೊಡತಿ ಅಂತ ಗೊತ್ತಿತ್ತು
ನನ್ನ  ಬದುಕೆ ನಿನ್ನ
ಅಡುಗೆಯ ಮನೆಯಂತ ಗೊತ್ತಾಗಲಿಲ್ಲ..
ನಿನೊಳ್ಳೆ ಸಾರು ಮಾಡುತ್ತಿಯ ಅಂತಾ ಗೊತ್ತು
ನನ್ನ ಹೃದಯವನ್ನು ಮಸಾಲೆ ಹಾಗೆ ರುಬ್ಬುತ್ತಿಯಾ
ಅಂತ ಗೊತ್ತಿರಲಿಲ್ಲ..
ನಿನೊಳ್ಳೆ ಅನ್ನವನ್ನು ಮಾಡುತ್ತಿಯ ಅಂತ ಗೊತ್ತಿತ್ತು
ನನ್ನ ಕನಸುಗಳನ್ನೆಲ್ಲ ಕೊತ ಕೊತ ಕುದಿಸಿ ಸುಟ್ಟು ಕರಕಲಾಗುವಂತೆ ಮಾಡುವೆಯೆಂದು ಅರಿತಿರಲಿಲ್ಲ..
ನಿನೊಬ್ಬಳು ಛಲಗಾತಿ ಹಿಡದ ಕೆಲಸವ ಸಾಧಿಸದೆ ಬಿಡುವವಳಲ್ಲ..
ನನ್ನ ಬದುಕನ್ನೆ ಗುಡಿಸಿ ಸಾರಿಸಿ, ಮೂಲೆಗೆ ದಬ್ಬಿ
ನಿನ್ನ ಗೆಳತಿಯರೊಂದಿಗೆ ಚಾಪೆ ಹಾಸಿಕೊಂಡು ವಿಜಯೋತ್ಸವವ ಆಚರಿಸಿಕೊಳ್ಳುವವಳೆಂದು
ನಾನೆಂದುಕೊಂಡಿರಲಿಲ್ಲ..
ನಿನಗೆ ಅಡುಗೆ ಮನೆ ಮತ್ತು ನನ್ನ ಬದುಕು
ಎರಡು ಒಂದೇ ಆಗಿದ್ದು...  ಈ ಕ್ಷಣ ಅರಿವಾಯಿತು
ನೋಡು

No comments:

Post a Comment